ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್‌ನಲ್ಲಿ ಬರುತ್ತಿವೆ ಪ್ರಮುಖ ಬದಲಾವಣೆಗಳು: ಕುಂಬ್ಳೆಯ ಶಿಫಾರಸು ಪಾಸ್

ICC bans use of saliva on ball; allows Covid-19 replacements in Tests

ಬೆಂಗಳೂರು: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಹತ್ವದ ಬದಲಾವಣೆಗಳಿಗೆ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಅನುಮೋದನೆ ನೀಡಿದೆ. ಈ ಮಧ್ಯಂತರ ಬದಲಾವಣೆಗಳಿಗೆ, ಚೆಂಡು ಹೊಳೆಯುವಂತೆ ಮಾಡಲು ಎಂಜಲಿನ ಬಳಕೆಯ ನಿಷೇಧ, ಅಂತಾರಾಷ್ಟ್ರೀಯ ಸರಣಿಯಲ್ಲಿ ಸ್ಥಳೀಯ ಅಂಪೈರ್‌ಗಳಿಗೆ ಅವಕಾಶ, ಕೊರೊನಾವೈರಸ್ ಸೋಂಕಿತ ಆಟಗಾರನ ಬದಲಿಗೆ ಬೇರೆ ಆಟಗಾರನನ್ನು ಮೈದಾನಕ್ಕಿಳಿಸುವ ನಿಯಮಾವಳಿಗಳು ಒಳಪಡಲಿವೆ. ಆಟಗಾರರ ಬದಲಾವಣೆ ಟೆಸ್ಟ್‌ ಕ್ರಿಕೆಟ್‌ಗೆ ಅನ್ವಯವಾಗಲಿದೆ.

ಅಖ್ತರ್ ವಿರುದ್ಧ ಅತ್ಯಾಚಾರ ಆರೋಪ: ಘಟನೆ ಬಗ್ಗೆ ತುಟಿ ಬಿಚ್ಚಿದ ಶೋಯೆಬ್!ಅಖ್ತರ್ ವಿರುದ್ಧ ಅತ್ಯಾಚಾರ ಆರೋಪ: ಘಟನೆ ಬಗ್ಗೆ ತುಟಿ ಬಿಚ್ಚಿದ ಶೋಯೆಬ್!

ಈ ಎಲ್ಲ ಬದಲಾವಣೆಗಳನ್ನು ಭಾರತದ ಮಾಜಿ ನಾಯಕ, ಸ್ಪಿನ್ ದಂತಕತೆ ಅನಿಲ್ ಕುಂಬ್ಳೆ ನೇತೃತ್ವದ ಜಾಗತಿಕ ಕ್ರಿಕೆಟ್ ಸಮಿತಿ ಶಿಫಾರಸು ಮಾಡಿತ್ತು. ಸಮಿತಿ ಮಾಡಿದ್ದ ಶಿಫಾರಸಿಗೆ ಐಸಿಸಿ ಮಂಗಳವಾರ (ಜೂನ್ 9) ಅನುಮೋದನೆ ನೀಡಿದೆ.

ಪಂದ್ಯ ಗೆಲ್ಲದಿದ್ದರೂ ಅಭಿಮಾನಿಗಳ ಹೃದಯ ಗೆದ್ದ 4 ಅದ್ಭುತ ಒಡಿಐ ಪ್ರದರ್ಶನಗಳುಪಂದ್ಯ ಗೆಲ್ಲದಿದ್ದರೂ ಅಭಿಮಾನಿಗಳ ಹೃದಯ ಗೆದ್ದ 4 ಅದ್ಭುತ ಒಡಿಐ ಪ್ರದರ್ಶನಗಳು

ಕೊರೊನಾವೈರಸ್ ಕಾರಣದಿಂದಾಗಿ ಮುಂಬರುವ ದಿನಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಏನೆಲ್ಲ ಪ್ರಮುಖ ಬದಲಾವಣೆಗಳಾಗಲಿವೆ? ಇಲ್ಲಿದೆ ವಿವರ.

ಆಟಗಾರರ, ಸಿಬ್ಬಂದಿ ರಕ್ಷಣೆಗೆ ಕ್ರಮ

ಆಟಗಾರರ, ಸಿಬ್ಬಂದಿ ರಕ್ಷಣೆಗೆ ಕ್ರಮ

ಕ್ರಿಕೆಟ್ ಪುನರಾರಂಭವಾದಾಗ ಕೋವಿಡ್‌-19ನಿಂದ ಆಟಗಾರರು ಮತ್ತು ಅಧಿಕಾರಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಅನಿಲ್ ಕುಂಬ್ಳೆ ಮುಂದಾಳತ್ವದ ಕ್ರಿಕೆಟ್‌ ಸಮಿತಿ ಶಿಫಾರಸು ಮಾಡಿದ್ದ ಬದಲಾವಣೆಗಳಿಗೆ ಐಸಿಸಿ ಮುಖ್ಯ ಕಾರ್ಯನಿವರ್ಹಣಾಧಿಕಾರಿಗಳ ಸಮಿತಿ (ಸಿಇಸಿ) ಅನುಮೋದಿಸಿದೆ ಎಂದು ಐಸಿಸಿ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದೆ.

ಆಟಗಾರರ ಬದಲಾವಣೆ

ಆಟಗಾರರ ಬದಲಾವಣೆ

ಟೆಸ್ಟ್ ಪಂದ್ಯದ ವೇಳೆ ಆಟಗಾರರಿಗೆ ಕೋವಿಡ್-19 ಗುಣಲಕ್ಷಣಗಳು ಕಂಡುಬಂದರೆ ಆ ಆಟಗಾರನ ಬದಲಿಗೆ ಬೇರೊಬ್ಬನನ್ನು ಮೈದಾನಕ್ಕಿಳಿಸಲು ಅವಕಾಶ ನೀಡಲಾಗಿದೆ. ಆಟಗಾರನ ಬದಲಾವಣೆ ವಿಚಾರದಲ್ಲಿ, ಮ್ಯಾಚ್ ರೆಫರೀ ಅನುಮೋದನೆ ನೀಡಲಿದ್ದಾರೆ. ಆದರೆ ಆಟಗಾರರ ಬದಲಾವಣೆ ಏಕದಿನ ಮತ್ತು ಟಿ20ಐ ಕ್ರಿಕೆಟ್‌ನಲ್ಲಿ ಅನ್ವಯವಾಗುವುದಿಲ್ಲ.

ಎಂಜಲು ಬಳಸಿದರೆ ಏನಾಗುತ್ತದೆ?

ಎಂಜಲು ಬಳಸಿದರೆ ಏನಾಗುತ್ತದೆ?

ಚೆಂಡು ಹೊಳೆಯುವಂತೆ ಮಾಡಲು ಆಟಗಾರರು ಎಂಜಲು ಬಳಸುವಂತಿಲ್ಲ. ಆಟಗಾರನು ಚೆಂಡಿಗೆ ಲಾಲಾರಸವನ್ನು ಅನ್ವಯಿಸಿದರೆ, ಆಟಗಾರರಿಗೆ ಹೊಂದಾಣಿಕೆಯ ಆರಂಭಿಕ ಅವಧಿಯಲ್ಲಿ ಅಂಪೈರ್‌ಗಳು ಸ್ವಲ್ಪ ಮೃದುತ್ವದಿಂದ ಪರಿಸ್ಥಿತಿಯನ್ನು ನಿರ್ವಹಿಸುತ್ತಾರೆ. ಆದರೆ ಅನಂತರವೂ ಇದೇ ಮುಂದುವರೆದರೆ ತಂಡಕ್ಕೆ ಎಚ್ಚರಿಕೆ ನೀಡಲಾಗುತ್ತದೆ.

ನಾನ್ ನ್ಯೂಟ್ರಲ್ ಅಂಪೈರ್ಸ್

ನಾನ್ ನ್ಯೂಟ್ರಲ್ ಅಂಪೈರ್ಸ್

ಕೊರೊನಾವೈರಸ್ ಕಾರಣ ಅಂತಾರಾಷ್ಟ್ರೀಯ ಓಡಾಟ ಈ ಸಂದರ್ಭದಲ್ಲಿ ಸವಾಲಿನದ್ದಾಗಿರುವುದರಿಂದ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕೆಲ ನಿಯಮಗಳನ್ನು ತೆಗೆದುಹಾಕಲಾಗಿದೆ. ಅಂದರೆ ಎಮಿರೇಟ್ಸ್ ಐಸಿಸಿ ಎಲೈಟ್ ಪ್ಯಾನಲ್ ಆಫ್ ಮ್ಯಾಚ್ ಅಧಿಕಾರಿಗಳಿಂದ ಮತ್ತು ಎಮಿರೇಟ್ಸ್ ಐಸಿಸಿ ಇಂಟರ್‌ನ್ಯಾಷನಲ್ ಪ್ಯಾನಲ್ ಆಫ್ ಮ್ಯಾಚ್ ಅಧಿಕಾರಿಗಳಿಂದ ಸ್ಥಳೀಯವಾಗಿ ಆಧಾರಿತ ಮ್ಯಾಚ್ ಅಧಿಕಾರಿಗಳನ್ನು ಐಸಿಸಿ ನೇಮಿಸಲಿದೆ.

ಹೆಚ್ಚುವರಿ ಡಿಆರ್‌ಎಸ್ ರಿವ್ಯೂಗಳು

ಹೆಚ್ಚುವರಿ ಡಿಆರ್‌ಎಸ್ ರಿವ್ಯೂಗಳು

ಅಂಪೈರ್‌ಗಳ ನೇಮಕಾತಿಯಲ್ಲಿ ಬದಲಾವಣೆಯಾಗಿರುವುದರಿಂದ ಕೆಲವು ಕಡಿಮೆ ಅನುಭವದ ಅಂಪೈರ್‌ಗಳು ಕರ್ತವ್ಯ ನಿರ್ವಹಿಸಲಿರುವುದನ್ನು ಗಮನದಲ್ಲಿಟ್ಟುಕೊಂಡಿರುವ ಐಸಿಸಿ, ಡಿಆರ್‌ಎಸ್ ಅನ್ನು ಹೆಚ್ಚಿಸಿದೆ. ಅಂದರೆ ಟೆಸ್ಟ್‌ನ ಪ್ರತೀ ಇನ್ನಿಂಗ್ಸ್‌ನಲ್ಲಿ ರಿವ್ಯೂ ವಿಫಲವಾದರೂ ಒಟ್ಟಿಗೆ ಮೂರು ಡಿಆರ್‌ಎಸ್‌ಗಳಿಗೆ ಅವಕಾಶವಿರುತ್ತದೆ. ವೈಟ್‌ಬಾಲ್‌ ಕ್ರಿಕೆಟ್‌ನಲ್ಲಿ ಎರಡು ಡಿಆರ್‌ಎಸ್‌ಗಳಿಗೆ ಅವಕಾಶವಿರುತ್ತದೆ.

Story first published: Tuesday, June 9, 2020, 21:50 [IST]
Other articles published on Jun 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X