ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವೆಸ್ಟ್ ಇಂಡೀಸ್ ವೇಗಿ ಶಾನನ್ ಗೇಬ್ರಿಯಲ್‌ಗೆ ನಿಷೇಧ ಹೇರಿದ ಐಸಿಸಿ!

ICC bans West Indian Shannon Gabriel for second Test against Bangladesh

ನವದೆಹಲಿ, ನವೆಂಬರ್ 23: ಬಾಂಗ್ಲಾ ದೇಶ ವಿರುದ್ಧದ ದ್ವಿತೀಯ ಟೆಸ್ಟ್ ನಿಂದ ವೆಸ್ಟ್ ಇಂಡೀಸ್ ವೇಗಿ ಶಾನನ್ ಗೇಬ್ರಿಯಲ್‌ ಅವರಿಗೆ ಐಸಿಸಿ ನಿಷೇಧ ಹೇರಿದೆ. ಕೇವಲ 24 ತಿಂಗಳ ಅವಧಿಯಲ್ಲಿ ಶಾನನ್ 5 ಡಿ-ಮೆರಿಟ್ ಪಾಯಿಂಟ್ಸ್ ಪಡೆದಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಐಸಿಸಿ ತಿಳಿಸಿದೆ.

ಭಾರತ vs ಆಸೀಸ್ 2ನೇ ಟಿ20: ಮಳೆ ಅಡ್ಡಿ, ಫಲಿತಾಂಶವಿಲ್ಲದೆ ಪಂದ್ಯ ಅಂತ್ಯಭಾರತ vs ಆಸೀಸ್ 2ನೇ ಟಿ20: ಮಳೆ ಅಡ್ಡಿ, ಫಲಿತಾಂಶವಿಲ್ಲದೆ ಪಂದ್ಯ ಅಂತ್ಯ

ವೆಸ್ಟ್ ಇಂಡೀಸ್-ಬಾಂಗ್ಲಾದೇಶ ನಡುವೆ ಗುರುವಾರ (ನವೆಂಬರ್ 22) ನಡೆದ ಮೊದಲ ಟೆಸ್ಟ್ ಪಂದ್ಯದ ವೇಳೆ ಬಾಂಗ್ಲಾ ಆಟಗಾರ ಇಮ್ರುಲ್ ಕಾಯೆಸ್ ಎದುರು ಗೇಬ್ರಿಯಲ್ ಅನುಚಿತ ವರ್ತನೆ ತೋರ್ಪಡಿಸಿದ್ದರು. ಹೀಗಾಗಿ ಅವರಿಗೆ 2 ಡಿಮೆರಿಟ್ ಪಾಯಿಂಟ್ಸ್ (ನಕಾರಾತ್ಮಕ ಅಂಕ) ನೀಡಿ ಒಂದು ಪಂದ್ಯದಿಂದ ನಿಷೇಧಿಸಲಾಗಿದೆ.

8ನೇ ಓವರ್ ನಲ್ಲಿ ಚೆಂಡೆಸದ ಬಳಿಕ ಶಾನನ್, ಎದುರಾಳಿ ಆಟಗಾರರನ್ನು ಗುರಿ ಮಾಡಿ ವಿಚಿತ್ರವಾಗಿ ನಡೆದುಕೊಂಡಿದ್ದರು. ಇಮ್ರುಲ್ ಅವರನ್ನು ಉದ್ದೇಶಪೂರ್ವಕವಾಗಿ ಮುಟ್ಟುವ ಮೂಲಕ ತಪ್ಪೆಸಗಿದ್ದರು. ಈ ಕಾರಣಕ್ಕಾಗಿ ಗೇಬ್ರಿಯಲ್‌ ಅವರನ್ನು ಮೀರ್ ಪುರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಿಂದ ಹೊರಗಿಡಲಾಗಿದೆ.

'ಅಂಪೈರ್‌ಗಳ ಅಭಿಪ್ರಾಯದ ಪ್ರಕಾರ ಆಟಗಾರರು ಇಂಥ ವರ್ತನೆ ತೋರುವಂತಿಲ್ಲ' ಎಂದು ಐಸಿಸಿ ಶುಕ್ರವಾರ (ನವೆಮಬರ್ 23) ಪ್ರಕಟನೆಯಲ್ಲಿ ತಿಳಿಸಿದೆ. ಇದಕ್ಕೂ ಮುನ್ನ 2017ರಲ್ಲಿ ಪಾಕಿಸ್ಥಾನ ವಿರುದ್ಧ ಜಮೈಕಾ ಪಂದ್ಯದಲ್ಲಿ ಶಾನನ್ 3 ಡಿ-ಮೆರಿಟ್ ಪಾಯಿಂಟ್ಸ್‌ ಪಡೆದಿದ್ದರು.

ಎಂಎಸ್‌ಎಲ್‌: ಡಿ ವಿಲಿಯರ್ಸ್ ಬಳಗಕ್ಕೆ ಸೋಲುಣಿಸಿದ ಡರ್ಬನ್ ಹೀಟ್ಎಂಎಸ್‌ಎಲ್‌: ಡಿ ವಿಲಿಯರ್ಸ್ ಬಳಗಕ್ಕೆ ಸೋಲುಣಿಸಿದ ಡರ್ಬನ್ ಹೀಟ್

ಚಿತ್ತಗಾಂಗ್ ಸ್ಟೇಡಿಯಂನಲ್ಲಿ ನಡೆದ ಆರಂಭಿಕ ಪಂದ್ಯದಲ್ಲಿ ಬ್ಯಾಟಿಂಗ್ ಆಯ್ದ ಬಾಂಗ್ಲ ಮೊದಲ ಇನ್ನಿಂಗ್ಸ್‌ನಲ್ಲಿ 324 ರನ್ ಪೇರಿಸಿತ್ತು. ವೆಸ್ಟ್ ಇಂಡೀಸ್ 246 ರನ್‌ನೊಂದಿಗೆ ಮೊದಲ ಇನ್ನಿಂಗ್ಸ್ ಮುಗಿಸಿತ್ತು. ದ್ವಿತೀಯ ಇನ್ನಿಂಗ್ಸ್ ಗೆ ಇಳಿದಿರುವ ಬಾಂಗ್ಲಾ ಶುಕ್ರವಾರ (ನ.23) ದಿನದಾಂತ್ಯಕ್ಕೆ 17 ಓವರ್‌ಗೆ 5 ವಿಕೆಟ್ ಕಳೆದು 55 ರನ್ ಗಳಿಸಿದೆ.

Story first published: Friday, November 23, 2018, 18:19 [IST]
Other articles published on Nov 23, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X