ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಒಡಿಐ ಕ್ರಿಕೆಟ್‌ ವಿಶ್ವಕಪ್‌ 2019: ಬಾಂಗ್ಲಾ ತಂಡ ಪ್ರಕಟ

Icc Cricket World Cup Bangladesh announce WC Squad Mortaza to lead

ಢಾಕಾ, ಏಪ್ರಿಲ್‌ 16: ಇಂಗ್ಲೆಂಡ್‌ ಮತ್ತು ವೇಲ್ಸ್‌ ಆತಿಥ್ಯದಲ್ಲಿ ನಡೆಯಲಿರುವ 2019ರ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗೆ ಬಾಂಗ್ಲಾದೇಶ ತನ್ನ 15 ಆಟಗಾರರ ತಂಡವನ್ನು ಮಂಗಳವಾರ ಪ್ರಕಟಿಸಿದ್ದು, ಅನುಭವಿ ಆಟಗಾರ ಮಶ್ರಫೆ ಮೊರ್ತಾಝ ನಾಯಕತ್ವ ಪಡೆದಿದ್ದಾರೆ.

ಸ್ಟಾರ್‌ ಆಲ್‌ ರೌಂಡರ್‌ ಶಾಕಿಬ್‌ ಅಲ್‌ ಹಸನ್‌ ಉಪನಾಯಕನ ಜವಾಬ್ದಾರಿ ಪಡೆದಿದ್ದು, ಕಳೆದ ಏಷ್ಯಾ ಕಪ್‌ ಟೂರ್ನಿಯಲ್ಲಿ ಬಾಂಗ್ಲಾ ಪರ ಕೊನೆಯ ಪಂದ್ಯವನ್ನಾಡಿದ್ದ ಮಧ್ಯ ಕ್ರಮಾಂಕದ ಬ್ಯಾಟ್ಸ್‌ಮನ್‌ ಮೊಸಾದೆಕ್‌ ಹುಸೇನ್‌ ವಿಶ್ವಕಪ್‌ ತಂಡದಲ್ಲಿ ಅಚ್ಚರಿಯ ಸ್ಥಾನ ಗಿಟ್ಟಿಸಿದ್ದಾರೆ.

ICC World Cup 2019: ಭಾರತ ಅಂತಿಮ ತಂಡ ಪ್ರಕಟಿಸಿದ ಬಿಸಿಸಿಐ

ಜತೆಗೆ ಏಕದಿನ ಕ್ರಿಕೆಟ್‌ಗೆ ಇನ್ನು ಪದಾರ್ಪಣೆ ಮಾಡದ ಯುವ ವೇಗದ ಬೌಲರ್‌ ಅಬು ಜಾಯೆದ್‌ ಕೂಡ ತಂಡದಲ್ಲಿದ್ದಾರೆ. ಕಳೆದ ತಿಂಗಳು ನಡೆದ ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಜಾಯೆದ್‌ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು.

ಬಾಂಗ್ಲಾದೇಶ ತಂಡ ಜೂನ್‌ 2ರಂದು ಕೆನ್ನಿಂಗ್ಟನ್‌ ಓವಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ವಿಶ್ವಕಪ್‌ ಅಭಿಯಾನ ಆರಂಭಿಸಲಿದೆ. ಇದಕ್ಕೂ ಮುನ್ನ ಪಾಕಿಸ್ತಾನ ಮತ್ತು ಭಾರತ ವಿರುದ್ಧ ಕ್ರಮವಾಗಿ ಮೇ 26 ಮತ್ತು ಮೇ 28ರಂದು ಅಭ್ಯಾಸ ಪಂದ್ಯಗಳನ್ನಾಡಲಿದೆ.

ಐಸಿಸಿ ವಿಶ್ವಕಪ್ ಕ್ರಿಕೆಟ್ 2019 : ಓದುಗರ ಆಯ್ಕೆ ತಂಡಗಳುಐಸಿಸಿ ವಿಶ್ವಕಪ್ ಕ್ರಿಕೆಟ್ 2019 : ಓದುಗರ ಆಯ್ಕೆ ತಂಡಗಳು

ಬಾಂಗ್ಲಾದೇಶ ಹೊರತಾಗಿ ನ್ಯೂಜಿಲೆಂಡ್‌, ಆಸ್ಟ್ರೇಲಿಯಾ ಮತ್ತು ಭಾರತ ವಿಶ್ವಕಪ್‌ ಸಲುವಾಗಿ ತಮ್ಮ ತಂಡಗಳನ್ನು ಪ್ರಕಟಿಸಿದ್ದು , ಟೂರ್ನಿ ಮೇ 30ರಂದು ಆರಂಭವಾಗಲಿದೆ.

ವಿಶ್ವಕಪ್‌ಗೆ ಬಾಂಗ್ಲಾದೇಶ ತಂಡ ಇಂತಿದೆ: ಮಶ್ರಫೆ ಮೊರ್ತಾಝ (ನಾಯಕ), ತಮಿಮ್‌ ಇಕ್ಬಾಲ್‌, ಮಹ್ಮೂದುಲ್ಲಾ, ಮುಷ್ಫಿಕರ್‌ ರಹೀಮ್‌, ಶಾಕಿಬ್‌ ಅಲ್‌ ಹಸನ್‌ (ಉಪನಾಯಕ), ಸೌಮ್ಯ ಸರ್ಕಾರ್‌, ಲಿಟನ್‌ ದಾಸ್‌, ಸಬ್ಬೀರ್‌ ರೆಹ್ಮಾನ್‌, ಮೆಹದಿ ಹಸನ್‌ ಮಿರಾಜ್‌, ಮೊಹಮ್ಮದ್‌ ಮಿಥುನ್‌, ರುಬೆಲ್‌ ಹೊಸೇನ್‌, ಮುಸ್ತಾಫಿಜುರ್‌ ರೆಹ್ಮಾನ್‌, ಮೊಹಮ್ಮದ್‌ ಸೈಫುದ್ದೀನ್‌, ಮೊಸಾದೆಕ್‌ ಹುಸೇನ್‌ ಮತ್ತು ಅಬು ಜಾಯೆದ್‌.

Story first published: Tuesday, April 16, 2019, 15:24 [IST]
Other articles published on Apr 16, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X