ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಪಾಕ್ ವಿಶ್ವಕಪ್ ಪಂದ್ಯ: ಸೋತರೂ ಗೆದ್ದರೂ ಇತಿಹಾಸ!

ICC World Cup 2019 : ಸೋತರೂ, ಗೆದ್ದರೂ ಇತಿಹಾಸ ನಿರ್ಮಿಸಲಿದೆ ಭಾರತ..? | Oneindia Kannada
ICC Cricket World Cup 2019: India vs Pakistan-Head to head

ಮ್ಯಾನ್ಚೆಸ್ಟರ್, ಜೂನ್ 16: ಐಸಿಸಿ ಏಕದಿನ ವಿಶ್ವಕಪ್‌ ಪಂದ್ಯದಲ್ಲಿ ಇದು ಏಳನೇ ಬಾರಿಗೆ ಬದ್ಧ ಎದುರಾಳಿ ತಂಡಗಳಾದ ಪಾಕಿಸ್ತಾನ ಮತ್ತು ಭಾರತ ಭಾನುವಾರ (ಜೂನ್ 16) ಮ್ಯಾನ್ಚೆಸ್ಟರ್‌ನ ಓಲ್ಡ್ ಟ್ರಾಫೋರ್ಡ್ ನಲ್ಲಿ ಮುಖಾಮುಖಿಯಾಗುತ್ತಿವೆ. ಎರಡರಲ್ಲಿ ಯಾವ ತಂಡ ಸೋತರೂ, ಯಾವ ತಂಡ ಗೆದ್ದರೂ ಇತಿಹಾಸವಾಗಲಿದೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಈ ಹಿಂದಿನ 6 ವಿಶ್ವಕಪ್ ಕಾದಾಟಗಳಲ್ಲಿ ಭಾರತ ಆರರಲ್ಲಿ ಆರೂ ಪಂದ್ಯಗಳನ್ನು ಗೆದ್ದಿದೆ, ಪಾಕಿಸ್ಥಾನ ಆರರಲ್ಲೂ ಸೋಲಿನ ಮುಖಭಂಗ ಅನುಭವಿಸಿದೆ. ಹೀಗಾಗಿ ಈ ಬಾರಿ ಭಾರತ ಗೆದ್ದರೆ ಸತತ ಎಳನೇ ಬಾರಿ ಗೆಲುವಿನ ದಾಖಲೆ ಬರೆಯಲಿದೆ, ಸೋತರೆ ಪ್ರಥಮ ಸಾರಿ ವಿಶ್ವಕಪ್‌ನಲ್ಲಿ ಪಾಕ್ ಎದುರು ಸೋಲಿನ ಕಹಿ ಅನುಭವಿಸಲಿದೆ.

ಪಾಕ್ ಜಾಹಿರಾತಿಗೆ ತಪರಾಕಿ ಕೊಟ್ಟ ಭಾರತದ 'ಸ್ಟಾರ್‌'ಗಳು: ವೈರಲ್ ವಿಡಿಯೋಪಾಕ್ ಜಾಹಿರಾತಿಗೆ ತಪರಾಕಿ ಕೊಟ್ಟ ಭಾರತದ 'ಸ್ಟಾರ್‌'ಗಳು: ವೈರಲ್ ವಿಡಿಯೋ

ಈ ಹಿಂದಿನ ಆರು ಪಂದ್ಯಗಳೆಂದರೆ, 1. 1992, ಸಿಡ್ನಿ, ಭಾರತಕ್ಕೆ 43 ರನ್ ಜಯ- 2. 1996, ಬೆಂಗಳೂರು, ಟೀಮ್ ಇಂಡಿಯಾಕ್ಕೆ 39 ರನ್ ಗೆಲುವು- 3. 1999, ಮ್ಯಾಂಚೆಸ್ಟರ್, ಪಾಕ್‌ಗೆ 47 ರನ್ ಸೋಲು- 4. 2003, ಸೆಂಚುರಿಯನ್, 6 ವಿಕೆಟ್ ಗೆಲುವಾಚರಿಸಿದ ಗಂಗೂಲಿ ಬಳಗ- 5. 2011, ಮೊಹಾಲಿ, ಭಾರತ 29 ರನ್ ಜಯಭೇರಿ- 6. 2015, ಅಡಿಲೇಡ್, ಭಾರತಕ್ಕೆ 76 ರನ್ ಜಯ.

ಭಾರತ-ಪಾಕಿಸ್ತಾನದ ನಡುವೆ ಗೆಲ್ಲೋರು 'ಇವರು' ಎಂದ ಶೋಯೆಬ್ ಅಖ್ತರ್ಭಾರತ-ಪಾಕಿಸ್ತಾನದ ನಡುವೆ ಗೆಲ್ಲೋರು 'ಇವರು' ಎಂದ ಶೋಯೆಬ್ ಅಖ್ತರ್

ಈ ಬಾರಿಯ ವಿಶ್ವಕಪ್‌ನಲ್ಲಿ ಎರಡರಲ್ಲಿ ಏರಡೂ ಪಂದ್ಯಗಳನ್ನು ಗೆದ್ದಿರುವ ವಿರಾಟ್ ಕೊಹ್ಲಿ ಬಳಗ ಸರ್ಫರಾಜ್ ಬಳಗದೆದುರೂ ಗೆಲುವಿನ ವಿಶ್ವಾಸದಲ್ಲಿದೆ. ಅತ್ತ ಪಾಕಿಸ್ತಾನ ತಂಡ ಆಡಿರುವ ನಾಲ್ಕು ಪಂದ್ಯಗಳಲ್ಲಿ ಒಂದರಲ್ಲಷ್ಟೇ ಗೆಲುವು ಕಂಡಿದೆ. ಭಾನುವಾರ ಮಳೆ ಬಾರದಿದ್ದರೆ ಇತ್ತಂಡಗಳ ಕುತೂಹಲಕಾರಿ ಕದನ ಕಣ್ತುಂಬಿಕೊಳ್ಳಬಹುದು.

{headtohead_cricket_3_5}

Story first published: Sunday, June 16, 2019, 0:10 [IST]
Other articles published on Jun 16, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X