ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಕದಿನ ವಿಶ್ವಕಪ್ ಇತಿಹಾಸ ಪುಟಗಳಲ್ಲಿ ಇಂದಿಗೂ ಮುರಿಯದ ದಾಖಲೆಗಳು!

ವಿಶ್ವಕಪ್ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಳ್ಳೋದು ಸಣ್ಣ ಮಾತಲ್ಲ, ಅದರಲ್ಲೂ ವಿಶ್ವಕಪ್‌ನಂತ ಅದ್ದೂರಿ ಕ್ರಿಕೆಟ್ ಟೂರ್ನಿಯಲ್ಲಿ ದಾಖಲೆ ನಿರ್ಮಿಸೋದು ಇದೆಯಲ್ಲ? ಅದು ಇನ್ನೂ ಮೇಲಿನ ಸಾಧನೆ. ವಿಶ್ವಕಪ್ ನಲ್ಲಿ ಈಗಲೂ ಸರಿಗಟ್ಟಲಾರದ ದಾಖಲೆಗಳನ್ನು ಕೆಲ ಆಟಗಾರರು, ತಂಡಗಳು ಉಳಿಸಿಕೊಂಡಿವೆ. ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಮೇ 30ರಿಂದ ಆರಂಭಗೊಳ್ಳಲಿದೆಯಲ್ಲ? ಅದು 12ನೇ ಏಕದಿನ ವಿಶ್ವಕಪ್ ಆವೃತ್ತಿ. ಹಿಂದಿನ 11 ಸೀಸನ್‌ಗಳಲ್ಲಿ ಆಟಗಾರರು ಮತ್ತು ತಂಡಗಳಿಂದ ಅಪರೂಪದ ದಾಖಲೆ ನಿರ್ಮಾಣವಾಗಿದ್ದವು. ಅಂಥ ದಾಖಲೆಗಳೆಡೆಗಿನ ಇಣುಕು ನೋಟವಿದು.

ಬೆಂಗಳೂರು, ಮೇ 21: ವಿಶ್ವಕಪ್ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಳ್ಳೋದು ಸಣ್ಣ ಮಾತಲ್ಲ, ಅದರಲ್ಲೂ ವಿಶ್ವಕಪ್‌ನಂತ ಅದ್ದೂರಿ ಕ್ರಿಕೆಟ್ ಟೂರ್ನಿಯಲ್ಲಿ ದಾಖಲೆ ನಿರ್ಮಿಸೋದು ಇದೆಯಲ್ಲ? ಅದು ಇನ್ನೂ ಮೇಲಿನ ಸಾಧನೆ. ವಿಶ್ವಕಪ್ ನಲ್ಲಿ ಈಗಲೂ ಸರಿಗಟ್ಟಲಾರದ ದಾಖಲೆಗಳನ್ನು ಕೆಲ ಆಟಗಾರರು, ತಂಡಗಳು ಉಳಿಸಿಕೊಂಡಿವೆ.

ಒಡಿಐ ವಿಶ್ವಕಪ್‌ನಲ್ಲಿ ಅಬ್ಬರಿಸಿದ 5 ಅಗ್ರಮಾನ್ಯ ಬೌಲರ್‌ಗಳಿವರು!ಒಡಿಐ ವಿಶ್ವಕಪ್‌ನಲ್ಲಿ ಅಬ್ಬರಿಸಿದ 5 ಅಗ್ರಮಾನ್ಯ ಬೌಲರ್‌ಗಳಿವರು!

ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಮೇ 30ರಿಂದ ಆರಂಭಗೊಳ್ಳಲಿದೆಯಲ್ಲ? ಅದು 12ನೇ ಏಕದಿನ ವಿಶ್ವಕಪ್ ಆವೃತ್ತಿ. ಹಿಂದಿನ 11 ಸೀಸನ್‌ಗಳಲ್ಲಿ ಆಟಗಾರರು ಮತ್ತು ತಂಡಗಳಿಂದ ಅಪರೂಪದ ದಾಖಲೆ ನಿರ್ಮಾಣವಾಗಿದ್ದವು. ಅಂಥ ದಾಖಲೆಗಳೆಡೆಗಿನ ಇಣುಕು ನೋಟವಿದು.

ಈ ಬಾರಿಯ ವಿಶ್ವಕಪ್‌ನಲ್ಲಿ ಮಿಂಚಬಲ್ಲ ಟಾಪ್‌ 5 ಫೀಲ್ಡರ್ಸ್‌ ಇವರು!ಈ ಬಾರಿಯ ವಿಶ್ವಕಪ್‌ನಲ್ಲಿ ಮಿಂಚಬಲ್ಲ ಟಾಪ್‌ 5 ಫೀಲ್ಡರ್ಸ್‌ ಇವರು!

ಐಸಿಸಿ ಟ್ರಾವೆಲ್ ಆ್ಯಂಡ್ ಟೂರ್ಸ್ ಡಾಟ್ ಕೋ ಡಾಟ್ ಯುಕೆಯಲ್ಲಿರುವಂತೆ ವಿಶ್ವಕಪ್ ನಲ್ಲಿ ಈಗಲೂ ದಾಖಲೆಗಳನ್ನು ಉಳಿಸಿಕೊಂಡಿರುವ ತಂಡಗಳ, ಆಟಗಾರರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಅತೀ ಹೆಚ್ಚು ಪ್ರಶಸ್ತಿ ಗೆದ್ದ ತಂಡ

ಅತೀ ಹೆಚ್ಚು ಪ್ರಶಸ್ತಿ ಗೆದ್ದ ತಂಡ

ವಿಶ್ವಕಪ್‌ನಲ್ಲಿ ಅತೀ ಹೆಚ್ಚು ಸಾರಿ ಟ್ರೋಫಿ ಜಯಿಸಿದ ಹೆಗ್ಗಳಿಕೆ ಆಸ್ಟ್ರೇಲಿಯಾ ತಂಡದ್ದು. ಈವರೆಗೆ ನಡೆದಿರುವ ಒಟ್ಟು 11 ವಿಶ್ವಕಪ್ ಆವೃತ್ತಿಗಳಲ್ಲಿ ಕಾಂಗರೂ ಪಡೆ ಒಟ್ಟು 5 ಸಾರಿ ಚಾಂಪಿಯನ್ ಆಗಿ ಹೊರ ಹೊಮ್ಮಿದೆ (1987, 1999, 2003, 2007, 2015). ಸತತ 3 ಸಾರಿ ಟ್ರೋಫಿ ಗೆದ್ದ ಹಿರಿಮೆಯೂ ಆಸೀಸ್ ತಂಡದ್ದು ( 1999, 2003, 2007). ವಿಶ್ವಕಪ್‌ನಲ್ಲಿ ಅತೀ ಹೆಚ್ಚು ಗೆಲುವಿನ (62) ದಾಖಲೆಯೂ ಆಸ್ಟ್ರೇಲಿಯಾ ತಂಡ ಹೊಂದಿದೆ.

ಅತ್ಯಧಿಕ ರನ್ ಯಶಸ್ವಿ ಚೇಸ್

ಅತ್ಯಧಿಕ ರನ್ ಯಶಸ್ವಿ ಚೇಸ್

ವಿಶ್ವಕಪ್ ನಲ್ಲಿ ಅತ್ಯಧಿಕ ರನ್ ಚೇಸಿಂಗ್ ದಾಖಲೆಗೆ ಐರ್ಲೆಂಡ್ ತಂಡ ಕಾರಣವಾಗಿತ್ತು. 2011ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಗ್ರೂಪ್ 'ಬಿ'ಯ 15ನೇ ಪಂದ್ಯದಲ್ಲಿ ಐರ್ಲೆಂಡ್ ತಂಡ ಇಂಗ್ಲೆಂಡ್ ನೀಡಿದ್ದ 327 ರನ್ ಗುರಿಯನ್ನು ತಲುಪಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 50 ಓವರ್‌ಗೆ 8 ವಿಕೆಟ್ ನಷ್ಟದಲ್ಲಿ 327 ರನ್ ಬಾರಿಸಿದ್ದರೆ, ಐರ್ಲೆಂಡ್ 49.1 ಓವರ್‌ನಲ್ಲಿ 7 ವಿಕೆಟ್ ಕಳೆದು 329 ರನ್ ಪೇರಿಸಿತ್ತು.

ತಂಡದ ಅತ್ಯಧಿಕ ರನ್ ದಾಖಲೆ

ತಂಡದ ಅತ್ಯಧಿಕ ರನ್ ದಾಖಲೆ

ತಂಡವೊಂದು ಅತ್ಯಧಿಕ ರನ್ ಬಾರಿಸಿ ಗೆಲುವನ್ನಾಚರಿಸಿದ ದಾಖಲೆ ಆಸ್ಟ್ರೇಲಿಯಾ ಹೊಂದಿದೆ. 2015ರಲ್ಲಿ ಕಾಂಗರೂ ಪಡೆ ಅಫ್ಘಾನಿಸ್ತಾನ ವಿರುದ್ಧ 6 ವಿಕೆಟ್ ನಷ್ಟಕ್ಕೆ 417 ರನ್ ಬಾರಿಸಿತ್ತು. ಈ ವೇಳೆ ಗ್ಲೆನ್ ಮ್ಯಾಕ್ಸ್‌ವೆಲ್ 45 ಎಸೆತಗಳಿಗೆ 88 ರನ್ ಸಿಡಿಸಿದ್ದರು. ಅಫ್ಘಾನ್ ತಂಡ 37.3 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 142 ರನ್ ಬಾರಿಸಿ, ಬರೋಬ್ಬರಿ 275 ರನ್‌ಗಳಿಂದ ತಲೆ ಬಾಗಿತ್ತು.

ಕ್ರಿಕೆಟ್ ವಿಶ್ವಕಪ್‌ನಲ್ಲಿ ಹೆಚ್ಚಿನ ರನ್

ಕ್ರಿಕೆಟ್ ವಿಶ್ವಕಪ್‌ನಲ್ಲಿ ಹೆಚ್ಚಿನ ರನ್

ಕ್ರಿಕೆಟ್ ವಿಶ್ವಕಪ್‌ನಲ್ಲಿ ಅತೀ ಹೆಚ್ಚಿನ ರನ್ ದಾಖಲೆ ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಉಳಿಸಿಕೊಂಡಿದ್ದಾರೆ. ವಿಶ್ವಕಪ್‌ನಲ್ಲಿ ಸಚಿನ್ 2,278 ರನ್ ಬಾರಿಸಿದ್ದಾರೆ. 2003ರಲ್ಲಿ ನಮೀಬಿಯಾ ವಿರುದ್ಧ ತೆಂಡೂಲ್ಕರ್ ವಿಶ್ವಕಪ್‌ನ ಅತೀ ಹೆಚ್ಚು ರನ್ (152 ರನ್) ಬಾರಿಸಿದ್ದರು. ಆದರೆ ಸಚಿನ್ ವಿಶ್ವಕಪ್ ಟ್ರೋಫಿ ಗೆದ್ದ ಸಂಭ್ರಮಾಚರಿಸಲು ಅವಕಾಶ ಲಭಿಸಿದ್ದು 2011ರಲ್ಲಿ.

ಅತೀ ವೇಗದ ದ್ವಿಶತಕ

ಅತೀ ವೇಗದ ದ್ವಿಶತಕ

ವೆಸ್ಟ್ ಇಂಡೀಸ್ ಆರಂಭಿಕ ಬ್ಯಾಟ್ಸ್ಮನ್ ಕ್ರಿಸ್‌ ಗೇಲ್ ವಿಶ್ವಕಪ್‌ನಲ್ಲಿ ಅತೀ ವೇಗದ ದ್ವಿಶತಕ ಬಾರಿಸಿದ ದಾಖಲೆ ಹೊಂದಿದ್ದಾರೆ. 2015ರಲ್ಲಿ ಗೇಲ್ ಝಿಂಬಾಬ್ವೆ ವಿರುದ್ಧ ಈ ಸಾಧನೆ ಮಾಡಿದ್ದರು. ಅಂದಿನ ಪಂದ್ಯದಲ್ಲಿ ಯುನಿವರ್ಸಲ್ ಬಾಸ್ 138 ಎಸೆತಗಳಿಗೆ 200 ರನ್ ಪೂರೈಸಿದ್ದರಲ್ಲದೆ, ಒಟ್ಟು 147 ಎಸೆತಗಳಲ್ಲಿ 215 ರನ್ ಕಲೆ ಹಾಕಿದ್ದರು. ವೆಸ್ಟ್ ಇಂಡೀಸ್ ಅಂದು 50 ಓವರ್‌ಗೆ 2 ವಿಕೆಟ್ ನಷ್ಟದಲ್ಲಿ 372 ರನ್ ಬಾರಿಸಿತ್ತು. ಝಿಂಬಾಬ್ವೆ 73 ರನ್‌ಗಳಿಂದ (ಡಕ್ವರ್ಥ್ ಲೂಯೀಸ್ ನಿಯಮದ ಆಧಾರದಲ್ಲಿ) ಸೋತಿತ್ತು.

ಅತೀ ಹೆಚ್ಚು ಸಿಕ್ಸ್‌ಗಳು

ಅತೀ ಹೆಚ್ಚು ಸಿಕ್ಸ್‌ಗಳು

ಏಕದಿನ ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಸಿಕ್ಸ್ ಬಾರಿಸಿದ ಕೀರ್ತಿ ವಿಂಡೀಸ್‌ನ ಕ್ರಿಸ್‌ ಗೇಲ್ ಮತ್ತು ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಲ್ ಅವರದ್ದು. ಇಬ್ಬರೂ ತಲಾ 37 ಸಿಕ್ಸ್‌ ದಾಖಲೆ ಹೊಂದಿದ್ದಾರೆ. ಡಿ ವಿಲಿಯರ್ಸ್ ಈಗಾಗಲೇ ನಿವೃತ್ತಿ ಘೋಷಿಸಿರುವುದರಿಂದ 2019ರ ವಿಶ್ವಕಪ್‌ನಲ್ಲಿ ದಾಖಲೆ ಮುರಿಯಲು ಗೇಲ್‌ಗೆ ಅವಕಾಶವಿದೆ.

ಅತ್ಯಧಿಕ ವಿಕೆಟ್ ದಾಖಲೆ

ಅತ್ಯಧಿಕ ವಿಕೆಟ್ ದಾಖಲೆ

1996ರಲ್ಲಿ ಮೊದಲ ವಿಶ್ವಕಪ್‌ನಲ್ಲಿ ಪಾಲ್ಗೊಂಡು 2007ರಲ್ಲಿ ಕಡೆಯ ವಿಶ್ವಕಪ್ ಪಂದ್ಯವನ್ನಾಡಿದ್ದ ಆಸ್ಟ್ರೇಲಿಯಾದ ಬೌಲಿಂಗ್ ದಿಗ್ಗಜ ಗ್ಲೆನ್ ಮೆಗ್ರಾತ್ ವಿಶ್ವಕಪ್‌ನಲ್ಲಿ ಅತೀ ಹೆಚ್ಚಿನ ವಿಕೆಟ್‌ಗಳ ಸರದಾರನಾಗಿ ಮುಂಚಿದ್ದಾರೆ. ಮೆಗ್ರಾತ್ ಖಾತೆಯಲ್ಲಿ ಒಟ್ಟು 71 ವಿಶ್ವಕಪ್ ವಿಕೆಟ್‌ಗಳಿವೆ. ಒಟ್ಟು 39 ಪಂದ್ಯಗಳಲ್ಲಿ ಮೆಗ್ರಾತ್ ಈ ದಾಖಲೆ ಉಳಿಸಿಕೊಂಡಿದ್ದಾರೆ.

ಸತತ ನಾಲ್ಕು ವಿಕೆಟ್ ಸಾಧನೆ

ಸತತ ನಾಲ್ಕು ವಿಕೆಟ್ ಸಾಧನೆ

2007ರಲ್ಲಿ ಗಯಾನಾದಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ನಡುವಿನ ವಿಶ್ವಕಪ್ ಪಂದ್ಯ ಜಿದ್ದಾಜಿದ್ದಿಗಾಗಿ ಗುರುತಿಸಿಕೊಂಡಿತ್ತು. ಈ ಪಂದ್ಯದಲ್ಲಿ ಲಸಿತ್ ಮಾಲಿಂಗ ಸತತ ನಾಲ್ಕು ವಿಕೆಟ್ ಪಡೆದು ಮಿಂಚಿದ್ದರು. ಶಾನ್ ಪೊಲಾಕ್, ಆಂಡ್ರ್ಯೂ ಹಾಲ್, ಜಾಕ್ ಕ್ಯಾಲೀಸ್ ಮತ್ತು ಮಖಾಯ ಎನ್‌ಟಿನಿ ವಿಕೆಟ್‌ಗಳು ಮಾಲಿಂಗಾಗೆ ಬಲಿಯಾಗಿದ್ದವು. ಆದರೆ ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 1 ವಿಕೆಟ್‌ನಿಂದ ಜಯಿಸಿತ್ತು.

Story first published: Tuesday, May 21, 2019, 16:42 [IST]
Other articles published on May 21, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X