ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಾಂಗ್ಲಾದೇಶದಿಂದ ಅಂಕ ಕಿತ್ತುಕೊಳ್ಳುವುದೇ ದಕ್ಷಿಣ ಆಫ್ರಿಕಾ?

ICC Cricket World Cup 2019 : Will South Africa clinch points from Bangladesh?

ಲಂಡನ್, ಜೂನ್ 01 : ಐಸಿಸಿ ವಿಶ್ವಕಪ್ ಕ್ರಿಕೆಟ್ ನ ಪ್ರಥಮ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೋತ ನಂತರ, ಜೂನ್ 2ರಂದು ಭಾನುವಾರ ಓವಲ್ ನಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಮೊದಲ ಅಂಕ ದಾಖಲಿಸಿಕೊಳ್ಳಲು ತುಡಿಯುತ್ತಿದೆ.

ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶ ಭಾರತದ ವಿರುದ್ಧ 95 ರನ್ ಗಳಿಂದ ಸೋಲುಕಂಡಿತ್ತು. ಇಂಗ್ಲೆಂಡಿನಲ್ಲಿ ತನ್ನ ಲಯವನ್ನು ಕಂಡುಕೊಳ್ಳಲು ಬಾಂಗ್ಲಾದೇಶ ಇನ್ನೂ ಹೆಣಗಾಡುತ್ತಿದೆ. ಆದರೆ, ಏಕದಿನದ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಯಾವತ್ತೂ ಕಡೆಗಣಿಸಲು ಸಾಧ್ಯವೇ ಇಲ್ಲ.

ಭಾರತ 'ರಾಜ'ನಂತೆ ಸೆಮಿಫೈನಲ್ ಹೋಗೋದು ಖಚಿತ: ಮೆಕಲಂ ಭವಿಷ್ಯ ಭಾರತ 'ರಾಜ'ನಂತೆ ಸೆಮಿಫೈನಲ್ ಹೋಗೋದು ಖಚಿತ: ಮೆಕಲಂ ಭವಿಷ್ಯ

2015ರಲ್ಲಿ ಕ್ವಾರ್ಟಲ್ ಫೈನಲ್ ತಲುಪಲು ಯಶಸ್ವಿಯಾಗಿದ್ದ ಬಾಂಗ್ಲಾದೇಶ ಆಗ ಭಾರತದ ವಿರುದ್ಧ ಸೋಲು ಕಂಡಿತ್ತು. ಈಗಲೂ ಬಾಂಗ್ಲಾದೇಶದ ಬಳಿ ಉತ್ತಮ ಬೌಲಿಂಗ್ ದಾಳಿಯಿದೆ. ಇದು ಭಾರತದ ವಿರುದ್ಧ ಅಭ್ಯಾಸ ಪಂದ್ಯದಲ್ಲಿಯೂ ಕಂಡುಬಂದಿದೆ. ಆದರೆ, ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ಸ್ ಮನ್ ಗಳು ಕ್ಲಿಕ್ ಆಗುತ್ತಿಲ್ಲದಿರುವುದೇ ತಲೆನೋವಾಗಿದೆ.

ಇನ್ನೊಂದೆಡೆ, ಇಂಗ್ಲೆಂಡ್ ವಿರುದ್ಧ ಸೋತ ದಕ್ಷಿಣ ಆಫ್ರಿಕಾ ಅಂತಹ ಹೋರಾಟದ ಮನೋಭಾವ ತೋರಿಸಿರಲಿಲ್ಲ. ಇಂಗ್ಲೆಂಡ್ ಪೇರಿಸಿದ್ದ 311 ರನ್ ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ ಕಡೆಗೆ 207 ರನ್ ಗಳಿಗೆ ಆಲೌಟಾಗಿ ಸೋಲುಂಡಿತು. ಇದೀಗ ದಕ್ಷಿಣ ಆಫ್ರಿಯಾ ಗಾಯಗೊಂಡ ಹುಲಿಯಂತಾಗಿದ್ದು, ಗೆಲುವಿಗೆ ತಹತಹಿಸುತ್ತಿದೆ.

ಹೀನಾಯ ಸೋಲಿನ ಬಳಿಕ ಪಾಕ್‌ ನಾಯಕ ಸರ್ಫರಾಝ್‌ ಹೇಳಿದ್ದಿದು ಹೀನಾಯ ಸೋಲಿನ ಬಳಿಕ ಪಾಕ್‌ ನಾಯಕ ಸರ್ಫರಾಝ್‌ ಹೇಳಿದ್ದಿದು

ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ ಭರ್ಜರಿ ಆಟ ಆರಂಭಿಸಿತ್ತು. ಮೊದಲ ಓವರ್ ನಲ್ಲಿಯೇ ಇಮ್ರಾನ್ ತಾಹೀರ್ ಅವರನ್ನು ಫ್ಲಾಫ್ ಡುಪ್ಲೆಸಿ ಅವರು ಇಳಿಸಿ, ಮೊದಲ ಚೆಂಡಿನಲ್ಲಿಯೇ ಇಂಗ್ಲೆಂಡ್ ವಿಕೆಟ್ ಕಿತ್ತು ಆಘಾತ ನೀಡಿದ್ದರು. ಆದರೆ, ಮುಂದಿನ ನಾಲ್ವರು ಬ್ಯಾಟ್ಸ್ ಮನ್ ಗಳು ತಲಾ ಅರ್ಧ ಸೆಂಚುರಿ ಬಾರಿಸಿ, ಉತ್ತಮ ಸ್ಥಿತಿಗೆ ತೆಗೆದುಕೊಂಡು ಹೋದರು.

ವಿಶ್ವಕಪ್‌ನಲ್ಲಿ ಪಾಕಿಸ್ತಾನ ದಾಖಲಿಸಿರುವ ಕಡಿಮೆ ಮೊತ್ತದ ದಾಖಲೆಗಳಿವು! ವಿಶ್ವಕಪ್‌ನಲ್ಲಿ ಪಾಕಿಸ್ತಾನ ದಾಖಲಿಸಿರುವ ಕಡಿಮೆ ಮೊತ್ತದ ದಾಖಲೆಗಳಿವು!

ದಕ್ಷಿಣ ಆಫ್ರಿಕಾ ಪರ, ಇಮ್ರಾನ್ ತಾಹೀರ್, ಕಾಗಿಸೋ ರಬಾಡಾ, ಲುಂಗಿ ಎನ್ಗಿಡಿಯಂಥ ಉತ್ತಮ ಬೌಲರ್ ಗಳು ಇದ್ದರೂ, ಗಾಯಗೊಂಡಿರುವ ಡೇಲ್ ಸ್ಟೇಯ್ನ್ ಅವರ ಅನುಪಸ್ಥಿತಿ ಕಾಡುತ್ತಿದೆ. ಎರಡನೇ ಪಂದ್ಯದಲ್ಲಿ ಡೇಲ್ ಸ್ಟೇಯ್ನ್ ಅವರು ಆಡುವ ಸಾಧ್ಯತೆಯಿದೆ.

ತಂಡಗಳು

ದಕ್ಷಿಣ ಆಫ್ರಿಕಾ : ಫಾಫ್ ಡುಪ್ಲೆಸಿ (ಕ್ಯಾ), ಐಡೆನ್ ಮರ್ಕ್ರಮ್, ಕ್ವಿಂಟನ್ ಡಿಕಾಕ್ (ವಿಕೀ), ಹಶೀಮ್ ಆಮ್ಲಾ, ರಸ್ಸೀ ವ್ಯಾನ್ ಡೇರ್ ಡುಸೆನ್, ಡೇವಿಡ್ ಮಿಲ್ಲರ್, ಕ್ರಿಸ್ ಮಾರಿಸ್, ಆಂಡೈಲ್, ಫೆಲುಕ್ವಾಯೋ, ಜಿಪಿ ಡುಮಿನಿ, ಡ್ವೇನ್ ಪ್ರಿಟೋರಿಯಸ್, ಡೇಲ್ ಸ್ಟೇಯ್ನ್, ಕಾಗಿಸೋ ರಬಾಡಾ, ಲುಂಗಿ ಎನ್ಗಿಡಿ, ಇಮ್ರಾನ್ ತಾಹೀರ್, ತಬ್ರೇಜ್ ಶಂಸಿ.

ಬಾಂಗ್ಲಾದೇಶ : ಮಶ್ರಫೆ ಮೊರ್ತಾಜಾ (ಕ್ಯಾ), ಅಬು ಜಯೇದ್, ಲಿಟನ್ ದಾಸ್ (ವಿಕೀ), ಮಹಮದ್ದುಲ್ಲಾ, ಮೆಹಿದಿ ಹಸನ್, ಮೊಹಮ್ಮದ್ ಮಿಥುನ್ (ವಿಕೀ), ಮೊಹಮ್ಮದ್ ಸೈಫುದ್ದಿನ್, ಮೊಸಾಡ್ಡೆಕ್ ಹೊಸೇನ್, ಮುಷ್ಫಿಕರ್ ರಹೀಂ, ಮುಸ್ತಫಿಜುರ್ ರಹಮಾನ್, ರುಬೆಲ್ ಹೊಸೇನ್, ಸಬ್ಬೀರ್ ರಹಮಾನ್, ಶಕೀಬ್ ಅಲ್ ಹಸನ್, ಸೊನುಮ್ಯಾ ಸರ್ಕಾರ್, ತಮೀಮ್ ಇಕ್ಬಾಲ್.

Story first published: Saturday, June 1, 2019, 13:35 [IST]
Other articles published on Jun 1, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X