ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ರನ್‌ ನೀಡಿದ ದುಬಾರಿ 5 ಬೌಲರ್‌ಗಳು

ICC Cricket World Cup: Here are 5 most expensive bowlers in WC

ಲಂಡನ್, ಜೂನ್ 19: ಬಹುಶಃ ರಶೀದ್ ಖಾನ್ ಅಭಿಮಾನಿಗಳು ಇದನ್ನು ನಿರೀಕ್ಷಿಸಿರಲಿಕ್ಕಿಲ್ಲ. ಆದರೆ ಲೆಗ್ ಸ್ಪಿನ್ನರ್ ರಶೀದ್ ಅವರಿಂದ ಇಂಥದ್ದೊಂದು ಕೆಟ್ಟ ದಾಖಲೆ ಆಗಿಹೋಯಿತು. ಮ್ಯಾನ್ಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ನಡೆದ ಅಫ್ಘಾನಿಸ್ತಾನ vs ಇಂಗ್ಲೆಂಡ್ ಪಂದ್ಯ ರಶೀದ್ ಪಾಲಿಗೆ ವೃತ್ತಿ ಜೀವನದ ಕೆಟ್ಟ ಪಂದ್ಯವಾಯಿತು.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಐಸಿಸಿ ವಿಶ್ವಕಪ್ 2019ರ 24ನೇ ಪಂದ್ಯವಾಗಿ ಇಂಗ್ಲೆಂಡ್-ಅಫ್ಘಾನಿಸ್ತಾನ ತಂಡಗಳು ಕಾದಾಡಿದ್ದವು. ಇದರಲ್ಲಿ ಆತಿಥೇಯ ಇಂಗ್ಲೆಂಡ್ ತಂಡ 150 ರನ್ ಗೆಲುವನ್ನಾಚರಿಸಿತು. ಇಲ್ಲಿ ಒಂದರ್ಥದಲ್ಲಿ ಅಫ್ಘಾನ್ ಸೋಲಿಗೆ ರಶೀದ್ ಖಾನ್ ಕೂಡ ನೆಪವಾದರು.

ನಂ.1 ಲೆಗ್‌ ಸ್ಪಿನ್ನರ್‌ ರಶೀದ್‌ ಖಾನ್‌ ಹೆಗಲೇರಿದ ಅಪಕೀರ್ತಿ!ನಂ.1 ಲೆಗ್‌ ಸ್ಪಿನ್ನರ್‌ ರಶೀದ್‌ ಖಾನ್‌ ಹೆಗಲೇರಿದ ಅಪಕೀರ್ತಿ!

9 ಓವರ್‌ ಎಸೆದು ರಶೀದ್ ಖಾನ್, ಎದುರಾಳಿ ತಂಡಕ್ಕೆ 100ಕ್ಕೂ ಮಿಕ್ಕಿ ರನ್ ನೀಡಿದ್ದರಾದರೂ ಅವರಿಗೆ ಒಂದೂ ವಿಕೆಟ್ ಲಭಿಸಿಲ್ಲ. ಹೀಗಾಗಿ ವಿಶ್ವಕಪ್‌ನಲ್ಲಿ ಅತೀ ಹೆಚ್ಚು ರನ್‌ ನೀಡಿದ ಬೇಡದ ದಾಖಲೆಗಳಲ್ಲಿ ರಶೀದ್ ಹೆಸರೂ ಸೇರಿಕೊಂಡಿದೆ.

ಮಾರ್ಟಿನ್ ಸ್ನೆಡೆನ್

ಮಾರ್ಟಿನ್ ಸ್ನೆಡೆನ್

ವಿಶ್ವಕಪ್ ಪಂದ್ಯವೊಂದರಲ್ಲಿ ಅತೀ ಹೆಚ್ಚು ರನ್ ನೀಡಿದವರಲ್ಲಿ ನ್ಯೂಜಿಲೆಂಡ್‌ನ ಮಾರ್ಟಿನ್ ಸ್ನೆಡೆನ್ ಮೊದಲ ಸ್ಥಾನದಲ್ಲಿದ್ದಾರೆ. ಬಲಗೈ ಮಧ್ಯಮ ವೇಗಿ ಸ್ನೆಡೆನ್ ಓವಲ್‌ನಲ್ಲಿ 1983ರಲ್ಲಿ ನಡೆದಿದ್ದ ವಿಶ್ವಕಪ್ ಪಂದ್ಯದಲ್ಲಿ ಎದುರಾಳಿ ಇಂಗ್ಲೆಂಡ್‌ಗೆ 105 ರನ್ ಕೊಡುಗೆ ನೀಡಿದ್ದರು. ಒಟ್ಟು 12 ಓವರ್‌ಗಳನ್ನು ಎಸೆದಿದ್ದ ಸ್ನೆಡೆನ್ ಒಂದು ಮೇಡನ್ ಮತ್ತೆರಡು ವಿಕೆಟ್‌ಗಳನ್ನು ಪಡೆದು 100ಕ್ಕೂ ಹೆಚ್ಚು ರನ್ ಕೊಡುಗೆಯಿತ್ತಿದ್ದರು. ಈ ಪಂದ್ಯದಲ್ಲಿ ನ್ಯೂಜಿಲೆಂಡ್ 106 ರನ್ ಸೋಲನುಭವಿಸಿತ್ತು.

ರಶೀದ್ ಖಾನ್

ರಶೀದ್ ಖಾನ್

ಸ್ಪಿನ್ ಬೌಲಿಂಗ್‌ಗಾಗಿ ವಿಶ್ವದ ಗಮನ ಸೆಳೆದಿದ್ದ ರಶೀದ್ ಖಾನ್, ಇಂಗ್ಲೆಂಡ್‌ ಎದುರು ಕೆಟ್ಟ ದಾಖಲೆಗೆ ಕಾರಣರಾಗಬೇಕಾಯ್ತು. 2019ರ ಮಂಗಳವಾರ (ಜೂನ್ 18) ಮ್ಯಾನ್ಚೆಸ್ಟರ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ 9 ಓವರ್ ಎಸೆದಿದ್ದ ಖಾನ್, ಬರೋಬ್ಬರಿ 110 ರನ್ ನೀಡಿದ್ದರು. ಆದರೆ ರಶೀದ್‌ಗೆ ಒಂದೂ ವಿಕೆಟ್ ಲಭಿಸಿರಲಿಲ್ಲ. ಒಂದ್ಯದಲ್ಲಿ 71 ಎಸೆತಗಳಿಗೆ 148 ರನ್ ಬಾರಿಸಿದ್ದ ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ತಂಡವನ್ನು 150 ರನ್‌ನಿಂದ ಗೆಲ್ಲಿಸಿಕೊಟ್ಟರು.

ಜೇಸನ್ ಹೋಲ್ಡರ್

ಜೇಸನ್ ಹೋಲ್ಡರ್

ಸದ್ಯ ವೆಸ್ಟ್ ಇಂಡೀಸ್ ತಂಡದ ನಾಯಕತ್ವ ವಹಿಸಿರುವ ಜೇಸನ್ ಹೋಲ್ಡರ್ ಕೂಡ ಹೊಂದೊಮ್ಮೆ ಇಂಥದ್ದೇ ಅಪ ಕೀರ್ತಿಗೆ ಕಾರಣರಾಗಿದ್ದರು. ದಕ್ಷಿಣ ಆಫ್ರಿಕಾ ಸ್ಫೋಟಕ ಬ್ಯಾಟ್ಸ್ಮನ್ ಎಬಿ ಡಿವಿಲಿಯರ್ಸ್ ಅವರು ಅಂದು ಜೇಸನ್ ಹೋಲ್ಡರ್ ಮುಖಭಂಗ ಅನುಭವಿಸುವಂತೆ ಮಾಡಿದ್ದರು. ಸಿಡ್ನಿಯಲ್ಲಿ 2015ರಲ್ಲಿ ನಡೆದಿದ್ದ ವಿಶ್ವಕಪ್ ಪಂದ್ಯದಲ್ಲಿ ಜೇಸನ್ 10 ಓವರ್‌ಗಳಲ್ಲಿ 104 ರನ್ ನೀಡಿದ್ದರು. ಈ ವೇಳೆ ಹೋಲ್ಡರ್ 2 ಮೇಡನ್ ಮತ್ತು ಕ್ವಿಂಟನ್ ಡಿ ಕಾಕ್ ವಿಕೆಟ್ ಮುರಿದಿದ್ದರು.

ದೌಲತ್ ಝದ್ರನ್

ದೌಲತ್ ಝದ್ರನ್

ಪರ್ತ್ ನಲ್ಲಿ 2015ರಲ್ಲಿ ನಡೆದಿದ್ದ ಪಂದ್ಯವಿದು. ಅಫ್ಘಾನಿಸ್ತಾನ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿದ್ದವು. ಈ ವೇಳೆ ಅಫ್ಘಾನ್ ಬೌಲರ್ ದೌಲತ್ ಝದ್ರನ್ ಅವರನ್ನು ಆಸ್ಟ್ರೇಲಿಯಾ ಆರಂಭಿಕ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ ಬೆಂಡೆತ್ತಿದ್ದರು. ಒಟ್ಟು 10 ಓವರ್‌ ಎಸೆದಿದ್ದ ದೌಲತ್ ಒಂದು ಮೇಡನ್ ಸೇರಿ 2 ವಿಕೆಟ್ ಪಡೆದಿದ್ದರು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ 417 ರನ್ ಬಾರಿಸಿತ್ತು. ಅಲ್ಲದೆ 275 ರನ್‌ಗಳಿಂದ ಜಯ ಸಾಧಿಸಿತ್ತು.

ಅಶಂತ ಡಿ ಮೆಲ್

ಅಶಂತ ಡಿ ಮೆಲ್

ಕರಾಚಿಯಲ್ಲಿ 1987ರಲ್ಲಿ ನಡೆದಿದ್ದ ವೆಸ್ಟ್ ಇಂಡೀಸ್ -ಶ್ರೀಲಂಕಾ ಪಂದ್ಯದಲ್ಲಿ ಶ್ರೀಲಂಕಾ ಬೌಲರ್ ಅಶಂತ ಡಿ ಮೆಲ್ ಹೆಚ್ಚು ರನ್ ನೀಡಿ ಗಮನ ಸೆಳೆದಿದ್ದರು. 10 ಓವರ್‌ಗಳಲ್ಲಿ ಅಶಂತ ಒಟ್ಟು 97 ರನ್ ನೀಡಿದ್ದರು. ಇದೇ ಪಂದ್ಯದಲ್ಲಿ ವಿಂಡೀಸ್‌ನ ಡೆಸ್ಮಂಡ್ ಹೇನ್ಸ್ 102, ನಾಯಕ ವಿವಿಯನ್ ರಿಚರ್ಡ್ಸ್ 181 ರನ್ ಬಾರಿಸಿದ್ದರು. ಶ್ರೀಲಂಕಾ ಈ ಪಂದ್ಯವನ್ನು ಸೋತಿತ್ತು.

Story first published: Wednesday, June 19, 2019, 15:44 [IST]
Other articles published on Jun 19, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X