ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ ವರ್ಸಸ್ ಪಾಕಿಸ್ತಾನ : 5 ವಿಕೆಟ್ ಕಬಳಿಸಿದ ಕಲಿಗಳು

ICC Cricket World Cup : India Vs Pakistan - 5 wicket hauls

ಬೆಂಗಳೂರು, ಜೂನ್ 15 : ಪುಲ್ವಾಮಾದಲ್ಲಿ ಉಗ್ರರ ಭಯಾನಕ ಆತ್ಮಾಹುತಿ ದಾಳಿ, ಬಾಲಕೋಟ್ ನಲ್ಲಿ ಭಾರತದ ತೀಕ್ಷ್ಣ ಮುಟ್ಟಿ ನೋಡಿಕೊಳ್ಳುವಂಥ ಪ್ರತೀಕಾರ, ಅಭಿನಂದನ್ ಬಂಧನ, ಬಿಡುಗಡೆಯ ನಂತರ ಭಾರತ ಮತ್ತು ಪಾಕಿಸ್ತಾನಗಳೆರಡು ಇದೀಗ ಕ್ರಿಕೆಟ್ ಅಂಗಳದಲ್ಲಿ ಮುಖಾಮುಖಿಯಾಗಲಿವೆ.

ಮೈದಾನದಲ್ಲಿ ಎರಡೂ ರಾಷ್ಟ್ರಗಳ ನಡುವೆ ಕ್ರಿಕೆಟ್ ಕದನ ನಡೆಯುತ್ತಿದ್ದರೆ, ಮೈದಾನದಲ್ಲಿ ಮತ್ತು ಮೈದಾನದಿಂದಾಚೆ ಕ್ರಿಕೆಟ್ ಪ್ರೇಮಿಗಳ ಭಾವುಕತೆಯ ತಾಕಲಾಟವೂ ನಡೆಯುತ್ತಿರುತ್ತದೆ. ಐಸಿಸಿ ವಿಶ್ವಕಪ್ ಕ್ರಿಕೆಟ್ ಇತಿಹಾಸದಲ್ಲೇ ಭಾರತ ಎಂದು ಪಾಕಿಸ್ತಾನದ ವಿರುದ್ಧ ಸೋತಿಲ್ಲ. ಇದು ಭಾರತೀಯರಿಗೆ ಹೆಮ್ಮೆಯ ಸಂಗತಿ.

ಭಾರತ Vs ಪಾಕಿಸ್ತಾನ: ವಿಶ್ವಕಪ್‌ನ ಮರೆಯಲಾಗದ ಐದು ಕ್ಷಣಗಳು ಭಾರತ Vs ಪಾಕಿಸ್ತಾನ: ವಿಶ್ವಕಪ್‌ನ ಮರೆಯಲಾಗದ ಐದು ಕ್ಷಣಗಳು

ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಫೋರ್ಡ್ ನಲ್ಲಿ ಭಾರತ ಮತ್ತು ಪಾಕಿಸ್ತಾನಗಳೆರಡು ಅಂಕಗಳಿಗಾಗಿ, ಪ್ರತಿಷ್ಠೆಗಾಗಿ ಜೂನ್ 16ರಂದು ಸೆಣಸಾಡಲಿವೆ. ಭಾರತೀಯ ಕಾಲಮಾನ ಮಧ್ಯಾಹ್ನ 3 ಗಂಟೆಗೆ ಸರಿಯಾಗಿ ಪಂದ್ಯ ಆರಂಭವಾಗಲಿದೆ. ಭಾರತ ಸದ್ಯಕ್ಕೆ ಅತ್ಯಂತ ಬಲಿಷ್ಠವಾಗಿದ್ದರೂ, ಪಾಕಿಸ್ತಾನವನ್ನು ಹಗುರವಾಗಿ ಕಾಣುವಂತೆಯೇ ಇಲ್ಲ. ಅನಿರೀಕ್ಷಿತ ಫಲಿತಾಂಶ ನೀಡುವಲ್ಲಿ ಪಾಕಿಸ್ತಾನ ಎಂದೂ ಮುಂದು.

ಶತಕ ದಾಟಿದವರು, ಬೌಲಿಂಗ್ ನಲ್ಲಿ ಮಿಂಚಿದವರು

ಶತಕ ದಾಟಿದವರು, ಬೌಲಿಂಗ್ ನಲ್ಲಿ ಮಿಂಚಿದವರು

ಇಲ್ಲಿಯವರೆಗೆ ವಿಶ್ವಕಪ್ ನಲ್ಲಿ ಭಾರತ ಮತ್ತು ಪಾಕಿಸ್ತಾನಗಳೆರಡು 6 ಬಾರಿ ಮುಖಾಮುಖಿಯಾಗಿವೆ. ಎಲ್ಲ ಆರು ಬಾರಿಯೂ ಭಾರತ ಜಯಭೇರಿ ಬಾರಿಸಿ ಪಾಕಿಸ್ತಾನಕ್ಕೆ ಮಣ್ಣು ಮುಕ್ಕಿಸಿದೆ. ಈ ಆರು ಪಂದ್ಯಗಳಲ್ಲಿ ಕೇವಲ ಇಬ್ಬರು ಆಟಗಾರರು ಮಾತ್ರ ಶತಕದ ಗಡಿ ದಾಟಿದ್ದಾರೆ. 2003ರ ವಿಶ್ವಕಪ್ ನಲ್ಲಿ ಪಾಕಿಸ್ತಾನದ ಸಯೀದ್ ಅನ್ವರ್ ಅವರು 101 ರನ್ ಗಳಿಸಿದ್ದರು. 2015ರ ವಿಶ್ವಕಪ್ ನಲ್ಲಿ ಭಾರತದ ಈಗಿನ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರು 107 ರನ್ ಗಳಿಸಿದ್ದರು. ಎಲ್ಲ ಬಾರಿ ಭಾರತವೇ ಮೇಲೂಗೈ ಸಾಧಿಸಿದ್ದರೂ, ಕೆಲ ಪಾಕಿಸ್ತಾನದ ಬೌಲರ್ ಗಳು ಉತ್ತಮ ಸಾಧನೆ ತೋರಿದ್ದಾರೆ. ಮೂವರು ಬೌಲರ್ ಗಳು ಐದು ವಿಕೆಟ್ ಪಡೆದು ಮಿಂಚಿದ್ದಾರೆ. ಅವರಲ್ಲಿ ಒಬ್ಬರು ಭಾರತೀಯರಾಗಿದ್ದರೆ, ಇಬ್ಬರು ಪಾಕಿಸ್ತಾನ ಬೌಲರ್ ಗಳಾಗಿದ್ದರು.

1999ರಲ್ಲಿ ವೆಂಕಟೇಶ್ ಪ್ರಸಾದ್ 5 ವಿಕೆಟ್

1999ರಲ್ಲಿ ವೆಂಕಟೇಶ್ ಪ್ರಸಾದ್ 5 ವಿಕೆಟ್

ಭಾರತದ ವೇಗದ ಬೌಲರ್ ವೆಂಕಟೇಶ್ ಪ್ರಸಾದ್ ಅವರು 1999ರಲ್ಲಿ ಓಲ್ಡ್ ಟ್ರಾಫೋರ್ಡ್ ನಲ್ಲಿ 27 ರನ್ ಗಳಿಗೆ 5 ವಿಕೆಟ್ ಕಬಳಿಸಿದ್ದರು. ಭಾರತ ಗೆಲ್ಲಲೇಬೇಕಾಗಿದ್ದ ಪಂದ್ಯದಲ್ಲಿ ವೆಂಕಿ ಅದ್ಭುತ ಸಾಧನೆ ಮಾಡಿದ್ದರು. ಅಂದು ಕ್ಯಾಪ್ಟನ್ ಆಗಿದ್ದ ಮೊಹಮ್ಮದ್ ಅಝರುದ್ದಿನ್ ಅವರು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು. ರಾಹುಲ್ ದ್ರಾವಿಡ್ ಅವರ 61 ಮತ್ತು ಅಝರುದ್ದಿನ್ ಅವರ 59 ರನ್ ಗಳ ಸಹಾಯದಿಂದ ಭಾರತ 50 ಓವರ್ ಗಳಲ್ಲಿ 227 ರನ್ ಸಾಧಾರಣ ಮೊತ್ತ ಗಳಿಸಿತ್ತು. ಗುರಿ ಕಷ್ಟಕರವಾಗಿಲ್ಲದಿದ್ದರೂ ವೆಂಕಟೇಶ್ ಪ್ರಸಾದ್ ಅವರು ಪಾಕ್ ಬ್ಯಾಟ್ಸ್ ಮನ್ ಗಳನ್ನು ಬಹುವಾಗಿ ಕಾಡಿದರು. ಕೆಲವೇ ತಿಂಗಳ ಹಿಂದೆ ಪಾಕ್ ವಿರುದ್ಧ ಚೆನ್ನೈನಲ್ಲಿ 6 ವಿಕೆಟ್ ಪಡೆದಿದ್ದರೂ ಗೆಲ್ಲಿಸುವಲ್ಲಿ ಸೋತಿದ್ದ ಪ್ರಸಾದ್, ಓಲ್ಡ್ ಟ್ರಾಫೋರ್ಡ್ ನಲ್ಲಿ ತಮ್ಮ ಚಾಕಚಕ್ಯತೆಯನ್ನು ತೋರಿ ಭಾರತದ ಗೆಲುವಿನ ದಟ ಮುಟ್ಟಿಸಿದ್ದರು. ತಮ್ಮ ಅದ್ಭುತ ಲೆಗ್ ಕಟ್ಟರ್ ಗಳ ಮೂಲಕ ಸಯೀನ್ ಅನ್ವರ್, ಸಲೀಂ ಮಲಿಕ್, ಇಂಜಾಮಮ್-ಉಲ್-ಹಕ್, ಮೋಯಿನ್ ಖಾನ್ ಮತ್ತು ಕ್ಯಾಪ್ಟನ್ ವಾಸಿಂ ಅಕ್ರಂ ಅವರನ್ನು ಪೆವಿಲಿಯನ್ನಿಗೆ ಅಟ್ಟಿದ್ದರು. 180 ರನ್ ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡ ಪಾಕಿಸ್ತಾನ 47 ರನ್ ಗಳಿಂದ ಸೋಲು ಅನುಭವಿಸಿತ್ತು. ವೆಂಕಟೇಶ್ ಪ್ರಸಾದ್ ಅವರು ಪಂದ್ಯದ ಪುರುಷೋತ್ತಮರಾಗಿದ್ದರು.

ಪಾಕಿಸ್ತಾನ vs ಭಾರತ: ಹೈ ವೋಲ್ಟೇಜ್ ಪಂದ್ಯದ ಬಗ್ಗೆ ಮಾತನಾಡಿದ ಕೊಹ್ಲಿ

2011ರಲ್ಲಿ ವಹಾಬ್ ರಿಯಾಜ್ 5 ವಿಕೆಟ್

2011ರಲ್ಲಿ ವಹಾಬ್ ರಿಯಾಜ್ 5 ವಿಕೆಟ್

ಮೋಹಾಲಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಅವರು, 2011ರ ವಿಶ್ವಕಪ್ ಪಂದ್ಯಾವಳಿಯ ಎರಡನೇ ಸೆಮಿಫೈನಲ್ ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು. ವೀರೇಂದ್ರ ಸೆಹ್ವಾಗ್ ಮತ್ತು ಸಚಿನ್ ತೆಂಡೂಲ್ಕರ್ ಅವರು ಉತ್ತಮ ಆರಂಭ ಕೊಟ್ಟರೂ, ಗಾಯಾಳುವಾಗಿದ್ದ ಶೋಯಾಬ್ ಅಖ್ತರ್ ಬದಲಿಗೆ ಬೌಲಿಂಗ್ ಗೆ ಇಳಿದಿದ್ದ ಪಾರ್ಟ್ ಟೈಂ ಬೌಲರ್ ವಹಾಬ್ ರಿಯಾಜ್ ಅವರು, ವೀರೇಂದ್ರ ಸೆಹ್ವಾಗ್ ವಿಕೆಟ್ ಕಿತ್ತು ಆಘಾತ ನೀಡಿದ್ದರು. ಕೇವಲ ತಮ್ಮ 18ನೇ ಏಕದಿನ ಪಂದ್ಯ ಆಡುತ್ತಿದ್ದ ವಹಾಬ್ ಮತ್ತೆ ಮರಳಿ, ಮಧ್ಯಮ ಕ್ರಮಾಂಕದಲ್ಲಿ ಬಂದ ಬ್ಯಾಟ್ಸ್ ಮನ್ ಗಳನ್ನು ಪೆವಿಲಿಯನ್ನಿಗೆ ಕಳಿಸಿ, ಭಾರೀ ಮೊತ್ತ ಪೇರಿಸದಂತೆ ತಡೆದಿದ್ದರು. ಎರಡು ಬೌಲ್ ಗಳಲ್ಲಿ ವಿರಾಟ್ ಕೊಹ್ಲಿ ಮತ್ತು ಯುವರಾಜ್ ಸಿಂಗ್ ವಿಕೆಟನ್ನೂ ಕಿತ್ತಿದ್ದರು. ನಂತರ ಧೋನಿ ಮತ್ತು ಜಾಹೀರ್ ಖಾನ್ ವಿಕೆಟ್ ಗಳನ್ನೂ ಕಬಳಿಸಿ 5 ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಅಷ್ಟಾದರೂ 260 ರನ್ ಗಳಿಸಿದ್ದ ಭಾರತ 29 ರನ್ ಗಳಿಂದ ಜಯ ಗಳಿಸಿತ್ತು.

2015ರಲ್ಲಿ ಸೊಹೇಲ್ ಖಾನ್ 5 ವಿಕೆಟ್

2015ರಲ್ಲಿ ಸೊಹೇಲ್ ಖಾನ್ 5 ವಿಕೆಟ್

ಪಾಕಿಸ್ತಾನದ ಪರ ಹೆಚ್ಚು ಪಂದ್ಯಗಳನ್ನು ಆಡದಿದ್ದರೂ ಸೊಹೇಲ್ ಖಾನ್ ಅವರು ಅಡಿಲೇಡ್ ನಲ್ಲಿ ಭಾರತದ ಬೌಲರ್ ಗಳಿಗೆ ಕಾಡಿದ್ದರು. ಪಾಕಿಸ್ತಾನದ ಖ್ಯಾತ ನಾಮರೂ ಮಾಡದಿದ್ದ ಸಾಧನೆಯನ್ನು ಸೊಹೇಲ್ ಖಾನ್ ಅವರು ಅಡಿಲೇಡ್ ನಲ್ಲಿ ಮಾಡಿ ತೋರಿಸಿದ್ದರು. ಅಡಿಲೇಡ್ ಓವಲ್ ನಲ್ಲಿ ನಡೆದಿದ್ದ ಗ್ರೂಪ್ ಪಂದ್ಯದಲ್ಲಿ ಅವರು 5 ವಿಕೆಟ್ ಪಡೆದಿದ್ದರು. ಅಂದು ಕ್ಯಾಪ್ಟನ್ ಆಗಿದ್ದ ಧೋನಿ ಅವರು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು. ಅಂದು ಭರ್ಜರಿಯಾಗಿ ಮಿಂಚಿದ್ದ ಭಾರತೀಯ ಬ್ಯಾಟ್ಸ್ ಮನ್ ಗಳು 50 ಓವರ್ ಗಳಲ್ಲಿ 300 ರನ್ ಪೇರಿಸಿದ್ದರು. ಸೊಹೇಲ್ ಅವರನ್ನು ಹೊರತುಪಡಿಸಿದ್ದರೆ ಉಳಿದವರ ಬೌಲಿಂಗನ್ನು ಭಾರತೀಯ ಬ್ಯಾಟ್ಸ್ ಮನ್ ಗಳು ಮೈದಾನದುದ್ದಕ್ಕೂ ಚೆಂಡಾಡಿದ್ದರು. ಸೊಹೇಲ್ ಅವರು 10 ಓವರ್ ಗಳಲ್ಲಿ 55 ರನ್ ನೀಡಿ ಘಟಾನುಘಟಿಗಳಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸುರೇಶ್ ರೈನಾ, ಎಂಎಸ್ ಧೋನಿ ಮತ್ತು ಅಜಿಂಕ್ಯಾ ರಹಾನೆ ವಿಕೆಟ್ ಪಡೆದಿದ್ದರು. ಆದರೆ, ಮಿಸ್ಬಾ-ಉಲ್-ಹಕ್ ನಾಯಕತ್ವದ ತಂಡ ಹೀನಾಯವಾಗಿ ಬ್ಯಾಟಿಂಗ್ ಮಾಡಿ 79 ರನ್ ಗಳಿಂದ ಸೋಲು ಕಂಡಿತ್ತು.

ವಿಶ್ವಕಪ್ ಕ್ರಿಕೆಟ್: ಭಾರತಕ್ಕೆ ಸಹಾಯ ಮಾಡ್ತಿದ್ದಾರೆ: ಪಾಕ್ ನಾಯಕನ ಅಳಲು

Story first published: Saturday, June 15, 2019, 12:51 [IST]
Other articles published on Jun 15, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X