ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್ ಭವಿಷ್ಯ ನಿರ್ಧಾರವನ್ನು ಜೂನ್10 ರವರೆಗೆ ಮುಂದೂಡಿದ ಐಸಿಸಿ

Icc Defers Decision on t20 World Cup and Other Matters Till June 10

ಕೊರೊನಾ ವೈರಸ್‌ನ ಕಾರಣದಿಂದಾಗಿ ಟಿ20 ವಿಶ್ವಕಪ್ ಭವಿಷ್ಯ ಅಯೋಮಯವಾಗಿದೆ. ವಿಶ್ವಕಪ್‌ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳಲು ಐಸಿಸಿ ನಿನ್ನೆ (ಮೇ 28) ಸಭೆಯನ್ನು ನಡೆಸಿತ್ತು. ಆದರೆ ಈ ಕುರಿತಾಗಿ ನಿರ್ಧಾರವನ್ನು ಈ ಸಭೆಯಲ್ಲಿ ತೆಗೆದುಕೊಳ್ಳದೆ ಜೂನ್ 10ರಂದು ಮತ್ತೊಂದು ಸಭೆ ಸೇರಲಿದ್ದು ಆ ಸಭೆಯಲ್ಲಿ ನಿರ್ಧರಿಸುವುದಾಗಿ ಐಸಿಸಿ ಹೇಳಿದೆ.

ಐಸಿಸಿ 28ರಂದು ನಡೆಸಿದ ಮಹತ್ವದ ಸಭೆಯಲ್ಲಿ ಹಲವು ಪ್ರಮುಖ ವಿಚಾರಗಳ ಬಗ್ಗೆ ಚರ್ಚೆಯನ್ನು ನಡೆಸಲು ಉದ್ದೇಶಿಸಿತ್ತು. ಅದರಲ್ಲಿ ಟಿ20 ವಿಶ್ವಕಪ್ ಭವಿಷ್ಯ, ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಕೂಡ ಸೇರಿತ್ತು.
ಆದರೆ ಐಸಿಸಿ ನಿನ್ನೆ ನಡೆದ ಸಭೆಯಲ್ಲಿ ಐಸಿಸಿ ಆಡಳಿತದ ವಿಚಾರವಾಗಿ ಕೇಳಿಬರುತ್ತಿರುವ ಸಂಗತಿಗಳ ಬಗ್ಗೆ ಮಾತುಕತೆ ನಡೆಸಿದೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರಕಟಣೆಯಲ್ಲಿ ಐಸಿಸಿ ಹೇಳಿದೆ.

"ನನ್ನನ್ನು ಎದುರಿಸುವುದು ಕಷ್ಟ ಎಂದು ಸ್ವತಃ ಲಾರಾ ಹೇಳಿಕೊಂಡಿದ್ದರು" : ಪಾಕ್ ಆಲ್‌ರೌಂಡರ್

ಬೋರ್ಡ್‌ನ ಹಲವು ಸದಸ್ಯರು ಆಡಳಿತದ ಉನ್ನತ ಮಾನದಂಡಗಳಿಗೆ ಅನುಗುಣವಾಗಿ ಮಂಡಳಿಯ ವಿಷಯಗಳ ಪಾವಿತ್ರ್ಯತೆ ಮತ್ತು ಗೌಪ್ಯತೆಯ ಬಗ್ಗೆ ಆತಂಕವನ್ನು ವ್ಯಕ್ತಪಡಿಸಿದ್ದರು. ಅದನ್ನು ಖಚಿತಪಡಿಸಿಕೊಳ್ಳಲು ತಕ್ಷಣದ ಗಮನ ನೀಡುವುದು ಸೂಕ್ತ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಹಾಗಾಗಿ ಈ ಬಗ್ಗೆ ಚರ್ಚೆಗಳು ನಡೆದವು ಎಂದು ಐಸಿಸಿ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಗುರುವಾರದ ಸಭೆಯ ಅಜೆಂಡಾಗಳ ನಿರ್ಧಾರವನ್ನು ತೆಗೆದುಕೊಳ್ಳಲಾಗಿಲ್ಲ ಎಂದು ತಿಳಿಸಿದೆ. ಇದರಲ್ಲಿ ಕೊರೊನಾ ವೈರಸ್‌ನ ಕಾರಣದಿಂದ ಸ್ಥಗಿತವಾಗಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್, ಭವಿಷ್ಯದ ಪ್ರವಾಸಗಳ ಮರು ವೇಳಾಪಟ್ಟಿ, ಟಿ20 ವಿಶ್ವಕಪ್‌ ಭವಿಷ್ಯವೂ ಸೇರಿದೆ.

ತನ್ನ ನಿವೃತ್ತಿಯ ನಿರ್ಧಾರವನ್ನು ತಾನೇ ನಿರ್ಧರಿಸುವ ಹಕ್ಕು ಧೋನಿ ಗಳಿಸಿಕೊಂಡಿದ್ದಾರೆ: ಗ್ಯಾರಿ ಕರ್ಸ್ಟನ್ತನ್ನ ನಿವೃತ್ತಿಯ ನಿರ್ಧಾರವನ್ನು ತಾನೇ ನಿರ್ಧರಿಸುವ ಹಕ್ಕು ಧೋನಿ ಗಳಿಸಿಕೊಂಡಿದ್ದಾರೆ: ಗ್ಯಾರಿ ಕರ್ಸ್ಟನ್

ಕೊರೊನಾ ವೈರಸ್‌ನಿಂದಾಗಿರುವ ಸಂಕಷ್ಟದಿಂದಾಗಿ ಈ ಹಿಂದೆ ನಿಗದಿಯಾಗಿರುವ ಪ್ರಕಾರ ವಿಶ್ವಕಪ್ ಆಯೋಜನೆ ಸಾಧ್ಯವಿಲ್ಲ ಎಂದು ಆಸ್ಟ್ರೇಲಿಯಾ ಸರ್ಕಾರ ಈಗಾಗಲೇ ಹೇಳಿಕೆಯನ್ನು ನೀಡಿದೆ. ಈ ಬಗ್ಗೆ ಐಸಿಸಿ ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳಬೇಕಿತ್ತು. ಆದರೆ ವಿಶ್ವಕಪ್ ಆಯೋಜನೆ ಮಾಡುವುದು ಮತ್ತು ಮುಂದೂಡುವ ವಿಚಾರವಾಗಿ ಜೂನ್ 10 ರಂದು ನಡೆಯುವ ಸಭೆಯಲ್ಲಿ ಐಸಿಸಿ ನಿರ್ಧರಿಸಲಿದೆ.

Story first published: Friday, May 29, 2020, 10:34 [IST]
Other articles published on May 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X