ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೋವಿಡ್-19 ಬದಲಿ ಆಟಗಾರರಿಗಾಗಿ ಐಸಿಸಿ ಚರ್ಚೆ: ಇಸಿಬಿ ಅಧಿಕಾರಿ

ICC discussing COVID-19 substitutes for test matches, says Steve Elworthy

ಲಂಡನ್, ಜೂನ್ 5: ಆಟಗಾರರಿಗೆ ಕೋವಿಡ್ 19 ಸೋಂಕು ತಗುಲಿರುವುದು ಕಂಡುಬಂದರೆ ಅವರ ಸ್ಥಾನಕ್ಕೆ ಬದಲಿ ಆಟಗಾರರನ್ನು ತರುವ ಬಗ್ಗೆ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಚರ್ಚೆ ನಡೆಸುತ್ತಿದೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್‌ನ ವಿಶೇಷ ಯೋಜನೆಗಳ ನಿರ್ದೇಶಕ ಸ್ಟೀವ್ ಎಲ್ವರ್ತಿ ಹೇಳಿದ್ದಾರೆ.

13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಯೋದು ವಿದೇಶದಲ್ಲಿ?!13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಯೋದು ವಿದೇಶದಲ್ಲಿ?!

ಕಳೆದ ವರ್ಷ ಐಸಿಸಿಯು ಎಲ್ಲಾ ಮಾದರಿಗಳ ಅಂತಾರಾಷ್ಟ್ರೀಯ ಕ್ರಿಕೆಟ್‌ಗಳಲ್ಲಿ ಪಂದ್ಯಗಳ ವೇಳೆ ಬದಲಿ ಆಟಗಾರರಿಗೆ ಅನುಮೋದನೆ ನೀಡಿತ್ತು. ಹೀಗೆಯೇ ಕೋವಿಡ್-19 ಬದಲಿ ಆಟಗಾರರಿಗೆ ಕೆಲ ನಿಯಮಗಳು ಬದಲಾಗಬೇಕಿದೆ ಎಂದು ಎಲ್ವರ್ತಿ ನುಡಿದ್ದಾರೆ.

'ಆತ್ಮಹತ್ಯೆಗೆ ಯೋಚಿಸಿದ್ದೆ': ತೀವ್ರ ಖಿನ್ನತೆಗೆ ಒಳಗಾಗಿದ್ದ ಸಂದರ್ಭ ನೆನೆದ ಉತ್ತಪ್ಪ'ಆತ್ಮಹತ್ಯೆಗೆ ಯೋಚಿಸಿದ್ದೆ': ತೀವ್ರ ಖಿನ್ನತೆಗೆ ಒಳಗಾಗಿದ್ದ ಸಂದರ್ಭ ನೆನೆದ ಉತ್ತಪ್ಪ

'ಕೋವಿಡ್ 19 ಅಟಗಾರರಿಗೆ ಬದಲಿ ಆಟಗಾರರನ್ನು ತರುವ ನೆಲೆಯಲ್ಲಿ ಐಸಿಸಿ ಚರ್ಚಿಸುತ್ತಿದೆ. ಇದಕ್ಕೆ ಸಂಬಂಧಿಸಿ ಸಂವಹನ ನಡೆಸಿದ್ದನ್ನು ನಾನು ನೋಡಿದೆ. ಬಹುಶ ಈ ನಿಯಮ ಮುಖ್ಯವಾಗಿ ಟೆಸ್ಟ್ ಪಂದ್ಯಗಳ ವೇಳೆ ಬರುವ ನಿರೀಕ್ಷೆಯಿದೆ,' ಎಂದು ಸ್ಕೈ ಸ್ಪೋರ್ಟ್ ಜೊತೆ ಮಾತನಾಡುತ್ತ ಎಲ್ವರ್ತಿ ಹೇಳಿಕೊಂಡಿದ್ದಾರೆ.

ಬ್ಯಾನ್ ಬಳಿಕ ಬಲಿಷ್ಠ ಕಮ್‌ಬ್ಯಾಕ್ ಮಾಡಿದ ಜನಪ್ರಿಯ 5 ಕ್ರಿಕೆಟಿಗರುಬ್ಯಾನ್ ಬಳಿಕ ಬಲಿಷ್ಠ ಕಮ್‌ಬ್ಯಾಕ್ ಮಾಡಿದ ಜನಪ್ರಿಯ 5 ಕ್ರಿಕೆಟಿಗರು

'ಆಟಗಾರರ ಬದಲಾವಣೆ 'ಲೈಕ್ ಫಾರ್ ಲೈಕ್ 'ನಂತೆ ಇರಲಿದೆ. ಆಟಗಾರರು ಅಸ್ವಸ್ಥರಾದಂತೆ ಕಂಡರೆ ನಮ್ಮ ಕೋವಿಡ್-19 ವೈದ್ಯರು ಮತ್ತು ಇಂಗ್ಲೆಂಡ್‌ನ ಸಾರ್ವಜನಿಕ ಆರೋಗ್ಯ ಸಿಬ್ಬಂದಿಗೆ ತಕ್ಷಣ ತಿಳಿಸಲಾಗುವುದು. ಆ ಆಟಗಾರನನ್ನು ಸ್ವಲ್ಪ ಸಮಯದವರೆಗೆ ಪ್ರತ್ಯೇಕವಾಗಿಡಲಾಗುತ್ತದೆ,' ಎಂದು ಎಲ್ವರ್ತಿ ಮಾಹಿತಿ ನೀಡಿದ್ದಾರೆ.

Story first published: Friday, June 5, 2020, 15:19 [IST]
Other articles published on Jun 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X