ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

"10 ವರ್ಷಗಳಿಂದ ಕ್ರಿಕೆಟನ್ನು ಮುಗಿಸುತ್ತಿದ್ದೀರಿ" : ಐಸಿಸಿ ವಿರುದ್ಧ ಶೋಯೆಬ್ ಅಖ್ತರ್ ಗಂಭೀರ ಆರೋಪ

Icc Has Successfully Finished Cricket In Last 10 Years: Shoaib Akhtar

ಸದಾ ಒಂದಿಲ್ಲೊಂದು ಹೇಳಿಕೆಯಂದಲೇ ಸುದ್ದಿಯಾಗುತ್ತಿರುವ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಐಸಿಸಿ ವಿರುದ್ಧ ಕೆಂಡಕಾರಿದ್ದಾರೆ. ಐಸಿಸಿ ಕಳೆದ ಹತ್ತು ವರ್ಷಗಳಲ್ಲಿ ಕ್ರಿಕೆಟನ್ನು ಸಂಪೂರ್ಣವಾಗಿ ಮುಗಿಸುವಲ್ಲಿ ಯಶಸ್ವಿಯಾಗಿದೆ ಎಂದು ಗಂಭೀರ ಆರೋಪವನ್ನು ಅವರು ಮಾಡಿದ್ದಾರೆ.

ಭಾರತದ ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ಅವರೊಂದಿಗೆ ಕ್ರಿಕ್ ಇನ್ಫೋದ ಪಾಡ್‌ಕಾಸ್ಟ್‌ನಲ್ಲಿ ಪಾಲ್ಗೊಂಡಿದ್ದ ಅಖ್ತರ್ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿನ ಪರಿಸ್ಥಿತಿಯ ಬಗ್ಗೆ ವಿಮರ್ಶಿಸುತ್ತಾ ಅಖ್ತರ್, ಇದು ಬ್ಯಾಟ್ಸ್‌ಮನ್‌ಗಳಿಗೆ ಮಾತ್ರ ಆಟ ಎಂಬಂತಾಗಿದೆ ಎಂದು ಹೇಳಿದ್ದಾರೆ.

"ಪ್ಲೀಸ್ ರೋಹಿತ್, ಆಸ್ಟ್ರೇಲಿಯಾ ವಿರುದ್ಧ ಬೇಡ" ಎಂದು ಬೇಡಿಕೊಂಡ ಬ್ರೇಟ್‌ ಲೀ

ಐಸಿಸಿ ವಿರುದ್ಧ ಅಖ್ತರ್ ಈ ಆಕ್ರೋಶಕ್ಕೆ ಕಾರಣವೇನೆಂಬುದನ್ನು ಮುಂದೆ ಓದಿ..

ಕ್ರಿಕೆಟ್ ಮುಗಿಸುವಲ್ಲಿ ಯಶಸ್ವಿಯಾಗಿದ್ದಾರೆ

ಕ್ರಿಕೆಟ್ ಮುಗಿಸುವಲ್ಲಿ ಯಶಸ್ವಿಯಾಗಿದ್ದಾರೆ

"ನಾನು ಸ್ಪಷ್ಟವಾಗಿ ಒಂದು ವಿಚಾರವನ್ನು ಹೇಳಲು ಬಯಸುತ್ತೇನೆ. ಅವರು(ಐಸಿಸಿ) ಕ್ರಿಕೆಟನ್ನು ಮುಗಿಸುತ್ತಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಕ್ರಿಕೆಟನ್ನು ಯಶಸ್ವಿಯಾಗಿ ಮುಗಿಸಿದ್ದಾರೆ ಎಂದು ನಾನು ಬಹಿರಂಗವಾಗಿ ಹೇಳುತ್ತಿದ್ದೇನೆ" ಎಂದು ಶೋಯೆಬ್ ಅಖ್ತರ್ ಹೇಳಿದ್ದಾರೆ. ನೀವು ಅದ್ಭುತ ಕೆಲವನ್ನು ಮಾಡುತ್ತಿದ್ದೀರಿ, ನಿಮಗೇನು ಅನಿಸುತ್ತದೋ ಅದನ್ನು ಮಾಡಿ ಎಂದು ವ್ಯಂಗ್ಯವಾಗಿ ತಮ್ಮ ಕೋಪವನ್ನು ವ್ಯಕ್ತಪಡಿಸಿದ್ದಾರೆ.

ಬದಲಾವಣೆ ಬೇಕು

ಬದಲಾವಣೆ ಬೇಕು

ಏಕದಿನ ಕ್ರಿಕೆಟ್‌ನ ಉತ್ಕೃಷ್ಟತೆಗಾಗಿ ಕೆಲ ಬದಲಾವಣೆಗಳನ್ನು ತರಬೇಕು ಎಂದು ಅಖ್ತರ್ ಹೇಳಿದ್ದಾರೆ. ಎರಡು ಹೊಸ ಚೆಂಡಿನ ಬಳಕೆ ಮತ್ತು ಕೇವಲ ನಾಲ್ಕು ಫೀಲ್ಡರ್‌ಗಳು ಸರ್ಕಲ್‌ನ ಆಚೆಗಿರುವಂತ ನಿಯಮವಿದೆ. ಹಾಗಾಗಿ ಬೌನ್ಸರ್‌ಗಳ ಸಂಖ್ಯೆ ಹೆಚ್ಚು ಮಾಡಲು ಅವಕಾಶವನ್ನು ನೀಡಬೇಕು ಎಂದಿದ್ದಾರೆ ಅಖ್ತರ್.

ಬೌನ್ಸರ್ ಹೆಚ್ಚಳ ಮಾಡಿ

ಬೌನ್ಸರ್ ಹೆಚ್ಚಳ ಮಾಡಿ

ನಾನು ಪದೇ ಪದೇ ಹೇಳುತ್ತಿದ್ದೇನೆ. ಬೌನ್ಸರ್‌ಗಳ ಸಂಖ್ಯೆಯನ್ನು ಹೆಚ್ಚಳ ಮಾಡಬೇಕೆಂದು. ದಯವಿಟ್ಟು ನೀವು ಐಸಿಸಿಯನ್ನು ಕೇಳಿ, ಕಳೆದ ಹತ್ತು ವರ್ಷಗಳಲ್ಲಿ ಕ್ರಿಕೆಟ್ ಆಟದ ಗುಣಮಟ್ಟ ಏರಿಕೆಯಾಗಿದೆಯಾ ಅಥವಾ ಇಳಿಕೆಯಾಗಿದೆಯಾ ಎಂಬುದನ್ನು. ಎಲ್ಲಿದೆ ಆ ಸಚಿನ್ ವರ್ಸಸ್ ಶೋಯೆಬ್ ಸ್ಪರ್ಧೆಗಳು ಎಂದು ಅಖ್ತರ್ ಪ್ರಶ್ನಿಸಿದ್ದಾರೆ.

ಸಚಿನ್ ಬಗ್ಗೆ ಗೌರವ

ಸಚಿನ್ ಬಗ್ಗೆ ಗೌರವ

ಈ ಸಂದರ್ಭದಲ್ಲಿ ಸಚಿನ್ ತೆಂಡೂಲ್ಕರ್ ಬಗ್ಗೆ ಅಖ್ತರ್ ಮಾತಾಡಿದರು. ಸಚಿನ್ ಕ್ರಿಕೆಟ್‌ನ ಸಂದರ್ಭದಲ್ಲಿ ಕೋಪಗೊಳ್ಳುತ್ತಲೇ ಇರಲಿಲ್ಲ. ಅದಕ್ಕಾಗಿ ವಿಶ್ವದ ಬೆಸ್ಟ್ ಬ್ಯಾಟ್ಸ್‌ಮನ್ ಎಲ್ಲರಿಂದಲೂ ಗೌರವವನ್ನು ಪಡೆಯುತ್ತಾರೆ ಎಂದು ಹೇಳಿದರು.

Story first published: Wednesday, May 27, 2020, 10:56 [IST]
Other articles published on May 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X