ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್ ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ಐಸಿಸಿಯಿಂದ ಆಪ್

icc launches app to control corruption in cricket

ಕ್ರಿಕೆಟ್‌ನಲ್ಲಿ ನಡೆಯುವ ಭ್ರಷ್ಟಾಚಾರ, ಮೋಸದಾಟ ಮತ್ತು ನಿಷೇಧಿತ ಮದ್ದು ಸೇವನೆಯಂತಹ ಪ್ರಕರಣಗಳನ್ನು ನಿಯಂತ್ರಿಸಲು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಆಪ್ ಸಿದ್ಧಪಡಿಸಿದೆ.

ಈ ಆಪ್ ಕ್ರಿಕೆಟ್‌ನ ಎಲ್ಲ ವಿಭಾಗಗಳ ಎಲ್ಲ ಹಂತಗಳಲ್ಲಿಯೂ ಆಟಗಾರರು, ಅಧಿಕಾರಿಗಳು ಮತ್ತು ತಂಡದ ಸಿಬ್ಬಂದಿಗೆ ಲಭ್ಯವಿರಲಿದೆ.

ದೇಶಿ ಕ್ರಿಕೆಟಿಗರ ಶುಲ್ಕ ಏರಿಕೆ ಪ್ರಸ್ತಾವ ತಿರಸ್ಕರಿಸಿದ ಸಿಒಎದೇಶಿ ಕ್ರಿಕೆಟಿಗರ ಶುಲ್ಕ ಏರಿಕೆ ಪ್ರಸ್ತಾವ ತಿರಸ್ಕರಿಸಿದ ಸಿಒಎ

ಈ ಆಪ್ ಮಾಹಿತಿ ಮೂಲವಾಗಿ ಕೆಲಸ ಮಾಡಲಿದೆ. ಜತೆಗೆ ಅನುಮಾನಾಸ್ಪದ ಘಟನೆಗಳು ಅಥವಾ ಭ್ರಷ್ಟಾಚಾರ ಮತ್ತು ಡೋಪಿಂಗ್‌ನಂತಹ ಯಾವುದೇ ವರ್ತನೆಗಳ ಬಗ್ಗೆ ವರದಿ ನೀಡುವ ಮೂಲಕ ಆಟಗಾರರಿಗೆ ರಕ್ಷಣೆಯನ್ನು ಒದಗಿಸಲಿದೆ.

ಜನವರಿಯಲ್ಲಿ ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ ಅಂಡರ್ 19 ವಿಶ್ವಕಪ್‌ ವೇಳೆ ಈ ಆಪ್ ಪ್ರಾಥಮಿಕವಾಗಿ ಬಳಕೆಗೆ ಬರಲಿದೆ.

ಈ ಆಪ್ ಉಪಯೋಗಕಾರಿಯಾಗಿ ಕಂಡುಬಂದಿದೆ. ಇದನ್ನು ಡೌನ್‌ಲೋಡ್ ಮಾಡಿಕೊಳ್ಳುವ ಮೂಲಕ ಎಲ್ಲರೂ ಇದರಲ್ಲಿ ತೊಡಗಿಸಿಕೊಳ್ಳಬೇಕು ಎಂದು ಭಾರತದ ಅಂಡರ್ 19 ತಂಡದ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ.

ಇಂಟಿಗ್ರಿಟಿ ಆಪ್ ಮೂಲ ಐಸಿಸಿ ಉತ್ತಮ ಕೆಲಸಕ್ಕೆ ಮುಂದಾಗಿದೆ. ಡೋಪಿಂಗ್, ಭ್ರಷ್ಟಾಚಾರದ ವಿರುದ್ಧದ ಸಾಕಷ್ಟು ಮಾಹಿತಿಗಳನ್ನು ಇದು ಒಳಗೊಂಡಿದೆ.

ಶಂಕಾಸ್ಪದ ಎನ್ನುವ ಯಾವುದೇ ವಿಚಾರದ ಬಗ್ಗೆ ನೀವು ಇದರಲ್ಲಿ ವರದಿ ನೀಡಬಹುದು. ನಿಮ್ಮ ಕೈಬೆರಳ ತುದಿಯಲ್ಲಿಯೇ ಈ ಮಾಹಿತಿಯನ್ನು ಸುಲಭವಾಗಿ ಪಡೆದುಕೊಳ್ಳುವಂತೆ ಇರುವುದು ಅದ್ಭುತ ಯೋಜನೆ ಎಂದು ದ್ರಾವಿಡ್ ತಿಳಿಸಿದ್ದಾರೆ.

ಪ್ರತಿ ಆಟಗಾರನೂ ತನ್ನ ಉತ್ತಮ ವೃತ್ತಿ ಬದುಕಿಗಾಗಿ ಮತ್ತು ಕ್ರೀಡೆಯನ್ನು ರಕ್ಷಿಸುವ ಸಲುವಾಗಿ ನೀತಿ ಮತ್ತು ನಿಯಂತ್ರಣಗಳ ಕುರಿತು ಸಮಗ್ರ ಮಾಹಿತಿ ನೀಡುತ್ತದೆ.

ಅಲ್ಲದೆ, ಯಾವುದೇ ಘಟನೆಯ ಕುರಿತ ಮಾಹಿತಿಯನ್ನು ವರದಿ ಮಾಡುವ ಸುರಕ್ಷಿತ ಮಾರ್ಗವಿದು ಎಂದು ನ್ಯೂಜಿಲೆಂಡ್ ಮಹಿಳಾ ಕ್ರಿಕೆಟ್ ತಂಡದ ಕೋಚ್ ಹೈಡಿ ಟಿಫನ್ ಹೇಳಿದ್ದಾರೆ.

Story first published: Friday, June 29, 2018, 20:28 [IST]
Other articles published on Jun 29, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X