ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಸಿಸಿ ಪ್ರಕಟಿಸಿದ 2021ರ ವಾರ್ಷಿಕ ಟಿ20 ತಂಡದಲ್ಲಿ ಭಾರತೀಯರೇ ಇಲ್ಲ!: ಹೇಗಿದೆ ತಂಡ?

ICC Mens T20 Team of the year 2021 revealed- no indian players in the list

ಕ್ರಿಕೆಟ್‌ನ ಚುಟುಕು ಮಾದರಿ ಟಿ20 ಕ್ರಿಕೆಟ್ 2021ರಲ್ಲಿ ಸಾಕಷ್ಟು ಪಂದ್ಯಗಳು ನಡೆದಿದೆ. ದ್ವಿಪಕ್ಷೀಯ ಸರಣಿಯ ಜೊತೆಗೆ ಟಿ20 ವಿಶ್ವಕಪ್ ಕೂಡ ಸುಮಾರು ಐದು ವರ್ಷಗಳ ಬಳಿಕ ಕಳೆದ ವರ್ಷ ನಡೆಯಿತು. ಈ ಎಲ್ಲಾ ಕ್ರಿಕೆಟ್ ಚಟುವಟಿಕೆಗಳನ್ನು ಆಧಾರವಾಗಿಟ್ಟುಕೊಂಡು ಐಸಿಸಿ 2021ರ ವಾರ್ಷಿಕ ಟಿ20 ತಂಡವನ್ನು ಘೋಷಿಸಿದೆ. ಈ ತಂಡದ ನಾಯಕತ್ವ ಪಾಕಿಸ್ತಾನದ ನಾಯಕ ಬಾಬರ್ ಅಜಂಗೆ ನೀಡಲಾಗಿದೆ. ಆದರೆ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಈ ಆಯ್ಕೆ ಅಚ್ಚರಿ ಮೂಡಿಸಿದೆ. ಭಾರತದ ಒಬ್ಬನೇ ಒಬ್ಬ ಆಟಗಾರ ಕೂಡ ಈ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿಲ್ಲ.

ಆರಂಭಿಕ ಸ್ಥಾನಕ್ಕೆ ಇಂಗ್ಲೆಂಡ್ ತಂಡದ ದಾಂಡಿಗ ಜೋಸ್ ಬಟ್ಲರ್ ಜೊತೆಗೆ 2021ರಲ್ಲಿ ಅಮೋಘ ಬ್ಯಾಟಿಂಗ್ ನಡೆಸಿದ ಪಾಕಿಸ್ತಾನದ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಅವರನ್ನು ಹೆಸರಿಸಲಾಗಿದೆ. ಜೊಸ್ ಬಟ್ಲರ್ 14 ಟಿ20 ಪಂದ್ಯಗಳಲ್ಲಿ 65.44ರ ಅದ್ಭುತ ಸರಾಸರಿಯಲ್ಲಿ 589 ರನ್ ಗಳಿಸಿದರು. ಇನ್ನು ಮೊಹಮ್ಮದ್ ರಿಜ್ವಾನ್ 73+ ಸರಾಸರಿಯಲ್ಲಿ 1326 ರನ್ ಗಳಿಸಿ ಅಮೋಘ ಫಾರ್ಮ್ ಪ್ರದರ್ಶಿಸಿದ್ದಾರೆ. ಮೊಹಮ್ಮದ್ ರಿಜ್ವಾನ್ ಅವರ ಈ ಪ್ರದರ್ಶನದಿಂದಾಗಿ ಪಾಕಿಸ್ತಾನ ಟಿ20 ವಿಶ್ವಕಪ್‌ನಲ್ಲಿಯೂ ಅದ್ಭುತ ಪ್ರದರ್ಶನ ನೀಡಿದೆ.

ಆ್ಯಶಸ್ ಟೆಸ್ಟ್: ಮದ್ಯಪಾನ ಮಾಡಿದ್ದ ಇಂಗ್ಲೆಂಡ್ ಆಟಗಾರರ ವಿರುದ್ಧ ತನಿಖೆಗೆ ಮುಂದಾದ ಇಸಿಬಿಆ್ಯಶಸ್ ಟೆಸ್ಟ್: ಮದ್ಯಪಾನ ಮಾಡಿದ್ದ ಇಂಗ್ಲೆಂಡ್ ಆಟಗಾರರ ವಿರುದ್ಧ ತನಿಖೆಗೆ ಮುಂದಾದ ಇಸಿಬಿ

ಮಧ್ಯಮ ಕ್ರಮಾಂಕ

ಮಧ್ಯಮ ಕ್ರಮಾಂಕ

ಇನ್ನು ಮಧ್ಯಮ ಕ್ರಮಾಂಕದಲ್ಲಿ ಅದರಲ್ಲೂ ಮೂರನೇ ಕ್ರಮಾಂಕದಲ್ಲಿ ಪಾಕಿಸ್ತಾನದ ನಾಯಕ ಬಾಬರ್ ಅಜಂಗೆ ಅವಕಾಶ ನೀಡಲಾಗಿದ್ದು ನಾಲ್ಕನೇ ಕ್ರಮಾಂಕದಲ್ಲಿ ದಕ್ಷಿಣ ಆಫ್ರಿಕಾದ ಭರವಸೆಯ ಆಟಗಾರ ಐಡೆನ್ ಮಾರ್ಕ್ರಮ್‌ಗೆ ನಿಡಲಾಗಿದೆ. ಇನ್ನು ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ ಮಿಶೆಲ್ ಮಾರ್ಶ್ ಐದನೇ ಕ್ರಮಾಂಕದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇನ್ನು ಆರನೇ ಕ್ರಮಾಂಕದ ದಾಂಡಿಗನಾಗಿ ಡೇವಿಡ್ ಮಿಲ್ಲರ್ ಅವಕಾಶ ಪಡೆದುಕೊಂಡಿದ್ದಾರೆ.

ಆಲ್‌ರೌಂಡರ್ ಹಾಗೂ ಬೌಲಿಂಗ್ ವಿಭಾಗ

ಆಲ್‌ರೌಂಡರ್ ಹಾಗೂ ಬೌಲಿಂಗ್ ವಿಭಾಗ

ಇನ್ನು ಶ್ರೀಲಂಕಾದ ಯುವ ಆಲ್‌ರೌಂಡರ್ ವನಿಂದು ಹಸರಂಗ ಕಳೆದ ವರ್ಷ ಅದ್ಭುತ ಪ್ರದರ್ಶನ ನೀಡಿದ್ದಾರೆ. ಬೌಲಿಂಗ್ ಮಾತ್ರವಲ್ಲದೆ ಬ್ಯಾಟಿಂಗ್‌ನಲ್ಲಿಯೂ ಹಸರಂಗ ಅದ್ಭುತ ಆಟವನ್ನು ಪ್ರದರ್ಶಿಸಿದ್ದಾರೆ. 20 ಪಂದ್ಯಗಳಲ್ಲಿ 36 ವಿಕೆಟ್ ಸಂಪಾದಿಸಿರುವ ಹಸರಂಗ ಬ್ಯಾಟಿಂಗ್‌ನಲ್ಲಿಯೂ 196 ರನ್‌ಗಳಿಸಿದ್ದಾರೆ. ಇನ್ನು ಟಿ20 ನಂಬರ್ 1 ಬೌಲರ್ ಟಬ್ರೈಜ್ ಶಂಸಿ ನಂತರದ ಸ್ಥಾನದಲ್ಲಿದ್ದರೆ ಆಸ್ಟ್ರೇಲಿಯಾದ ವೇಗಿ ಜೋಶ್ ಹೇಜಲ್‌ವುಡ್ ಬಾಂಗ್ಲಾದೇಶದ ಅನುಭವಿ ಮುಸ್ಫಿಜುರ್ ರಹ್ಮಾನ್ ಮತ್ತು ಪಾಕಿಸ್ತಾನದ ಶಾಹೀನ್ ಅಫ್ರಿದಿ ಬೌಲರ್‌ಗಳಾಗಿ ಸ್ಥಾನ ಪಡೆದುಕೊಂಡಿದ್ದಾರೆ.

ಐಸಿಸಿ ಪ್ರಕಟಿಸಿದ ಬೆಸ್ಟ್ ಟಿ20 ತಂಡ

ಐಸಿಸಿ ಪ್ರಕಟಿಸಿದ ಬೆಸ್ಟ್ ಟಿ20 ತಂಡ

ಜೋಸ್ ಬಟ್ಲರ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಬಾಬರ್ ಅಜಮ್ (ನಾಯಕ), ಏಡೆನ್ ಮಾರ್ಕ್ರಾಮ್, ಮಿಚೆಲ್ ಮಾರ್ಷ್, ಡೇವಿಡ್ ಮಿಲ್ಲರ್, ತಬ್ರೈಜ್ ಶಮ್ಸಿ, ಜೋಶ್ ಹ್ಯಾಜಲ್ವುಡ್, ವನಿಂದು ಹಸರಂಗ, ಮುಸ್ತಾಫಿಜುರ್ ರೆಹಮಾನ್, ಶಾಹೀನ್ ಅಫ್ರಿದಿ

Story first published: Thursday, January 20, 2022, 10:06 [IST]
Other articles published on Jan 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X