ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್: ಸೂಪರ್ 12ರ ಹಂತದಲ್ಲಿ ಲಂಕಾ, ಬಾಂಗ್ಲಾಕ್ಕೆ ಸ್ಥಾನವಿಲ್ಲ

ICC mens T20 world cup 2020 direct qualifiers srilanka bangladesh

ದುಬೈ, ಜನವರಿ 1: ಆಸ್ಟ್ರೇಲಿಯಾದಲ್ಲಿ 2020ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ನೇರವಾಗಿ ಅರ್ಹತೆ ಪಡೆದುಕೊಂಡ ತಂಡಗಳ ಪಟ್ಟಿಯನ್ನು ಐಸಿಸಿ ಪ್ರಕಟಿಸಿದ್ದು, ಮಾಜಿ ಚಾಂಪಿಯನ್ ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳು ಸೂಪರ್ 12ನಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ವಿಫಲವಾಗಿವೆ.

2018 ಡಿಸೆಂಬರ್ 31ರ ಎಂಆರ್ಎಫ್ ಟೈರ್ ಐಸಿಸಿ ಪುರುಷರ ಟಿ20 ತಂಡಗಳ ಶ್ರೇಯಾಂಕದ ಆಧಾರದಲ್ಲಿ ಈ ಗುಂಪು ಪಟ್ಟಿಯನ್ನು ತಯಾರಿಸಲಾಗಿದೆ. 2020ರ ಅಕ್ಟೋಬರ್ 18ರಿಂದ ನವೆಂಬರ್ 15ರವರೆಗೆ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದೆ.

ಟೂರ್ನಿಗೆ ನಿಗದಿಪಡಿಸಿರುವ ಮಾನದಂಡ ಆಧಾರದಲ್ಲಿ ಭಾರತ ಮತ್ತು ಇತರೆ ಒಂಬತ್ತು ಅಗ್ರ ಕ್ರಮಾಂಕದ ದೇಶಗಳು ಪ್ರವೇಶ ಖಚಿತಪಡಿಸಿಕೊಂಡಿವೆ.

ಅದರಲ್ಲಿ ಎಂಟು ತಂಡಗಳು ಸೂಪರ್ 12ರ ಹಂತಕ್ಕೆ ನೇರವಾಗಿ ಪ್ರವೇಶ ಪಡೆದುಕೊಂಡಿದ್ದರೆ, ಉಳಿದ ಎರಡು ತಂಡಗಳು 2019ರಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಕ್ವಾಲಿಫೈಯರ್ ಟೂರ್ನಿಯಲ್ಲಿ ಇತರೆ ಆರು ತಂಡಗಳೊಂದಿಗೆ ಸೆಣಸಲಿವೆ. ಗುಂಪು ಹಂತದಲ್ಲಿ ನಾಲ್ಕು ತಂಡಗಳು ಸೂಪರ್ 12ರ ಗುಂಪಿನಲ್ಲಿ ಸ್ಥಾನ ಪಡೆದುಕೊಳ್ಳಲಿವೆ.

ಐಸಿಸಿ ಶ್ರೇಯಾಂಕದಲ್ಲಿ ಅಗ್ರಕ್ರಮಾಂಕದಲ್ಲಿರುವ ಪಾಕಿಸ್ತಾನ, ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ನ್ಯೂಜಿಲ್ಯಾಂಡ್, ವೆಸ್ಟ್ ಇಂಡೀಸ್ ಮತ್ತು ಅಫ್ಘಾನಿಸ್ತಾನ ತಂಡಗಳು ಸೂಪರ್ 12ಕ್ಕೆ ನೇರವಾಗಿ ಅರ್ಹತೆ ಪಡೆದುಕೊಂಡಿವೆ.

ಮಾಜಿ ಚಾಂಪಿಯನ್ ಮತ್ತು ಮೂರು ಬಾರಿ ಫೈನಲ್ ಪ್ರವೇಶಿಸಿದ್ದ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ತಂಡಗಳು ಗುಂಪು ಹಂತದಲ್ಲಿ ಆರು ತಂಡಗಳ ಜೊತೆ ಆಡಬೇಕಾಗಿದೆ.

Story first published: Tuesday, January 1, 2019, 14:40 [IST]
Other articles published on Jan 1, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X