ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ICC ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿ ಗೆದ್ದುಕೊಂಡ ಇಂಗ್ಲೆಂಡ್ ನಾಯಕ ಜೋ ರೂಟ್‌

Joe root

ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಆಡಳಿತ ಮಂಡಳಿಯು ವರ್ಷದ ಟೆಸ್ಟ್ ಕ್ರಿಕೆಟಿಗನನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದು, ಇಂಗ್ಲೆಂಡ್ ನಾಯಕ ಜೋ ರೂಟ್ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿ ಬಾಚಿಕೊಂಡಿದ್ದಾರೆ.

2021ರ ವರ್ಷದಲ್ಲಿ ಕೆಲವು ಅಸಾಧಾರಣ ಪ್ರದರ್ಶನ ತೋರಿದ ಜೋ ರೂಟ್‌ ಅನೇಕ ವಿಶ್ವ ದಾಖಲೆಗಳನ್ನ ಸರಿಗಟ್ಟಿದರು. ಹೀಗಾಗಿ ಅನೇಕ ಸಂಭಾವ್ಯ ಅಭ್ಯರ್ಥಿಗಳನ್ನ ಹಿಂದಿಕ್ಕಿದ ಇಂಗ್ಲೆಂಡ್ ಕ್ರಿಕೆಟ್ ನಾಯಕ ರೂಟ್ ಟೆಸ್ಟ್‌ ಕ್ರಿಕೆಟ್‌ನ ಅಗ್ರ ಪ್ರಶಸ್ತಿಯನ್ನ ತಮ್ಮದಾಗಿಸಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ಆಸ್ಟ್ರೇಲಿಯಾದಲ್ಲಿ 0-4 ಅಂತರದಲ್ಲಿ ಆ್ಯಶಸ್ ಟೆಸ್ಟ್ ಸರಣಿಯನ್ನ ಸೋತಿದ್ದ ಜೋ ರೂಟ್‌ ಭಾರೀ ಮುಖಭಂಗ ಎದುರಿಸಿದರು. ಆತನನ್ನ ಟೆಸ್ಟ್ ನಾಯಕತ್ವದಿಂದ ಕೆಳಗಿಸಿಬೇಕು ಎಂಬೆಲ್ಲಾ ಟೀಕೆಗಳು ಎದುರಾದವು. ಆದ್ರೆ ಓರ್ವ ಟೆಸ್ಟ್ ಕ್ರಿಕೆಟಿಗನಾಗಿ ತನ್ನೆಲ್ಲಾ ಸಾಮರ್ಥ್ಯವನ್ನ ತಂಡಕ್ಕಾಗಿ ಮೀಸಲಿಟ್ಟಿದ್ದಾರೆ. ಈ ಮೊದಲೇ ತಿಳಿಸಿದಂತೆ ಇಂಗ್ಲೆಂಡ್ ಮತ್ತು ಟೆಸ್ಟ್ ಕ್ರಿಕೆಟ್‌ಗಾಗಿ ಐಪಿಎಲ್‌ ತ್ಯಾಗ ಮಾಡುವುದಾಗಿ ಹೇಳಿದ್ದಾರೆ.

ಜೋ ರೂಟ್‌ 2021ರಲ್ಲಿ 15 ಟೆಸ್ಟ್ ಪಂದ್ಯಗಳಲ್ಲಿ 1708 ರನ್ ಕಲೆಹಾಕಿದ್ದು, ಇದರಲ್ಲಿ 6 ಅಮೋಘ ಶತಕಗಳು ಸಹ ಸೇರಿವೆ. ಈ ಪ್ರದರ್ಶನಕ್ಕೂ ಮೊದಲು ಜೋ ರೂಟ್ ಮಾಡ್ರನ್ ಡೇ ಫ್ಯಾಬ್ 4ನಲ್ಲಿ ಈತನೂ ಒಬ್ಬನೇ ಎಂದೆಲ್ಲಾ ಪ್ರಶ್ನಿಸಿದ್ರು. ಆದ್ರೆ ರೂಟ್ ಸತತ ರನ್‌ ಕಲೆಹಾಕುವ ಮೂಲಕ ಟೀಕಾಕಾರರಿಗೆ ಉತ್ತರ ನೀಡಿದ್ದಾರೆ.

ಕಳೆದ ವರ್ಷ ಈತ ಕೇವಲ ಇಂಗ್ಲೆಂಡ್ ಪಿಚ್‌ನಲ್ಲಷ್ಟೇ ರನ್‌ ಕಲೆಹಾಕಿಲ್ಲ. ಏಷ್ಯಾದ ಕಠಿಣ ಪಿಚ್‌ಗಳಲ್ಲೂ ಈತ ತನ್ನ ಸಾಮರ್ಥ್ಯ ಪ್ರದರ್ಶಿಸಿದ್ದಾನೆ. ಇತ್ತೀಚೆಗೆ ಕೊನೆಗೊಂಡ ಆ್ಯಶಸ್ ಟೆಸ್ಟ್ ಸರಣಿಯಲ್ಲಿ ರೂಟ್ ಅರ್ಧಶತಕಗಳನ್ನ ಗಳಿಸಿದ್ರೆ ಹೊರತು, ಒಂದು ಬಾರಿಯು ಮೂರಂಕಿ ದಾಟಲು ಸಾಧ್ಯವಾಗಲಿಲ್ಲ.

2021ರಲ್ಲಿ ಜೋ ರೂಟ್ ಟೆಸ್ಟ ಕ್ರಿಕೆಟ್ ಸಾಧನೆಗಳು
ಜೋ ರೂಟ್‌ ಕಳೆದ ವರ್ಷ ಅಮೋಘ ಟೆಸ್ಟ್ ರನ್ ಕಲೆಹಾಕುವ ಮೂಲಕ 1700ಕ್ಕೂ ಹೆಚ್ಚು ರನ್ ಕಲೆಹಾಕಿದ ವಿಶ್ವದ ಮೂರನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಈ ಹಿಂದೆ 2016 ರಲ್ಲಿ 1477 ರನ್ ಮತ್ತು 2015 ರಲ್ಲಿ 1385 ರನ್ ಗಳಿಸಿದ್ದ ರೂಟ್ ಟೆಸ್ಟ್ ಇತಿಹಾಸದಲ್ಲಿ ಎಲ್ಲಾ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳ ಒಟ್ಟಾರೆ ವಾರ್ಷಿಕ ಅಗ್ರ ಐದು ಸ್ಥಾನಗಳಲ್ಲಿ ಮೂರು ಸ್ಥಾನಗಳನ್ನು ಹೊಂದಿದ್ದಾರೆ.

ಅಡಿಲೇಡ್ ಓವಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ರೂಟ್, ಸಚಿನ್ ಮತ್ತು ಗವಾಸ್ಕರ್‌ರ ಒಂದೇ ವರ್ಷದಲ್ಲಿ ಅತಿ ಹೆಚ್ಚು ಟೆಸ್ಟ್ ರನ್ ದಾಖಲೆಯನ್ನು ಮುರಿದರು. ಗವಾಸ್ಕರ್ 1979 ರಲ್ಲಿ 1,555 ರನ್ ಗಳಿಸಿದ್ದರು ಮತ್ತು ಸಚಿನ್ ತೆಂಡೂಲ್ಕರ್ 2010ರ ಕ್ಯಾಲೆಂಡರ್ ವರ್ಷದಲ್ಲಿ 1,562 ರನ್ ಗಳಿಸಿದ್ದರು. ಜೋ ರೂಟ್, ಇಬ್ಬರ ದಾಖಲೆ ಮುರಿದು ಒಂದು ವರ್ಷದಲ್ಲಿ ಅತಿ ಹೆಚ್ಚು ರನ್‌ ಕಲೆಹಾಕಿದ ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಿದ್ದಾರೆ.

ಪಾಕಿಸ್ತಾನದ ಮೊಹಮ್ಮದ್ ಯೂಸುಫ್ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಹೊಂದಿದ್ದಾರೆ. ಅವರು 2006 ರಲ್ಲಿ 11 ಪಂದ್ಯಗಳಲ್ಲಿ 1,788 ರನ್ ಗಳಿಸಿದ್ದರು. ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ವಿವಿಯನ್ ರಿಚರ್ಡ್ಸ್ 1976 ರಲ್ಲಿ 11 ಪಂದ್ಯಗಳಲ್ಲಿ 1,710 ರನ್ ಗಳಿಸಿದರು.

ಜೋ ರೂಟ್ ನಾಯಕತ್ವದ ಕೊಡುಗೆ
ಕಳೆದ ವರ್ಷ ಜನವರಿಯಲ್ಲಿ ಶ್ರೀಲಂಕಾ ನೆಲದಲ್ಲಿ 2-0ಯಿಂದ ಟೆಸ್ಟ್ ಸರಣಿ ಗೆದ್ದ ಬಳಿಕ, ಚೆಪಾಕ್‌ನಲ್ಲಿ ನಡೆದ ಭಾರತದ ವಿರುದ್ಧ ಸರಣಿ-ಆರಂಭಿಕ ಟೆಸ್ಟ ಪಂದ್ಯದಲ್ಲಿ ಏಕಪಕ್ಷೀಯ ಪ್ರಾಬಲ್ಯ ಮೆರೆದ ಇಂಗ್ಲೆಂಡ್ ಜೋ ರೂಟ್ ನೇತೃತ್ವದ ತಂಡ ಸರಣಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ರೂ ಸಹ ಆ ಸರಣಿಯಲ್ಲಿ 1-3 ಅಂತರದ ಸೋಲನ್ನು ಅನುಭವಿಸಿತು. ಜೊತೆಗೆ ನಂತರದ ದಿನಗಳಲ್ಲಿ ICC ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ತಲುಪಲು ವಿಫಲಗೊಂಡಿತು.

KL Rahul ನಾಯಕತ್ವದ ಫೇಲ್ಯೂರ್ ಬಗ್ಗೆ Rahul Dravid ಹೇಳಿದ್ದೇನು? | Oneindia Kannada

ಇದರ ಜೊತೆಗೆ ಕಾಂಗರೂ ನಾಡಿನಲ್ಲಿ 0-4 ಅಂತರದಲ್ಲಿ ಆ್ಯಶಸ್ ಟೆಸ್ಟ್ ಸರಣಿಯ ಸೋಲಿನ ಮುಖಭಂಗ ಎದುರಿಸಿದೆ.

Story first published: Monday, January 24, 2022, 18:14 [IST]
Other articles published on Jan 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X