ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ICC ODI Batting Ranking: ವಿರಾಟ್ ಕೊಹ್ಲಿಗಿಂತ ಮತ್ತಷ್ಟು ಮೇಲಕ್ಕೇರಿದ ಬಾಬರ್ ಅಜಂ

ICC ODI Batting Ranking: Babar Azam Continues To be The Worlds Top Ranked ODI Batsman

ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ (891 ಅಂಕಗಳು) ವಿಶ್ವದ ಅಗ್ರ ಶ್ರೇಯಾಂಕದ ಐಸಿಸಿ ಏಕದಿನ ಬ್ಯಾಟ್ಸ್‌ಮನ್ ಆಗಿ ತಮ್ಮ ಮುನ್ನಡೆಯನ್ನು ಹೆಚ್ಚಿಸಿಕೊಂಡಿದ್ದಾರೆ ಮತ್ತು ತನ್ನದೇ ದೇಶದ ಸಹ ಆಟಗಾರ ಇಮಾಮ್ ಉಲ್-ಹಕ್ (800) ನಂತರದ ಸ್ಥಾನದಲ್ಲಿದ್ದಾರೆ.

ಮಂಗಳವಾರ ನೆದರ್ಲೆಂಡ್ಸ್ ವಿರುದ್ಧ ಪಾಕಿಸ್ತಾನ ತಂಡ 16 ರನ್‌ಗಳ ವಿಜಯದ ಸಂದರ್ಭದಲ್ಲಿ ಬಾಬರ್ ಅಜಂ 74 ರನ್ ಗಳಿಸಿದರು ಮತ್ತು ಇದು ಅವರಿಗೆ ಏಕದಿನ ಶ್ರೇಯಾಂಕದಲ್ಲಿ ಅಗ್ರಸ್ಥಾನವನ್ನು ಹೆಚ್ಚಿಸಲು ಸಹಾಯ ಮಾಡಿತು.

CSA T20 League: ಹೊಸ ಫ್ರಾಂಚೈಸಿ ಘೋಷಿಸಿದ ಸನ್‌ರೈಸರ್ಸ್ ಹೈದರಾಬಾದ್CSA T20 League: ಹೊಸ ಫ್ರಾಂಚೈಸಿ ಘೋಷಿಸಿದ ಸನ್‌ರೈಸರ್ಸ್ ಹೈದರಾಬಾದ್

ಕಳೆದ ವರ್ಷ ಏಪ್ರಿಲ್‌ನಲ್ಲಿ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ ನಂತರ ಬಾಬರ್ ಅಜಂ ಏಕದಿನ ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಏತನ್ಮಧ್ಯೆ, ರೋಹಿತ್ ಶರ್ಮಾ (4) ನಂತರದ ಶ್ರೇಯಾಂಕದಲ್ಲಿ ವಿರಾಟ್ ಕೊಹ್ಲಿ 5ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ರೋಹಿತ್ ಶರ್ಮಾ (4) ನಂತರದ ಶ್ರೇಯಾಂಕದಲ್ಲಿ ವಿರಾಟ್ ಕೊಹ್ಲಿ

ರೋಹಿತ್ ಶರ್ಮಾ (4) ನಂತರದ ಶ್ರೇಯಾಂಕದಲ್ಲಿ ವಿರಾಟ್ ಕೊಹ್ಲಿ

ಬಾಬರ್ ಅಜಂ ಇತ್ತೀಚಿನ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದ್ದಾರೆ, ಆದರೂ ನ್ಯೂಜಿಲೆಂಡ್ ಆರಂಭಿಕ ಆಟಗಾರ ಡೆವೊನ್ ಕಾನ್ವೆ ವೆಸ್ಟ್ ಇಂಡೀಸ್ ವಿರುದ್ಧದ ಪ್ರಭಾವಶಾಲಿ ಸರಣಿಯ ನಂತರ ಪಾಕಿಸ್ತಾನದ ನಾಯಕನಿಗೆ ಪೈಪೋಟಿ ನೀಡುತ್ತಿದ್ದಾರೆ. ಡೆವೊನ್ ಕಾನ್ವೇ ಅವರು 106 ರನ್‌ಗಳೊಂದಿಗೆ ಸರಣಿಯಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ್ದರು ಮತ್ತು ಅದು ಅವರಿಗೆ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ಏಳನೇ ಸ್ಥಾನಕ್ಕೆ ಏರಲು ಸಹಾಯ ಮಾಡಿದೆ.

ನವೀಕರಿಸಿದ ಶ್ರೇಯಾಂಕದಲ್ಲಿ ನ್ಯೂಜಿಲೆಂಡ್ ಆಟಗಾರರಿಗೆ ಹೆಚ್ಚಿನ ಸಂತೋಷದ ಸುದ್ದಿ ನೀಡಿದ್ದು, ಸ್ಟಾರ್ ಆಲ್‌ರೌಂಡರ್ ಮಿಚೆಲ್ ಸ್ಯಾಂಟ್ನರ್ ಬೌಲರ್‌ಗಳ ಟಿ20 ರ್‍ಯಾಂಕಿಂಗ್‌ನಲ್ಲಿ ಒಂಬತ್ತು ಸ್ಥಾನಗಳನ್ನು ಒಟ್ಟಾರೆ ಏರಿಕೆ ಕಂಡು, ಎಂಟನೇ ಸ್ಥಾನಕ್ಕೆ ಸುಧಾರಿಸಿದ್ದಾರೆ. ಆಸ್ಟ್ರೇಲಿಯನ್ ವೇಗದ ಬೌಲರ್ ಜೋಶ್ ಹೇಜಲ್‌ವುಡ್ ಆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಆದರೆ ಆಸ್ಟ್ರೇಲಿಯದ ಬಲಗೈ ವೇಗಿಯನ್ನು ವಿಶ್ವದ ಹಲವಾರು ಆಟಗಾರರು ಅಗ್ರ 10ರೊಳಗೆ ಬೆನ್ನತ್ತಿದ್ದಾರೆ.

ಜೋಶ್ ಹೇಜಲ್‌ವುಡ್ ಬೌಲಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನ

ಜೋಶ್ ಹೇಜಲ್‌ವುಡ್ ಬೌಲಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನ

ಏಕದಿನ ಬೌಲರ್‌ಗಳ ಇತ್ತೀಚಿನ ರ್‍ಯಾಂಕಿಂಗ್‌ನಲ್ಲಿ ಜೋಶ್ ಹೇಜಲ್‌ವುಡ್ ಮೂರು ಸ್ಥಾನಗಳ ಸುಧಾರಣೆ ಕಂಡಿದ್ದಾರೆ. ಪಾಕಿಸ್ತಾನದ ವೇಗಿ ಶಾಹೀನ್ ಅಫ್ರಿದಿ ಅವರು ನೆದರ್ಲ್ಯಾಂಡ್ಸ್ ವಿರುದ್ಧದ ಆರಂಭಿಕ ಪಂದ್ಯವನ್ನು ಕಳೆದುಕೊಂಡ ನಂತರ ಐದನೇ ಸ್ಥಾನಕ್ಕೆ ಕುಸಿಯಲು ಎರಡು ಸ್ಥಾನಗಳನ್ನು ಕಳೆದುಕೊಂಡಿದ್ದಾರೆ.

ಏಕದಿನ ಬೌಲರ್ ಶ್ರೇಯಾಂಕದಲ್ಲಿ ಬಾಂಗ್ಲಾದೇಶದ ವೇಗದ ಬೌಲರ್ ಮುಸ್ತಫಿಜುರ್ ರೆಹಮಾನ್ ಅವರು ಆರು ಸ್ಥಾನಗಳನ್ನು ಮೇಲಕ್ಕೇರಿ ಒಟ್ಟಾರೆ 10ನೇ ಸ್ಥಾನದಲ್ಲಿದ್ದಾರೆ. ಬಾಂಗ್ಲಾದೇಶ ತಂಡ ಜಿಂಬಾಬ್ವೆ ವಿರುದ್ಧದ ಇತ್ತೀಚಿನ ಸರಣಿಯ ಸಮಯದಲ್ಲಿ ಮುಸ್ತಫಿಜುರ್ ಜಂಟಿ ಪ್ರಮುಖ ವಿಕೆಟ್ ಟೇಕರ್ ಆಗಿ ಮುಗಿಸಿದರು ಮತ್ತು 26 ವರ್ಷ ವಯಸ್ಸಿನ ಮುಸ್ತಫಿಜುರ್ ರೆಹಮಾನ್ ಟಾಪ್ 10ರೊಳಗೆ ದೊಡ್ಡ ಜಿಗಿತವನ್ನು ಪಡೆದರು.

ಟಾಪ್ 10ನಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ

ಟಾಪ್ 10ನಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಏಕದಿನ ಬ್ಯಾಟಿಂಗ್ ರ್‍ಯಾಂಕಿಂಗ್‌ನ ಟಾಪ್ 10ನಲ್ಲಿ ಕಾಣಿಸಿಕೊಳ್ಳುವ ಕೇವಲ 3 ಭಾರತೀಯ ಬ್ಯಾಟ್ಸ್‌ಮನ್ ಆಗಿದ್ದಾರೆ. ಜಿಂಬಾಬ್ವೆ ಸರಣಿಯಲ್ಲಿ ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ ಅಗ್ರ 10ರೊಳಗೆ ಪ್ರವೇಶಿಸಬಹುದು. ಅವರು ರ್‍ಯಾಂಕಿಂಗ್‌ನಲ್ಲಿ 12ನೇ ಸ್ಥಾನದಲ್ಲಿದ್ದಾರೆ ಮತ್ತು ಕೆಲವು ದೊಡ್ಡ ಸ್ಕೋರ್‌ಗಳು ಬಂದರೆ ಸುಲಭವಾಗಿ ಅಗ್ರ 10ರೊಳಗೆ ಪ್ರವೇಶಿಸಬಹುದು.

Story first published: Wednesday, August 17, 2022, 20:30 [IST]
Other articles published on Aug 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X