ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ICC ODI Ranking: ಕುಸಿದ ಇಂಗ್ಲೆಂಡ್, ಅಗ್ರಸ್ಥಾನಕ್ಕೇರಿದ ನ್ಯೂಜಿಲೆಂಡ್; ಭಾರತದ ಸ್ಥಾನವೇನು?

ICC ODI Ranking: New Zealand Jumped Top Of The Table; What Is Indias Position?

ಆಸ್ಟ್ರೇಲಿಯಾ ವಿರುದ್ಧದ 3-0 ಅಂತರದ ಸರಣಿಯ ಸೋಲಿನ ನಂತರ, ಇಂಗ್ಲೆಂಡ್ ತಂಡ ಬುಧವಾರ ಬಿಡುಗಡೆಯಾದ ಇತ್ತೀಚಿನ ಐಸಿಸಿ ಪುರುಷರ ಏಕದಿನ ತಂಡ ರ್‍ಯಾಂಕಿಂಗ್‌ನಲ್ಲಿ 2ನೇ ಸ್ಥಾನಕ್ಕೆ ಕುಸಿದಿದೆ. ಇನ್ನು ಎರಡನೇ ಸ್ಥಾನದಲ್ಲಿದ್ದ ನ್ಯೂಜಿಲೆಂಡ್ ಏಕದಿನ ರ್‍ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ICC T20 Ranking: ವೃತ್ತಿಜೀವನದ ಅತ್ಯುತ್ತಮ ರೇಟಿಂಗ್ ಗಳಿಸಿದ ಸೂರ್ಯಕುಮಾರ್ ಯಾದವ್ICC T20 Ranking: ವೃತ್ತಿಜೀವನದ ಅತ್ಯುತ್ತಮ ರೇಟಿಂಗ್ ಗಳಿಸಿದ ಸೂರ್ಯಕುಮಾರ್ ಯಾದವ್

ಪ್ರಸ್ತುತ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಚಾಂಪಿಯನ್ ಇಂಗ್ಲೆಂಡ್ ತಂಡ ಆಸೀಸ್ ವಿರುದ್ಧ ಸರಣಿ ಸೋಲುವ ಮೂಲಕ ಅಪರೂಪದ ಹಿನ್ನಡೆ ಅನುಭವಿಸಿದ್ದಾರೆ. ಇಂಗ್ಲೆಂಡ್ ಟಿ20 ವಿಶ್ವಕಪ್ 2022ರ ಟ್ರೋಫಿಯನ್ನು ಗೆದ್ದ 10 ದಿನಗಳಲ್ಲಿ ಏಕದಿನ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಕಳೆದುಕೊಂಡರು.

3-0 ಅಂತರದಲ್ಲಿ ಸರಣಿ ಸೋತ ಇಂಗ್ಲೆಂಡ್

3-0 ಅಂತರದಲ್ಲಿ ಸರಣಿ ಸೋತ ಇಂಗ್ಲೆಂಡ್

ಮೊದಲ ಎರಡು ಏಕದಿನ ಪಂದ್ಯಗಳನ್ನು ಕ್ರಮವಾಗಿ ಆರು ವಿಕೆಟ್‌ಗಳಿಂದ ಮತ್ತು 71 ರನ್‌ಗಳಿಂದ ಸೋತ ನಂತರ ಇಂಗ್ಲೆಂಡ್ ತಂಡ, ಮಂಗಳವಾರ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಮಳೆಯಿಂದಾಗಿ ಇಂಗ್ಲೆಂಡ್ 221 ರನ್‌ಗಳ (ಡಕ್ವರ್ಥ್ ಲೂಯಿಸ್ ವಿಧಾನ) ದೊಡ್ಡ ಸೋಲು ಅನುಭವಿಸಿತು.

ಈ ವರ್ಷದ ಸೆಪ್ಟೆಂಬರ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಅಗ್ರಸ್ಥಾನವನ್ನು ಕಳೆದುಕೊಂಡಿದ್ದ ನ್ಯೂಜಿಲೆಂಡ್ ಇದೀಗ ಏಕದಿನ ತಂಡ ರ್‍ಯಾಂಕಿಂಗ್ ಪಟ್ಟಿಯಲ್ಲಿ ನಂ.1 ಸ್ಥಾನವನ್ನು ಅದೇ ಇಂಗ್ಲೆಂಡ್‌ನಿಂದ ಮರಳಿ ಪಡೆದುಕೊಂಡಿದೆ.

ನ್ಯೂಜಿಲೆಂಡ್ 114 ರೇಟಿಂಗ್ ಪಾಯಿಂಟ್‌ ಹೊಂದಿದೆ

ನ್ಯೂಜಿಲೆಂಡ್ 114 ರೇಟಿಂಗ್ ಪಾಯಿಂಟ್‌ ಹೊಂದಿದೆ

ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೊದಲು ಇಂಗ್ಲೆಂಡ್ ತಂಡ 119 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿತ್ತು. ನ್ಯೂಜಿಲೆಂಡ್‌ಗಿಂತ ಐದು ಅಂಕಗಳ ಅಂತರದಲ್ಲಿತ್ತು. ಇದೀಗ ಸತತ ಮೂರು ಪಂದ್ಯಗಳ ಸೋಲಿನ ಬಳಿಕ ಆರು ಅಂಕಗಳನ್ನು ಕಳೆದುಕೊಂಡು, ಅಂತಿಮವಾಗಿ 113 ರೇಟಿಂಗ್ ಪಾಯಿಂಟ್‌ಗಳಿಗೆ ಕುಸಿದಿದ್ದು, ನ್ಯೂಜಿಲೆಂಡ್ 114 ರೇಟಿಂಗ್ ಪಾಯಿಂಟ್‌ ಹೊಂದಿದೆ.

ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾದ ಅದ್ಭುತ ಪ್ರದರ್ಶನವು ಒಂದು ಸ್ಥಾನ ಮೇಲಕ್ಕೇರಿದ್ದಾರೆ. 112 ರೇಟಿಂಗ್ ಪಾಯಿಂಟ್‌ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. 107 ಅಂಕಗಳನ್ನು ಹೊಂದಿರುವ ಪಾಕಿಸ್ತಾನವನ್ನು ಹಿಂದೆ ಹಾಕಿತು. ಇದೀಗ ಆಸ್ಟ್ರೇಲಿಯಾ ಮತ್ತು ಭಾರತ ತಂಡಗಳು ಈಗ ರೇಟಿಂಗ್ ಪಾಯಿಂಟ್‌ಗಳಲ್ಲಿ ಸಮನಾಗಿವೆ.

ಭಾರತ 112 ರೇಟಿಂಗ್ ಪಾಯಿಂಟ್‌ಗಳೊಂದಿಗೆ 3ನೇ ಸ್ಥಾನ

ಭಾರತ 112 ರೇಟಿಂಗ್ ಪಾಯಿಂಟ್‌ಗಳೊಂದಿಗೆ 3ನೇ ಸ್ಥಾನ

ಆದರೆ, ಭಾರತ ತಂಡ 112 ರೇಟಿಂಗ್ ಪಾಯಿಂಟ್‌ ಮತ್ತು 3802 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ 112 ರೇಟಿಂಗ್ ಪಾಯಿಂಟ್‌ ಮತ್ತು 3572 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ.

ಜನವರಿ 2023ರಲ್ಲಿ ತವರಿನಲ್ಲಿ ಮೂರು ಪಂದ್ಯಗಳ ಸರಣಿಗಾಗಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸುವಾಗ ಇಂಗ್ಲೆಂಡ್ ಅಗ್ರ ಸ್ಥಾನವನ್ನು ಮರಳಿ ಪಡೆಯಲು ಅವಕಾಶವನ್ನು ಹೊಂದಿದೆ.

ಐಸಿಸಿ ಏಕದಿನ ತಂಡಗಳ ರ್‍ಯಾಂಕಿಂಗ್ ಪಟ್ಟಿ

ಐಸಿಸಿ ಏಕದಿನ ತಂಡಗಳ ರ್‍ಯಾಂಕಿಂಗ್ ಪಟ್ಟಿ

1) ನ್ಯೂಜಿಲೆಂಡ್- 114

2) ಇಂಗ್ಲೆಂಡ್ - 113

3) ಭಾರತ- 112

4) ಆಸ್ಟ್ರೇಲಿಯಾ- 112

5) ಪಾಕಿಸ್ತಾನ- 107

6) ದಕ್ಷಿಣ ಆಫ್ರಿಕಾ- 100

7) ಬಾಂಗ್ಲಾದೇಶ- 92

8) ಶ್ರೀಲಂಕಾ- 92

9) ವೆಸ್ಟ್ ಇಂಡೀಸ್- 71

10) ಅಫ್ಘಾನಿಸ್ತಾನ- 69

Story first published: Wednesday, November 23, 2022, 21:50 [IST]
Other articles published on Nov 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X