ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ICC ODI Rankings: ಏಕದಿನ ರ್‍ಯಾಂಕಿಂಗ್‌ನಲ್ಲಿ ಅಗ್ರ 10ರೊಳಗೆ ಶುಭ್ಮನ್ ಗಿಲ್; ಕೊಹ್ಲಿ ಸ್ಥಾನ ಕುಸಿತ

ICC ODI Rankings: Shubman Gill Climbs No.6 In Latest Rankings For Batters; Virat Kohli Slips

ಬುಧವಾರ, ಜನವರಿ 25ರಂದು ಬಿಡುಗಡೆಯಾದ ಐಸಿಸಿ ಏಕದಿನ ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ ಭಾರತದ ಯುವ ಆರಂಭಿಕ ಬ್ಯಾಟ್ಸ್‌ಮನ್ ಶುಭ್ಮನ್ ಗಿಲ್ ಟಾಪ್ 10ರೊಳಗೆ ಪ್ರವೇಶಿಸಿದ್ದಾರೆ.

ಭಾರತದ ಸ್ಟಾರ್ ಆಟಗಾರ ಶುಭ್ಮನ್ ಗಿಲ್ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 360 ರನ್‌ಗಳನ್ನು ಬಾರಿಸಿದ್ದಕ್ಕಾಗಿ ರ್‍ಯಾಂಕಿಂಗ್‌ನಲ್ಲಿ ದೊಡ್ಡ ಏರಿಕೆ ಕಂಡರು. ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಅತ್ಯದ್ಭುತ ದ್ವಿಶತಕ ಮತ್ತು ಒಂದು ಶತಕ ಬಾರಿಸಿದ ನಂತರ ಶುಭ್ಮನ್ ಗಿಲ್ 20 ಸ್ಥಾನಗಳ ಜಿಗಿತ ಕಂಡು 6ನೇ ಸ್ಥಾನ ತಲುಪಿದ್ದಾರೆ.

ಸಚಿನ್ ತೆಂಡೂಲ್ಕರ್ or ವಿರಾಟ್ ಕೊಹ್ಲಿ: ಭಾರತದ ಈ ದಿಗ್ಗಜರಲ್ಲಿ ಶುಭ್ಮನ್ ಗಿಲ್ ಆಯ್ಕೆ ಯಾರು?

ಇನ್ನು ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ ಭಾರತದ ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿ 7ನೇ ಸ್ಥಾನಕ್ಕೆ ಕುಸಿದರು. ಏಕೆಂದರೆ, ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ದೊಡ್ಡ ಮೊತ್ತ ಗ್ಳಿಸುವಲ್ಲಿ ವಿಫಲರಾಗಿದ್ದರು. ಇದೇ ವೇಳೆ ಕಿವೀಸ್ ವಿರುದ್ಧ ಶತಕ ಗಳಿಸಿದ ರೋಹಿತ್ ಶರ್ಮಾ ಎರಡು ಸ್ಥಾನಗಳನ್ನು ಜಿಗಿದು ಎಂಟನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ.

ಮೂರನೇ ಏಕದಿನ ಪಂದ್ಯದಲ್ಲಿ ಕೇವಲ 78 ಎಸೆತಗಳಲ್ಲಿ 112 ರನ್

ಮೂರನೇ ಏಕದಿನ ಪಂದ್ಯದಲ್ಲಿ ಕೇವಲ 78 ಎಸೆತಗಳಲ್ಲಿ 112 ರನ್

ಶುಭ್ಮನ್ ಗಿಲ್ ಮೂರನೇ ಏಕದಿನ ಪಂದ್ಯದಲ್ಲಿ ಕೇವಲ 78 ಎಸೆತಗಳಲ್ಲಿ 112 ರನ್ ಗಳಿಸಿದರು. ಇದು ಅವರ ನಾಲ್ಕನೇ ಏಕದಿನ ಶತಕ ಮತ್ತು ಕಿವೀಸ್ ವಿರುದ್ಧದ ಸರಣಿಯ ಎರಡನೇ ಶತಕವಾಗಿತ್ತು.

ಕಿವೀಸ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಗಿಲ್ 112 ರನ್‌ಗಳ ಗಳಿಸುತ್ತಿದ್ದಂತೆಯೇ, ಮೂರು ಅಥವಾ ಅದಕ್ಕಿಂತ ಕಡಿಮೆ ಪಂದ್ಯಗಳ ದ್ವಿಪಕ್ಷೀಯ ಏಕದಿನ ಸರಣಿಯಲ್ಲಿ ಅತಿ ಹೆಚ್ಚು 360 ರನ್ ಗಳಿಸಿದ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಅವರ ದಾಖಲೆಯನ್ನು ಸರಿಗಟ್ಟಿ ಜಂಟಿ ಮೊದಲ ಸ್ಥಾನದಲ್ಲಿದ್ದಾರೆ. 2016 ರಲ್ಲಿ ಬಾಬರ್ ಅಜಂ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ 360 ರನ್ ಗಳಿಸಿದ್ದರು.

ಅಗ್ರ 10ರೊಳಗೆ ಮೂವರು ಭಾರತೀಯ ಆಟಗಾರರು

ಅಗ್ರ 10ರೊಳಗೆ ಮೂವರು ಭಾರತೀಯ ಆಟಗಾರರು

ಐಸಿಸಿ ಏಕದಿನ ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಅಗ್ರಸ್ಥಾನದಲ್ಲಿ ಮುಂದುವರೆದಿದ್ದಾರೆ. ಇದೀಗ ಅಗ್ರ 10ರೊಳಗೆ ಮೂವರು ಭಾರತೀಯ ಆಟಗಾರರು ಇದ್ದಾರೆ.

ಇತ್ತೀಚಿಗೆ ಮುಕ್ತಾಯಗೊಂಡ ಐರ್ಲೆಂಡ್ ಮತ್ತು ಜಿಂಬಾಬ್ವೆ ನಡುವಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರು ಏಕದಿನ ಶ್ರೇಯಾಂಕದಲ್ಲಿ ಏರಿಕೆ ಕಂಡಿದ್ದಾರೆ. ಐರ್ಲೆಂಡ್‌ನ ಹ್ಯಾರಿ ಟೆಕ್ಟರ್ ಬ್ಯಾಟರ್‌ಗಳ ಪಟ್ಟಿಯಲ್ಲಿ ಒಟ್ಟಾರೆ 12 ಸ್ಥಾನಗಳನ್ನು ಜಿಗಿತ ಕಂಡು 13ನೇ ಸ್ಥಾನಕ್ಕೆ ತಲುಪಿದ್ದಾರೆ. ವೇಗಿ ಜೋಶುವಾ ಲಿಟಲ್ 27 ಸ್ಥಾನಗಳ ಏರಿಕೆಯೊಂದಿಗೆ 33ನೇ ಸ್ಥಾನದಲ್ಲಿದ್ದಾರೆ.

ಐಸಿಸಿ ಏಕದಿನ ನಂ.1 ಬೌಲರ್ ಆದ ಮೊಹಮ್ಮದ್ ಸಿರಾಜ್

ಐಸಿಸಿ ಏಕದಿನ ನಂ.1 ಬೌಲರ್ ಆದ ಮೊಹಮ್ಮದ್ ಸಿರಾಜ್

ಐಸಿಸಿ ಏಕದಿನ ಬೌಲರ್‌ಗಳ ರ್‍ಯಾಂಕಿಂಗ್‌ನಲ್ಲಿ ಭಾರತದ ಯುವ ವೇಗಿ ಮೊಹಮ್ಮದ್ ಸಿರಾಜ್ ಈಗ ವಿಶ್ವದ ನಂಬರ್ 1 ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಕಳೆದ ವರ್ಷದಿಂದ ಏಕದಿನ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಸಿರಾಜ್, ಭಾರತದ ಪ್ರಮುಖ ವಿಕೆಟ್ ಟೇಕರ್ ಬೌಲರ್ ಆಗಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಸರಣಿಗೂ ಮುನ್ನ ಐಸಿಸಿ ರ್‍ಯಾಂಕಿಂಗ್‌ನಲ್ಲಿ 3ನೇ ಸ್ಥಾನದಲ್ಲಿದ್ದ ಮೊಹಮ್ಮದ್ ಸಿರಾಜ್, ಕಿವೀಸ್ ವಿರುದ್ಧ ಮೊದಲ ಎರಡು ಪಂದ್ಯಗಳಲ್ಲಿ 5 ವಿಕೆಟ್ ಪಡೆಯುವ ಮೂಲಕ ಅಗ್ರಸ್ಥಾನಕ್ಕೇರಿದರು.

ಸದ್ಯ 729 ಅಂಕಗಳನ್ನು ಹೊಂದಿರುವ ಮೊಹಮ್ಮದ್ ಸಿರಾಜ್‌ರ ಜೀವನಶ್ರೇಷ್ಠ ಸಾಧನೆಯಾಗಿದೆ. ಇದುವರೆಗೂ 21 ಏಕದಿನ ಪಂದ್ಯಗಳನ್ನಾಡಿ, 20.76 ಸರಾಸರಿಯಲ್ಲಿ 38 ವಿಕೆಟ್ ಪಡೆದು ಮಿಂಚಿದ್ದಾರೆ.

Story first published: Wednesday, January 25, 2023, 16:14 [IST]
Other articles published on Jan 25, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X