ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs ENG: ಇಂಗ್ಲೆಂಡ್ ವಿರುದ್ಧದ ಗೆಲುವಿನ ನಂತರ ODI ರ್‍ಯಾಂಕಿಂಗ್‌ನಲ್ಲಿ ಪಾಕ್ ಹಿಂದಿಕ್ಕಿದ ಭಾರತ

ICC ODI Rankings: Team India Move Ahead Of Pakistan After 10 Wicket Win Over England

ಮಂಗಳವಾರ (ಜುಲೈ 12) ಲಂಡನ್‌ನ ಓವಲ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ 10 ವಿಕೆಟ್‌ಗಳ ಭರ್ಜರಿ ಜಯದ ನಂತರ ಐಸಿಸಿ ಏಕದಿನ ತಂಡ ರ್‍ಯಾಂಕಿಂಗ್‌ನಲ್ಲಿ ಪಾಕಿಸ್ತಾನವನ್ನು ಹಿಂದಿಕ್ಕಿದೆ.

IND vs ENG: ಭಾರತದ ಈ ಜೋಡಿ ಮುಂದೆ ವಿಶ್ವ ಕ್ರಿಕೆಟ್‌ನಲ್ಲಿ ಉತ್ತಮ ಜೋಡಿ ಇಲ್ಲ; ವೀರೇಂದ್ರ ಸೆಹ್ವಾಗ್IND vs ENG: ಭಾರತದ ಈ ಜೋಡಿ ಮುಂದೆ ವಿಶ್ವ ಕ್ರಿಕೆಟ್‌ನಲ್ಲಿ ಉತ್ತಮ ಜೋಡಿ ಇಲ್ಲ; ವೀರೇಂದ್ರ ಸೆಹ್ವಾಗ್

ಇಂಗ್ಲೆಂಡ್ ವಿರುದ್ಧದ ಸಮಗ್ರ 10 ವಿಕೆಟ್‌ಗಳ ಜಯದ ನಂತರ ಭಾರತ ಐಸಿಸಿ ಏಕದಿನ ತಂಡಗಳ ರ್‍ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನಕ್ಕೆ ಏರಿದೆ. ಪಂದ್ಯದ ಮೊದಲು ಭಾರತವು 105 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿತ್ತು, ಆದರೆ ಮೊದಲ ಪಂದ್ಯದ ಗೆಲುವು ಭಾರತವನ್ನು 108 ರೇಟಿಂಗ್ ಪಾಯಿಂಟ್‌ಗಳಿಗೆ ಮುನ್ನಡೆಸಿತು, ಪಾಕಿಸ್ತಾನ 106 ರೇಟಿಂಗ್ ಪಾಯಿಂಟ್‌ಗಳಿಂದ ನಾಲ್ಕನೇ ಸ್ಥಾನದಲ್ಲಿದೆ.

ಇಂಗ್ಲೆಂಡ್ ತಂಡಕ್ಕೆ ವಿಧ್ವಂಸಕವಾಗಿ ಕಾಡಿದ ಬುಮ್ರಾ

ಇಂಗ್ಲೆಂಡ್ ತಂಡಕ್ಕೆ ವಿಧ್ವಂಸಕವಾಗಿ ಕಾಡಿದ ಬುಮ್ರಾ

ಜಸ್ಪ್ರೀತ್ ಬುಮ್ರಾ ಅವರು ಆರು ವಿಕೆಟ್‌ಗಳ ಪಡೆಯವುದರೊಂದಿಗೆ ಇಂಗ್ಲೆಂಡ್ ತಂಡಕ್ಕೆ ವಿಧ್ವಂಸಕವಾಗಿ ಕಾಡಿದರು. ಇದು ಏಕದಿನದಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್ ಅತ್ಯಂತ ಕಡಿಮೆ ಮೊತ್ತಕ್ಕೆ (110) ಕುಸಿಯಿತು. ಉಳಿದ ವೇಗಿಗಳು ಜಸ್ಪ್ರೀತ್ ಬುಮ್ರಾ ಸಾಥ್ ನೀಡಿದರು. ಮೊಹಮ್ಮದ್ ಶಮಿ ಮೂರು ವಿಕೆಟ್‌ಗಳನ್ನು ಪಡೆದರೆ, ಕನ್ನಡಿಗ ಪ್ರಸಿದ್ಧ್ ಕೃಷ್ಣ ಒಂದು ವಿಕೆಟ್ ಪಡೆದರು.

ಇನ್ನು ಇಂಗ್ಲೆಂಡ್‌ನ ಸಾಧಾರಣ ಮೊತ್ತ ಬೆನ್ನತ್ತಿದ ಭಾರತ, ನಾಯಕ ರೋಹಿತ್ ಶರ್ಮಾ (76*) ಮತ್ತು ಶಿಖರ್ ಧವನ್ (31*) ಅಜೇಯ 114 ರನ್‌ಗಳ ಆರಂಭಿಕ ಜೊತೆಯಾಟದಿಂದ ಗೆಲುವಿನತ್ತ ಸಾಗಿತು. ಎರಡನೇ ಶ್ರೇಯಾಂಕದ ಇಂಗ್ಲೆಂಡ್ ತಂಡವನ್ನು 10 ವಿಕೆಟ್‌ಗಳು ಮತ್ತು 31 ಓವರ್‌ಗಳಿಗಿಂತ ಹೆಚ್ಚು ಬಾಕಿ ಇರುವಂತೆಯೇ ಸೋಲಿಸಿತು. ಮೂರು ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ 1-0 ಮುನ್ನಡೆ ಸಾಧಿಸಿದರು.

108 ರೇಟಿಂಗ್ ಪಾಯಿಂಟ್‌ ಹೊಂದಿರುವ ಭಾರತ ಮೂರನೇ ಸ್ಥಾನ

108 ರೇಟಿಂಗ್ ಪಾಯಿಂಟ್‌ ಹೊಂದಿರುವ ಭಾರತ ಮೂರನೇ ಸ್ಥಾನ

126 ರೇಟಿಂಗ್ ಅಂಕಗಳೊಂದಿಗೆ ನ್ಯೂಜಿಲೆಂಡ್ ತಂಡ ಅಗ್ರಸ್ಥಾನದಲ್ಲಿದ್ದರೆ, ಇಂಗ್ಲೆಂಡ್ ತಂಡ 122 ರೇಟಿಂಗ್ ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. 108 ರೇಟಿಂಗ್ ಪಾಯಿಂಟ್‌ ಹೊಂದಿರುವ ಭಾರತ ಮೂರನೇ ಸ್ಥಾನ ಮತ್ತು 106 ರೇಟಿಂಗ್ ಪಾಯಿಂಟ್‌ ಹೊಂದಿರುವ ಪಾಕಿಸ್ತಾನ ನಾಲ್ಕನೇ ಸ್ಥಾನದಲ್ಲಿದೆ.

ಪಾಕಿಸ್ತಾನವು ಮುಂದಿನ ಏಕದಿನ ಪಂದ್ಯಗಳನ್ನು ಆಡುವ ಮೊದಲು ಭಾರತ ತನ್ನ ಮುನ್ನಡೆಯನ್ನು ಇನ್ನಷ್ಟು ವಿಸ್ತರಿಸಬಹುದು. ಇಂಗ್ಲೆಂಡ್ ವಿರುದ್ಧ ಉಳಿದಿರುವ ಎರಡುಏಕದಿನ ಪಂದ್ಯಗಳನ್ನು ಗೆದ್ದು ಮತ್ತು ಈ ತಿಂಗಳ ಕೊನೆಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಸರಣಿ ಗೆದ್ದರೆ ಇನ್ನೂ ಉತ್ತಮ ಅಂಕ ಗಳಿಸಬಹುದು. ವ್ಯತಿರಿಕ್ತವಾಗಿ ಇಂಗ್ಲೆಂಡ್ ವಿರುದ್ಧದ ಸರಣಿಯ ಅಂತಿಮ ಎರಡು ಪಂದ್ಯಗಳಲ್ಲಿ ಸೋತರೆ, ಭಾರತವು ಮತ್ತೆ ಪಾಕಿಸ್ತಾನಕ್ಕಿಂತ ಕಡಿಮೆ ಸ್ಥಾನ ಅಥವಾ ನಾಲ್ಕನೇ ಸ್ಥಾನಕ್ಕೆ ಕುಸಿಯಬಹುದು.

ಐಸಿಸಿ ಏಕದಿನ ರ್‍ಯಾಂಕಿಂಗ್ ಇಲ್ಲಿದೆ

ಐಸಿಸಿ ಏಕದಿನ ರ್‍ಯಾಂಕಿಂಗ್ ಇಲ್ಲಿದೆ

ಪಾಕಿಸ್ತಾನದ ಮುಂದಿನ ಏಕದಿನ ಸರಣಿಯು ಆಗಸ್ಟ್ ತಿಂಗಳು ನೆದರ್‌ಲ್ಯಾಂಡ್‌ನ ವಿರುದ್ಧ ರೋಟರ್‌ಡ್ಯಾಮ್‌ನಲ್ಲಿ ನಡೆಯಲಿದೆ. ಬಾಬರ್ ಅಜಮ್ ನಾಯಕತ್ವದ ತಂಡವು ಐದು ದಿನಗಳ ಅವಧಿಯಲ್ಲಿ ಮೂರು 50-ಓವರ್‌ಗಳ ಪಂದ್ಯಗಳನ್ನು ಆಡಲು ನಿರ್ಧರಿಸಿದೆ.

1. ನ್ಯೂಜಿಲೆಂಡ್ - 126

2. ಇಂಗ್ಲೆಂಡ್ - 122

3. ಭಾರತ - 108

4. ಪಾಕಿಸ್ತಾನ - 106

5. ಆಸ್ಟ್ರೇಲಿಯಾ - 101

6. ದಕ್ಷಿಣ ಆಫ್ರಿಕಾ - 99

7. ಬಾಂಗ್ಲಾದೇಶ - 96

8. ಶ್ರೀಲಂಕಾ - 92

9. ವೆಸ್ಟ್ ಇಂಡೀಸ್ - 71

10. ಅಫ್ಘಾನಿಸ್ತಾನ - 69

ಸ್ಟುವರ್ಟ್ ಬಿನ್ನಿ ಬಾಂಗ್ಲಾದೇಶ ವಿರುದ್ಧ 4 ರನ್‌ಗಳಿಗೆ 6 ವಿಕೆಟ್

ಸ್ಟುವರ್ಟ್ ಬಿನ್ನಿ ಬಾಂಗ್ಲಾದೇಶ ವಿರುದ್ಧ 4 ರನ್‌ಗಳಿಗೆ 6 ವಿಕೆಟ್

ಇಂಗ್ಲೆಂಡ್ ವಿರುದ್ಧ ಜಸ್ಪ್ರೀತ್ ಬುಮ್ರಾ ಅವರ 6/19 ಈಗ ಭಾರತೀಯರ ಮೂರನೇ ಅತ್ಯುತ್ತಮ ಏಕದಿನ ಅಂಕಿಅಂಶವಾಗಿದೆ. ಇದಕ್ಕೂ ಮುನ್ನ ಸ್ಟುವರ್ಟ್ ಬಿನ್ನಿ 2014ರಲ್ಲಿ ಬಾಂಗ್ಲಾದೇಶ ವಿರುದ್ಧ 4 ರನ್‌ಗಳಿಗೆ 6 ವಿಕೆಟ್ ಕಬಳಿಸಿದ್ದರು ಮತ್ತು 1993ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 12 ರನ್‌ಗಳಿಗೆ 6 ವಿಕೆಟ್ ಪಡೆದು ಅನಿಲ್ ಕುಂಬ್ಳೆ ಸಾಧನೆ ಮಾಡಿದ್ದರು.

ಇದೇ ವೇಳೆ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ತಮ್ಮ ಹೆಸರನ್ನು ದಾಖಲೆ ಪುಸ್ತಕಗಳಲ್ಲಿ ಬರೆದಿದರು. ಏಕೆಂದರೆ ಅವರು ಏಕದಿನ ಇತಿಹಾಸದಲ್ಲಿ 5000 ರನ್‌ಗಳನ್ನು ಒಟ್ಟಿಗೆ ದಾಟಿದ ನಾಲ್ಕನೇ ಆರಂಭಿಕ ಜೋಡಿಯಾದರು.

ಈ ಜೋಡಿ ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ನಂತರ ಏಕದಿನದಲ್ಲಿ 5000 ರನ್‌ಗಳನ್ನು ದಾಟಿದ ಎರಡನೇ ಭಾರತೀಯ ಆರಂಭಿಕ ಜೋಡಿಯಾಗಿದ್ದಾರೆ. 1996-2007ರ ನಡುವೆ ಇನ್ನಿಂಗ್ಸ್ ಆರಂಭಿಸಿದ್ದ ಸಚಿನ್ ಮತ್ತು ಗಂಗೂಲಿ ಜೊತೆಯಾಗಿ 6609 ರನ್ ಗಳಿಸಿದ್ದಾರೆ.

Story first published: Wednesday, July 13, 2022, 12:08 [IST]
Other articles published on Jul 13, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X