ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ICC ODI Rankings: ವಿಶ್ವಕಪ್‌ ಮುಗಿದ ನಂತರ ಆದ ಬದಲಾವಣೆಗಳೇನು?

ICC ODI Rankings: Virat Kohli, Jasprit Bumrah retain top spots

ದುಬೈ, ಜುಲೈ 16: ಕಳೆದ ಒಂದೂವರೆ ತಿಂಗಳುಕಾಲ ಕ್ರಿಕೆಟ್‌ ಅಭಿಮಾನಿಗಳಿಗೆ ರೋಚಕ ಪಂದ್ಯಗಳ ರಸದೌತಣ ಬಡಿಸಿದ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ 12ನೇ ಆವೃತ್ತಿಯು ಇದೇ ಭಾನುವಾರ ಅತ್ಯಂತ ರೋಚಕ ರೀತಿಯಲ್ಲಿ ಅಂತ್ಯಗೊಂಡು ಆತಿಥೇಯ ಇಂಗ್ಲೆಂಡ್‌ ತಂಡ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ವಿಶ್ವಕಪ್‌ ಮುಗಿದ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ತನ್ನ ನೂತನ ಶ್ರೇಯಾಂಕ ಪಟ್ಟಿಗಳನ್ನು ಬಿಡುಗಡೆ ಮಾಡಿದ್ದು, ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಮತ್ತು ವೇಗದ ಬೌಲರ್‌ ಜಸ್‌ಪ್ರೀತ್‌ ಬುಮ್ರಾ ಕ್ರಮವಾಗಿ ಒಡಿಐ ಬ್ಯಾಟ್ಸ್‌ಮನ್‌ ಮತ್ತು ಬೌಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

ಇಂಗ್ಲೆಂಡ್‌ ವಿರುದ್ಧ ನ್ಯೂಜಿಲೆಂಡ್‌ ಸೋಲಿಗೆ ಅಂಪೈರ್‌ ಪ್ರಮಾದ ಕಾರಣ?ಇಂಗ್ಲೆಂಡ್‌ ವಿರುದ್ಧ ನ್ಯೂಜಿಲೆಂಡ್‌ ಸೋಲಿಗೆ ಅಂಪೈರ್‌ ಪ್ರಮಾದ ಕಾರಣ?

ಬ್ಯಾಟ್ಸ್‌ಮನ್‌ಗಳ ಪೈಕಿ ವಿಶ್ವಕಪ್‌ ಟೂರ್ನಿಯಲ್ಲಿ ಸತತ 5 ಅರ್ಧಶತಕ ದಾಖಲಿಸಿ ಗಮನ ಸೆಳೆದಿದ್ದ ಕಿಂಗ್‌ ಕೊಹ್ಲಿ ಒಟ್ಟಾರೆ 886 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರಿದರೆ, ಟೂರ್ನಿಯಲ್ಲಿ 5 ಶತಕ ಸಿಡಿಸಿ ವಿಶ್ವ ದಾಖಲೆ ಬರೆದ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ (881) ದ್ವಿತೀಯ ಸ್ಥಾನದಲ್ಲಿ ಉಳಿದಿದ್ದಾರೆ.

ಪಾಕಿಸ್ತಾನದ ಯುವ ಪ್ರತಿಭೆ ಬಾಬರ್‌ ಆಝಮ್‌ ತಮ್ಮ ವೃತ್ತಿ ಬದುಕಿನ ಶ್ರೇಷ್ಠ ಸಾಧನೆಯಾಗಿ 827 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾ ತಂಡದ ನಾಯಕ ಫಾಫ್‌ ಡು'ಪ್ಲೆಸಿಸ್‌ (820) ಮತ್ತು ನ್ಯೂಜಿಲೆಂಡ್‌ನ ಅನುಭವಿ ಬ್ಯಾಟ್ಸ್‌ಮನ್‌ ರಾಸ್‌ ಟೇಲರ್‌ (817) ಕ್ರಮವಾಗಿ 4 ಮತ್ತು 5ನೇ ಸ್ಥಾನ ಪಡೆದು ಅಗ್ರ ಐದರ ಪಟ್ಟಿಯಲ್ಲಿದ್ದಾರೆ.

ವಿಶ್ವಕಪ್‌: ಮೈಖೇಲ್‌ ಕನಸಿನ ತಂಡದಲ್ಲಿ ಯಾರೆಲ್ಲಾ ಇದ್ದಾರೆ?

ಇನ್ನು ಬೌಲರ್‌ಗಳ ಪಟ್ಟಿಯಲ್ಲಿ 809 ಅಂಕಗಳೊಂದಿಗೆ ಜಸ್‌ಪ್ರೀತ್‌ ಬುಮ್ರಾ ತಮ್ಮ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಈ ಮೂಲಕ ದ್ವಿತೀಯ ಸ್ಥಾನದಲ್ಲಿರುವ ನ್ಯೂಜಿಲೆಂಡ್‌ನ ವೇಗಿ ಟ್ರೆಂಟ್‌ ಬೌಲ್ಟ್‌ ಅವರಿಗಿಂತಲೂ ಒಟ್ಟು 69 ಅಂಕಗಳ ಮುನ್ನಡೆಯನ್ನೂ ಕಾಯ್ದುಕೊಂಡಿದ್ದಾರೆ.ದಕ್ಷಿಣ ಆಫ್ರಿಕಾದ ವೇಗಿ ಕಗಿಸೊ ರಬಾಡ (694) ಮತ್ತು ಆಸ್ಟ್ರೇಲಿಯಾದ ಪ್ಯಾಟ್‌ ಕಮಿನ್ಸ್‌ (693) ನಂತರದ ಸ್ಥಾನಗಳಲ್ಲಿದ್ದಾರೆ.

ಇನ್ನು ತಂಡಗಳ ಪೈಕಿ ನೂತನ ವಿಶ್ವ ಚಾಂಪಿಯನ್ಸ್‌ ಇಂಗ್ಲೆಂಡ್‌ ಒಟ್ಟು 125 ಅಂಕಗಳೊಂದಿಗೆ ಅಗ್ರಸ್ಥಾನ ಉಳಿಸಿಕೊಂಡಿದೆ. ವಿಶ್ವಕಪ್‌ನಲ್ಲಿ ಆಡಿದ 10 ಪಂದ್ಯಗಳಲ್ಲಿ ಕೇವಲ ಎರಡು ಪಂದ್ಯವನ್ನಷ್ಟೇ ಸೋತ ಭಾರತ ತಂಡ ಈ ಪಟ್ಟಿಯಲ್ಲಿ ಎರಡನೇ ಸ್ಥಾನ ಹೊಂದಿದೆ. ಫೈನಲ್‌ ಪಂದ್ಯದಲ್ಲಿ ಸೂಪರ್‌ ಓವರರನಲ್ಲೂ ಸಮಬಲ ಸಾಧಿಸಿದ ನ್ಯೂಜಿಲೆಂಡ್‌ ತಂಡ ಒಟ್ಟಾರೆ 112 ಅಂಕಗಳೊಂದಿಗೆ ಅಗ್ರ ಮೂರರಲ್ಲಿ ಸ್ಥಾನ ಗಿಟ್ಟಿಸಿದೆ.

ಕ್ರೀಡೆಗಿಂತಲೂ ಬೇಕರಿ ಕೆಲಸವೇ ಉತ್ತಮ ಎಂದ ನ್ಯೂಜಿಲೆಂಡ್‌ ಆಟಗಾರ!ಕ್ರೀಡೆಗಿಂತಲೂ ಬೇಕರಿ ಕೆಲಸವೇ ಉತ್ತಮ ಎಂದ ನ್ಯೂಜಿಲೆಂಡ್‌ ಆಟಗಾರ!

ಇನ್ನು ಆಲ್‌ರೌಂಡರ್‌ಗಳ ಪೈಕಿ ಬಾಂಗ್ಲಾದೇಶ ತಂಡದ ತಾರೆ ಶಾಕಿಬ್‌ ಅಲ್‌ ಹಸನ್‌ (406) ಅಗ್ರಸ್ಥಾನದಲ್ಲಿದ್ದಾರೆ. ವಿಶ್ವಕಪ್‌ನಲ್ಲಿ ಮಿಂಚಿದ ಶಾಕಿಬ್‌ 600+ ರನ್‌ಗಳು ಮತ್ತು 12 ವಿಕೆಟ್‌ಗಳನ್ನೂ ಪಡೆದು ತಾವು ವಿಶ್ವ ಶ್ರೇಷ್ಠ ಆಲ್‌ರೌಂಡರ್‌ ಎಂಬುದನ್ನು ಸಾರಿ ಹೇಳಿದ್ದರು. ವಿಶ್ವಕಪ್‌ ಫೈನಲ್‌ ಪಂದ್ಯದ ಪಂದ್ಯ ಶ್ರೇಷ್ಠ ಆಟಗಾರ ಬೆನ್‌ ಸ್ಟೋಕ್ಸ್‌ (319) ದ್ವಿತೀಯ ಮತ್ತು ಅಫಘಾನಿಸ್ತಾನದ ಮೊಹಮ್ಮದ್‌ ನವಿ (310) ನಂತರದ ಸ್ಥಾನಗಳನ್ನು ಅಲಂಕರಿಸಿದ್ದಾರೆ.

Story first published: Tuesday, July 16, 2019, 13:25 [IST]
Other articles published on Jul 16, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X