ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯ ಮುಂದೂಡಿದ ಐಸಿಸಿ

ICC postpones World Test Championship, to be played from June 18-22

ಲಂಡನ್: ಇಂಗ್ಲೆಂಡ್‌ನ ಲಾರ್ಡ್ಸ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಜೂನ್ 10ರಿಂದ 14ರ ವರೆಗೆ ನಡೆಯಲಿದ್ದ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಆರಂಭಿಕ ಆವೃತ್ತಿಯ ಫೈನಲ್‌ ಪಂದ್ಯವನ್ನು ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಜೂನ್ 18ರಿಂದ 22ರ ವರೆಗೆ ಮುಂದೂಡಲು ನಿರ್ಧರಿಸಿದೆ. ಆದರೆ ಲಾರ್ಡ್ಸ್ ಮೈದಾನದಲ್ಲೇ ಪಂದ್ಯ ನಡೆಯಲಿದೆ.

ICC ODI ranking: ಅಗ್ರ ಸ್ಥಾನದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾICC ODI ranking: ಅಗ್ರ ಸ್ಥಾನದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ

ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) 14ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಅನ್ನು ಏಪ್ರಿಲ್ ಮತ್ತು ಮೇಯಲ್ಲಿ ಆಯೋಜಿಸುತ್ತಿರುವುದರಿಂದ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ ಅನ್ನು ಮುಂದೂಡಲು ಕ್ರಿಕೆಟ್ ಮಂಡಳಿ ನಿರ್ಧರಿಸಿದೆ.

ಐಪಿಎಲ್‌ 2021ರಲ್ಲಿ ಪಾಲ್ಗೊಂಡ ಬಳಿಕ ಪ್ರತಿಷ್ಠಿತ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ ಪಂದ್ಯಕ್ಕಾಗಿ ಸಿದ್ಧತೆ ನಡೆಸಲು ಅಂತಾರಾಷ್ಟ್ರೀಯ ತಂಡಗಳಿಗೆ ಕೊಂಚ ಬಿಡುವು ಸಿಗುವುದರಿಂದ ಐಸಿಸಿ ಫೈನಲ್‌ ಪಂದ್ಯವನ್ನು ಮುಂದೂಡಿದೆ ಎನ್ನಲಾಗಿದೆ. ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ ಪಾಯಿಂಟ್‌ ಟೇಬಲ್‌ನಲ್ಲಿ ಸದ್ಯ ಭಾರತ ಮತ್ತು ನ್ಯೂಜಿಲೆಂಡ್ ಅಗ್ರ ಸ್ಥಾನದಲ್ಲಿದೆ.

'ರೋಹಿತ್ ಶರ್ಮಾ ಜೊತೆಗೆ ಶುಬ್ಮನ್ ಗಿಲ್ ಓಪನ್ ಮಾಡ್ಬೇಕು''ರೋಹಿತ್ ಶರ್ಮಾ ಜೊತೆಗೆ ಶುಬ್ಮನ್ ಗಿಲ್ ಓಪನ್ ಮಾಡ್ಬೇಕು'

ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಸ್ಥಾನದಲ್ಲಿರುವ ಭಾರತ 430 ಪಾಯಿಂಟ್ಸ್ ಕಲೆ ಹಾಕಿದ್ದರೆ, ದ್ವಿತೀಯ ಸ್ಥಾನಿ ನ್ಯೂಜಿಲೆಂಡ್ 420 ಪಾಯಿಂಟ್ಸ್‌ ಗಳಿಸಿದೆ. 3ನೇ ಸ್ಥಾನದಲ್ಲಿ ಆಸ್ಟ್ರೇಲಿಯಾ, ನಾಲ್ಕನೇ ಸ್ಥಾನದಲ್ಲಿ ಇಂಗ್ಲೆಂಡ್ ಮತ್ತು ಐದನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ ತಂಡಗಳಿವೆ.

Story first published: Thursday, January 28, 2021, 9:32 [IST]
Other articles published on Jan 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X