ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

T20 Ranking: ಪಾಕ್‌ನಿಂದ ನಂ.1 ಸ್ಥಾನ ಕಸಿದು ದಾಖಲೆ ಬರೆದ ಆಸೀಸ್!

ICC rankings: Australia become top T20I team for the first time

ಸಿಡ್ನಿ, ಮೇ 1: ಐಸಿಸಿ ಪುರುಷರ ವಿಶ್ವ ರ್ಯಾಂಕಿಂಗ್‌ನಲ್ಲಿ ಮಹತ್ವದ ಬದಲಾವಣೆಗಳಾಗಿವೆ. ಮುಖ್ಯವಾಗಿ ಟಿ20ಐ ರ್ಯಾಂಕಿಂಗ್‌ನಲ್ಲಿ ಗಮನಾರ್ಹ ಏರಿಳಿತಗಳಾಗಿವೆ. ಟಿ20 ವಿಶ್ವ ರ್ಯಾಂಕಿಗ್‌ನಲ್ಲಿ ಪಾಕಿಸ್ತಾನದಿಂದ ನಂ.1 ಸ್ಥಾನ ಕಸಿದುಕೊಂಡಿರುವ ಆಸ್ಟ್ರೇಲಿಯಾ, ಚೊಚ್ಚಲ ಬಾರಿಗೆ ಅಗ್ರ ಸ್ಥಾನದಲ್ಲಿ ಮಿನುಗಿದೆ. ಹಾಗಂತ ಪಾಕ್‌ ಈಗ ದ್ವಿತೀಯ ಸ್ಥಾನದಲ್ಲೂ ಇಲ್ಲ, ಆದರೆ ಅಂತಾರಾಷ್ಟ್ರೀಯ ಟಿ20ಯಲ್ಲಿ ಹೆಚ್ಚುಕಾಲ ನಂ.1 ಸ್ಥಾನದಲ್ಲಿ ಉಳಿದ ತಂಡವಾಗಿ ಪಾಕಿಸ್ತಾನ ಗುರುತಿಸಿಕೊಂಡಿದೆ.

ಆತನಂತಾ ನಾಯಕನಿಂದ ಮಾತ್ರ ತಂಡ ಚಾಂಪಿಯನ್ ಆಗಲು ಸಾಧ್ಯ: ಯೂಸುಫ್ ಪಠಾಣ್ಆತನಂತಾ ನಾಯಕನಿಂದ ಮಾತ್ರ ತಂಡ ಚಾಂಪಿಯನ್ ಆಗಲು ಸಾಧ್ಯ: ಯೂಸುಫ್ ಪಠಾಣ್

ಇದೇ ಮೊದಲ ಬಾರಿಗೆ ಅಗ್ರ ಶ್ರೇಯಾಂಕಕ್ಕೆ ಏರಿದ ಖುಷಿಯಲ್ಲಿ ಸದ್ಯ ಕಾಂಗರೂ ಬಳಗದ್ದು. ಅಂದರೆ ಟಿ20ಐ ರ್ಯಾಂಕಿಂಗ್ ಪರಿಚಯಿಸಲಾದ 2011ರಿಂದಲೂ ಈ ಮೊದಲು ಒಮ್ಮೆಯೂ ಆಸ್ಟ್ರೇಲಿಯಾ ನಂ.1 ಸ್ಥಾನಕ್ಕೆ ಜಿಗಿದಿರಲಿಲ್ಲ.

ಮೂರನೇ ಬಾರಿಗೆ ನ್ಯೂಜಿಲಂಡ್‌ನ ಅತ್ಯುನ್ನತ ಕ್ರಿಕೆಟ್ ಪ್ರಶಸ್ತಿ ಪಡೆದ ರಾಸ್ ಟೇಯ್ಲರ್ಮೂರನೇ ಬಾರಿಗೆ ನ್ಯೂಜಿಲಂಡ್‌ನ ಅತ್ಯುನ್ನತ ಕ್ರಿಕೆಟ್ ಪ್ರಶಸ್ತಿ ಪಡೆದ ರಾಸ್ ಟೇಯ್ಲರ್

ಟಿ20 ವಿಶ್ವ ರ್ಯಾಂಕಿಂಗ್‌ನಲ್ಲಿ ಏರಿಳಿತ ಕಂಡಿರುವ ಪ್ರಮುಖ ತಂಡಗಳ, ಆಟಗಾರರ ಮಾಹಿತಿ ಇಲ್ಲಿದೆ. ವಿಶೇಷವೆಂದರೆ ಕನ್ನಡಿಗ ಕೆಎಲ್ ರಾಹುಲ್ ಉತ್ತಮ ಶ್ರೇಯಾಂಕದಲ್ಲಿದ್ದಾರೆ.

ಕೆಳ ಸ್ಥಾನಕ್ಕೆ ಕುಸಿದ ಪಾಕ್

ಕೆಳ ಸ್ಥಾನಕ್ಕೆ ಕುಸಿದ ಪಾಕ್

ಟಿ20ಐ ಮಾದರಿಯ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನಕ್ಕಾಗಿ ಹೆಚ್ಚು ಕಾಲ ನಂ.1 ಸ್ಥಾನದಲ್ಲೇ ಗಟ್ಟಿಯಾಗಿದ್ದ ಪಾಕಿಸ್ತಾನ ಈ ಬಾರಿ 4ನೇ ಸ್ಥಾನಕ್ಕೆ ಕುಸಿದಿದೆ.
Ranking: 1. ಆಸ್ಟ್ರೇಲಿಯಾ (278 ರೇಟಿಂಗ್ ಪಾಯಿಂಟ್), 2. ಇಂಗ್ಲೆಂಡ್ (268), 3. ಭಾರತ (266), 4. ಪಾಕಿಸ್ತಾನ (260), 5. ದಕ್ಷಿಣ ಆಫ್ರಿಕಾ (258), 6. ನ್ಯೂಜಿಲೆಂಡ್ (242), 7. ಶ್ರೀಲಂಕಾ (230), 8. ಬಾಂಗ್ಲಾದೇಶ (229), 9. ವೆಸ್ಟ್ ಇಂಡೀಸ್ (229), 10. ಅಫ್ಘಾನಿಸ್ತಾನ (228).

2ನೇ ಸ್ಥಾನದಲ್ಲಿ ಕನ್ನಡಿಗ

2ನೇ ಸ್ಥಾನದಲ್ಲಿ ಕನ್ನಡಿಗ

ಟಿ20ಐ ಬ್ಯಾಟಿಂಗ್ ರ್ಯಾಂಕಿಂಗ್‌ನಲ್ಲಿ ಪಾಕಿಸ್ತಾನದ ಬಾಬರ್ ಅಝಾಮ್ ಅಗ್ರ ಸ್ಥಾನದಲ್ಲಿದ್ದಾರೆ. ಇನ್ನು ಭಾರತದ ಆಟಗಾರ, ಕರ್ನಾಟಕದ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ದ್ವಿತೀಯ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ 10ನೇ ರ್ಯಾಂಕಿಂಗ್‌ನಲ್ಲಿದ್ದಾರೆ.
Ranking: 1. ಬಾಬರ್ ಅಝಾಮ್ (ಪಾಕಿಸ್ತಾನ, 879 ರೇಟಿಂಗ್ ಪಾಯಿಂಟ್), 2. ಕೆಎಲ್ ರಾಹುಲ್ (ಭಾರತ, 823), 3. ಆ್ಯರನ್ ಫಿಂಚ್ (ಆಸ್ಟ್ರೇಲಿಯಾ, 820), 4. ಕಾಲಿನ್ ಮುನ್ರೋ (ನ್ಯೂಜಿಲೆಂಡ್), 5. ಗ್ಲೆನ್ ಮ್ಯಾಕ್ಸ್‌ವೆಲ್ (ಆಸ್ಟ್ರೇಲಿಯಾ).

ರಶೀದ್ ಬೆಸ್ಟ್ ಬೌಲರ್

ರಶೀದ್ ಬೆಸ್ಟ್ ಬೌಲರ್

ಬೌಲಿಂಗ್ ರ್ಯಾಂಕಿಂಗ್‌ನಲ್ಲಿ ಅಫ್ಘಾನಿಸ್ತಾನದ ರಶೀದ್ ಖಾನ್ ಮೊದಲ ಶ್ರೇಯಾಂಕದಲ್ಲಿದ್ದಾರೆ. ಇಲ್ಲಿ ಟಾಪ್‌ ಟೆನ್‌ನಲ್ಲಿ ಭಾರತದ ಒಬ್ಬರೇ ಒಬ್ಬರು ಬೌಲರ್ ಇಲ್ಲ.
Ranking: 1. ರಶೀದ್ ಖಾನ್ (ಅಫ್ಘಾನಿಸ್ತಾನ್), 2. ಮುಜೀಬ್ ಉರ್ ರಹ್ಮಾನ್ (ಅಫ್ಘಾನಿಸ್ತಾನ), 3. ಆ್ಯಡಮ್ ಝಂಪಾ (ಆಸ್ಟ್ರೇಲಿಯಾ), 4. ಆ್ಯಷ್ಟನ್ ಅಗರ್ (ಆಸ್ಟ್ರೇಲಿಯಾ), 5. ತಬ್ರೇಜ್ ಶಮ್ಸಿ (ದಕ್ಷಿಣ ಆಫ್ರಿಕಾ).

ನಬಿ ನಂ.1 ಆಲ್ ರೌಂಡರ್

ನಬಿ ನಂ.1 ಆಲ್ ರೌಂಡರ್

ಆಲ್ ರೌಂಡರ್‌ಗಳ ರ್ಯಾಂಕ್ ಪಟ್ಟಿಯಲ್ಲಿ ಅಫ್ಘಾನಿಸ್ತಾನದ ಮೊಹಮ್ಮದ್ ನಬಿ ಅಗ್ರ ಸ್ಥಾನಿಗ. ಇದರಲ್ಲೂ ಟಾಪ್ ಟೆನ್‌ನಲ್ಲಿ ಒಬ್ಬರೇ ಒಬ್ಬರು ಭಾರತೀಯರಿಲ್ಲ.
Ranking: 1. ಮೊಹಮ್ಮದ್ ನಬಿ (ಅಫ್ಘಾನ್), 2. ಸೀನ್ ವಿಲಿಯಮ್ಸ್ (ಜಿಂಬಾಬ್ವೆ), 3. ಗ್ಲೆನ್ ಮ್ಯಾಕ್ಸ್‌ವೆಲ್ (ಆಸ್ಟ್ರೇಲಿಯಾ), 4. ರಿಚರ್ಡ್ ಬೆರಿಂಗ್ಟನ್ (ಸ್ಕಾಟ್ಲೆಂಡ್), 5. ಗರೆಥ್ ಡೆಲಾನಿ (ಐರ್ಲೆಂಡ್).

Story first published: Friday, May 1, 2020, 17:46 [IST]
Other articles published on May 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X