ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಗವಾಸ್ಕರ್ ದಾಖಲೆ ಮುರಿದ ಕೊಹ್ಲಿ, ಟೆಸ್ಟ್ ಶ್ರೇಯಾಂಕದಲ್ಲಿ ನಂ. 1

By Mahesh
ICC Rankings: Virat Kohli reaches top spot

ಬೆಂಗಳೂರು, ಆಗಸ್ಟ್ 05: ಭಾರತ ಹಾಗೂ ಇಂಗ್ಲೆಂಡ್ ನಡುವೆ ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ನಂತರ ಅಂತಾರಾಷ್ಟ್ರ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಆಟಗಾರರ ಶ್ರೇಯಾಂಕ ಪಟ್ಟಿಯನ್ನು ಭಾನುವಾರ(ಆಗಸ್ಟ್ 05) ದಂದು ಪ್ರಕಟಿಸಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಅಗ್ರಸ್ಥಾನಕ್ಕೇರಿ ಹೊಸ ದಾಖಲೆ ಬರೆದಿದ್ದಾರೆ.

ಏಕದಿನ ಕ್ರಿಕೆಟ್​ನ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿರುವ ವಿರಾಟ್​ ಕೊಹ್ಲಿಅವರು, ಐಸಿಸಿ ಟೆಸ್ಟ್​ ಶ್ರೇಯಾಂಕದಲ್ಲಿ ಆಸ್ಟ್ರೇಲಿಯಾದ ಸ್ಟೀವ್​ ಸ್ಮಿತ್​ ಅವರನ್ನು ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ್ದಾರೆ.

ಇಂಗ್ಲೆಂಡಲ್ಲಿ ಮೊದಲ ಶತಕ ಬಾರಿಸಿ, ಕೊಹ್ಲಿ ಮಾಡಿದ ಸಾಧನೆಗಳು ಇಂಗ್ಲೆಂಡಲ್ಲಿ ಮೊದಲ ಶತಕ ಬಾರಿಸಿ, ಕೊಹ್ಲಿ ಮಾಡಿದ ಸಾಧನೆಗಳು

ಅಂಕಗಳಿಕೆ ದಾಖಲೆ : ಕೊಹ್ಲಿ ಅವರು ಒಟ್ಟು 934 ಪಾಯಿಂಟ್​ ಕಲೆ ಹಾಕಿದ್ದು ಮೂಲಕ ಅತಿ ಹಚ್ಚು ರೇಟಿಂಗ್​ ಪಾಯಿಂಟ್​ ಪಡೆದ ಮೊದಲ ಭಾರತೀಯ ಎಂಬ ಸಾಧನೆ ಮಾಡಿದ್ದಾರೆ. ಎಜ್ ಬಾಸ್ಟನ್ ಪಂದ್ಯಕ್ಕೂ ಮುನ್ನ 903 ಅಂಕಗಳಿಸಿದ್ದ ಕೊಹ್ಲಿ ಅವರು ಗವಾಸ್ಕರ್ ಅವರಿಗಿಂತ 13 ಅಂಕ ಹಿಂದಿದ್ದರು. ಈಗ ಪಂದ್ಯದ ಮುಗಿದ ಬಳಿಕ 18 ಅಂಕ ಮುಂದಿದ್ದಾರೆ.

ಮೊದಲ ಟೆಸ್ಟ್ ಪಂದ್ಯದಲ್ಲಿ 149 ಹಾಗೂ 51ರನ್ ಗಳಿಸಿದ ಕೊಹ್ಲಿ ಒಟ್ಟಾರೆ 934 ಅಂಕಗಳಿಸಿದ್ದು, ಲಾರ್ಡ್ಸ್ ಟೆಸ್ಟ್ ನಲ್ಲಿ ಉತ್ತಮವಾಗಿ ಅಗ್ರಸ್ಥಾನವನ್ನು ಕಾಯ್ದುಕೊಳ್ಳುವ ಮೂಲಕ ಮತ್ತೊಮ್ಮೆ ದಾಖಲೆ ಬರೆಯಲು ಸಜ್ಜಾಗುತ್ತಿದ್ದಾರೆ.

ಮ್ಯಾಥ್ಯೂ ಹೇಡನ್, ಕಾಲಿಸ್, ಎಬಿ ಡಿ ವಿಲಿಯರ್ಸ್ 935 ಅಂಕಗಳಿಸಿದ್ದರು. ಡೊನಾಲ್ಡ್ ಬ್ರಾಡ್ಮನ್ 961 ಪಾಯಿಂಟ್ಸ್, ಸ್ಟೀವ್ ಸ್ಮಿತ್ 947 ಗಳಿಸಿ ಅಗ್ರಪಂಕ್ತಿಯಲ್ಲಿದ್ದಾರೆ.

ಭಾರತದಲ್ಲಿ ಕೊಹ್ಲಿ, ಸಚಿನ್ ಗಿಂತ ಧೋನಿ ಹೆಚ್ಚು ಜನಪ್ರಿಯ ಆಟಗಾರ! ಭಾರತದಲ್ಲಿ ಕೊಹ್ಲಿ, ಸಚಿನ್ ಗಿಂತ ಧೋನಿ ಹೆಚ್ಚು ಜನಪ್ರಿಯ ಆಟಗಾರ!

ಕೊಹ್ಲಿಗೂ ಮುನ್ನ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಗೌತಮ್ ಗಂಭೀರ್, ಸುನಿಲ್ ಗವಾಸ್ಕರ್,ವೀರೇಂದ್ರ ಸೆಹ್ವಾಗ್ ಹಾಗೂ ದಿಲೀಪ್ ವೆಂಗ್ ಸರ್ಕಾರ್ ಅವರು ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನ ಗಳಿಸಿದ್ದರು.

ಮೊದಲ ಟೆಸ್ಟ್​ನಲ್ಲಿ 149 ಹಾಗೂ 51 ರನ್​ಗಳಿಸಿದ ಕೊಹ್ಲಿ 31 ರೇಟಿಂಗ್​ ಪಾಯಿಂಟ್​ ಪಡೆದು 903 ಇದ್ದ ರೇಟಿಂಗ್​ ಪಾಯಿಂಟ್​ ಅನ್ನು 934ಕ್ಕೇರಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಭಾರತದ ದಂತಕತೆ ಸುನಿಲ್​ ಗವಾಸ್ಕರ್​ ಅವರು ಟೆಸ್ಟ್​ನಲ್ಲಿ 916 ಅಂಕ ಪಡೆದಿದ್ದರು.

ಮೊದಲೆರಡು ಸ್ಥಾನದಲ್ಲಿ ಆಸ್ಟ್ರೇಲಿಯಾದ ಬ್ರಾಡ್ಮನ್​(961), ಸ್ಟಿವ್​ ಸ್ಮಿತ್​(947) ಇದ್ದಾರೆ. ಕೊಹ್ಲಿ ಇನ್ನು ಇಂಗ್ಲೆಂಡ್​ನಲ್ಲಿ 4 ಟೆಸ್ಟ್​ ಆಡಲಿದ್ದು ಉತ್ತಮ ಪ್ರದರ್ಶನ ನೀಡಿದಲ್ಲಿ ಅತಿ ಹೆಚ್ಚು ಟೆಸ್ಟ್​ ಬ್ಯಾಟಿಂಗ್​ ರೇಟಿಂಗ್​ ಪಾಯಿಂಟ್​ ಗಳಿಸಿದ ಆಟಗಾರರಾಗುವ ಸುವರ್ಣ ಅವಕಾಶವಿದೆ.

ಇನ್ನು ಕೊಹ್ಲಿ ಎಲ್ಲ ವಿಭಾಗದ ಕ್ರಿಕೆಟ್​ನಲ್ಲೂ ಅತಿಹೆಚ್ಚು ರೇಟಿಂಗ್​ ಅಂಕ ಸಂಪಾದಿಸಿದ ಭಾರತೀಯ ಆಟಗಾರರಾಗಿದ್ದಾರೆ. ಟೆಸ್ಟ್​ನಲ್ಲಿ 934, ಏಕದಿನದಲ್ಲಿ 911, ಟಿ20ಯಲ್ಲಿ 897 ಅಂಕ ಗಳಿಸಿದ್ದಾರೆ.

Story first published: Sunday, August 5, 2018, 16:57 [IST]
Other articles published on Aug 5, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X