ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2028ರ ಒಲಿಂಪಿಕ್ಸ್‌ನಲ್ಲಿ 6 ತಂಡಗಳ ಟಿ20 ಟೂರ್ನಿಗೆ ಐಸಿಸಿ ಶಿಫಾರಸು; ಭಾರತದಲ್ಲಿ ಅಂತಿಮ ನಿರ್ಧಾರ!

ICC Recommends 6-teams T20 Tournament For 2028 Olympics; Final Decision In India

ಲಾಸ್ ಏಂಜಲೀಸ್‌ನಲ್ಲಿ ನಡೆಯಲಿರುವ 2028ರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆಯ ಬಗ್ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಇನ್ನೂ ತನ್ನ ಭರವಸೆಯನ್ನು ಮುಂದುವರೆಸಿದೆ. ಒಲಿಂಪಿಕ್ಸ್ ಕ್ರೀಡಾಕೂಟದ ಸಂಘಟನಾ ಸಮಿತಿಗೆ ಪುರುಷರು ಮತ್ತು ಮಹಿಳೆಯರ ತಲಾ ಆರು ತಂಡಗಳ ಟಿ20 ಟೂರ್ನಿಗಾಗಿ ಶಿಫಾರಸು ಮಾಡಿದೆ.

ಮಾರ್ಚ್ ವೇಳೆಗೆ ಒಲಿಂಪಿಕ್ಸ್ ಸಂಘಟಕರು ಹೊಸ ಕ್ರೀಡೆಗಳ ಪಟ್ಟಿಯನ್ನು ಅಂತಿಮಗೊಳಿಸಿದ ನಂತರ, ಅಕ್ಟೋಬರ್‌ನಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಕ್ರಿಕೆಟ್‌ ಕ್ರೀಡೆ ಸೇರ್ಪಡೆಯ ಕುರಿತು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎಂದು ಇಎಸ್‌ಪಿಎನ್ ಕ್ರಿಕ್‌ಇನ್‌ಫೋ ವರದಿ ಮಾಡಿದೆ.

ಶುಭ್ಮನ್ ಗಿಲ್‌ಗೆ ಹೊಸ ಹೆಸರು ನೀಡಿದ ಸುನಿಲ್ ಗವಾಸ್ಕರ್; ಯುವ ಬ್ಯಾಟರ್ ಪ್ರತಿಕ್ರಿಯೆ ಹೀಗಿದೆಶುಭ್ಮನ್ ಗಿಲ್‌ಗೆ ಹೊಸ ಹೆಸರು ನೀಡಿದ ಸುನಿಲ್ ಗವಾಸ್ಕರ್; ಯುವ ಬ್ಯಾಟರ್ ಪ್ರತಿಕ್ರಿಯೆ ಹೀಗಿದೆ

ಈ ವರ್ಷದ ಅಕ್ಟೋಬರ್‌ನಲ್ಲಿ ಮುಂಬೈನಲ್ಲಿ ನಡೆಯುವ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಅಧಿವೇಶನದಲ್ಲಿ ಇವುಗಳನ್ನು ಅನುಮೋದಿಸಲಾಗುವುದು ಎನ್ನಲಾಗಿದೆ.

ಕ್ರಿಕೆಟ್ ಸೇರ್ಪಡೆ ಕಾರ್ಯತಂತ್ರದ ಕ್ರಮದಲ್ಲಿ ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ನೇತೃತ್ವದ ಐಸಿಸಿಯ ಒಲಿಂಪಿಕ್ಸ್ ಕಾರ್ಯಕಾರಿ ಗ್ರೂಪ್‌ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರನ್ನು ಸೇರಿಸಲಾಗಿದೆ. ಈ ಸಮಿತಿಯಲ್ಲಿ ಸ್ವತಂತ್ರ ನಿರ್ದೇಶಕಿ ಇಂದ್ರಾ ನೂಯಿ ಮತ್ತು ಮಾಜಿ ಯುಎಸ್ಎ ಕ್ರಿಕೆಟ್ ಅಧ್ಯಕ್ಷ ಪರಾಗ್ ಮರಾಠೆ ಕೂಡ ಇದ್ದಾರೆ.

ICC Recommends 6-teams T20 Tournament For 2028 Olympics; Final Decision In India

2036ರಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸುವ ಭಾರತದ ಮಹತ್ವಾಕಾಂಕ್ಷೆಯನ್ನು ಗಮನದಲ್ಲಿಟ್ಟುಕೊಂಡು ಜಯ್ ಶಾ ಅವರನ್ನು ಐಸಿಸಿಯ ಒಲಿಂಪಿಕ್ಸ್ ಕಾರ್ಯಕಾರಿ ಗ್ರೂಪ್‌ಗೆ ಸೇರಿಸಲಾಗಿದೆ.

"ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರ ಒಳಗೊಳ್ಳುವಿಕೆಯಿಂದ ಕ್ರೀಡೆಯ ಅತಿದೊಡ್ಡ ಜಾಗತಿಕ ಸಮಾರಂಭ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಅನ್ನು ಸೇರಿಸಲು ಐಒಸಿಯೊಂದಿಗಿನ ತನ್ನ ಮಾತುಕತೆಗಳಲ್ಲಿ ಪ್ರಭಾವ ಬೀರಲಿದ್ದಾರೆ ಎಂದು ಐಸಿಸಿ ನಂಬಿದೆ," ಎಂದು ಇಎಸ್‌ಪಿಎನ್ ಕ್ರಿಕ್‌ಇನ್‌ಫೋ ವರದಿ ಹೇಳಿದೆ.

ಆಪ್ತ ಸ್ನೇಹಿತನಿಂದಲೇ ಭಾರೀ ಮೊತ್ತದ ವಂಚನೆಗೊಳಗಾದ ಭಾರತ ತಂಡದ ವೇಗಿ ಉಮೇಶ್ ಯಾದವ್ಆಪ್ತ ಸ್ನೇಹಿತನಿಂದಲೇ ಭಾರೀ ಮೊತ್ತದ ವಂಚನೆಗೊಳಗಾದ ಭಾರತ ತಂಡದ ವೇಗಿ ಉಮೇಶ್ ಯಾದವ್

ಅತಿ ಹೆಚ್ಚು ವೆಚ್ಚದಾಯಕ ಲಾಸ್ ಏಂಜಲೀಸ್‌ 2028ರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಜೊತೆಗೆ ಬೇಸ್‌ಬಾಲ್/ಸಾಫ್ಟ್‌ಬಾಲ್, ಫ್ಲ್ಯಾಗ್ ಫುಟ್‌ಬಾಲ್, ಲ್ಯಾಕ್ರೋಸ್, ಬ್ರೇಕ್ ಡ್ಯಾನ್ಸಿಂಗ್, ಕರಾಟೆ, ಕಿಕ್‌ಬಾಕ್ಸಿಂಗ್, ಸ್ಕ್ವಾಷ್ ಮತ್ತು ಮೋಟಾರ್‌ಸ್ಪೋರ್ಟ್ಸ್ ಸೇರ್ಪಡೆಗೆ ಸ್ಪರ್ಧೆ ನಡೆಸಿವೆ.

Story first published: Sunday, January 22, 2023, 12:16 [IST]
Other articles published on Jan 22, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X