1993ರ ಈ ದಿನ: ಶೇನ್ ವಾರ್ನ್ ಎಸೆದಿದ್ದ 'ಬಾಲ್ ಆಫ್ ದಿ ಸೆಂಚುರಿ' ಮೆಲುಕು ಹಾಕಿದ ಐಸಿಸಿ

ಶೇನ್ ವಾರ್ನ್ ಎಸೆದಿದ್ದ ಬಾಲ್ ಆಫ್ ದಿ ಸೆಂಚುರಿಯನ್ನು ಸ್ಮರಿಸಿದ ICC | #Cricket | OneIndia Kannada

ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಶನಿವಾರ ಆಸ್ಟ್ರೇಲಿಯನ್ ಕ್ರಿಕೆಟ್ ದಂತಕಥೆ ಶೇನ್ ವಾರ್ನ್ ಅವರ 1993ರ ಅತ್ಯಂತ ಅಪ್ರತಿಮ "ಶತಮಾನದ ಬಾಲ್'ನ ನೆನಪುಗಳನ್ನು ಮೆಲುಕು ಹಾಕಿದೆ.

ದಿವಂಗತ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಮ್ಯಾಂಚೆಸ್ಟರ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಆಶಸ್ ಸರಣಿಯ ಮೊದಲ ಟೆಸ್ಟ್‌ನಲ್ಲಿ ಈ ಸಾಧನೆ ಮಾಡಿದರು. ಅಂದು 23 ವರ್ಷದ ಶೇನ್ ವಾರ್ನ್ ಅವರ ನಿರ್ದಿಷ್ಟ ಚೆಂಡು ಎಲ್ಲಾ ಕ್ರಿಕೆಟ್ ಅಭಿಮಾನಿಗಳನ್ನು ದಂಗುಬಡಿಸಿತ್ತು.

ಶೇನ್ ವಾರ್ನ್ ಎಸೆದ ಚೆಂಡು ಲೆಗ್ ಆಫ್ ವೈಡ್ ಆಗಿ ಬಿತ್ತು, ಆದರೆ ಅದು ನಂತರ ತುಂಬಾ ಟರ್ನ್ ಆಗಿ ಇಂಗ್ಲೆಂಡ್‌ನ ಬ್ಯಾಟ್ಸ್‌ಮನ್ ಮೈಕ್ ಗ್ಯಾಟಿಂಗ್ ಅವರ ಆಫ್ ಸ್ಟಂಪ್ ಮೇಲೆ ಎಗರಿ ಹೋಯಿತು. ಬ್ಯಾಟರ್ ಮೈಕ್ ಗ್ಯಾಟಿಂಗ್ ಸಹ ಒಂದು ಕ್ಷಣ ಆಶ್ಚರ್ಯಕ್ಕೆ ಒಳಗಾದರು ಮತ್ತು ವಿಕೆಟ್ ಉರುಳಿದ ನಂಬಿಕೆಯಿಲ್ಲದೆ ಕ್ರೀಸ್‌ನಲ್ಲಿ ನಿಂತರು. ಅವರಿಗೆ ನಿಜವಾಗಿ ಏನಾಯಿತು ಎಂಬುದನ್ನು ತಿಳಿದುಕೊಳ್ಳಲು ಒಂದೆರಡು ನಿಮಿಷಗಳು ಬೇಕಾಯಿತು.

ಶೇನ್‌ ವಾರ್ನ್‌ಗೆ ಗೌರವ: ENG vs NZ ಟೆಸ್ಟ್‌ನ 23ನೇ ಓವರ್‌ನಲ್ಲಿ 23 ಸೆಕೆಂಡ್‌ಗಳ ಕಾಲ ಪಂದ್ಯಕ್ಕೆ ವಿರಾಮಶೇನ್‌ ವಾರ್ನ್‌ಗೆ ಗೌರವ: ENG vs NZ ಟೆಸ್ಟ್‌ನ 23ನೇ ಓವರ್‌ನಲ್ಲಿ 23 ಸೆಕೆಂಡ್‌ಗಳ ಕಾಲ ಪಂದ್ಯಕ್ಕೆ ವಿರಾಮ

ಮೈಕ್ ಗ್ಯಾಟಿಂಗ್ ಅಷ್ಟೇ ಅಲ್ಲದೇ ಆಸ್ಟ್ರೇಲಿಯದ ಆಟಗಾರರು ಈ ಬೌಲಿಂಗ್ ನೋಡಿ ನಿಬ್ಬೆರಗಾದರು. ಟ್ವಿಟರ್‌ನಲ್ಲಿ, ಐಸಿಸಿ ಅಮೂಲ್ಯ ಕ್ಷಣದ ಕೆಲವು ಚಿತ್ರಗಳನ್ನು ಹಂಚಿಕೊಂಡಿದೆ ಮತ್ತು '1993 ರಲ್ಲಿ ಈ ದಿನ, ಶೇನ್ ವಾರ್ನ್ ಅವರ 'ಶತಮಾನದ ಬಾಲ್'ಗೆ ಜಗತ್ತು ಸಾಕ್ಷಿಯಾಯಿತು,' ಎಂದು ಬರೆದುಕೊಂಡಿದೆ.

ಇಂಗ್ಲೆಂಡ್ ವಿರುದ್ಧದ ಆಶಷ್ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 289 ರನ್ ಗಳಿಸಿತ್ತು ಮತ್ತು ಶೇನ್ ವಾರ್ನ್ ಅವರು ತಮಾನದ ಬಾಲ್‌ಗೆ ಮೈಕ್ ಗ್ಯಾಟಿಂಗ್ ಅವರನ್ನು ಔಟ್ ಮಾಡಿದಾಗ ಆತಿಥೇಯ ಇಂಗ್ಲೆಂಡ್ ಇನ್ನಿಂಗ್ಸ್‌ ಆಡುತ್ತಿತ್ತು.

ಲೆಗ್-ಸ್ಪಿನ್ನರ್ ಶೇನ್ ವಾರ್ನ್ ಮೊದಲ ಇನ್ನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್‌ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಇನ್ನೊಂದು ನಾಲ್ಕು ವಿಕೆಟ್‌ ಕಬಳಿಸಿದರು. ಹೀಗಾಗಿ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾಕ್ಕೆ 179 ರನ್‌ಗಳ ಜಯವನ್ನು ಒದಗಿಸಿದರು. ಸ್ಪಿನ್ ದಂತಕಥೆ ವಾರ್ನ್ 2022ರ ಮಾರ್ಚ್ 4ರಂದು ಥೈಲ್ಯಾಂಡ್‌ನಲ್ಲಿ ಶಂಕಿತ ಹೃದಯಾಘಾತದಿಂದ ದುರಂತವಾಗಿ ನಿಧನರಾದರು.

ಶೇನ್ ವಾರ್ನ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಪ್ರಭಾವಿ ಕ್ರಿಕೆಟಿಗರಲ್ಲಿ ಒಬ್ಬರು. ಅವರು 1990ರ ದಶಕದ ಆರಂಭದಲ್ಲಿ ಅಂತರಾಷ್ಟ್ರೀಯ ಸರಣಿಗಳಲ್ಲಿ ಆಡಲಿಳಿದಾಗ ಲೆಗ್-ಸ್ಪಿನ್ ಕಲೆಯನ್ನು ಬಹುತೇಕ ಏಕಾಂಗಿಯಾಗಿ ಮರುಶೋಧಿಸಿದರು ಮತ್ತು 2007ರಲ್ಲಿ ಅವರು ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ಹೊತ್ತಿಗೆ ಅವರು 700 ಟೆಸ್ಟ್ ವಿಕೆಟ್‌ಗಳನ್ನು ತಲುಪಿದ ಮೊದಲ ಬೌಲರ್ ಆಗಿದ್ದರು.

ಶೇನ್ ವಾರ್ನ್ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನವನ್ನು 708 ಟೆಸ್ಟ್ ವಿಕೆಟ್‌ ಮತ್ತು ಏಕದಿನ ಅಂತರಾಷ್ಟ್ರೀಯ ಪಂದ್ಯಗಳಲ್ಲಿ 293 ವಿಕೆಟ್‌ಗಳೊಂದಿಗೆ ಮುಗಿಸಿದರು. ಸಾರ್ವಕಾಲಿಕ ಅಂತರಾಷ್ಟ್ರೀಯ ವಿಕೆಟ್-ಟೇಕರ್‌ಗಳ ಪಟ್ಟಿಯಲ್ಲಿ ಅವರ ಆಪ್ತ ಸ್ನೇಹಿತ ಮತ್ತು ಪ್ರತಿಸ್ಪರ್ಧಿ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ (1,347) ನಂತರದ ಎರಡನೇ ಸ್ಥಾನ ಪಡೆದರು. ಶೇನ್ ವಾರ್ನ್ 11 ಏಕದಿನ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಆಸ್ಟ್ರೇಲಿಯದ ನಾಯಕತ್ವವನ್ನು ವಹಿಸಿದ್ದರು, 10ರಲ್ಲಿ ಗೆದ್ದರು ಮತ್ತು ಕೇವಲ ಒಮ್ಮೆ ಸೋತರು.

For Quick Alerts
ALLOW NOTIFICATIONS
For Daily Alerts
Story first published: Saturday, June 4, 2022, 11:34 [IST]
Other articles published on Jun 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X