ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅನುಚಿತ ವರ್ತನೆ: ವಿರಾಟ್‌ ಕೊಹ್ಲಿಗೆ ನಕಾರಾತ್ಮಕ ಅಂಕ ನೀಡಿದ ಐಸಿಸಿ!

ICC reprimands Virat Kohli for inappropriate physical contact

ಬೆಂಗಳೂರು, ಸೆಪ್ಟೆಂಬರ್ 23: ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ವೇಳೆ ಅಸಮಂಜಸ ವರ್ತನೆ ತೋರಿದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಖಂಡಿಸಿದೆ. ಇದಕ್ಕಾಗಿ ಕೊಹ್ಲಿಗೆ ಐಸಿಸಿ ಒಂದು ನಕಾರಾತ್ಮಕ ಅಂಕ ನೀಡಿದೆ.

ಡ್ರೆಸ್ಸಿಂಗ್ ರೂಮ್‌ನಲ್ಲಿ ಕೊಹ್ಲಿ ಪ್ರಭಾವದ ಬಗ್ಗೆ ಮಾತನಾಡಿದ ಹನುಮ ವಿಹಾರಿ!ಡ್ರೆಸ್ಸಿಂಗ್ ರೂಮ್‌ನಲ್ಲಿ ಕೊಹ್ಲಿ ಪ್ರಭಾವದ ಬಗ್ಗೆ ಮಾತನಾಡಿದ ಹನುಮ ವಿಹಾರಿ!

ಬೆಂಗಳೂರಿನಲ್ಲಿ ಭಾನುವಾರ (ಸೆಪ್ಟೆಂಬರ್ 22) ನಡೆದ ಭಾರತ-ದಕ್ಷಿಣ ಆಫ್ರಿಕಾ ನಡುವಿನ ತೃತೀಯ ಟಿ20 ಪಂದ್ಯದ ವೇಳೆ ದಕ್ಷಿಣ ಆಫ್ರಿಕಾ ವೇಗಿ ಬ್ಯೂರನ್ ಹೆಂಡ್ರಿಕ್ಸ್ ಎದುರು ಕೊಹ್ಲಿ ಅನುಚಿತ ವರ್ತನೆ ತೋರಿದ್ದರು.

4ನೇ ಬ್ಯಾಟಿಂಗ್ ಕ್ರಮಾಂಕದಿಂದ ರಿಷಬ್ ಪಂತ್ ಕೈಬಿಡಬೇಕು: ಲಕ್ಷ್ಮಣ್4ನೇ ಬ್ಯಾಟಿಂಗ್ ಕ್ರಮಾಂಕದಿಂದ ರಿಷಬ್ ಪಂತ್ ಕೈಬಿಡಬೇಕು: ಲಕ್ಷ್ಮಣ್

ಆಟದ ವೇಳೆಯ ಕೊಹ್ಲಿಯ ವರ್ತನೆ ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿದಂತಾಗಿದೆ ಎಂದು ಐಸಿಸಿ ಹೇಳಿದೆ.

5ನೇ ಓವರ್‌ನಲ್ಲಿ ಘಟನೆ

5ನೇ ಓವರ್‌ನಲ್ಲಿ ಘಟನೆ

ಈ ಘಟನೆ ನಡೆದಿದ್ದು ಭಾರತದ ಇನ್ನಿಂಗ್ಸ್‌ನ 5ನೇ ಓವರ್‌ನಲ್ಲಿ. ರನ್‌ ಕದಿಯಲು ಓಡುವಾಗ ಕೊಹ್ಲಿ, ಹೆಂಡ್ರಿಕ್ಸ್‌ಗೆ ತಾಗಿದ್ದರು. ಕೊಹ್ಲಿ ಆ ವೇಳೆ ನಡೆದುಕೊಂಡ ರೀತಿ ಐಸಿಸಿಗೆ ಸರಿ ಕಾಣಿಸಿಲ್ಲ. ಹೀಗಾಗಿ ಶಿಸ್ತಿಗೆ ಸಂಬಂಧಿಸಿ ಕೊಹ್ಲಿಗೆ 1 ನಕಾರಾತ್ಮಕ ಅಂಕ ನೀಡಲಾಗಿದೆ.

3ನೇ ಬಾರಿಗೆ ಡೀಮೆರಿಟ್ ಪಾಯಿಂಟ್

3ನೇ ಬಾರಿಗೆ ಡೀಮೆರಿಟ್ ಪಾಯಿಂಟ್

ಕೊಹ್ಲಿ ಈಗ ಐಸಿಸಿಯಿಂದ ಒಟ್ಟು 3 ನಕಾರಾತ್ಮಕ ಅಂಕಗಳನ್ನು ಪಡೆದಂತಾಗಿದೆ. 2018 ಜನವರಿ 15ರಂದು ದಕ್ಷಿಣ ಆಫ್ರಿಕಾ ವಿರುದ್ಧದ ಪ್ರಿಟೋರಿಯಾ ಟೆಸ್ಟ್‌ನಲ್ಲಿ ಮತ್ತು ಜೂನ್ 22ರಂದು ನಡೆದಿದ್ದ ಪುರುಷರ ಐಸಿಸಿ ಕ್ರಿಕೆಟ್ ವಿಶ್ವಕಪ್‌ 2019ರಲ್ಲಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಕೊಹ್ಲಿಗೆ ಒಂದೊಂದು ನಕಾರಾತ್ಮಕ ಅಂಕ ಲಭಿಸಿತ್ತು.

ಭಾರತಕ್ಕೆ ಸೋಲು

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ತೋರಿದ್ದ ಕೊಹ್ಲಿ ಪಡೆ, ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ 9 ವಿಕೆಟ್ ಸೋಲನುಭವಿಸಿತ್ತು. ಆಫ್ರಿಕಾ ಪರ ನಾಯಕ ಕ್ವಿಂಟನ್ ಡಿ ಕಾಕ್ 79 ರನ್ (52 ಎಸೆತ) ನೀಡಿದ್ದರು.

ತಪ್ಪು ಒಪ್ಪಿಕೊಂಡ ಕೊಹ್ಲಿ

ತಪ್ಪು ಒಪ್ಪಿಕೊಂಡ ಕೊಹ್ಲಿ

ಆಟದ ವೇಳೆ ಕೊಂಚ ವಿಪರೀತವೆಂಬಂತೆ ನಡೆದುಕೊಂಡು ತಪ್ಪೆಸಗಿದ್ದನ್ನು ನಾಯಕ ಕೊಹ್ಲಿ ಒಪ್ಪಿಕೊಂಡಿದ್ದಾರೆ. ಮ್ಯಾಚ್‌ ರೆಫರೀ ರಿಚೀ ರಿಚರ್ಡ್ಸನ್ ಪ್ರಾಸ್ತಾಪಿಸಿದ ಆರೋಪವನ್ನು ಕೊಹ್ಲಿ ಒಪ್ಪಿಕೊಂಡಿರುವುದರಿಂದ ಈ ಸಂಬಂಧ ಹೆಚ್ಚಿನ ವಿಚಾರಣೆಯ ಅಗತ್ಯವಿಲ್ಲ ಎಂದು ಐಸಿಸಿ ತಿಳಿಸಿದೆ.

Story first published: Monday, September 23, 2019, 19:47 [IST]
Other articles published on Sep 23, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X