ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಯುಎಇ ಆಟಗಾರರಿಂದ ಮ್ಯಾಚ್ ಫಿಕ್ಸಿಂಗ್; ಅಮಾನತು ಮಾಡಿದ ಐಸಿಸಿ

ICC Suspends Two UAE Players For Trying to Fix Matches

ಬೆಂಗಳೂರು, ಜನವರಿ 27: ಕ್ರಿಕೆಟ್ ಲೋಕದಿಂದ ಮರೆಯಾಗಿದೆ ಎಂದು ಕೊಂಡರೆ ಮತ್ತೊಮ್ಮೆ ಫಿಕ್ಸಿಂಗ್ ಭೂತ ಆವರಿಸಿಕೊಳ್ಳುತ್ತಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ತಂಡದ ಇಬ್ಬರು ಆಟಗಾರರು ಮ್ಯಾಚ್ ಫಿಕ್ಸಿಂಗ್ ನಲ್ಲಿ ತೊಡಗಿರುವುದು ಸಾಬೀತಾಗಿದ್ದು, ಇಬ್ಬರನ್ನು ಅಮಾನತು ಮಾಡಲಾಗಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ತನ್ನ ಆದೇಶದಲ್ಲಿ ತಿಳಿಸಿದೆ.

ಯುಎಇ ತಂಡದ ಆಟಗಾರರಾದ ಮೊಹಮ್ಮದ್ ನವೀದ್ ಹಾಗೂ ಶೈಮಾನ್ ಅನ್ವರ್ ಬಟ್ ಅವರು ಎರಡು ಪ್ರಕರಣಗಳಲ್ಲಿ ಅಪರಾಧಿ ಎಂದು ಸಾಬೀತಾಗಿದೆ ಎಂದು ಐಸಿಸಿ ಭ್ರಷ್ಟಾಚಾರ ನಿಯಂತ್ರಣ ಸಮಿತಿ ಹೇಳಿದೆ.

2019ರಲ್ಲಿ ನಡೆದ ಐಸಿಸಿ ಆಯೋಜನೆಯ ಪುರುಷರ ಟಿ20 ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಮ್ಯಾಚ್ ಫಿಕ್ಸಿಂಗ್ ಬಗ್ಗೆ ಬಂದ ದೂರು ಆಧಾರಿಸಿ ಐಸಿಸಿ ಭ್ರಷ್ಟಾಚಾರ ನಿಯಂತ್ರಣ ಸ್ವತಂತ್ರ ಸಮಿತಿ ತನಿಖೆ ನಂತರ ತನ್ನ ವರದಿ ನೀಡಿದ್ದು, ಇದರ ಆಧಾರದ ಮೇಲೆ ಈ ಕ್ರಮ ಜರುಗಿಸಲಾಗಿದೆ.

ಇಬ್ಬರ ವಿರುದ್ಧ ಐಸಿಸಿ ನಿಯಮ 2.1.1 , 2.4.4 ಅನ್ವಯ ಕ್ರಮ ಜರುಗಿಸಲಾಗಿದೆ. ಮ್ಯಾಚ್ ಫಿಕ್ಸಿಂಗ್ ಮಾಡಿರುವುದು, ಭ್ರಷ್ಟಾಚಾರ ನಿಗ್ರಹ ಸಮಿತಿಗೆ ಸರಿಯಾದ ಸಾಕ್ಷ್ಯ ಒದಗಿಸದೆ ಭ್ರಷ್ಟಾಚಾರಕ್ಕೆ ಸಹಕರಿಸಿರುವ ಆರೋಪಗಳು ಸಾಬೀತಾಗಿವೆ ಎಂದು ವರದಿ ನೀಡಲಾಗಿದೆ.

Story first published: Wednesday, January 27, 2021, 12:45 [IST]
Other articles published on Jan 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X