ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ICC T20 Ranking: ವಿರಾಟ್ ಕೊಹ್ಲಿಯ ಸುದೀರ್ಘ ದಾಖಲೆ ಮುರಿದ ಪಾಕ್ ನಾಯಕ ಬಾಬರ್ ಅಜಮ್

ICC T20 Ranking: Pakistan Captain Babar Azam Breaks Big Record of Indian Batter Virat Kohli

ಇತ್ತೀಚಿನ ಐಸಿಸಿ ಟಿ20 ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನವನ್ನು ಉಳಿಸಿಕೊಂಡ ನಂತರ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಅವರು ದೀರ್ಘಕಾಲದವರೆಗೆ ವಿಶ್ವದ ಅಗ್ರ ಶ್ರೇಯಾಂಕದ ಟಿ20 ಬ್ಯಾಟ್ಸ್‌ಮನ್ ಆಗಿ ಉಳಿದುಕೊಂಡಿದ್ದಾರೆ.

ICC T20 Ranking: ಹೂಡಾ, ಸ್ಯಾಮ್ಸನ್ ಭಾರೀ ಜಿಗಿತ; ಟಾಪ್ 10ರಲ್ಲಿ ಏಕೈಕ ಭಾರತೀಯ!ICC T20 Ranking: ಹೂಡಾ, ಸ್ಯಾಮ್ಸನ್ ಭಾರೀ ಜಿಗಿತ; ಟಾಪ್ 10ರಲ್ಲಿ ಏಕೈಕ ಭಾರತೀಯ!

ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಕಳೆದ ದಶಕದಲ್ಲಿ ಅವರ ಅಗ್ರ ಸ್ಥಾನದ ಸಮಯದಲ್ಲಿ ಒಟ್ಟು 1,013 ದಿನಗಳ ಟಿ20 ಬ್ಯಾಟರ್‌ನಲ್ಲಿ ನಂ.1 ಶ್ರೇಯಾಂಕ ಹೊಂದಿದ್ದರು. ಆದರೆ ಪಾಕಿಸ್ತಾನ ನಾಯಕ ಬಾಬರ್ ಅಜಮ್ ಅವರು 1,014 ದಿನಗಳ ಕಾಲ ಅಗ್ರ ಸ್ಥಾನದಲ್ಲಿ ಉಳಿಯುವ ಮೂಲಕ ವಿರಾಟ್ ಕೊಹ್ಲಿಯ ದಿನಗಳ ಸಂಖ್ಯೆಯನ್ನು ಮೀರಿಸಿದ್ದಾರೆ.

ಇಶಾನ್ ಕಿಶನ್ 6ನೇ ಸ್ಥಾನದಿಂದ ಏಳನೇ ಸ್ಥಾನಕ್ಕೆ ಕುಸಿತ

ಇಶಾನ್ ಕಿಶನ್ 6ನೇ ಸ್ಥಾನದಿಂದ ಏಳನೇ ಸ್ಥಾನಕ್ಕೆ ಕುಸಿತ

ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಪ್ರಸ್ತುತ ಟಿ20 ಮತ್ತು ಏಕದಿನಗಳಲ್ಲಿ ನಂ.1 ಬ್ಯಾಟರ್ ಆಗಿದ್ದಾರೆ ಮತ್ತು ಇತ್ತೀಚೆಗೆ ಅವರು ಆಟದ ಎಲ್ಲಾ ಮೂರು ಸ್ವರೂಪಗಳಲ್ಲಿ ಅಗ್ರ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ.

ಐಸಿಸಿ ಬುಧವಾರ ಬಿಡುಗಡೆ ಮಾಡಿದ ಇತ್ತೀಚಿನ ಟಿ20 ಶ್ರೇಯಾಂಕದಲ್ಲಿ ಸ್ವಲ್ಪ ಬದಲಾವಣೆ ಕಂಡುಬಂದಿದೆ, ಭಾರತದ ಎಡಗೈ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಬ್ಯಾಟರ್‌ಗಳ ಪಟ್ಟಿಯಲ್ಲಿ 6ನೇ ಸ್ಥಾನದಿಂದ ಏಳನೇ ಸ್ಥಾನಕ್ಕೆ ಕುಸಿದಿದ್ದಾರೆ ಮತ್ತು ಅಗ್ರ 10ರಲ್ಲಿ ಕಾಣಿಸಿಕೊಂಡಿರುವ ಭಾರತದ ಏಕೈಕ ಬ್ಯಾಟರ್ ಆಗಿದ್ದಾರೆ.

ಬಾಬರ್ ಅಜಮ್ 29 ಪಂದ್ಯಗಳಲ್ಲಿ 939 ರನ್

ಬಾಬರ್ ಅಜಮ್ 29 ಪಂದ್ಯಗಳಲ್ಲಿ 939 ರನ್

ಬಾಬರ್ ಅಜಮ್ 818 ರೇಟಿಂಗ್ ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರಿದರೆ, ಪಾಕಿಸ್ತಾನದ ವಿಕೆಟ್ ಕೀಪರ್-ಬ್ಯಾಟರ್ ಮೊಹಮ್ಮದ್ ರಿಜ್ವಾನ್ 794 ರೇಟಿಂಗ್ ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ಈ ವರ್ಷ ಅವರು ಆಡಿದ ಏಕೈಕ ಟಿ20 ಪಂದ್ಯದಲ್ಲಿ ಬಾಬರ್ ಅಜ್ ಭಾರತದ ವಿರುದ್ಧ ಕೇವಲ 46 ಎಸೆತಗಳಲ್ಲಿ 66 ರನ್ ಗಳಿಸಿದರು. ಯುಎಇಯಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಸೆಮಿಫೈನಲ್ ತಲುಪುವಲ್ಲಿ ಪ್ರಮುಖ ಪಾತ್ರವಹಿಸಿದ ಅವರು ಕಳೆದ ವರ್ಷ ಆಟದ ಅತ್ಯಂತ ಕಡಿಮೆ ಸ್ವರೂಪದ ಆಟದಲ್ಲಿ 29 ಪಂದ್ಯಗಳಲ್ಲಿ 939 ರನ್ ಗಳಿಸಿದ್ದರು.

ಏತನ್ಮಧ್ಯೆ ವಿರಾಟ್ ಕೊಹ್ಲಿ ಈ ವರ್ಷ ಕೇವಲ 2 ಟಿ20 ಪಂದ್ಯಗಳನ್ನು ಆಡುವ ಮೂಲಕ 21ನೇ ಸ್ಥಾನದಲ್ಲಿದ್ದಾರೆ. ಭಾರತ ಬ್ಯಾಟರ್ ಕಳೆದ 3 ವರ್ಷಗಳಲ್ಲಿ ಟಿ20 ಕ್ಯಾಲೆಂಡರ್ ವರ್ಷದಲ್ಲಿ 300 ರನ್ ಗಡಿ ದಾಟಿಲ್ಲ.

ಐಸಿಸಿ ಶ್ರೇಯಾಂಕದಲ್ಲಿ ನಂ.1 ಆಗಿ ಹೆಚ್ಚು ದಿನ ಉಳಿದುಕೊಂಡಿದ್ದ ಬ್ಯಾಟರ್‌ಗಳ ಪಟ್ಟಿ

ಐಸಿಸಿ ಶ್ರೇಯಾಂಕದಲ್ಲಿ ನಂ.1 ಆಗಿ ಹೆಚ್ಚು ದಿನ ಉಳಿದುಕೊಂಡಿದ್ದ ಬ್ಯಾಟರ್‌ಗಳ ಪಟ್ಟಿ

ಬಾಬರ್ ಅಜಮ್ - 1,014 ದಿನಗಳು

ವಿರಾಟ್ ಕೊಹ್ಲಿ - 1,013 ದಿನಗಳು

ಕೆವಿನ್ ಪೀಟರ್ಸನ್ - 729 ದಿನಗಳು

ಗ್ರೇಮ್ ಸ್ಮಿತ್ - 690 ದಿನಗಳು

ಬ್ರೆಂಡನ್ ಮೆಕಲಮ್ - 546 ದಿನಗಳು

ಇಂಗ್ಲೆಂಡ್ ವಿರುದ್ಧದ T20 ಪಂದ್ಯಕ್ಕೂ ಹಾರ್ದಿಕ್ ಪಾಂಡ್ಯಾ ಕ್ಯಾಪ್ಟನ್!ಕೊಹ್ಲಿ,ಬುಮ್ರಾ,ರೋಹಿತ್ ಔಟ್ | *Cricket
ದೀಪಕ್ ಹೂಡಾ ಟಿ20 ಶ್ರೇಯಾಂಕದಲ್ಲಿ 104ನೇ ಸ್ಥಾನಕ್ಕೆ ಏರಿಕೆ

ದೀಪಕ್ ಹೂಡಾ ಟಿ20 ಶ್ರೇಯಾಂಕದಲ್ಲಿ 104ನೇ ಸ್ಥಾನಕ್ಕೆ ಏರಿಕೆ

ಈ ಮಧ್ಯೆ ಐರ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತ ನಾಲ್ಕು ರನ್ ಗಳ ಜಯ ಸಾಧಿಸಲು ದೀಪಕ್ ಹೂಡಾ ಮತ್ತು ಸಂಜು ಸ್ಯಾಮ್ಸನ್ ಕೊಡುಗೆ ಮಹತ್ವವಾಗಿತ್ತು. ಬುಧವಾರ (ಜೂನ್ 29) ಐಸಿಸಿ ಟಿ20 ಶ್ರೇಯಾಂಕದಲ್ಲಿ ಈ ಇಬ್ಬರು ಬ್ಯಾಟರ್‌ಗಳು ಭಾರೀ ಜಿಗಿತವನ್ನು ಕಂಡಿದ್ದಾರೆ. ಡಬ್ಲಿನ್‌ನಲ್ಲಿ ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳಲ್ಲಿ 47 ಮತ್ತು 104 ರನ್ ಗಳಿಸಿದ ದೀಪಕ್ ಹೂಡಾ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇದರ ಪರಿಣಾಮವಾಗಿ 414 ಸ್ಥಾನಗಳನ್ನು ಮೇಲಕ್ಕೇರಿ ಟಿ20 ಶ್ರೇಯಾಂಕದಲ್ಲಿ 104ನೇ ಸ್ಥಾನಕ್ಕೆ ಏರಿಕೆ ಕಂಡರು.

ಇನ್ನು ಮಂಗಳವಾರ (ಜೂನ್ 28) ತನ್ನ ಚೊಚ್ಚಲ ಟಿ20 ಅರ್ಧಶತಕ ಗಳಿಸಿದ ಸಂಜು ಸ್ಯಾಮ್ಸನ್ ಎರಡನೇ ಪಂದ್ಯದಲ್ಲಿ 77 ರನ್ ಗಳಿಸುವ ಮೂಲಕ 57 ಸ್ಥಾನಗಳನ್ನು ಏರಿಕೆ ಕಂಡು 144ನೇ ಸ್ಥಾನವನ್ನು ತಲುಪಿದ್ದಾರೆ. ಬೌಲರ್‌ಗಳ ಪಟ್ಟಿಯಲ್ಲಿ ಹರ್ಷಲ್ ಪಟೇಲ್ 37ನೇ ಸ್ಥಾನದಿಂದ 33ನೇ ಸ್ಥಾನಕ್ಕೆ ಹಾಗೂ ಮಾರ್ಕ್ ಅದೈರ್ 45ನೇ ಸ್ಥಾನದಿಂದ 43ನೇ ಸ್ಥಾನಕ್ಕೆ ತಲುಪಿದ್ದಾರೆ.

Story first published: Thursday, June 30, 2022, 18:22 [IST]
Other articles published on Jun 30, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X