ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ಶ್ರೇಯಾಂಕಪಟ್ಟಿಯಲ್ಲಿ ಸೂರ್ಯಕುಮಾರ್ 2ನೇ ಸ್ಥಾನಕ್ಕೆ ಲಗ್ಗೆ: ಮೊದಲ ಸ್ಥಾನದ ಮೇಲೆ ಕಣ್ಣು

ICC T20 ranking: Suryakumar reached top 2 position, eye on No.1 T20I batter

ಟಿ20 ಕ್ರಿಕೆಟ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ಭಾರತದ ಪರವಾಗಿ ಅತ್ಯಂತ ಸ್ಥಿರ ಪ್ರದರ್ಶನ ನೀಡುತ್ತಿರುವ ಆಟಗಾರ ಎಂದರೆ ಅದು ಸೂರ್ಯಕುಮಾರ್ ಯಾದವ್. ಭಾರತ ಪರವಾಗಿ ನಾಲ್ಕು ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯುವ ಮೂಲಕ ಮಿಂಚುಹರಿಸಿದ್ದ ಸೂರ್ಯ ವೆಸ್ಟ್ ಇಂಡೀಸ್ ಸರಣಿಯಲ್ಲಿ ಆರಂಭಿಕನಾಗಿ ಕಣಕ್ಕಿಳಿಯುವ ಅವಕಾಶವನ್ನು ಕೂಡ ಪಡೆದುಕೊಂಡಿದ್ದಾರೆ. ಮೊದಲ ಎರಡು ಪಂದ್ಯಗಳಲ್ಲಿ ಮಿಂಚಲು ವಿಫಲವಾಗಿದ್ದ ಸೂರ್ಯಕುಮಾರ್ ಯಾದವ್ ಮೂರನೇ ಪಂದ್ಯದಲ್ಲಿ ತಾನು ಆರಂಭಿಕನಾಗಿಯೂ ಸೈ ಎಂದು ಸಾಬೀತುಪಡಿಸಿದ್ದಾರೆ. 44 ಎಸೆತಗಳಲ್ಲಿ 76 ರನ್ ಸಿಡಿಸಿರುವ ಸೂರ್ಯಕುಮಾರ್ ಯಾದವ್ ಭಾರತದ ಗೆಲುವಿನಲ್ಲಿ ವ್ರಮುಖ ಪಾತ್ರವಹಿಸಿದ್ದಾರೆ.

ಸೂರ್ಯಕುಮಾರ್ ಯಾದವ್ ಅವರ ಈ ಪ್ರದರ್ಶನ ಭಾರತ ತಂಡದ ಗೆಲುವಿನ ಜೊತೆಗೆ ವೈಯಕ್ತಿಕವಾಗಿಯೂ ಸೂರ್ಯಕುಮಾರ್ ಯಾದವ್‌ಗೆ ದೊಡ್ಡ ಗಳಿಕೆಗೆ ಕಾರಣವಾಗಿದೆ. ಐಸಿಸಿ ಪ್ರಕಟಿಸಿರುವ ನೂತನ ಶ್ರೇಯಾಂಕಪಟ್ಟಿಯಲ್ಲಿ ಶ್ರೇಯಸ್ ಐಯ್ಯರ್ ವೈಯಕ್ತಿಕವಾಗಿ ತಮ್ಮ ಅತ್ಯುತ್ತಮ ಶ್ರೇಯಾಂಕಕ್ಕೇರುವಂತೆ ಮಾಡಿದೆ. ಸದ್ಯ ಸೂರ್ಯಕುಮಾರ್ ಯಾದವ್ ಶ್ರೇಯಾಂಕಪಟ್ಟಿಯಲ್ಲಿ 2ನೇ ಸ್ಥಾನವನ್ನು ಅಲಂಕರಿಸಿದ್ದಾರೆ.

Asia Cup 2022: 25 ದಿನ ಮುಂಚಿತವಾಗಿಯೇ ಏಷ್ಯಾಕಪ್‌ಗೆ ಬಲಿಷ್ಠ ತಂಡ ಪ್ರಕಟಿಸಿದ ಪಾಕಿಸ್ತಾನ!Asia Cup 2022: 25 ದಿನ ಮುಂಚಿತವಾಗಿಯೇ ಏಷ್ಯಾಕಪ್‌ಗೆ ಬಲಿಷ್ಠ ತಂಡ ಪ್ರಕಟಿಸಿದ ಪಾಕಿಸ್ತಾನ!

ಮೊದಲ ಸ್ಥಾನದ ಸನಿಹದಲ್ಲಿ SKY

ಮೊದಲ ಸ್ಥಾನದ ಸನಿಹದಲ್ಲಿ SKY

ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಈ ಪಟ್ಟಿಯಲ್ಲಿ ಸದ್ಯ ಅಗ್ರಸ್ಥಾನದಲ್ಲಿದ್ದು 818 ಅಂಕಗಳನ್ನು ತಮ್ಮ ಖಾತೆಯಲ್ಲಿ ಹೊಂದಿದ್ದಾರೆ. ಸೂರ್ಯಕುಮಾರ್ ಯಾದವ್ ಮೊದಲ ಸ್ಥಾನದಲ್ಲಿರುವ ಬಾಬರ್‌ಗಿಂತ ಕೇವಲ ಎರಡ ಅಂಕ ಹಿಂದಿದ್ದು 816 ಅಂಕವನ್ನು ತಮ್ಮ ಖಾತೆಯಲ್ಲಿ ಹೊಂದಿದ್ದಾರೆ. ಇನ್ನು ಎರಡನೇ ಸ್ಥಾನದಲ್ಲಿದ್ದ ಮೊಹಮ್ಮದ್ ರಿಜ್ವಾನ್ ಮೂರನೇ ಸ್ಥಾನಕ್ಕೆ ಕುಸಿದಿದ್ದು 789 ಅಂಕಗಳನ್ನು ತಮ್ಮ ಖಾತೆಯಲ್ಲಿ ಹೊಂದಿದ್ದಾರೆ.

ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ ಸೂರ್ಯ

ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ ಸೂರ್ಯ

ಸೂರ್ಯಕುಮಾರ್ ಯಾದವ್ ಭಾರತ ತಂಡದಲ್ಲಿ ಅವಕಾಶವನ್ನು ಪಡೆದುಕೊಂಡಲ್ಲಿಂದಲೂ ಉತ್ತಮ ಪ್ರದರ್ಶನ nIಡಿಕೊಂಡೇ ಬಂದಿದ್ದಾರೆ. ಇನ್ನು ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ನಡೆದ ಟಿ20 ಸರಣಿಯಲ್ಲಿ ಶತಕವನ್ನು ಸಿಡಿಸಿದ ಬಳಿಕ ಸೂರ್ಯಕುಮಾರ್ ಯಾದವ್ 44 ಅಂಕಗಳ ಏರಿಕೆ ಕಂಡಿದ್ದಾರೆ. ಪ್ರಸ್ತುತ ಚುಟುಕು ಕ್ರಿಕೆಟ್‌ನಲ್ಲಿ ಅಗ್ರಸ್ಥಾನಕ್ಕೇರುವ ಉತ್ತಮ ಅವಕಾಶ ಸೂರ್ಯಕುಮಾರ್ ಯಾದವ್ ಮುಂದಿದೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಆರಂಭ

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಆರಂಭ

ಸೂರ್ಯಕುಮಾರ್ ಯಾದವ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಬಹಳ ತಡವಾಗಿ ಕಾಲಿಟ್ಟರು. ಆದರೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಆರಂಭದಿಂದಲೂ ಅದ್ಭುತ ಪ್ರದರ್ಶನ ನಿಡುವ ಮೂಲಕ ಮಿಂಚುತ್ತಿದ್ದಾರೆ. ಕೇವಲ 22 ಟಿ20ಐ ಪಂದ್ಯಗಳನ್ನಾಡಿರುವ ಸೂರ್ಯಕುಮಾರ್ ಯಾದವ್ ಭಾಋತೀಯ ತಮಡದ ಪ್ರಮುಖ ಭಾಗವಾಗಿ ಗುರುತಿಸಿಕೊಂಡಿದ್ದಾರೆ. 22 ಪಂದ್ಯಗಳಲ್ಲಿ ಸೂರ್ಯಕುಮಾರ್ ಯಾದವ್ 648 ರನ್‌ಗಳನ್ನು ಗಳಿಸಿದ್ದು ಇಷ್ಟು ಪಂದ್ಯಗಳಲ್ಲಿ ಭಾರತದ ಪರವಾಘಿ ಹೆಚ್ಚು ರನ್‌ಗಳಿಸಿದ ಆಟಗಾರರ ಪೈಕಿ ಎರಡನೇ ಸ್ಥಾನದಲ್ಲಿದ್ದಾರೆ ಸೂರ್ಯಕುಮಾರ್ ಯಾದವ್. ಮೊದಲ ಸ್ಥಾನದಲ್ಲಿ ಕೆಎಲ್ ರಾಹುಲ್ ಇದ್ದು ಅವರು 22 ಪಂದ್ಯಗಳಲ್ಲಿ 755 ರನ್‌ ಬಾರಿಸಿದ್ದರು. ಆದರೆ ಸೂರ್ಯಕುಮಾರ್ ಯಾದವ್ ಸ್ಟ್ರೈಕ್‌ರೇಟ್ 175.6ರಷ್ಟುದ್ದು 152.5 ಇರುವ ಕೆಎಲ್ ರಾಹುಲ್‌ಗಿಂತ ಬಹಳ ಮುಂದಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ಧವನ್ ಏರಿಕೆ

ಏಕದಿನ ಕ್ರಿಕೆಟ್‌ನಲ್ಲಿ ಧವನ್ ಏರಿಕೆ

ಇನ್ನು ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ ಒಂದು ಸ್ಥಾನಗಳ ಏರಿಕೆ ಕಂಡಿದ್ದು 12ನೇ ಸ್ಥಾನ ಪಡೆದುಕೊಂಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಸಿಡಿಸಿದ ಅರ್ದ ಶತಕದಿಮದಾಗಿ ಒಂದು ಸ್ಥಾನ ಏರಿಕೆ ಕಂಡಿದ್ದಾರೆ ಧವನ್. ಬೌಲರ್‌ಗಳ ಪೈಕಿ ಚಾಹಲ್ 16ನೇ ಸ್ಥಾನಕಕೇರಿದ್ದು ಶಾರ್ದೂಲ್ ಠಾಕೂರ್ ಕೂಡ ಏರಿಕೆ ಕಂಡಿದ್ದಾರೆ.

Story first published: Thursday, August 4, 2022, 9:36 [IST]
Other articles published on Aug 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X