ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ICC T20 Ranking: ನಂಬರ್ 1 ಸ್ಥಾನಕ್ಕೇರಲು ಸಿದ್ಧವಾದ ಸೂರ್ಯಕುಮಾರ್ ಯಾದವ್

 ICC T20 Rankings: Suryakumar Yadav Is All Set To Be Crowned World’s NO.1 T20 Batter

ಸದ್ಯ ಅತ್ಯುತ್ತಮ ಫಾರ್ಮ್‌ನಲ್ಲಿರುವ ಸೂರ್ಯಕುಮಾರ್ ಯಾದವ್ ವಿಶ್ವದ ಹಲವು ಬ್ಯಾಟರ್ ಗಳನ್ನು ಹಿಂದಿಕ್ಕಿ ಹಲವು ದಾಖಲೆಗಳನ್ನು ಬರೆದಿದ್ದಾರೆ. ಟಿ20 ರ್‍ಯಾಂಕಿಂಗ್‌ನಲ್ಲಿ ಸದ್ಯ ಎರಡನೇ ಸ್ಥಾನದಲ್ಲಿರುವ ಸೂರ್ಯಕುಮಾರ್ ಯಾದವ್ ಶೀಘ್ರದಲ್ಲೇ ನಂಬರ್ 1 ಸ್ಥಾನವನ್ನು ಅಲಂಕರಿಸಲಿದ್ದಾರೆ.

ಸದ್ಯ ಪಾಕಿಸ್ತಾನದ ಆರಂಭಿಕ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಟಿ20 ಬ್ಯಾಟರ್ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ, ಸೂರ್ಯಕುಮಾರ್ ಯಾದವ್ ಎರಡನೇ ಸ್ಥಾನದಲ್ಲಿದ್ದು, ಮುಂದಿನ ಬಾರಿ ಐಸಿಸಿ ರ್‍ಯಾಂಕಿಂಗ್ ಪಟ್ಟಿಯಲ್ಲಿ ಸೂರ್ಯಕುಮಾರ್ ಮೊಹಮ್ಮದ್ ರಿಜ್ವಾನ್ ಅವರನ್ನು ಹಿಂದಿಕ್ಕಿ ಮೊದಲನೇ ಸ್ಥಾನಕ್ಕೇರುವುದು ಬಹುತೇಕ ಖಚಿತವಾಗಿದೆ.

360 ಡಿಗ್ರಿ ಹೋಗ್ಲಿ, 180 ಡಿಗ್ರಿ ಶಾಟ್ಸ್ ಆದ್ರೂ ಹೊಡೀರಿ: ಪಾಕ್ ತಂಡದ ವಿರುದ್ಧ ವಾಸಿಂ ಅಕ್ರಂ ಗರಂ360 ಡಿಗ್ರಿ ಹೋಗ್ಲಿ, 180 ಡಿಗ್ರಿ ಶಾಟ್ಸ್ ಆದ್ರೂ ಹೊಡೀರಿ: ಪಾಕ್ ತಂಡದ ವಿರುದ್ಧ ವಾಸಿಂ ಅಕ್ರಂ ಗರಂ

ಆಸ್ಟ್ರೇಲಿಯಾ ವಿರುದ್ಧ ಸರಣಿಯ ಕೊನೆಯ ಟಿ20 ಪಂದ್ಯದಲ್ಲಿ ಭರ್ಜರಿ ಅರ್ಧಶತಕ ಗಳಿಸಿ ಮಿಂಚಿದ್ದ ಸೂರ್ಯಕುಮಾರ್ ಯಾದವ್, ಐಸಿಸಿ ಟಿ20 ರ್‍ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನಕ್ಕೇರಿದ್ದರು. ಮೊಹಮ್ಮದ್ ರಿಜ್ವಾನ್ ಮೊದಲನೇ ಸ್ಥಾನದಲ್ಲಿದ್ದರು. ಆದರೆ, ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ ಫಾರ್ಮ್ ಮುಂದುವರೆಸುವ ಮೂಲಕ ಸೂರ್ಯಕುಮಾರ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರೆ, ಮೊಹಮ್ಮದ್ ರಿಜ್ವಾನ್ ಇಂಗ್ಲೆಂಡ್ ವಿರುದ್ಧದ ಸರಣಿಯ ಕೊನೆಯ ಪಂದ್ಯದಲ್ಲಿ ರನ್ ಗಳಿಸಲು ವಿಫಲರಾಗಿದ್ದಾರೆ. ಇದೇ ಕಾರಣದಿಂದ ಈಗ ಸೂರ್ಯಕುಮಾರ್ ಯಾದವ್ ನಂಬರ್ 1 ಸ್ಥಾನಕ್ಕೇರುವುದು ಖಚಿತವಾಗಿದೆ.

ಸತತವಾಗಿ ಮೂರು ಅರ್ಧಶತಕ ದಾಖಲು

ಸತತವಾಗಿ ಮೂರು ಅರ್ಧಶತಕ ದಾಖಲು

ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲಿ 36 ಎಸೆತಗಳಲ್ಲಿ 69 ರನ್ ಗಳಿಸಿ ಮಿಂಚಿದ್ದ ಸೂರ್ಯಕುಮಾರ್ ಯಾದವ್ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲು ತಮ್ಮ ಅದ್ಭುತ ಪ್ರದರ್ಶನವನ್ನು ಮುಂದುವರೆಸಿದರು. ತಿರುವನಂತಪುರದಲ್ಲಿ ನಡೆದ ಮೊದಲನೇ ಟಿ20 ಪಂದ್ಯದಲ್ಲಿ 33 ಎಸೆತಗಳಲ್ಲಿ 50 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಇನ್ನು ಎರಡನೇ ಟಿ20 ಪಂದ್ಯದಲ್ಲಿ 22 ಬಾಲ್‌ ಎದುರಿಸಿದ ಬರೋಬ್ಬರಿ 61 ರನ್ ಗಳಿಸುವ ಮೂಲಕ ತಮ್ಮ ಫಾರ್ಮ್‌ ಮುಂದುವರೆಸಿದ್ದಾರೆ. ಸತತವಾಗಿ ಮೂರು ಇನ್ನಿಂಗ್ಸ್‌ಗಳಲ್ಲಿ ಅರ್ಧಶತಕ ಗಳಿಸಿ ನಂಬರ್ 1 ಸ್ಥಾನಕ್ಕೇರಲು ಸಿದ್ಧರಾಗಿದ್ದಾರೆ.

Ind Vs SA T20: ವೈಯಕ್ತಿಕ ದಾಖಲೆಗಿಂತ ತಂಡ ಗೆಲ್ಲುವುದು ಮುಖ್ಯ, ಕೊಹ್ಲಿ ವರ್ತನೆಗೆ ಭಾರಿ ಮೆಚ್ಚುಗೆ

ನಂ 1 ಸ್ಥಾನಕ್ಕೆ ಇಬ್ಬರ ನಡುವೆ ಭಾರಿ ಪೈಪೋಟಿ

ನಂ 1 ಸ್ಥಾನಕ್ಕೆ ಇಬ್ಬರ ನಡುವೆ ಭಾರಿ ಪೈಪೋಟಿ

ಸದ್ಯ 861 ಅಂಕಗಳೊಂದಿಗೆ ಮೊಹಮ್ಮದ್ ರಿಜ್ವಾನ್ ಮೊದಲನೇ ಸ್ಥಾನದಲ್ಲಿದ್ದಾರೆ. ಸೂರ್ಯಕುಮಾರ್ ಯಾದವ್ 801 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಅರ್ಧಶತಕ ಗಳಿಸಿದ ನಂತರ ಈ ರ್‍ಯಾಂಕಿಂಗ್ ಪಟ್ಟಿ ಬಿಡುಗಡೆಯಾಗಿತ್ತು.

ಅದಾದ ನಂತರ ಸೂರ್ಯ ಕುಮಾರ್ ಯಾದವ್ ಎರಡು ಪಂದ್ಯಗಳಲ್ಲಿ ಸತತವಾಗಿ ಅರ್ಧಶತಕ ದಾಖಲಿಸಿದ್ದರೆ, ಮೊಹಮ್ಮದ್ ರಿಜ್ವಾನ್ ಇಂಗ್ಲೆಂಡ್ ವಿರುದ್ಧದ ಸರಣಿಯ 6 ನೇ ಪಂದ್ಯದಲ್ಲಿ ತಂಡದಿಂದ ಹೊರಗುಳಿದಿದ್ದರು. 7ನೇ ಪಂದ್ಯದಲ್ಲಿ ಕೇವಲ 1 ರನ್ ಗಳಿಸಿ ಔಟಾದರು. ರಿಜ್ವಾನ್‌ಗಿಂತ ಸೂರ್ಯಕುಮಾರ್ ಯಾದವ್ ಉತ್ತಮ ಪ್ರದರ್ಶನ ನೀಡಿರುವುದರಿಂದ ರ್‍ಯಾಂಕಿಂಗ್‌ನಲ್ಲಿ ಮುಂದಿನ ಶ್ರೇಯಾಂಕಗಳನ್ನು ನವೀಕರಿಸಿದಾಗ ರಿಜ್ವಾನ್‌ರನ್ನು ಹಿಂದಿಕ್ಕುವ ಸಾಧ್ಯತೆ ಇದೆ.

3ನೇ ಟಿ20 ಪಂದ್ಯದಲ್ಲೂ ಅಬ್ಬರಿಸುತ್ತಾರ ಸೂರ್ಯ

3ನೇ ಟಿ20 ಪಂದ್ಯದಲ್ಲೂ ಅಬ್ಬರಿಸುತ್ತಾರ ಸೂರ್ಯ

ಅಕ್ಟೋಬರ್ 5 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಯ ಕೊನೆಯ ಪಂದ್ಯ ನಡೆಯಲಿದ್ದು, ಆ ಪಂದ್ಯದಲ್ಲೂ ಸೂರ್ಯಕುಮಾರ್ ಯಾದವ್ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ. ಟಿ20 ವಿಶ್ವಕಪ್‌ ಆರಂಭಕ್ಕೆ ಮುನ್ನ ಟೀಂ ಇಂಡಿಯಾ ಆಡುತ್ತಿರುವ ಕೊನೆಯ ಟಿ20 ಸರಣಿ ಇದಾಗಿದೆ.

ಅಕ್ಟೋಬರ್ 6 ರಂದು ಭಾರತ ವಿಶ್ವಕಪ್‌ ತಂಡ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಲಿದೆ. ಅಕ್ಟೋಬರ್ 17ರಂದು ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಮೊದಲನೇ ಅಭ್ಯಾಸ ಪಂದ್ಯವನ್ನಾಡಲಿದೆ, ಅಕ್ಟೋಬರ್ 19ರಂದು ನ್ಯೂಜಿಲೆಂಡ್ ವಿರುದ್ಧ ಎರಡನೇ ಅಭ್ಯಾಸ ಪಂದ್ಯವನ್ನಾಡಲಿದ್ದಾರೆ. ಅಕ್ಟೋಬರ್ 23ರಂದು ಟಿ20 ವಿಶ್ವಕಪ್‌ನ ತನ್ನ ಮೊದಲ ಪಂದ್ಯದಲ್ಲಿ ಭಾರತ ಪಾಕಿಸ್ತಾನವನ್ನು ಎದುರಿಸಲಿದೆ.

Story first published: Monday, October 3, 2022, 14:43 [IST]
Other articles published on Oct 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X