ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ರ‍್ಯಾಂಕಿಂಗ್: ಸೂರ್ಯಕುಮಾರ್ ಅಂಕದಲ್ಲಿ ಮತ್ತಷ್ಟು ಏರಿಕೆ

ICC T20 rating: T20 NO.1 batter Suryakumar reaches new career-high rating in ICC latest rankings

ಐಸಿಸಿ ಟಿ20 ಪರಿಷ್ಕೃತ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು ವಿಶ್ವದ ನಂಬರ್1 ಟಿ20 ಬ್ಯಾಟರ್ ಸೂರ್ಯಕುಮಾರ್ ಯಾದವ್ ಮತ್ತಷ್ಟು ಅಂಕಗಳ ಏರಿಕೆ ಕಂಡಿದ್ದಾರೆ. ​ವೃತ್ತಿಜೀವನದಲ್ಲಿ ಅತ್ಯುನ್ನತ ಅಂಕಗಳನ್ನು ಪಡೆದುಕೊಂಡಿದ್ದಾರೆ ಟೀಮ್ ಇಂಡಿಯಾದ ಬ್ಯಾಟರ್.

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ವೇಗವಾಗಿ 47 ರನ್‌ಗಳನ್ನು ಗಳಿಸಿದ್ದರು. ಇದರ ಪರಿಣಾಮವಾಗಿ 910 ಅಂಕಗಳನ್ನು ಗಳಿಸಿದ್ದರು. ಆದರೆ ಎರಡನೇ ಪಂದ್ಯದಲ್ಲಿ ನಿಧಾನಗತಿಯ ಬ್ಯಾಟಿಂಗ್ ನಡೆಸಿದ ಕಾರಣ ಎರಡು ಅಂಕಗಳನ್ನು ಕಳೆದುಕೊಂಡಿದ್ದು ಸದ್ಯ 908 ಅಂಕಗಳನ್ನು ಹೊಂದಿದ್ದಾರೆ. ಅಹ್ಮದಾಬಾದ್‌ನಲ್ಲಿ ಈ ಟಿ20 ಸರಣಿಯ ಅಂತಿಮ ಪಂದ್ಯ ನಡೆಯಲಿದ್ದು ಈ ಪಂದ್ಯದಲ್ಲಿ ಮತ್ತೆ ಅಂಕಗಳನ್ನು ಹೆಚ್ಚಿಸಿಕೊಳ್ಳುವ ಅವಕಾಶ ದೊರೆಯಲಿದೆ.

ಭಾರತದಲ್ಲಿ ಅಭ್ಯಾಸ ಪಂದ್ಯಗಳ ಅಗತ್ಯವೇ ಇಲ್ಲ: ಸರಣಿಗೂ ಮುನ್ನವೇ ಸ್ಟೀವ್ ಸ್ಮಿತ್ ಕ್ಯಾತೆಭಾರತದಲ್ಲಿ ಅಭ್ಯಾಸ ಪಂದ್ಯಗಳ ಅಗತ್ಯವೇ ಇಲ್ಲ: ಸರಣಿಗೂ ಮುನ್ನವೇ ಸ್ಟೀವ್ ಸ್ಮಿತ್ ಕ್ಯಾತೆ

ಇದೀಗ ಸೂರ್ಯಕುಮಾರ್ ಯಾದವ್ ಟಿ20 ಕ್ರಿಕೆಟ್‌ನಲ್ಲಿ ಸಾರ್ವಕಾಲಿಕ ಶ್ರೇಷ್ಠ ರೇಟಿಂಗ್ ಅಂಕದ ಮೇಲೆ ಕಣ್ಣಿಟ್ಟಿದ್ದಾರೆ. ಟಿ20 ಬ್ಯಾಟರ್‌ಗಳಲ್ಲಿ ಇಂಗ್ಲೆಂಡ್ ತಂಡದ ಡೇವಿಡ್ ಮಲನ್ 915 ಅಂಕಗಳನ್ನು ಗಳಿಸಿ ದಾಖಲೆ ಬರೆದಿದ್ದರು. 2020ರಲ್ಲಿ ಈ ಸಾಧನೆ ಮಾಡಿದ್ದರು ಇಂಗ್ಲೆಂಡ್ ತಂಡದ ಆಟಗಾರ. ಇದೀಗ ಈ ಪಟ್ಟಿಯಲ್ಲಿ ಸೂರ್ಯಕುಮಾರ್ ಯಾದವ್ ಎರಡನೇ ಸ್ಥಾನದಲ್ಲಿದ್ದು ಮಲನ್ ದಾಖಲೆ ಮುರಿಯುವ ಅವಕಾಶ ಸೂರ್ಯಕುಮಾರ್ ಯಾದವ್ ಮುಂದಿದೆ.

ಇನ್ನು ಈ ಪರಿಷ್ಕೃತ ಶ್ರೇಯಾಂಕ ಪಟ್ಟಿಯಲ್ಲಿ ನ್ಯೂಜಿಲೆಂಡ್ ತಂಡದ ಆಟಗಾರರು ಬ್ಯಾಟರ್ ಹಾಗೂ ಬೌಲರ್‌ಗಳ ಪಟ್ಟಿಯಲ್ಲಿ ಏರಿಕೆ ಕಂಡಿದ್ದಾರೆ. ಬ್ಯಾಟರ್‌ಗಳ ಪಟ್ಟಿಯಲ್ಲಿ ಫಿನ್ ಅಲೆನ್ 8 ಸ್ಥಾನಗಳ ಏರಿಕೆ ಕಂಡಿದ್ದು 19ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಮತ್ತೊಂದೆಡೆ ಡ್ಯಾರಲ್ ಮಿಚೆಲ್ ಕೂಡ 9 ಸ್ಥಾನಗಳ ಏರಿಕೆ ಕಂಡು 29ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಮಿಚೆಲ್ ಮೊದಲ ಪಂದ್ಯದಲ್ಲಿ ಅಜೇಯ ಅರ್ಧ ಶತಕ ಸಿಡಿಸಿದ್ದರು.

Ranji Trophy: ಮಯಾಂಕ್, ಸಮರ್ಥ್ ಅರ್ಧಶತಕ; ಕ್ವಾರ್ಟರ್‌ಫೈನಲ್‌ನಲ್ಲಿ ಉತ್ತರಾಖಂಡ ವಿರುದ್ಧ ಕರ್ನಾಟಕ ಮೇಲುಗೈRanji Trophy: ಮಯಾಂಕ್, ಸಮರ್ಥ್ ಅರ್ಧಶತಕ; ಕ್ವಾರ್ಟರ್‌ಫೈನಲ್‌ನಲ್ಲಿ ಉತ್ತರಾಖಂಡ ವಿರುದ್ಧ ಕರ್ನಾಟಕ ಮೇಲುಗೈ

ಇನ್ನು ಬೌಲರ್‌ಗಳ ಪಟ್ಟಿಯಲ್ಲಿ ಮಿಚೆಲ್ ಸ್ಯಾಂಟ್ನರ್ ಎರಡು ಸ್ಥಾನಗಳ ಏರಿಕೆ ಕಂಡು 9ನೇ ಸ್ಥಾನ ಸಂಪಾದಿಸಿದ್ದಾರೆ. ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಅವರು 23ನೇ ಶ್ರೇಯಾಂಕ ಪಡೆದುಕೊಂಡಿದ್ದಾರೆ.

ಇತ್ತ ಇಂಗ್ಲೆಂಡ್ ತಂಡದ ವೇಗದ ಬೌಲರ್ ಜೋಫ್ರಾ ಆರ್ಚರ್ ಕ್ರಿಕೆಟ್‌ಗೆ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ ಮೂಲಕ ಕಮ್‌ಬ್ಯಾಕ್ ಮಾಡಿದ್ದಾದ್ದು 35ನೇ ಸ್ಥಾನ ಪಡೆದುಕೊಂಡಿದ್ದಾರೆ. ಮತ್ತೊಂದೆಡೆ ದಕ್ಷಿಣ ಆಫ್ರಿಕಾದ ನಾಯಕ ಎರಡನೇ ಏಕದಿನ ಪಂದ್ಯದಲ್ಲಿ ಶತಕವನ್ನು ಸಿಡಿಸಿದ್ದು 49ನೇ ಸ್ಥಾನ ಪಡೆದುಕೊಂಡಿದ್ದಾರೆ. ಬವುಮಾ ಸುದೀರ್ಘ ಕಾಲದ ಬಳಿಕ ಅದ್ಭುತ ಇನ್ನಿಂಗ್ಸ್ ಆಡಿ ಗಮನಸೆಳೆದಿದ್ದಾರೆ.

Story first published: Wednesday, February 1, 2023, 16:46 [IST]
Other articles published on Feb 1, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X