ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ICC T20 ವಿಶ್ವಕಪ್‌ 2022: ಬಲಿಷ್ಟ ಸ್ಕ್ವಾಡ್ ಘೋಷಿಸಿದ ನ್ಯೂಜಿಲೆಂಡ್, ಕೇನ್ ವಿಲಿಯಮ್ಸನ್ ಮುಂದಾಳತ್ವ

New zealand

ಮುಂಬರುವ ಐಸಿಸಿ ಟಿ20 ವಿಶ್ವಕಪ್‌ಗೆ ಬಹುತೇಕ ತಂಡಗಳು ಈಗಾಗಲೇ ತಮ್ಮ ತಂಡವನ್ನು ಪ್ರಕಟಿಸಿವೆ. ಆದರೆ ಬಹಳ ತಡವಾಗಿ ಅಭಿಮಾನಿಗಳ ನಿರೀಕ್ಷೆಯ ನಂತರ ನ್ಯೂಜಿಲೆಂಡ್ ಟಿ20 ವಿಶ್ವಕಪ್ ತಂಡವನ್ನು ಪ್ರಕಟಿಸಿದೆ. ಕೇನ್ ವಿಲಿಯಮ್ಸನ್ ನಾಯಕನಾಗಿ ಕಿವೀಸ್ ತಂಡವನ್ನು ಮುನ್ನಡೆಸುತ್ತಿದ್ದು, ಯಾವುದೇ ಹೊಸ ಪ್ರಯೋಗಗಳಿಗೆ ಮುಂದಾಗದೇ ಇರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.

ನ್ಯೂಜಿಲೆಂಡ್ ವಿಶ್ವಕಪ್‌ಗೆ ಹೊಸ ನಾಯಕತ್ವದೊಂದಿಗೆ ವಿಶ್ವಕಪ್‌ಗೆ ಎಂಟ್ರಿ ಕೊಡಬಹುದು ಎಂದು ಅನೇಕ ವರದಿಯಾಗಿತ್ತು. ಆದರೆ ನ್ಯೂಜಿಲೆಂಡ್ ವಿಲಿಯಮ್ಸನ್ ಅವರ ಶ್ರೇಷ್ಠತೆಯ ಮೇಲೆ ನಂಬಿಕೆ ಇರಿಸಿದೆ. ಎಲ್ಲಾ ಸೂಪರ್‌ಸ್ಟಾರ್‌ಗಳು ನ್ಯೂಜಿಲೆಂಡ್ ತಂಡದಲ್ಲಿ ಸ್ಥಾನ ಪಡೆದಿದ್ದು 15 ಸದಸ್ಯರ ತಂಡ ಘೋಷಣೆಯಾಗಿದೆ. ಡೆವೊನ್ ಕಾನ್ವೇ ವಿಕೆಟ್ ಕೀಪರ್ ಆಗಿ ಕಾಣಿಸಿಕೊಂಡಿದ್ದಾರೆ. ಆಲ್‌ರೌಂಡರ್ ಜೇಮ್ಸ್ ನೀಶಮ್ ಕೂಡ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.

ಟ್ರೆಂಟ್‌ ಬೌಲ್ಟ್‌ ವಿಶ್ವಕಪ್ ತಂಡದಲ್ಲಿ ಆಯ್ಕೆ, ಬೌಲಿಂಗ್‌ಗೆ ಬಲ

ಟ್ರೆಂಟ್‌ ಬೌಲ್ಟ್‌ ವಿಶ್ವಕಪ್ ತಂಡದಲ್ಲಿ ಆಯ್ಕೆ, ಬೌಲಿಂಗ್‌ಗೆ ಬಲ

ನ್ಯೂಜಿಲೆಂಡ್ ತನ್ನ ವಿಶ್ವಕಪ್ ಸ್ಕ್ವಾಡ್‌ನಲ್ಲಿ ಎಲ್ಲಾ ಪ್ರಮುಖರನ್ನು ಪೇಸ್ ಲೈನ್-ಅಪ್‌ನಲ್ಲಿ ಸೇರಿಸಿದೆ. ಟ್ರೆಂಟ್ ಬೌಲ್ಟ್ ಅವರ ಸ್ವಿಂಗ್, ಲ್ಯುಕಿ ಫರ್ಗುಸನ್ ಅವರ ವೇಗ ಮತ್ತು ಟಿಮ್ ಸೌಥಿ ಅವರ ಅನುಭವವು ಎದುರಾಳಿಗಳನ್ನು ನಡುಗಿಸುವುದು ಖಚಿತ. ಆಡಮ್ ಮಿಲ್ನೆ ಕೂಡ ತಂಡದಲ್ಲಿದ್ದಾರೆ. ಇನ್ನು ಇಬ್ಬರು ಸ್ಪಿನ್ನರ್‌ಗಳಿಗೆ ತಂಡದಲ್ಲಿ ಸ್ಥಾನ ಒದಗಿಸಲಾಗಿದ್ದು, ಇಶ್ ಸೋಧಿ ಜೊತೆಗೆ ಸೆಂಟರ್ ಸ್ಪಿನ್ ಆಲ್ ರೌಂಡರ್ ಮಿಚೆಲ್ ಸ್ಯಾಂಟ್ನರ್ ಇದ್ದಾರೆ.

ರಿಷಭ್ ಪಂತ್ ಅಥವಾ ದಿನೇಶ್ ಕಾರ್ತಿಕ್: ವಿಶ್ವಕಪ್‌ಗೂ ಮುನ್ನ ಕಠಿಣ ನಿರ್ಧಾರ ಅವಶ್ಯಕ ಎಂದ ಗವಾಸ್ಕರ್

ಅನುಭವಿ ಆಟಗಾರ ಮಾರ್ಟಿನ್ ಗಪ್ಟಿಲ್‌ಗೆ ತಂಡದಲ್ಲಿ ಸ್ಥಾನ

ಅನುಭವಿ ಆಟಗಾರ ಮಾರ್ಟಿನ್ ಗಪ್ಟಿಲ್‌ಗೆ ತಂಡದಲ್ಲಿ ಸ್ಥಾನ

ನ್ಯೂಜಿಲೆಂಡ್ ತಂಡದ ಹಿರಿಯ ಆಟಗಾರ ಮಾರ್ಟಿನ್ ಗಪ್ಟಿಲ್ ಅವರನ್ನು ಆಯ್ಕೆಗಾರರು ಬೆಂಬಲಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಗಪ್ಟಿಲ್ ಸಾಧನೆ ಉತ್ತಮವಾಗಿದ್ದು, ಗಪ್ಟಿಲ್‌ಗೆ ಇದು ಏಳನೇ ಟಿ20 ವಿಶ್ವಕಪ್ ಆಗಿದೆ. ಈ ಮೂಲಕ ಡ್ವೇನ್ ಬ್ರಾವೋ, ಕ್ರಿಸ್ ಗೇಲ್, ಮೊಹಮ್ಮದ್ ಮಹಮ್ಮದುಲ್ಲಾ, ಮುಷ್ಫೀಕರ್ ರಹೀಮ್, ಶಕೀಬ್ ಅಲ್ ಹಸನ್ ಮತ್ತು ರೋಹಿತ್ ಶರ್ಮಾ ಅವರೊಂದಿಗೆ ಗುಪ್ಟಿಲ್ ದಾಖಲೆಯನ್ನು ತಲುಪಿದ್ದಾರೆ. ಗಪ್ಟಿಲ್ ನ್ಯೂಜಿಲೆಂಡ್‌ನ ಟಿ20 ತಂಡದಲ್ಲಿ ನಿರ್ಣಾಯಕ ಆಟಗಾರ.

ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಚೇಸರ್ ಮಾಡಿದವರ ಪೈಕಿ ಗಪ್ಟಿಲ್ ಮೂರನೇ ಸ್ಥಾನದಲ್ಲಿದ್ದಾರೆ. ರಾಸ್ ಟೇಲರ್ ಅವರು ಇತ್ತೀಚೆಗೆ ನಿವೃತ್ತರಾದ ನಂತರ ತಂಡದಿಂದ ಗೈರುಹಾಜರಾಗಿದ್ದಾರೆ. ಕಿವೀಸ್ ಯುವ ಆಟಗಾರರ ಮೇಲೆ ಹೆಚ್ಚು ನಂಬಿಕೆ ಇಡಲು ಸಿದ್ಧವಿಲ್ಲ. ಹೀಗಾಗಿ ತಂಡದಲ್ಲಿ ದೊಡ್ಡ ಪರೀಕ್ಷೆಗಳೇನೂ ಇಲ್ಲ ಎನ್ನಬಹುದು. ವಿಶ್ವಕಪ್‌ಗೂ ಮುನ್ನ ಕಿವೀಸ್ ತಂಡವು ಬಾಂಗ್ಲಾದೇಶ ಮತ್ತು ಪಾಕಿಸ್ತಾನವನ್ನು ಒಳಗೊಂಡ ಸರಣಿಯನ್ನು ಆಡಲಿದೆ.

SA20 League 2023 Auction: 6 ತಂಡದ ಸಂಪೂರ್ಣ ಸ್ಕ್ವಾಡ್‌, ಅತಿ ಹೆಚ್ಚು ಮೊತ್ತ ಪಡೆದ ಆಟಗಾರರ ಪಟ್ಟಿ

ಟಿ20 ವಿಶ್ವಕಪ್‌ಗೆ ನ್ಯೂಜಿಲೆಂಡ್ ಟಿ20 ಸ್ಕ್ವಾಡ್

ಟಿ20 ವಿಶ್ವಕಪ್‌ಗೆ ನ್ಯೂಜಿಲೆಂಡ್ ಟಿ20 ಸ್ಕ್ವಾಡ್

ಕೇನ್ ವಿಲಿಯಮ್ಸನ್ (ನಾಯಕ), ಫಿನ್ ಅಲೆನ್, ಟ್ರೆಂಟ್ ಬೌಲ್ಟ್, ಮೈಕಲ್ ಬ್ರೇಸ್‌ವೆಲ್, ಮಾರ್ಕ್ ಚಾಪ್‌ಮನ್, ಡೆವೊನ್ ಕಾನ್ವೇ(ವಿಕೆಟ್ ಕೀಪರ್), ಲ್ಯುಕಿ ಫರ್ಗುಸನ್, ಮಾರ್ಟಿನ್ ಗಪ್ಟಿಲ್, ಆಡಮ್ ಮಿಲ್ನೆ, ಡೇರಿಲ್ ಮಿಚೆಲ್, ಜಿಮ್ಮಿ ನಿಶಾಮ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ.

Story first published: Tuesday, September 20, 2022, 11:10 [IST]
Other articles published on Sep 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X