ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಸಿಸಿ ಟಿ20 ವಿಶ್ವಕಪ್ ರೋಮಾಂಚನಕಾರಿ ಅಧಿಕೃತ ಗೀತೆ ಬಿಡುಗಡೆ

ICC T20 World Cup 2021 Official Anthem Launched

ಅಬುಧಾಬಿ: ಮುಂಬರಲಿರುವ ಟಿ20 ವಿಶ್ವಕಪ್‌ಗಾಗಿ ಅಧಿಕೃತ ಗೀತೆ ಬಿಡುಗಡೆಯಾಗಿದೆ. ಅಕ್ಟೋಬರ್ 17ರಿಂದ ನವೆಂಬರ್ 14ರ ವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಓಮನ್‌ನಲ್ಲಿ ನಡೆಯಲಿರುವ ಪ್ರತಿಷ್ಠಿತ ಟಿ20 ವಿಶ್ವಕಪ್‌ನ ಅಧಿಕೃತ ಗೀತೆಯನ್ನು ಅಧಿಕೃತ ಪ್ರಸಾರಕ ಸ್ಟಾರ್ ಸ್ಪೋರ್ಟ್ಸ್ ಗುರುವಾರ (ಸೆಪ್ಟೆಂಬರ್‌ 23) ಬಿಡುಗಡೆ ಮಾಡಿದೆ.

ಹೈದರಾಬಾದ್ vs ಡೆಲ್ಲಿ ಪಂದ್ಯದ ವೇಳೆಯ ತಮಾಷೆಯ ಮೀಮ್ಸ್ ನೋಡಿ!ಹೈದರಾಬಾದ್ vs ಡೆಲ್ಲಿ ಪಂದ್ಯದ ವೇಳೆಯ ತಮಾಷೆಯ ಮೀಮ್ಸ್ ನೋಡಿ!

ಐಸಿಸಿ ಟಿ20 ವಿಶ್ವಕಪ್‌ ಗೀತೆ ಇಂಗ್ಲಿಷ್‌ನಲ್ಲಿದೆಯಾದರೂ ಹಿಂದಿಯ ಚಿಕ್ಕ ಸಾಹಿತ್ಯ ಕೂಡ ಗೀತೆಯಲ್ಲಿದೆ. ಎಲ್ಲಾ ದೇಶಗಳ ನಾಯಕರು, ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ಎಲ್ಲಾ ದೇಶಗಳನ್ನು ಪರಿಗಣಿಸಿ ಗೀತೆಯನ್ನು ರೂಪಿಸಲಾಗಿದೆ. ಗೀತೆ ಕೇಳೋಕೆ, ನೋಡೋಕೆ ರೋಮಾಂಚನಕಾರಿಯಾಗಿದೆ.

ಒಟ್ಟು 16 ದೇಶಗಳ ಮಧ್ಯೆ ಟ್ರೋಫಿಗಾಗಿ ಸೆಣಸಾಟ

ಒಟ್ಟು 16 ದೇಶಗಳ ಮಧ್ಯೆ ಟ್ರೋಫಿಗಾಗಿ ಸೆಣಸಾಟ

ಸ್ಟಾರ್ ಸ್ಪೋರ್ಟ್ಸ್ ಟಿ20 ವಿಶ್ವಕಪ್‌ನ ಅಧಿಕೃತ ಗೀತೆಯ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಂಡಿದೆ. ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ದ್ವಿತೀಯ ಹಂತದ ಪಂದ್ಯಗಳು ನಡೆಯುತ್ತಿವೆ. ಅಕ್ಟೋಬರ್‌ 15ಕ್ಕೆ ಐಪಿಎಲ್ ಕೊನೆಗೊಳ್ಳಲಿದೆ. ಬಳಿಕ ಎರಡು ದಿನಗಳಲ್ಲಿ ಅಂದರೆ ಅಕ್ಟೋಬರ್‌ 17ರಲ್ಲಿ ವಿಶ್ವಕಪ್‌ ಶುರುವಾಗಲಿದೆ. ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್, ಅಫ್ಘಾನಿಸ್ತಾನ, ಓಮನ್, ಶ್ರೀಲಂಕಾ, ಪಪುವಾ ನ್ಯೂ ಗಿನಿಯಾ, ಐರ್ಲೆಂಡ್, ನೆದರ್ಲ್ಯಾಂಡ್, ಬಾಂಗ್ಲಾದೇಶ, ನಮೀಬಿಯಾ, ಸ್ಕಾಟ್ಲೆಂಡ್ ಹೀಗೆ ಒಟ್ಟು 16 ದೇಶಗಳು ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ.ಅಸಲಿಗೆ ಭಾರತದಲ್ಲಿ ನಡೆಯಬೇಕಿದ್ದ ಈ ಟೂರ್ನಿ ಕೋವಿಡ್ ಕಾರಣ ಯುಎಇ ಮತ್ತು ಓಮನ್‌ನಲ್ಲಿ ನಡೆಯುತ್ತಿದೆ.

ಟಿ20 ವಿಶ್ವಕಪ್‌ ಗ್ರೂಪ್‌ ವಿಭಾಗಗಳ ಪ್ರಮುಖ ಮಾಹಿತಿ

ಅಕ್ಟೋಬರ್‌ 17ರಂದು ಗ್ರೂಪ್‌ 'ಬಿ'ಯ ರೌಂಡ್‌ 1ರಲ್ಲಿ ಆತಿಥೇಯ ಓಮನ್ ಮತ್ತು ಪಪುವಾ ನ್ಯೂಗಿನಿಯಾ ದೇಶಗಳ ನಡುವಿನ ಪಂದ್ಯದೊಂದಿಗೆ ಟೂರ್ನಿ ಆರಂಭಗೊಳ್ಳಲಿದೆ. ಗ್ರೂಪ್‌ ಬಿಯಲ್ಲಿರುವ ಇನ್ನುಳಿದ ತಂಡಗಳಾದ ಸ್ಕಾಟ್ಲೆಂಡ್ ಮತ್ತು ಬಾಂಗ್ಲಾದೇಶ ಸಂಜೆ ಕಾದಾಡಲಿವೆ. ಗ್ರೂಪ್‌ 'ಎ'ಯಲ್ಲಿರುವ ಐರ್ಲೆಂಡ್, ನೆದರ್ಲ್ಯಾಂಡ್ಸ್, ಶ್ರೀಲಂಕಾ ಮತ್ತು ನಮೀಬಿಯಾ ತಂಡಗಳು ಮುಂದಿನ ದಿನ ಅಬುಧಾಬಿಯಲ್ಲಿ ನಡೆಯಲಿರುವ ಪಂದ್ಯದಲ್ಲಿ ಸೆಣಸಾಡಲಿವೆ. ಅಕ್ಟೋಬರ್‌ 24ರಂದು ಭಾರತ ಮತ್ತು ಪಾಕಿಸ್ತಾನ ತಂಡಗಳು ಗ್ರೂಪ್‌ ಹಂತದಲ್ಲಿ ಮುಖಾಮುಖಿಯಾಗಲಿದ್ದು, ಪಂದ್ಯ ಕುತೂಹಲ ಮೂಡಿಸಿದೆ. ಗ್ರೂಪ್‌-1ರಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ, ಸೌತ್ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಎರಡು ಕ್ವಾಲಿಫೈಯರ್ (A1, B2) ತಂಡಗಳಿದ್ದರೆ, ಗ್ರೂಪ್ 2ರಲ್ಲಿ ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್, ಅಫ್ಘಾನಿಸ್ತಾನ ಮತ್ತು ಎರಡು ಕ್ವಾಲಿಫೈಯರ್ ತಂಡಗಳು (A2, B1) ತಂಡಗಳು ಇವೆ. ಫೈನಲ್‌ ಪಂದ್ಯ ನವೆಂಬರ್‌ 14ರಂದು ದುಬೈನಲ್ಲಿ ನಡೆಯಲಿದೆ.

KKR ತಂಡ MI ವಿರುದ್ಧ ಗೆಲುವು ಸಾಧಿಸಿದ್ದು ಹೇಗೆ | Oneindia Kannada
ಹಿಂದಿನ ಟಿ20 ವಿಶ್ವಕಪ್‌ ಇಣುಕು ನೋಟ

ಹಿಂದಿನ ಟಿ20 ವಿಶ್ವಕಪ್‌ ಇಣುಕು ನೋಟ

2007ರಲ್ಲಿ ಆರಂಭಗೊಂಡಿರುವ ಟಿ20 ವಿಶ್ವಕಪ್‌ ಟೂರ್ನಿ ಈವರೆಗೆ ಒಟ್ಟು ಆರು ಆವೃತ್ತಿಗಳನ್ನು ಕಂಡಿದೆ. ಈ ಬಾರಿ ನಡೆಯುತ್ತಿರುವುದು 7ನೇ ಆವೃತ್ತಿ. ಭಾರತ, ಪಾಕಿಸ್ತಾನ, ಶ್ರೀಲಂಕಾ, ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ತಂಡಗಳು ಪ್ರಶಸ್ತಿ ಗೆದ್ದಿವೆ. ಇದರಲ್ಲಿ ವೆಸ್ಟ್‌ ಇಂಡೀಸ್ ತಂಡ 2012 ಮತ್ತು 2016ರಲ್ಲಿ ಅಂದರೆ ಕಡೇಯ ಸೀಸನ್‌ನಲ್ಲಿ ಚಾಂಪಿಯನ್ಸ್ ಪಟ್ಟ ಗೆದ್ದಿದೆ. ಬಲಿಷ್ಠ ದೇಶಗಳಲ್ಲಿ ಒಂದಾಗಿರುವ ಆಸ್ಟ್ರೇಲಿಯಾ ಟಿ20 ವಿಶ್ವಕಪ್‌ ಗೆದ್ದಿಲ್ಲ. ಭಾರತ ಆರಂಭಿಕ ಆವೃತ್ತಿ ಅಂದರೆ 2007ರಲ್ಲಿ ಪಾಕಿಸ್ತಾನ ಸೋಲಿಸಿ ಚೊಚ್ಚಲ ಟ್ರೋಫಿ ಗೆದ್ದಿತ್ತು. ಎಂಎಸ್ ಧೋನಿ ತಂಡದ ನಾಯಕರಾಗಿದ್ದರು. ಈ ಬಾರಿ ಅಕ್ಟೋಬರ್‌ 24ರಂದು ಭಾರತ ಮತ್ತು ಪಾಕಿಸ್ತಾನ ತಂಡಗಳು ಟೂರ್ನಿಯಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯ ಕುತೂಹಲ ಮೂಡಿಸಿದೆ.2020ರಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್‌ ಟೂರ್ನಿ ಕೋವಿಡ್ ಕಾರಣದಿಂದಾಗಿ ಒಂದು ವರ್ಷ ಮುಂದೂಡಲ್ಪಟ್ಟಿತ್ತು. ಅದೂ ಅಲ್ಲದೆ, ಭಾರತದಲ್ಲಿ ನಡೆಯಬೇಕಿದ್ದ ಟೂರ್ನಿ ಕೋವಿಡ್ ಭೀತಿಯಿಂದಾಗಿ ಯುಎಇ ಮತ್ತು ಓಮನ್‌ನಲ್ಲಿ ನಡೆಯುತ್ತಿದೆ. ಆದರೆ ಆತಿಥ್ಯ ಈಗಲೂ ಭಾರತದ ಕೈಯಲ್ಲಿದೆ.

Story first published: Thursday, September 23, 2021, 15:33 [IST]
Other articles published on Sep 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X