ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2022ರ ಟಿ20 ವಿಶ್ವಕಪ್‌ ವೇಳಾಪಟ್ಟಿ: ಸೆಮಿಫೈನಲ್, ಫೈನಲ್ ಪಂದ್ಯಗಳು ಇಲ್ಲಿ ನಡೆಯಲಿವೆ!

ICC T20 WC 2022

ದುಬೈನಲ್ಲಿ ಐಸಿಸಿ ಟಿ20 ವಿಶ್ವಕಪ್ 2021 ಮುಗಿದು ಕೆಲ ದಿನಗಳಷ್ಟೇ ಕಳೆದಿದೆ. ನ್ಯೂಜಿಲೆಂಡ್ ಎದುರು ಆಸ್ಟ್ರೇಲಿಯಾವು ಗೆದ್ದು ಚೊಚ್ಚಲ ವಿಶ್ವಕಪ್ ಅನ್ನು ಮುಡಿಗೇರಿಸಿಕೊಂಡಿದೆ. ಈ ಮೂಲಕ ಎಲ್ಲಾ ಐಸಿಸಿ ಟ್ರೋಫಿಗಳನ್ನ ಗೆದ್ದ ಕೆಲವೇ ರಾಷ್ಟ್ರಗಳಲ್ಲಿ ಆಸೀಸ್ ಒಂದಾಗಿದೆ.

ಚೊಚ್ಚಲ ಟಿ20 ವಿಶ್ವಕಪ್ ಗೆದ್ದುಕೊಂಡ ಆಸ್ಟ್ರೇಲಿಯಾವು ಮುಂಬರುವ ಟಿ20 ವಿಶ್ವಕಪ್ ಆತಿಥ್ಯವನ್ನು ವಹಿಸಲಿದೆ. 2022ರ ಟಿ20 ವಿಶ್ವಕಪ್‌ ಕಾಂಗರೂಗಳ ನಾಡಿನಲ್ಲಿ ನಡೆಯಲಿದೆ. ಅನೇಕ ಐಸಿಸಿ ವಿಶ್ವಕಪ್‌ಗಳ ಆತಿಥ್ಯ ವಹಿಸಿಕೊಂಡಿರುವ ಆಸ್ಟ್ರೇಲಿಯಾವು ಮತ್ತೊಂದು ವಿಶ್ವಕಪ್‌ಗೆ ನಡೆಸಿಕೊಡಲು ಈಗಿನಿಂದಲೇ ತಯಾರಿ ನಡೆಸಿದೆ.

ಸುಮಾರು ಒಂದು ವರ್ಷದಲ್ಲಿ ಮತ್ತೊಂದು ವಿಶ್ವಕಪ್ ನಡೆಯಲಿರುವುದು ಅಭಿಮಾನಿಗಳಲ್ಲಿ ಸಾಕಷ್ಟು ಖುಷಿ ತಂದಿದೆ. ಇದರ ಜೊತೆಗೆ ಒಂದು ವರ್ಷವಿರುವ ಮೊದಲೇ ಆತಿಥ್ಯವಹಿಸಲಿರುವ ಸ್ಟೇಡಿಯಂಗಳ ಪಟ್ಟಿ ಕೂಡ ಬಿಡುಗಡೆಗೊಂಡಿದೆ.

ಏಳು ನಗರಗಳಲ್ಲಿ ವಿಶ್ವಕಪ್ ಪಂದ್ಯಗಳು

ಏಳು ನಗರಗಳಲ್ಲಿ ವಿಶ್ವಕಪ್ ಪಂದ್ಯಗಳು

ಅಕ್ಟೋಬರ್ 16 ರಿಂದ ನವೆಂಬರ್ 13 ರವರೆಗೆ ನಡೆಯುವ ವಿಶ್ವಕಪ್ ಪಂದ್ಯಗಳನ್ನು ನಡೆಸುವ ಜವಾಬ್ದಾರಿಯನ್ನು ಹೊಂದಿರುವ ಏಳು ಆತಿಥೇಯ ನಗರಗಳನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪ್ರಕಟಿಸಿದೆ.

ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್ ಆತಿಥ್ಯವನ್ನು ಅಡಿಲೇಡ್, ಬ್ರಿಸ್ಬೇನ್, ಗೀಲಾಂಗ್, ಹೊಬಾರ್ಟ್, ಮೆಲ್ಬೋರ್ನ್, ಪರ್ತ್ ಮತ್ತು ಸಿಡ್ನಿ ವಹಿಸಲಿದ್ದು, ಒಟ್ಟು 45 ಪಂದ್ಯಗಳನ್ನು ಆಯೋಜಿಸಲಿದೆ.

ಭಾರತ VS ನ್ಯೂಜಿಲೆಂಡ್ ಮೊದಲ ಟಿ20: ಸಂಭಾವ್ಯ ಪ್ಲೇಯಿಂಗ್ 11, ಕೀ ಪ್ಲೇಯರ್ಸ್

ಎಂಸಿಜಿಯಲ್ಲಿ ನವೆಂಬರ್ 13, 2022ಕ್ಕೆ ಫೈನಲ್ ಪಂದ್ಯ

ಎಂಸಿಜಿಯಲ್ಲಿ ನವೆಂಬರ್ 13, 2022ಕ್ಕೆ ಫೈನಲ್ ಪಂದ್ಯ

ಟಿ20 ವಿಶ್ವಕಪ್ 2022ರ ಸೆಮಿಫೈನಲ್ ಮತ್ತು ಫೈನಲ್ ಪಂದ್ಯದ ದಿನಾಂಕವೂ ಹೊರಬಿದ್ದಿದ್ದು, ನವೆಂಬರ್ 9 ಮತ್ತು 10ರಂದು ಸಿಡ್ನಿ ಕ್ರಿಕೆಟ್ ಗ್ರೌಂಡ್ ಹಾಗೂ ಅಡಿಲೇಡ್ ಓವಲ್‌ನಲ್ಲಿ ಸೆಮಿಫೈನಲ್ಸ್ ನಡೆಯಲಿದೆ. ಇನ್ನು ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನವೆಂಬರ್ 13, 2022ರಂದು ಫೈನಲ್ ಪಂದ್ಯ ನಡೆಯಲಿದೆ.

ಮುಂಬರುವ ವಿಶ್ವಕಪ್‌ ಆಡಲಿರುವ ತಂಡಗಳು

ಮುಂಬರುವ ವಿಶ್ವಕಪ್‌ ಆಡಲಿರುವ ತಂಡಗಳು

ಈ ಬಾರಿಯ ಟಿ20 ಚಾಂಪಿಯನ್ ಆಸ್ಟ್ರೇಲಿಯಾ, ರನ್ನರ್ ಅಪ್ ನ್ಯೂಜಿಲೆಂಡ್ ಅಫ್ಘಾನಿಸ್ತಾನ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ, ನಂತರದ ಅತ್ಯುನ್ನತ ಶ್ರೇಣಿಯ ತಂಡಗಳಾಗಿ, ಪುರುಷರ T20 ವಿಶ್ವಕಪ್ 2022 ರ 'ಸೂಪರ್ 12' ಹಂತಕ್ಕೆ ನೇರ ಪ್ರವೇಶವನ್ನು ಪಡೆಯುತ್ತವೆ.

Shoaib Akhtar ; ಹಿಂಗೂ ಸೆಲೆಬ್ರೇಟ್ ಮಾಡ್ತಾರಾ! | Oneindia Kannada

335 ದಿನಗಳ ಬಾಕಿ ಎಂದಿರುವ ಜೇಮ್ಸ್ ನೀಶಮ್

ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲನ್ನ ಅರಗಿಸಿಕೊಳ್ಳದ ನ್ಯೂಜಿಲೆಂಡ್ ಮುಂಬರುವ ವಿಶ್ವಕಪ್‌ನಲ್ಲಿ ಕಾಂಗರೂಗಳನ್ನ ಬೇಟೆಯಾಡದೆ ಬಿಡದು ಎಂದು ತಂಡದ ಸ್ಫೋಟಕ ಆಲ್‌ರೌಂಡರ್ ಜೇಮ್ಸ್ ನೀಶಮ್ ಹೇಳಿದ್ದಾರೆ. ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಗೆಲುವನ್ನ ಸಂಭ್ರಮಿಸಿದೇ ಹಾಗೆಯೇ ಕುಳಿತಿದ್ದ ನೀಶಮ್ ಫೈನಲ್ ಗೆಲುವಿನ ಮೂಲಕ ಸಂಭ್ರಮಿಸುವುದಾಗಿ ಹೇಳಿದ್ದರು.

ಆದ್ರೆ ನ್ಯೂಜಿಲೆಂಡ್‌ ಐಸಿಸಿ ಟ್ರೋಫಿ ಫೈನಲ್‌ನಲ್ಲಿ ಮೂರನೇ ಬಾರಿಗೆ ಮುಗ್ಗರಿಸಿದೆ. 2015, 2019ರಲ್ಲಿ 50 ಓವರ್‌ಗಳ ವಿಶ್ವಕಪ್ ಫೈನಲ್‌ನಲ್ಲಿ ಸೋತರೆ, 2021ರಲ್ಲಿ ಟಿ20 ವಿಶ್ವಕಪ್ ಫೈನಲ್‌ನಲ್ಲೂ ಪರಾಜಯಗೊಂಡಿದೆ. ಇದು ಕಿವೀಸ್ ಪಡೆಗೆ ನುಂಗಲಾರದ ತುತ್ತಾಗಿದ್ದು, ಜೇಮ್ಸ್ ನೀಶಮ್ 335 ದಿನಗಳು ಎಂದು ಟ್ವೀಟ್ ಮಾಡುವ ಮೂಲಕ ಮುಂದಿನ ವಿಶ್ವಕಪ್ ಬಿಡೆವು ಎಂದು ತಮ್ಮ ಛಲ ತೋರಿಸಿದ್ದಾರೆ.

Story first published: Tuesday, November 16, 2021, 18:34 [IST]
Other articles published on Nov 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X