ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

T20 ವಿಶ್ವಕಪ್‌ 2022: ಸ್ವಲ್ಪ ಯಾಮಾರಿದ್ರೂ ಈ 4 ಭಾರತದ ಸ್ಟಾರ್‌ ಆಟಗಾರರು ಮಿಸ್

Hardik pandya and KL Rahul

ಟಿ20 ವಿಶ್ವಕಪ್‌ಗೆ ಇನ್ನು ಮೂರು ತಿಂಗಳು ಬಾಕಿ ಇದೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಎಲ್ಲಾ ಕ್ರಿಕೆಟ್ ತಂಡಗಳು ಅಂತಿಮ ಹಂತದ ತಯಾರಿಯಲ್ಲಿವೆ. ಭಾರತ ತಂಡ ಕೂಡ ವಿಶ್ವಕಪ್‌ಗೆ ಮುನ್ನುಡಿ ಬರೆಯುತ್ತಿದೆ. ಭಾರತದ ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾ ಅವರು ಅತ್ಯುತ್ತಮ ಯುವ ಆಟಗಾರರನ್ನು ಪರಿಗಣಿಸಿ ಉತ್ತಮ ತಂಡವನ್ನು ರಚಿಸಲು ಪ್ರಯತ್ನಿಸುತ್ತಿದ್ದಾರೆ.

ಭಾರತ ತಂಡದಲ್ಲಿ ಅತ್ಯುತ್ತಮ ಸಾಂಘಿಕ ಬಲ ಹೊಂದಿದ್ದರೂ ಗಾಯಗಳೇ ತಂಡಕ್ಕೆ ಸವಾಲಾಗಿವೆ. ಕೆಲ ಸೂಪರ್ ಸ್ಟಾರ್ ಗಳ ಫಿಟ್ ನೆಸ್ ಬಗ್ಗೆ ಟೀಮ್ ಮ್ಯಾನೇಜ್ ಮೆಂಟ್ ಚಿಂತಿಸಿದೆ. ಸತತ ಗಾಯಗಳಿಂದ ಬಳಲುತ್ತಿರುವವರಿಗೆ ಅಗತ್ಯಕ್ಕಿಂತ ಹೆಚ್ಚಿನ ವಿಶ್ರಾಂತಿ ನೀಡುವ ಮೂಲಕ ಬಿಸಿಸಿಐ ಮುನ್ನಡೆಯುತ್ತಿದೆ. ಆದರೆ ವಿಶ್ವಕಪ್‌ಗೂ ಮುನ್ನ ಮತ್ತೊಮ್ಮೆ ಗಾಯಗೊಂಡರೆ ಎಲ್ಲವೂ ಸಂಕಷ್ಟಕ್ಕೆ ಸಿಲುಕಲಿದೆ. ವಿಶ್ವಕಪ್‌ಗೆ ಮುನ್ನ ಗಾಯದ ಭೀತಿಯಲ್ಲಿರುವ ಪ್ರಮುಖ ಭಾರತೀಯ ಆಟಗಾರರ ಈ ಕೆಳಗೆ ತಿಳಿಯಿರಿ.

ಕೆ.ಎಲ್ ರಾಹುಲ್

ಕೆ.ಎಲ್ ರಾಹುಲ್

ಕೆ.ಎಲ್ ರಾಹುಲ್ ಬಗ್ಗೆ ಟೀಂ ಇಂಡಿಯಾ ತೀವ್ರ ಆತಂಕದಲ್ಲಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ತಂಡದ ನಾಯಕರಾಗಿ ಕೆ.ಎಲ್ ರಾಹುಲ್ ಆಯ್ಕೆಯಾಗಿದ್ದರು. ಆದರೆ ಗಾಯಗೊಂಡ ರಾಹುಲ್‌ಗೆ ಜರ್ಮನಿಯಲ್ಲಿ ಶಸ್ತ್ರಚಿಕಿತ್ಸೆ ಮಾಡಬೇಕಾಯಿತು. ಇದಲ್ಲದೆ ರಾಹುಲ್ ಅವರು ಕೋವಿಡ್ ಸೋಂಕಿಗೆ ಒಳಗಾದ ಪರಿಣಾಮ ವೆಸ್ಟ್ ಇಂಡೀಸ್ ವಿರುದ್ಧ ಸರಣಿಗೂ ಮಿಸ್ ಆಗುವ ಆತಂಕದಲ್ಲಿದ್ದಾರೆ.

ಹೀಗೆ ಪದೇ ಪದೇ ಗಾಯಗೊಳ್ಳುತ್ತಿರುವ ಭಾರತಕ್ಕೆ ರಾಹುಲ್ ಫಿಟ್ನೆಸ್ ದೊಡ್ಡ ತಲೆನೋವಾಗಿದೆ. ರಾಹುಲ್ ಭಾರತದ ನಿರ್ಣಾಯಕ ಆಟಗಾರರಲ್ಲಿ ಒಬ್ಬರು. ಹೀಗಾಗಿ ರಾಹುಲ್ ಗಾಯಗೊಂಡು ವಿಶ್ವಕಪ್ ನಲ್ಲಿ ಆಡಲು ಸಾಧ್ಯವಾಗದೇ ಇದ್ದರೆ ಭಾರತಕ್ಕೆ ದೊಡ್ಡ ಹಿನ್ನಡೆಯಾಗಲಿದೆ.

ಭುವನೇಶ್ವರ್ ಕುಮಾರ್

ಭುವನೇಶ್ವರ್ ಕುಮಾರ್

ಸದ್ಯ ಭಾರತ ಟಿ20ಯಲ್ಲಿ ಮಾತ್ರ ಭುವನೇಶ್ವರ್ ಕುಮಾರ್‌ಗೆ ಅವಕಾಶ ನೀಡುತ್ತಿದೆ. ಗಾಯದ ಸಮಸ್ಯೆಯಿಂದ ಸುದೀರ್ಘ ಸಮಯದಿಂದ ಹೊರಗುಳಿದಿರುವ ಭುವಿಗೆ ಟಿ20 ವಿಶ್ವಕಪ್‌ಗೂ ಮುನ್ನ ಅವಕಾಶಗಳನ್ನು ನೀಡುತ್ತಿದ್ದಾರೆ. ಹಿರಿಯ ವೇಗಿಗಳಿಗೂ ಅಗತ್ಯಕ್ಕೆ ತಕ್ಕಂತೆ ವಿಶ್ರಾಂತಿ ನೀಡಲಾಗಿದೆ. ಆದರೆ ಭುವಿ ಕಾಲಿನ ಗಾಯದ ತೊಂದರೆ ಬಿಟ್ಟಿಲ್ಲ. ಆದ್ದರಿಂದ ಭುವಿಯ ಫಿಟ್ನೆಸ್ ಭಾರತಕ್ಕೆ ಟಿ20 ವಿಶ್ವಕಪ್‌ಗೂ ಮುನ್ನ ದೊಡ್ಡ ತಲೆನೋವನ್ನು ತಂದೊಡ್ಡಲಿದೆ.

ಬ್ಯಾಟಿಂಗ್‍ನಲ್ಲಿ ಫ್ಲಾಪ್ ಆದರೂ ವಿಂಡೀಸ್ ವಿರುದ್ಧದ ಪ್ರಥಮ ಪಂದ್ಯದ ಗೆಲುವಿಗೆ ಸಂಜು ಸ್ಯಾಮ್ಸನ್ ಕಾರಣ!

ರೋಹಿತ್ ಶರ್ಮಾ

ರೋಹಿತ್ ಶರ್ಮಾ

ರೋಹಿತ್ ಶರ್ಮಾ ಭಾರತ ವಿಶ್ವಕಪ್‌ನ ಬೆನ್ನೆಲುಬು. ಅವರ ನಾಯಕತ್ವದಲ್ಲಿ ಭಾರತ ರಣತಂತ್ರ ರೂಪಿಸುತ್ತಿದೆ. ಆದರೆ ಇತ್ತೀಚೆಗೆ ರೋಹಿತ್ ಫಿಟ್ನೆಸ್ ಸಮಸ್ಯೆ ಕಾಡುತ್ತಿದೆ. ರೋಹಿತ್ ಆಗಾಗ್ಗೆ ಗಾಯಗೊಂಡು ವಿಶ್ರಾಂತಿ ಪಡೆಯುತ್ತಾರೆ. ಇದು ಭಾರತಕ್ಕೆ ಆತಂಕದ ವಿಷಯ. ಏಷ್ಯಾಕಪ್‌ನಲ್ಲೂ ಭಾರತ ರೋಹಿತ್ ನಾಯಕತ್ವದಲ್ಲಿ ಆಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಸತತವಾಗಿ ಗಾಯಗೊಂಡಿರುವ ರೋಹಿತ್ ಗೆ ಏಷ್ಯಾಕಪ್ ವೇಳೆ ದೊಡ್ಡ ಗಾಯವಾದರೆ ಭಾರತದ ಲೆಕ್ಕಾಚಾರ ತಪ್ಪುವುದು ಖಚಿತ. ಹೀಗಾಗಿ ಭಾರತ ತಂಡದ ಮ್ಯಾನೇಜ್‌ಮೆಂಟ್ ರೋಹಿತ್ ಫಿಟ್‌ನೆಸ್‌ಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ.

Ind vs WI 2nd ODI: ಪ್ರಿವ್ಯೂ, ಪ್ಲೇಯಿಂಗ್ 11, ಡ್ರೀಂ ಟೀಂ, ಪಿಚ್ ರಿಪೋರ್ಟ್‌

ಹಾರ್ದಿಕ್ ಪಾಂಡ್ಯ

ಹಾರ್ದಿಕ್ ಪಾಂಡ್ಯ

ಬೆನ್ನು ನೋವಿನಿಂದಾಗಿ ಭಾರತ ತಂಡದಿಂದ ದೀರ್ಘ ಕಾಲ ದೂರ ಉಳಿದಿದ್ದ ಹಾರ್ದಿಕ್ ಪಾಂಡ್ಯ ಕಳೆದ ಐಪಿಎಲ್ ಮೂಲಕ ಸಕ್ರಿಯವಾಗಿ ಕ್ರಿಕೆಟ್ ಗೆ ಮರಳಿದ್ದರು. ಹಾರ್ದಿಕ್ ಗುಜರಾತ್ ಟೈಟಾನ್ಸ್ ತಂಡವನ್ನು ಗೆಲ್ಲಿಸಿ ಭಾರತ ತಂಡಕ್ಕೆ ಮರಳಿದರು. ಸದ್ಯ ಏಕದಿನ ಹಾಗೂ ಟಿ20 ಮಾದರಿಯಲ್ಲಿ ಆಡುತ್ತಿರುವ ಹಾರ್ದಿಕ್ ಬೌಲಿಂಗ್ ಕೂಡ ಆರಂಭಿಸಿದ್ದಾರೆ. ಆದ್ದರಿಂದ, ಗಾಯದ ಪರಿಸ್ಥಿತಿಯೂ ಹೆಚ್ಚಾಗುತ್ತದೆ. ಸೂಪರ್ ಆಲ್ ರೌಂಡರ್ ಮತ್ತೆ ಗಾಯಗೊಂಡರೆ ವಿಶ್ವಕಪ್ ನಲ್ಲಿ ಭಾರತದ ಮೇಲೆ ಋಣಾತ್ಮಕ ಪರಿಣಾಮ ಬೀರುವುದರಲ್ಲಿ ಸಂಶಯವಿಲ್ಲ.

Story first published: Saturday, July 23, 2022, 22:33 [IST]
Other articles published on Jul 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X