ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಲಕ್ಷ್ಮಣ್‌ ನೆಚ್ಚಿನ ಭಾರತ ಟಿ20 ವಿಶ್ವಕಪ್‌ ತಂಡದಲ್ಲಿ ಧೋನಿ, ಧವನ್‌ ಇಲ್ಲ!

ICC T20 World Cup: VVS Laxman names his India squad for tournament

ನವದೆಹಲಿ, ಜನವರಿ 8: ಟೀಮ್ ಇಂಡಿಯಾದ ಮಾಜಿ ಬ್ಯಾಟ್ಸ್‌ಮನ್, ವೆರಿ ವೆರಿ ಸ್ಪೆಶಲ್' ಖ್ಯಾತಿಯ ವಿವಿಎಸ್ ಲಕ್ಷ್ಮಣ್, ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಪ್ರತಿಷ್ಠಿತ ಐಸಿಸಿ ಟಿ20 ವಿಶ್ವಕಪ್‌ಗಾಗಿ ತನ್ನ ನೆಚ್ಚಿನ ಭಾರತ ತಂಡವನ್ನು ಪ್ರಕಟಿಸಿದ್ದಾರೆ.

ಟ್ರೈನರ್ ಮೇಲೆ ರೊಚ್ಚಿಗೆದ್ದ ಯುಜುವೇಂದ್ರ ಚಾಹಲ್ ದಾಳಿ!: ವಿಡಿಯೋಟ್ರೈನರ್ ಮೇಲೆ ರೊಚ್ಚಿಗೆದ್ದ ಯುಜುವೇಂದ್ರ ಚಾಹಲ್ ದಾಳಿ!: ವಿಡಿಯೋ

ಲಕ್ಷ್ಮಣ್ ಪ್ರಕಟಿಸಿರುವ 15 ಜನರ ತಂಡದಲ್ಲಿ ಮಾಜಿ ನಾಯಕ ಎಂಎಸ್ ಧೋನಿ ಮತ್ತು 'ಗಬ್ಬರ್ ಸಿಂಗ್' ಶಿಖರ್ ಧವನ್ ಅವರಂತ ಅನುಭವಿ ಆಟಗಾರರ ಹೆಸರೇ ಇಲ್ಲ. ಬದಲಿಗೆ ತಂಡದಲ್ಲಿ ಯುವ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ರೋಹಿತ್ ಶರ್ಮಾ ಹಿಂದಿಕ್ಕಿ ವಿಶ್ವದಾಖಲೆ ಬರೆದ ನಾಯಕ ವಿರಾಟ್ ಕೊಹ್ಲಿ!ರೋಹಿತ್ ಶರ್ಮಾ ಹಿಂದಿಕ್ಕಿ ವಿಶ್ವದಾಖಲೆ ಬರೆದ ನಾಯಕ ವಿರಾಟ್ ಕೊಹ್ಲಿ!

ಐಸಿಸಿ ಟಿ20 ವಿಶ್ವಕಪ್‌ಗಾಗಿ ವಿವಿಎಸ್ ಲಕ್ಷ್ಮಣ್ ಆರಿಸಿದ ಭಾರತ ತಂಡ ಯುವಕರಿಂದ ಕೂಡಿದ್ದರೂ ಬಲಿಷ್ಠವಾಗೇ ಇದೆ.

ಲಂಕಾ ವಿರುದ್ಧ ಗೆದ್ದ ಬಳಿಕ ಆರಿಸಿದ ತಂಡ

ಲಂಕಾ ವಿರುದ್ಧ ಗೆದ್ದ ಬಳಿಕ ಆರಿಸಿದ ತಂಡ

ಇಂದೋರ್‌ನ ಹೋಲ್ಕರ್ ಸ್ಟೇಡಿಯಂನಲ್ಲಿ ಮಂಗಳವಾರ (ಜನವರಿ 7) ನಡೆದ ಶ್ರೀಲಂಕಾ-ಭಾರತ ದ್ವಿತೀಯ ಟಿ20 ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆ 7 ವಿಕೆಟ್ ಸುಲಭ ಜಯ ಗಳಿಸಿತ್ತು. ಟೀಮ್ ಇಂಡಿಯಾ ಜಯ ಸಾಧಿಸಿದ ಬಳಿಕ ಭಾರತದ ಅಧಿಕೃತ ಪ್ರಸಾರಕ ಹಾಟ್ ಸ್ಟಾರ್ ಜೊತೆ ಮಾತನಾಡುತ್ತ ಲಕ್ಷ್ಮಣ್ ತನ್ನ ನೆಚ್ಚಿನ ತಂಡವನ್ನು ಹೆಸರಿಸಿದರು.

ಇಬ್ಬರು ಕನ್ನಡಿಗರಿಗೆ ಸ್ಥಾನ

ಇಬ್ಬರು ಕನ್ನಡಿಗರಿಗೆ ಸ್ಥಾನ

ಲಕ್ಷ್ಮಣ್ ಪ್ರಕಟಿಸಿರುವ 15 ಜನರ ಭಾರತ ಟಿ20 ವಿಶ್ವಕಪ್ ತಂಡದಲ್ಲಿ ಧೋನಿ, ಧವನ್‌ರಂತ ಅನುಭವಿ-ಪ್ರಮುಖ ಆಟಗಾರರಿಲ್ಲ. ಆದರೆ ಕರ್ನಾಟಕದ ಇಬ್ಬರು ಪ್ರತಿಭಾನ್ವಿತ ಆಟಗಾರರ ಹೆಸರಿದೆ. ಕನ್ನಡಿಗರಾದ ಕೆಎಲ್ ರಾಹುಲ್ ಮತ್ತು ಮನೀಷ್ ಪಾಂಡೆ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯ

ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯ

ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ 18ರಿಂದ ನವೆಂಬರ್ 15ರ ವರೆಗೆ ನಡೆಯಲಿರುವ ಪುರುಷರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಒಟ್ಟು 16 ತಂಡಗಳು ಪಾಲ್ಗೊಳ್ಳುತ್ತಿವೆ. ಟೂರ್ನಿ ಒಟ್ಟು 45 ಪಂದ್ಯಗಳನ್ನು ಒಳಗೊಂಡಿರಲಿದೆ. ಟೀಮ್ ಇಂಡಿಯಾ ಅಕ್ಟೋಬರ್ 24ರಂದು ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯವನ್ನಾಡಲಿದೆ.

ವಿಶ್ವಕಪ್‌ಗೆ ಲಕ್ಷ್ಮಣ್ ನೆಚ್ಚಿನ ಭಾರತ ತಂಡ

ವಿಶ್ವಕಪ್‌ಗೆ ಲಕ್ಷ್ಮಣ್ ನೆಚ್ಚಿನ ಭಾರತ ತಂಡ

ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್, ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ, ಮನೀಶ್ ಪಾಂಡೆ, ಶಿವಂ ದೂಬೆ, ರವೀಂದ್ರ ಜಡೇಜಾ, ಜಸ್‌ಪ್ರೀತ್‌ ಬೂಮ್ರಾ, ಯುಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ದೀಪಕ್ ಚಹಾರ್, ಭುವನೇಶ್ವರ್ ಕುಮಾರ್.

Story first published: Wednesday, January 8, 2020, 18:08 [IST]
Other articles published on Jan 8, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X