ICC T20 Ranking: 68 ಸ್ಥಾನ ಜಿಗಿದು ಅಗ್ರ 10ರಲ್ಲಿ ಕಾಣಿಸಿಕೊಂಡ ಇಶಾನ್ ಕಿಶನ್

ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಇಶಾನ್ ಕಿಶನ್ 68 ಸ್ಥಾನ ಮೇಲಕ್ಕೇರಿ ಬ್ಯಾಟ್ಸ್‌ಮನ್‌ಗಳ ಪೈಕಿ ಅಗ್ರ 10ರಲ್ಲಿ ಕಾಣಿಸಿಕೊಂಡಿದ್ದು, ಪಸ್ತುತ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಪರಿಣಾಮ 7ನೇ ಸ್ಥಾನವನ್ನು ಗಳಿಸಿದ್ದಾರೆ.

ಇದೇ ವೇಳೆ ಬೌಲಿಂಗ್ ಜೋಡಿಯಾದ ಭುವನೇಶ್ವರ್ ಕುಮಾರ್ ಮತ್ತು ಯುಜ್ವೇಂದ್ರ ಚಹಾಲ್ ಕೂಡ ಬುಧವಾರ ಬಿಡುಗಡೆಯಾದ ಇತ್ತೀಚಿನ ಐಸಿಸಿ ಟಿ20 ರ್‍ಯಾಂಕಿಂಗ್‌ನಲ್ಲಿ ಲಾಭ ಗಳಿಸಿದ್ದಾರೆ.

NZ vs Eng: ಜೀವಮಾನದ ಇನ್ನಿಂಗ್ಸ್; ಜಾನಿ ಬೈರ್‌ಸ್ಟೋವ್ ಬ್ಯಾಟಿಂಗ್ ಬಗ್ಗೆ ವೀರೇಂದ್ರ ಸೆಹ್ವಾಗ್ ಮೆಚ್ಚುಗೆNZ vs Eng: ಜೀವಮಾನದ ಇನ್ನಿಂಗ್ಸ್; ಜಾನಿ ಬೈರ್‌ಸ್ಟೋವ್ ಬ್ಯಾಟಿಂಗ್ ಬಗ್ಗೆ ವೀರೇಂದ್ರ ಸೆಹ್ವಾಗ್ ಮೆಚ್ಚುಗೆ

ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಟಿ20 ತವರಿನ ಸರಣಿಯಲ್ಲಿ ಭಾರತದ ಪರ ಸ್ಥಿರ ಪ್ರದರ್ಶನ ನೀಡಿದವರಲ್ಲಿ ಒಬ್ಬರಾಗಿರುವ ಇಶಾನ್ ಕಿಶನ್, ಮೂರು ಪಂದ್ಯಗಳಲ್ಲಿ ಎರಡು ಅರ್ಧಶತಕಗಳು ಸೇರಿದಂತೆ 164 ರನ್ ಗಳಿಸಿದ್ದಾರೆ. ಟಿ20 ಬ್ಯಾಟ್ಸ್‌ಮನ್‌ಗಳಲ್ಲಿ ಅಗ್ರ 10ರೊಳಗೆ ಪ್ರವೇಶಿಸಲು ಬೃಹತ್ ಜಿಗಿತವನ್ನು ಕಂಡಿದ್ದಾರೆ. 23ರ ಹರೆಯದ ಇಶಾನ್ ಕಿಶನ್, ಅಗ್ರ 10ರಲ್ಲಿರುವ ಏಕೈಕ ಭಾರತೀಯ ಬ್ಯಾಟರ್ ಆಗಿದ್ದು, ಕೆಎಲ್ ರಾಹುಲ್ 14ನೇ ಸ್ಥಾನದಲ್ಲಿದ್ದಾರೆ.

ರೋಹಿತ್ ಶರ್ಮಾ ಮತ್ತು ಶ್ರೇಯಸ್ ಅಯ್ಯರ್ ತಲಾ ಒಂದು ಸ್ಥಾನ ಕುಸಿತ

ರೋಹಿತ್ ಶರ್ಮಾ ಮತ್ತು ಶ್ರೇಯಸ್ ಅಯ್ಯರ್ ತಲಾ ಒಂದು ಸ್ಥಾನ ಕುಸಿತ

ನಾಯಕ ರೋಹಿತ್ ಶರ್ಮಾ ಮತ್ತು ಶ್ರೇಯಸ್ ಅಯ್ಯರ್ ತಲಾ ಒಂದು ಸ್ಥಾನ ಕುಸಿತ ಕಂಡಿದ್ದು, ಕ್ರಮವಾಗಿ 16 ಮತ್ತು 17ನೇ ಸ್ಥಾನಕ್ಕೆ ಇಳಿದಿದ್ದಾರೆ. ವಿರಾಟ್ ಕೊಹ್ಲಿ ಎರಡು ಸ್ಥಾನ ಕುಸಿದು 21ನೇ ಸ್ಥಾನ ತಲುಪಿದ್ದಾರೆ.

ಬೌಲರ್‌ಗಳ ಪೈಕಿ ಭುವನೇಶ್ವರ್ ಏಳು ಸ್ಥಾನ ಮೇಲೇರಿ 11ನೇ ಸ್ಥಾನದಲ್ಲಿದ್ದರೆ, ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ನಾಲ್ಕು ಸ್ಥಾನ ಮೇಲೇರಿ 26ನೇ ಸ್ಥಾನ ಪಡೆದಿದ್ದಾರೆ.

ಆಸ್ಟ್ರೇಲಿಯಾದ ಜೋಶ್ ಹೇಜಲ್‌ವುಡ್ ಟಿ20 ಬೌಲರ್‌ಗಳಲ್ಲಿ ಮೊದಲ ಸ್ಥಾನವನ್ನು ಮರಳಿ ಪಡೆದರೆ, ಶ್ರೀಲಂಕಾದ ಮಹೇಶ್ ತೀಕ್ಷಣ 16 ಸ್ಥಾನ ಮೇಲೇರಿ 8ನೇ ಸ್ಥಾನದಲ್ಲಿದ್ದಾರೆ.

ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನ

ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನ

ಇನ್ನು ರವೀಂದ್ರ ಜಡೇಜಾ ಮತ್ತು ಆರ್. ಅಶ್ವಿನ್ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳನ್ನು ಆಕ್ರಮಿಸಿಕೊಂಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸರಣಿಯಲ್ಲಿ ಸತತ ಎರಡನೇ ಶತಕ ಸಿಡಿಸಿದ ಇಂಗ್ಲೆಂಡ್‌ನ ಜೋ ರೂಟ್ ಅಗ್ರ ಸ್ಥಾನಕ್ಕೆ ಏರಿದ್ದರೆ, ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಕ್ರಮವಾಗಿ ತಮ್ಮ ಏಳನೇ ಮತ್ತು 10 ಸ್ಥಾನಗಳನ್ನು ಉಳಿಸಿಕೊಂಡಿದ್ದಾರೆ.

ಮೊದಲ ಟೆಸ್ಟ್‌ನ ನಂತರ ಮಾರ್ನಸ್ ಲ್ಯಾಬುಸ್ಚಾಗ್ನೆ ಅವರ ಮೊದಲ ಸ್ಥಾನವನ್ನು ಕಿತ್ತುಕೊಂಡ ಜೋ ರೂಟ್, ಆಸ್ಟ್ರೇಲಿಯಾದ ಬ್ಯಾಟರ್‌ನಿಂದ ಅಗ್ರ ಸ್ಥಾನವನ್ನು ಮರಳಿ ಪಡೆದರು. ರೂಟ್ ಅವರು ಈಗ ಐದು ರೇಟಿಂಗ್ ಪಾಯಿಂಟ್‌ಗಳಿಂದ ಲ್ಯಾಬುಸ್ಚಾಗ್ನೆಗಿಂತ ಮುಂದಿದ್ದಾರೆ.

ಜೋ ರೂಟ್ 897 ಅಂಕಗಳನ್ನು ಗಳಿಸಿದ್ದಾರೆ

ಜೋ ರೂಟ್ 897 ಅಂಕಗಳನ್ನು ಗಳಿಸಿದ್ದಾರೆ

ನಾಟಿಂಗ್‌ಹ್ಯಾಮ್‌ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 176 ರನ್ ಗಳಿಸಿದ ನಂತರ ಜೋ ರೂಟ್ 897 ಅಂಕಗಳನ್ನು ಗಳಿಸಿದ್ದಾರೆ, ಅವರ ಗರಿಷ್ಠ 917 ಅಂಕಗಳಿಗಿಂತ 20 ಕಡಿಮೆ ಇದೆ.

ಜೋ ರೂಟ್ ಈ ಮೊದಲು ಆಗಸ್ಟ್ 2015 ರಲ್ಲಿ ನಂಬರ್ ಒನ್ ಸ್ಥಾನವನ್ನು ಪಡೆದಿದ್ದರು ಮತ್ತು ಲ್ಯಾಬುಸ್ಚಾಗ್ನೆ ಅವರನ್ನು ಮೀರಿಸುವ ಮೊದಲು ಡಿಸೆಂಬರ್ 2021ರಲ್ಲಿ ಅಗ್ರಸ್ಥಾನದಲ್ಲಿದ್ದರು. ಇದುವರೆಗೆ 163 ದಿನಗಳಿಂದ ಟೆಸ್ಟ್ ನಲ್ಲಿ ನಂ.1 ಆಗಿದ್ದಾರೆ.

Dinesh Karthik 7 ನೇ ಕ್ರಮಾಂಕದಲ್ಲಿ ಬಂದ್ರೆ ಏನಾಗುತ್ತೆ ಎಂದು ಹೇಳಿದ Shreyas Iyer | *Cricket | OneIndia
ಸ್ಟೀವ್ ಸ್ಮಿತ್ (1,506 ದಿನಗಳು), ವಿರಾಟ್ ಕೊಹ್ಲಿ (469 ದಿನಗಳು)

ಸ್ಟೀವ್ ಸ್ಮಿತ್ (1,506 ದಿನಗಳು), ವಿರಾಟ್ ಕೊಹ್ಲಿ (469 ದಿನಗಳು)

ಸ್ಟೀವ್ ಸ್ಮಿತ್ (1,506 ದಿನಗಳು), ವಿರಾಟ್ ಕೊಹ್ಲಿ (469 ದಿನಗಳು) ಮತ್ತು ಕೇನ್ ವಿಲಿಯಮ್ಸನ್ (245 ದಿನಗಳು) ಇತ್ತೀಚಿನ ವರ್ಷಗಳಲ್ಲಿ ಅಗ್ರಸ್ಥಾನದಲ್ಲಿ ಗಣನೀಯ ದಿನಗಳಲ್ಲಿ ಮುಂದುವರೆದಿದ್ದರು. ಇನ್ನು ಜೋ ರೂಟ್ ಅವರ ದೇಶವಾಸಿ ಜಾನಿ ಬೈರ್‌ಸ್ಟೋವ್ ಮತ್ತು ನಾಯಕ ಬೆನ್ ಸ್ಟೋಕ್ಸ್ ಕೂಡ ಉತ್ತಮ ರ್‍ಯಾಂಕಿಂಗ್ ಹೊಂದಿದ್ದಾರೆ.

ಬೈರ್‌ಸ್ಟೋವ್ 13 ಸ್ಥಾನ ಮೇಲಕ್ಕೇರಿ 39ನೇ ಸ್ಥಾನಕ್ಕೆ ಬಂದರೆ, ಬೆನ್ ಸ್ಟೋಕ್ಸ್ ಅವರು 75 ರನ್ ಗಳಿಸಿದ ಪರಿಣಾಮ 27ರಿಂದ 22ನೇ ಸ್ಥಾನಕ್ಕೆ ಜಿಗಿತಗೊಂಡಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Wednesday, June 15, 2022, 18:02 [IST]
Other articles published on Jun 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X