ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ICC T20 Ranking: ಹೂಡಾ, ಸ್ಯಾಮ್ಸನ್ ಭಾರೀ ಜಿಗಿತ; ಟಾಪ್ 10ರಲ್ಲಿ ಏಕೈಕ ಭಾರತೀಯ!

ICC T20I Rankings: Deepak Hooda, Sanju Samson Make Massive Jump, Ishan Kishan Only Indian in Top 10

ದೀಪಕ್ ಹೂಡಾ ಮತ್ತು ಸಂಜು ಸ್ಯಾಮ್ಸನ್ ಅವರು ಐರ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡ ನಾಲ್ಕು ರನ್‌ಗಳ ಗೆಲುವು ಸಾಧಿಸಲು ಪ್ರಮುಖ ಹೀರೋಗಳಾಗಿದ್ದಾರೆ. ಬುಧವಾರ (ಜೂನ್ 29) ಬಿಡುಗಡೆಯಾದ ಐಸಿಸಿ ಟಿ20 ರ್‍ಯಾಂಕಿಂಗ್‌ನಲ್ಲಿ ಭಾರೀ ಜಿಗಿತವನ್ನು ಕಂಡಿದ್ದಾರೆ.

ಡಬ್ಲಿನ್‌ನಲ್ಲಿ ನಡೆದ ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳಲ್ಲಿ 47 ಮತ್ತು 104 ರನ್ ಗಳಿಸಿದ ದೀಪಕ್ ಹೂಡಾ, ಸರಣಿ ಶ್ರೇಷ್ಠ ಆಟಗಾರ ಎಂದು ಗುರುತಿಸಲ್ಪಟ್ಟರು ಮತ್ತು ಇದರ ಪರಿಣಾಮವಾಗಿ 414 ಸ್ಥಾನಗಳನ್ನು ಮೇಲೇರಿ ಟಿ20 ರ್‍ಯಾಂಕಿಂಗ್‌ನಲ್ಲಿ 104ನೇ ಸ್ಥಾನಕ್ಕೆ ತಲುಪಿದ್ದಾರೆ.

ಮುಂದಿನ ಐಸಿಸಿ ಕ್ಯಾಲೆಂಡರ್‌ನಲ್ಲಿ ಐಪಿಎಲ್‌ಗೆ 10 ವಾರ ಮೀಸಲು; ಬಿಸಿಸಿಐ ಕಾರ್ಯದರ್ಶಿ ಜಯ್ ಶಾಮುಂದಿನ ಐಸಿಸಿ ಕ್ಯಾಲೆಂಡರ್‌ನಲ್ಲಿ ಐಪಿಎಲ್‌ಗೆ 10 ವಾರ ಮೀಸಲು; ಬಿಸಿಸಿಐ ಕಾರ್ಯದರ್ಶಿ ಜಯ್ ಶಾ

ಮಂಗಳವಾರ (ಜೂನ್ 28) ತನ್ನ ಚೊಚ್ಚಲ ಟಿ20 ಅರ್ಧಶತಕ ಗಳಿಸಿದ ಸಂಜು ಸ್ಯಾಮ್ಸನ್ ಎರಡನೇ ಪಂದ್ಯದಲ್ಲಿ 77 ರನ್ ಗಳಿಸುವ ಮೂಲಕ 57 ಸ್ಥಾನಗಳ ಮೇಲೇರಿ 144ನೇ ಸ್ಥಾನವನ್ನು ತಲುಪಿದ್ದಾರೆ. ಬೌಲರ್‌ಗಳ ಪಟ್ಟಿಯಲ್ಲಿ ಹರ್ಷಲ್ ಪಟೇಲ್ 37ನೇ ಸ್ಥಾನದಿಂದ 33ನೇ ಸ್ಥಾನಕ್ಕೆ ಹಾಗೂ ಮಾರ್ಕ್ ಅದೈರ್ 45ನೇ ಸ್ಥಾನದಿಂದ 43ನೇ ಸ್ಥಾನಕ್ಕೆ ತಲುಪಿದ್ದಾರೆ.

ಅಗ್ರ 10ರೊಳಗಿರುವ ಏಕೈಕ ಭಾರತೀಯ ಬ್ಯಾಟರ್ ಇಶಾನ್ ಕಿಶನ್

ಅಗ್ರ 10ರೊಳಗಿರುವ ಏಕೈಕ ಭಾರತೀಯ ಬ್ಯಾಟರ್ ಇಶಾನ್ ಕಿಶನ್

ಟೀಮ್ ಇಂಡಿಯಾದ ಆರಂಭಿಕ ಆಟಗಾರ ಇಶಾನ್ ಕಿಶನ್ ಅವರು ಟಿ20 ಶ್ರೇಯಾಂಕದಲ್ಲಿ ಅಗ್ರ 10ರೊಳಗಿರುವ ಏಕೈಕ ಭಾರತೀಯ ಬ್ಯಾಟರ್ ಆಗಿ ಮುಂದುವರಿದಿದ್ದಾರೆ. ಆದರೂ ಅವರು ಒಂದು ಶ್ರೇಯಾಂಕ ಕಳೆದುಕೊಂಡು 7ನೇ ಸ್ಥಾನಕ್ಕೆ ಕುಸಿದಿದ್ದಾರೆ. ಇನ್ನು ಐರ್ಲೆಂಡ್ ಟಿ20 ಸರಣಿಯಿಂದ ಹೊರಗುಳಿದಿರುವ ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ತಲಾ ಒಂದು ಸ್ಥಾನ ಕುಸಿದು ಕ್ರಮವಾಗಿ 17 ಮತ್ತು 19ನೇ ಸ್ಥಾನಕ್ಕೆ ತಲುಪಿದ್ದಾರೆ. ದಕ್ಷಿಣ ಆಫ್ರಿಕಾ ಹಾಗೂ ಐರ್ಲೆಂಡ್ ವಿರುದ್ಧದ ಕೊನೆಯ ಎರಡು ಟಿ20 ಸರಣಿಗಳಿಂದ ವಂಚಿತರಾಗಿದ್ದ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ 21ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಬಾಬರ್ ಅಜಮ್ 818 ಅಂಕಗಳೊಂದಿಗೆ ನಂ.1 ಟಿ20 ಬ್ಯಾಟರ್

ಬಾಬರ್ ಅಜಮ್ 818 ಅಂಕಗಳೊಂದಿಗೆ ನಂ.1 ಟಿ20 ಬ್ಯಾಟರ್

ಪಾಕಿಸ್ತಾನದ ನಾಯಕ ಬಾಬರ್ ಅಜಮ್ 818 ಅಂಕಗಳೊಂದಿಗೆ ನಂ.1 ಟಿ20 ಬ್ಯಾಟರ್ ಆಗಿ ಮುಂದುವರಿದರೆ, ಪಾಕಿಸ್ತಾನದ ಸಹ ಆಟಗಾರ ಮೊಹಮ್ಮದ್ ರಿಜ್ವಾನ್ 794 ಅಂಕಗಳೊಂದಿಗೆ ನಂ.2 ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಏಡೆನ್ ಮಾರ್ಕ್ರಾಮ್ 757 ಅಂಕಗಳೊಂದಿಗೆ ನಂ.3 ಸ್ಥಾನದಲ್ಲಿದ್ದಾರೆ.

ನ್ಯೂಜಿಲೆಂಡ್‌ನ ಬ್ಯಾಟಿಂಗ್ ಜೋಡಿ ಡೇರಿಲ್ ಮಿಚೆಲ್ ಮತ್ತು ಟಾಮ್ ಬ್ಲಂಡೆಲ್ ಅವರು ಲೀಡ್ಸ್‌ನಲ್ಲಿ ನಡೆದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸರಣಿಯ ಮೂರನೇ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ನಂತರ, ಇಂಗ್ಲೆಂಡ್ ಸ್ಪಿನ್ನರ್ ಜಾಕ್ ಲೀಚ್ ಅವರಂತೆ MRF ಟೈರ್ಸ್ ಐಸಿಸಿ ಪುರುಷರ ಟೆಸ್ಟ್ ಆಟಗಾರರ ಶ್ರೇಯಾಂಕದಲ್ಲಿ ವೃತ್ತಿಜೀವನದ ಅತ್ಯುತ್ತಮ ಸ್ಥಾನಗಳನ್ನು ಗಳಿಸಿದ್ದಾರೆ.

ಟೆಸ್ಟ್‌ನಲ್ಲಿ 12ನೇ ಸ್ಥಾನಕ್ಕೆ ಏರಿದ ಡೇರಿಲ್ ಮಿಚೆಲ್

ಟೆಸ್ಟ್‌ನಲ್ಲಿ 12ನೇ ಸ್ಥಾನಕ್ಕೆ ಏರಿದ ಡೇರಿಲ್ ಮಿಚೆಲ್

ಇಂಗ್ಲೆಂಡ್ ವಿರುದ್ಧದ ಸರಣಿಯ ಎಲ್ಲಾ ಮೂರು ಟೆಸ್ಟ್‌ಗಳಲ್ಲಿ ಶತಕದ ಜೊತೆಯಾಟದಲ್ಲಿ ಪಾಲ್ಗೊಂಡಿದ್ದ ಮಿಚೆಲ್ ಮತ್ತು ಬ್ಲಂಡೆಲ್ ಇಬ್ಬರೂ ಈಗ ಅಗ್ರ 20ರಲ್ಲಿದ್ದಾರೆ. ಡೇರಿಲ್ ಮಿಚೆಲ್ ಅವರ 109 ಮತ್ತು 56 ರನ್‌ಗಳು ಅವರನ್ನು ನಾಲ್ಕು ಸ್ಥಾನಗಳ ಮೇಲಕ್ಕೇರಿಸಿ 12ನೇ ಸ್ಥಾನಕ್ಕೆ ಬಂದರೆ, ಟಾಮ್ ಬ್ಲಂಡೆಲ್ ಅವರ 55 ಮತ್ತು 88 ರನ್‌ಗಳು ಅವರನ್ನು 11 ಸ್ಥಾನಗಳ ಮೇಲೇರಿ 20ನೇ ಸ್ಥಾನದಲ್ಲಿ ಕೂರಿಸಿದೆ.

ಯುಜುವೇಂದ್ರ ಚಹಾಲ್ ಗೆ ಚಳಿ ಆಗಿದ್ದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಈಗ ಫುಲ್ ಟ್ರೋಲ್ | Oneindia Kannada
ಜಾನಿ ಬೈರ್‌ಸ್ಟೋವ್ 20 ಸ್ಥಾನ ಮೇಲೇರಿ 21ನೇ ಸ್ಥಾನಕ್ಕೆ

ಜಾನಿ ಬೈರ್‌ಸ್ಟೋವ್ 20 ಸ್ಥಾನ ಮೇಲೇರಿ 21ನೇ ಸ್ಥಾನಕ್ಕೆ

ಈ ಸರಣಿಯಲ್ಲಿ ತಮ್ಮ ಬಿರುಸಿನ ಬ್ಯಾಟಿಂಗ್ ಮೂಲಕ ಕೇಂದ್ರಬಿಂದುವಾಗಿರುವ ಇಂಗ್ಲೆಂಡ್ ಬ್ಯಾಟರ್ ಜಾನಿ ಬೈರ್‌ಸ್ಟೋವ್ ಅವರು 162 ಮತ್ತು 71 ರನ್ ಗಳಿಸಿ 20 ಸ್ಥಾನ ಮೇಲೇರಿ 21ನೇ ಸ್ಥಾನಕ್ಕೆ ತಲುಪಿದ್ದರೆ, ಆಲಿವರ್ ಪೋಪ್ 2ನೇ ಇನಿಂಗ್ಸ್‌ನಲ್ಲಿ 82 ರನ್ ಗಳಿಸಿ ಮೂರು ಸ್ಥಾನ ಮೇಲೇರಿ 49ನೇ ಸ್ಥಾನ ಪಡೆದಿದ್ದಾರೆ. ಅಂತಿಮ ಪಂದ್ಯವನ್ನು ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ ಏಳು ವಿಕೆಟ್‌ಗಳಿಂದ ಗೆದ್ದು 3-0 ಅಂತರದಿಂದ ಟೆಸ್ಟ್ ಸರಣಿ ಜಯವನ್ನು ಜಯಿಸಿತು.

ಇನ್ನು ಬೌಲರ್‌ಗಳಲ್ಲಿ ಇಂಗ್ಲೆಂಡ್‌ನ ಸ್ಟುವರ್ಟ್ ಬ್ರಾಡ್ ಬುಧವಾರದ ಸಾಪ್ತಾಹಿಕ ಐಸಿಸಿ ರ್‍ಯಾಂಕಿಂಗ್ ಅಪ್‌ಡೇಟ್‌ನಲ್ಲಿ 13ನೇ ಸ್ಥಾನಕ್ಕೆ ಏರಿದ್ದಾರೆ.

Story first published: Wednesday, June 29, 2022, 16:40 [IST]
Other articles published on Jun 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X