ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ರ‍್ಯಾಂಕಿಂಗ್: ಬಾಬರ್ ಹಿಂದಿಕ್ಕಿ ನಂಬರ್ 1 ಸ್ಥಾನಕ್ಕೇರಿದ ಡೇವಿಡ್ ಮಲನ್

 Icc T20i Rankings: Rahul & Virat Kohli Remain In Top 10, Malan Moves To No. 1

ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಅಂತ್ಯವಾಗುತ್ತಿದ್ದಂತೆಯೇ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನ ನೂತನ ಶ್ರೇಯಾಂಕ ಪಟ್ಟಿ ಬಿಡುಗಡೆಯಾಗಿದೆ. ಈ ಬಾರಿಯ ಶ್ರೇಯಾಂಕ ಪಟ್ಟಿಯಲ್ಲಿ ಮಹತ್ವದ ಬದಲಾವಣೆಯಾಗಿದ್ದ ನಂಬರ್ 1 ಸ್ಥಾನದಿಂದ ಪಾಕಿಸ್ತಾನದ ಸೀಮಿತ ಓವರ್‌ಗಳ ನಾಯಕ ಬಾಬರ್ ಅಜಂ ಕೆಳಗಿಳಿದಿದ್ದಾರೆ.

ಇಂಗ್ಲೆಂಡ್‌ನ ಡೇವಿಡ್ ಮಲನ್ ಆಸ್ಟ್ರೇಲಿಯಾ ವಿರುದ್ಧ ನೀಡಿದ ಅದ್ಭುತ ಪ್ರದರ್ಶನದಿಂದ ಟಿ20 ಕ್ರಿಕೆಟ್‌ನ ಟಾಪ್ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಬಾಬರ್ ಅಜಂ ಅವರನ್ನು ಹಿ೦ದಿಕ್ಕುವಲ್ಲಿ ಯಶಸ್ವಿಯಾಗಿರುವ ಡೇವಿಡ್ ಮೆಲನ್ ಬಾಬರ್‌ಗಿಂತ 8 ಅಂಕಗಳಷ್ಟು ಮುಂದಿದ್ದಾರೆ. ಮಲನ್ ಅವರ ಈ ಹಿಂದಿನ ಗರಿಷ್ಠ ಶ್ರೇಯಾಂಕ 2 ಆಗಿದ್ದು ಕಳೆದ ನವೆಂಬರ್‌ನಲ್ಲಿ ಈ ಸ್ಥಾನಕ್ಕೇರಿದ್ದರು. ಆಸ್ಟ್ರೇಲಿಯಾ ವಿರುದ್ಧದ ಚುಟುಕು ಸರಣಿಯಲ್ಲಿ ಮಲನ್ 129 ರನ್ ಗಳಿಸಿ ಟೂರ್ನಿಯ ಗರಿಷ್ಠ ಸ್ಕೋರರ್ ಎನಿಸಿದ್ದಾರೆ.

ಐಪಿಎಲ್ 2020: ಕ್ರಿಸ್ ಗೇಲ್ ಮಹತ್ವದ ಜವಾಬ್ಧಾರಿ ನಿರ್ವಹಿಸಲು ಕೋಚ್ ಕುಂಬ್ಳೆ ಒತ್ತಾಯಐಪಿಎಲ್ 2020: ಕ್ರಿಸ್ ಗೇಲ್ ಮಹತ್ವದ ಜವಾಬ್ಧಾರಿ ನಿರ್ವಹಿಸಲು ಕೋಚ್ ಕುಂಬ್ಳೆ ಒತ್ತಾಯ

ಈ ಶ್ರೇಯಾಂಕ ಪಟ್ಟಿಯಲ್ಲಿ ಕೆಎಲ್ ರಾಹುಲ್ ಹಾಗೂ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟಾಪ್ 10ರಲ್ಲಿ ಮುಂದುವರಿದಿದ್ದಾರೆ. ಆದರೆ ರಾಹುಲ್ ನಂಬರ್ 2 ಸ್ಥಾನದಿಂದ 4ನೇ ಸ್ಥಾನಕ್ಕೆ ಕುಸಿದಿದ್ದಾರೆ. ವಿರಾಟ್ ಕೊಹ್ಲಿ 9ನೇ ಸ್ಥಾನದಲ್ಲಿದ್ದಾರೆ.

ಇನ್ನೂ ಈ ಟೂರ್ನಿಯಲ್ಲಿ 125 ರನ್ ಗಳಿಸಿದ ಆಸ್ಟ್ರೇಲಿಯಾ ತಂಡದ ನಾಯಕ ಆರೋನ್ ಫಿಂಚ್ 3ನೇ ಸ್ಥಾನವನ್ನು ಗಳಿಸಿಕೊಂಡಿದ್ದಾರೆ. ಗ್ಲೆನ್ ಮ್ಯಾಕ್ಸ್‌ವೆಲ್ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿ ಮುಂದುವರಿದಿದ್ದು ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ 2ನೇ ಶ್ರೇಯಾಂಕವನ್ನು ಹೊಂದಿದ್ದಾರೆ. ಆಲ್‌ರೌಂಡರ್‌ಗಳಲ್ಲಿ ಮೊದಲ ಸ್ಥಾನವನ್ನು ಅಪ್ಘಾನಿಸ್ತಾನದ ಮೊಹಮದ್ ನಬಿ ಹೊಂದಿದ್ದಾರೆ.

ಫಿಂಚ್-ಮಾರ್ಷ್ ಸಾಹಸ, ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾಕ್ಕೆ ಗೆಲುವುಫಿಂಚ್-ಮಾರ್ಷ್ ಸಾಹಸ, ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾಕ್ಕೆ ಗೆಲುವು

ಇನ್ನು ತಂಡಗಳ ಶ್ರೇಯಾಂಕದಲ್ಲಿ ನಂಬರ್ 1 ತಂಡವಾಗಿ ಸರಣಿಯನ್ನಾಡಲು ಆಗಮಿಸಿದ್ದ ಆಸ್ಟ್ರೇಲಿಯಾ ಸರಣಿಯನ್ನು ಸೋತರೂ ಅಂತಿಮ ಪಂದ್ಯವನ್ನು ಗೆದ್ದುಕೊಳ್ಲುವ ಮೂಲಕ ಟಾಪ್ 1 ತಂಡವಾಗಿಯೇ ಮುಂದುವರಿದಿದ್ದು ಇಂಗ್ಲೆಂಡ್ ನಂತರದ ಸ್ಥಾನದಲ್ಲಿದೆ. ಬೌಲಿಂಗ್ ವಿಭಾಗದಲ್ಲಿ ಅಗ್ರ ಸ್ಥಾನದಲ್ಲಿ ಯಾವುದೇ ಮಹತ್ವದ ಬದಲಾವಣೆಗಳು ಆಗಿಲ್ಲ.

Story first published: Wednesday, September 9, 2020, 20:23 [IST]
Other articles published on Sep 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X