ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್ ಶ್ರೇಯಾಂಕ ಪಟ್ಟಿ: 9ನೇ ಸ್ಥಾನಕ್ಕೇರಿದ ಬೂಮ್ರಾ; ರೋಹಿತ್, ಕೊಹ್ಲಿ ಅಂಕದಲ್ಲಿಯೂ ಏರಿಕೆ

ICC Test Ranking: Jasprit Bumrah climbs to ninth place, Rohit, Kohli gain points

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಸರ್ವಾಂಗೀಣ ಪ್ರದರ್ಶನ ನೀಡುವ ಮೂಲಕ ಭರ್ಜರಿ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಆಟಗಾರರು ನೀಡಿದ ಪ್ರದರ್ಶನ ಆಟಗಾರರ ಶ್ರೇಯಾಂಕ ಪಟ್ಟಿಯ ಮೇಲೆಯೂ ಬಿದ್ದಿದೆ. ಓವಲ್ ಅಂಗಳದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 157 ರನ್‌ಗಳ ಭರ್ಜರಿ ಗೆಲುವು ಸಾಧಿಸಿದ ನಂತರ ಟೀಮ್ ಇಂಡಿಯಾದ ಆಟಗಾರರು ಐಸಿಸಿ ಶ್ರೇಯಾಂಕಪಟ್ಟಿಯಲ್ಲಿ ಗಮನಾರ್ಹ ಏರಿಕೆ ಕಂಡಿದ್ದಾರೆ. ಟೀಮ್ ಇಂಡಿಯಾದ ಪ್ರಮುಖ ವೇಗಿ ಜಸ್ಪ್ರೀತ್ ಬೂಮ್ರಾ ಬೌಲರ್‌ಗಳ ಪಟ್ಟಿಯಲ್ಲಿ 9ನೇ ಸ್ಥಾನಕ್ಕೇ ಏರಿದ್ದಾರೆ. ಇನ್ನು ಬ್ಯಾಟ್ಸ್‌ಮನ್‌‌ಗಳ ಪಟ್ಟಿಯಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಕೂಡ ಅಂಕಗಳ ಏರಿಕೆ ಕಂಡಿದ್ದಾರೆ.

ಓವಲ್ ಮೈದಾನದಲ್ಲಿ ಟೀಮ್ ಇಂಡಿಯಾ ಪರವಾಗಿ ಬೂಮ್ರಾ ಅಮೋಘ ಪ್ರದರ್ಶನ ನೀಡಿದರು. ಒಟ್ಟು ನಾಲ್ಕು ವಿಕೆಟ್ ಕಬಳಿಸಿದರು ಬೂಮ್ರಾ. ಇದರಲ್ಲಿ ಪಂದ್ಯದ ಅಂತಿಮ ದಿನ ಒಲ್ಲಿ ಪೋಪ್ ಹಾಗೂ ಜಾನಿ ಬೈರ್‌ಸ್ಟೋವ್ ಅವರನ್ನು ವಿಕೆಟ್ ಪಡೆದ ಅದ್ಭುತ ಸ್ಪೆಲ್ ಕೂಡ ಸೇರಿಕೊಂಡಿದೆ. ಈ ಮೂಲಕ ಅಂತಿಮ ದಿನದಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಲು ಬೂಮ್ರಾ ನಿರ್ಣಾಯಕ ಪ್ರದರ್ಶನ ನೀಡಿದರು.

ಇಂಗ್ಲೆಂಡ್‌ಗೆ ಡ್ರಾ ಮಾಡಿಕೊಳ್ಳುವ ಯೋಗ್ಯತೆಯೂ ಇಲ್ಲ ಎಂಬುದು ನಾಚಿಕೆಗೇಡು; ಕಿಡಿಕಾರಿದ ಆಂಗ್ಲ ಕ್ರಿಕೆಟಿಗ!ಇಂಗ್ಲೆಂಡ್‌ಗೆ ಡ್ರಾ ಮಾಡಿಕೊಳ್ಳುವ ಯೋಗ್ಯತೆಯೂ ಇಲ್ಲ ಎಂಬುದು ನಾಚಿಕೆಗೇಡು; ಕಿಡಿಕಾರಿದ ಆಂಗ್ಲ ಕ್ರಿಕೆಟಿಗ!

ಇನ್ನು ಓವಲ್ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ಅದ್ಭುತ ಪ್ರದರ್ಶನ ನೀಡಿದ್ದು ಆರಂಭಿಕ ಆಟಗಾರ ರೋಹಿತ್ ಶರ್ಮಾ. ಮೊದಲ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ 99 ರನ್‌ಗಳ ಅಂತರದ ಹಿನ್ನೆಡೆಯನ್ನು ಅನುಭವಿಸಿದ ನಂತರ ಎರಡನೇ ಇನ್ನಿಂಗ್ಸ್‌ನಲ್ಲಿ ಒತ್ತಡದ ಮಧ್ಯೆ ರೋಹಿತ್ ಶರ್ಮಾ ನೀಡಿದ ಬ್ಯಾಟಿಂಗ್ ಪ್ರದರ್ಶನ ಟೀಮ್ ಇಂಡಿಯಾ ಪಂದ್ಯದ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಯಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಶರ್ಮಾ ಭರ್ಜರಿ 127 ರನ್‌ಗಳ ಕೊಡುಗೆ ನೀಡಿದ್ದರು. ಈ ಮೂಲಕ ರ್ಶರೇಯಾಂಕಪಟ್ಟಿಯಲ್ಲಿ 40 ಅಂಕಗಳನ್ನು ಖಾತೆಗೆ ಸೇರ್ಪಡೆಗೊಳಿಸಿದ್ದು 813 ಅಂಕಗಳನ್ನು ಹೊಂದಿದ್ದಾರೆ. ಹಾಗಿದ್ದರೂ ರೋಹಿತ್ ಶರ್ಮಾ ಶ್ರೇಯಾಂಕಪಟ್ಟಿಯಲ್ಲಿ ಬದಲಾವಣೆಯಾಗಿಲ್ಲ. ಐದನೇ ಸ್ಥಾನದಲ್ಲಿ ಶರ್ಮಾ ಮುಂದಿವರಿದಿದ್ದಾರೆ.

ಇನ್ನು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಅಮೂಲ್ಯ ಅರ್ಥ ಶತಲದ ಕೊಡುಗೆ ನೀಡಿದ್ದ ಕೊಹ್ಲಿ ಎರಡನೇ ಇನ್ನಿಂಗ್ಸ್‌ನಲ್ಲೂ ಅರ್ಧ ಶತಕದ ಅನಿಹಕ್ಕೆ ತಲುಪಿ ಎಡವಿದ್ದರು. ಈ ಪ್ರದರ್ಶನದಿಂದಾಗಿ ಈ ಪಂದ್ಯದಲ್ಲಿ 20 ಅಂಕಗಳನ್ನು ಖಾತೆಗೆ ಸೇರಿಸಿಕೊಂಡಿದ್ದು ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಇನ್ನು ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ 690 ಅಂಕಗಳೊಂದಿಗೆ 13ನೇ ಸ್ಥಾನಕ್ಕೆ ಕುಸಿದಿದ್ದಾರೆ. ಟೀಮ್ ಇಂಡಿಯಾ ಉಪನಾಯಕ ಅಜಿಂಕ್ಯಾ ರಹಾನೆ ಕೂಡ ಎರಡು ಸ್ಥಾನಗಳ ಕುಸಿತ ಕಂಡಿದ್ದು ಟಾಪ್ 20 ಪಟ್ಟಿಯಿಂದಲೂ ಹೊರಬಿದ್ದಿದ್ದಾರೆ. ಅಜಿಂಕ್ಯಾ ರಹಾನೆ ವೃತ್ತಿ ಜೀವನದ ಅತ್ಯಂತ ಕಳಪೆ ಫಾರ್ಮ್‌ನಲ್ಲಿದ್ದು ಸತತವಾಗಿ ವೈಫಲ್ಯವನ್ನು ಅನುಭವಿಸುತ್ತಿದ್ದಾರೆ. ಈ ಮಧ್ಯೆ ರಹಾನೆಯನ್ನು ಆಡುವ ಬಳಗದಿಂದ ಕೈಬಿಡಬೇಕು ಎಂಬ ಒತ್ತಾಯಗಳು ಕೂಡ ಹೆಚ್ಚಾಗುತ್ತಿದೆ.

ಭಾರತ vs ಇಂಗ್ಲೆಂಡ್: ಅಂತಿಮ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ 3 ಪ್ರಮುಖ ಬದಲಾವಣೆ ಸಂಭವಭಾರತ vs ಇಂಗ್ಲೆಂಡ್: ಅಂತಿಮ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ 3 ಪ್ರಮುಖ ಬದಲಾವಣೆ ಸಂಭವ

ಇನ್ನು ಇಂಗ್ಲೆಂಡ್ ತಂಡದ ಅನುಭವು ವೇಗಿ ಜೇಮ್ಸ್ ಆಂಡರ್ಸನ್ ಓವಲ್ ಟೆಸ್ಟ್ ಪಂದ್ಯದ ಎರಡು ಇನ್ನಿಂಗ್ಸ್‌ನಲ್ಲಿ ತಲಾ ಒಂದೊಂದು ವಿಕೆಟ್ ಪಡೆಯಲು ಮಾತ್ರವೇ ಸಫಲವಾಗಿದ್ದರು. ಹೀಗಾಗಿ ಆಂಡರ್ಸನ್ ಏಳನೇ ಸ್ಥಾನಕ್ಕೆ ಕುಸಿದಿದ್ದಾರೆ. ಇನ್ನು ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಟೆಸ್ಟ್ ಕ್ರಿಕೆಟ್‌ನ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು ಈ ಸ್ಥಾನವ್ನನು ಉಳಿಸಿಕೊಂಡಿದ್ದಾರೆ. ರೂಟ್ ಖಾತೆಯಲ್ಲಿ 903 ಅಂಕಗಳಿದ್ದು ಎರಡನೇ ಸ್ಥಾನದಲ್ಲಿರುವ ಕೇನ್ ವಿಲಿಯಮ್ಸನ್ 901 ಅಂಕ ಪಡೆದುಕೊಂಡಿದ್ದಾರೆ. ಆಸ್ಟ್ರೇಲಿಯಾದ ಆಟಗಾರರಾದ ಸ್ಟೀವ್ ಸ್ಮಿತ್(891) ಹಾಗೂ ಮಾರ್ನಾಸ್ ಲ್ಯಾಬುಶೈನ್ (878)ಮೂರು ಹಾಗೂ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ.

ಇನ್ನು ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ರವೀಂದ್ರ ಜಡೇಜಾ ಮೂರನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಆದರೆ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಆಡುವ ಅವಕಾಶ ಪಡೆಯಲು ವಿಫಲವಾದ ಆರ್ ಅಶ್ವಿನ್ ಮಾತ್ರ ಈ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಕುಸಿದಿದ್ದಾರೆ.

Story first published: Wednesday, September 8, 2021, 16:15 [IST]
Other articles published on Sep 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X