ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ICC Test ranking: 11ನೇ ಸ್ಥಾನಕ್ಕೆ ಜಿಗಿದ ಭಾರತದ ರಿಷಭ್ ಪಂತ್

ICC Test ranking: Rishabh Pant moves to number 11

ನವದೆಹಲಿ: ಭಾರತದ ಯುವ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್ ರಿಷಭ್ ಪಂತ್ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಟೆಸ್ಟ್‌ ರ್‍ಯಾಂಕಿಂಗ್ಸ್‌ನಲ್ಲಿ ಉತ್ತಮ ಜಿಗಿತ ಕಂಡಿದ್ದಾರೆ. ಪ್ರಸ್ತುತ ರ್‍ಯಾಂಕಿಂಗ್‌ನಲ್ಲಿ ಪಂತ್ 11ನೇ ಸ್ಥಾನಕ್ಕೆ ಜಿಗಿದಿದ್ದಾರೆ. ನಾಯಕ ವಿರಾಟ್ ಕೊಹ್ಲಿ 5ನೇ ಸ್ಥಾನದಲ್ಲಿ, ಚೇತೇಶ್ವರ ಪೂಜಾರ 8ನೇ ಸ್ಥಾನದಲ್ಲಿದ್ದಾರೆ.

ಐಪಿಎಲ್ ಹರಾಜಿಗೆ ಕ್ಷಣಗಣನೆ: ಮಿನಿ ಹರಾಜಿಗೂ ಮುನ್ನ ನೀವು ತಿಳಿದಿರಲೇಬೇಕಾದ ಸಂಗತಿಗಳುಐಪಿಎಲ್ ಹರಾಜಿಗೆ ಕ್ಷಣಗಣನೆ: ಮಿನಿ ಹರಾಜಿಗೂ ಮುನ್ನ ನೀವು ತಿಳಿದಿರಲೇಬೇಕಾದ ಸಂಗತಿಗಳು

ಆಸ್ಟ್ರೇಲಿಯಾ ವಿರುದ್ಧ ಮತ್ತು ಇಂಗ್ಲೆಂಡ್ ರಿಷಭ್ ಪಂತ್‌ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದ್ದರು. ಪಂತ್‌ ರ್‍ಯಾಂಕಿಂಗ್‌ನಲ್ಲಿ ಜಿಗಿಯಲು ಆ ಪ್ರದರ್ಶನವೇ ನೆರವು ನೀಡಿದೆ. ಸದ್ಯ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ಟೆಸ್ಟ್‌ ಸರಣಿಯ ಎರಡು ಪಂದ್ಯಗಳಲ್ಲಿ ಕ್ರಮವಾಗಿ 91, 11, 58, 8 ರನ್ ಕೊಡುಗೆ ನೀಡಿದ್ದರು.

ಸದ್ಯ ಟೆಸ್ಟ್‌ ರ್‍ಯಾಂಕಿಂಗ್‌ನ ಬ್ಯಾಟಿಂಗ್‌ ವಿಭಾಗದಲ್ಲಿ ಮೊದಲ ಸ್ಥಾನದಲ್ಲಿರುವ ವಿಕೆಟ್‌ ಕೀಪರ್ ಕಮ್ ಬ್ಯಾಟ್ಸ್‌ಮನ್‌ ಎಂದರೆ ಅದು 23ರ ಹರೆಯದ ರಿಷಭ್ ಪಂತ್. 18 ಟೆಸ್ಟ್‌ ಪಂದ್ಯಗಳಲ್ಲಿ ಪಂತ್ 44.86ರ ಸರಾಸರಿಯಂತೆ 1256 ರನ್ ಬಾರಿಸಿದ್ದಾರೆ. ಇದರಲ್ಲಿ 2 ಶತಕ, 6 ಅರ್ಧಶತಕಗಳು ಸೇರಿವೆ.

ವಿರಾಟ್ ಕೊಹ್ಲಿಯನ್ನು ಮೂರು ಪಂದ್ಯ ನಿಷೇಧಿಸಬೇಕು: ಡೇವಿಡ್ ಲಾಯ್ಡ್ವಿರಾಟ್ ಕೊಹ್ಲಿಯನ್ನು ಮೂರು ಪಂದ್ಯ ನಿಷೇಧಿಸಬೇಕು: ಡೇವಿಡ್ ಲಾಯ್ಡ್

ಪ್ರಸ್ತುತ ಟೆಸ್ಟ್ ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ (919 ರೇಟಿಂಗ್ ಪಾಯಿಂಟ್ಸ್‌), ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ (891), ಮಾರ್ನಸ್ ಲ್ಯಬುಶೇನ್ (878) ಮೊದಲ ಮೂರು ಸ್ಥಾನಗಳಲ್ಲಿದ್ದಾರೆ. ಬೌಲಿಂಗ್‌ನಲ್ಲಿ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್, ನ್ಯೂಜಿಲೆಂಡ್‌ನ ನೀಲ್ ವ್ಯಾಗ್ನರ್, ಇಂಗ್ಲೆಂಡ್‌ನ ಜೇಮ್ಸ್ ಆ್ಯಂಡರ್ಸನ್ ಅಗ್ರ ಮೂರರಲ್ಲಿದ್ದಾರೆ.

Story first published: Wednesday, February 17, 2021, 15:56 [IST]
Other articles published on Feb 17, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X