ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ ಸ್ಟೀವ್ ಸ್ಮಿತ್

ICC Test Ranking: steve smith in 2nd and virat kohli 3rd position

ಭಾರತದ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭರ್ಜರಿ ಶತಕ ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ ಅರ್ಧ ಶತಕವನ್ನು ದಾಖಲಿಸುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದ ಆಟಗಾರ ಸ್ಟೀವ್ ಸ್ಮಿತ್‌ಗೆ ನೂತನ ಶ್ರೇಯಾಂಕ ಪಟ್ಟಿಯಲ್ಲೂ ಸಿಹಿ ದೊರಕಿದೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಯನ್ನು ಹಿಂದಿಕ್ಕಿರುವ ಸ್ಮಿತ್ ಎರಡನೇ ಸ್ಥಾನಕ್ಕೇರಿದ್ದಾರೆ.

ಇನ್ನು ಐಸಿಸಿ ಪ್ರಕಟಿಸಿರುವ ನೂತನ ಶ್ರೇಯಾಂಕ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಚೇತೇಶ್ವರ್ ಪೂಜಾರ ಕೂಡ ಎರಡು ಸ್ಥಾನಗಳ ಏರಿಕೆ ಕಂಡಿದ್ದಾರೆ. ಚೇತೇಶ್ವರ್ ಪೂಜಾರ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಈಗ 8ನೇ ಸ್ಥಾನದಲ್ಲಿದ್ದಾರೆ. ಸಿಡ್ನಿ ಟೆಸ್ಟ್‌ನ ಅಂತಿಮ ದಿನದಾಟದಲ್ಲಿ ಚೇತೇಶ್ವರ್ ಪೂಜಾರ ಮೂಲಕ 77 ರನ್‌ಗಳ ಕೊಡುಗೆಯನ್ನು ನೀಡಿದ್ದರು.

ಭಾರತ vs ಆಸ್ಟ್ರೇಲಿಯಾ: 4ನೇ ಟೆಸ್ಟ್‌ನಿಂದ ರವೀಂದ್ರ ಜಡೇಜಾ ಹೊರಕ್ಕೆಭಾರತ vs ಆಸ್ಟ್ರೇಲಿಯಾ: 4ನೇ ಟೆಸ್ಟ್‌ನಿಂದ ರವೀಂದ್ರ ಜಡೇಜಾ ಹೊರಕ್ಕೆ

ಐಸಿಸಿ ಪ್ರಕಟಿಸಿರುವ ನೂತನ ಶ್ರೇಯಾಂಕ ಪಟ್ಟಿಯಲ್ಲಿ ಟೀಮ್ ಇಮಡಿಯಾ ನಾಯಕ ವಿರಾಟ್ ಕೊಹ್ಲಿ 870 ಅಂಕಗಳನ್ನು ಹೊಂದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಪಿತೃತ್ವದ ರಜೆಯನ್ನು ಪಡೆದು ತವರಿಗೆ ಮರಳಿದ್ದಾರೆ.

ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಸಿಡ್ನಿ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಗಳಿಸಿದ 131 ರನ್ ಹಾಗೂ ಎರಡನೇ ಇನ್ನಿಂಗ್ಸ್‌ನ 81 ರನ್‌ಗಳ ಕಾರಣದಿಂದಾಗಿ 900 ಅಂಕಗಳನ್ನು ಹೊಂದಿದ್ದಾರೆ. ಈ ಮೂಲಕ ಅವರು ಎರಡನೇ ಸ್ಥಾನವನ್ನು ಹೊಂದಿದ್ದು ಮೊದಲ ಸ್ಥಾನದಲ್ಲಿರುವ ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ 919 ಅಂಕಗಳನ್ನು ಹೊಂದಿದ್ದಾರೆ.

ಹನುಮ ವಿಹಾರಿ ಅಂತಿಮ ಟೆಸ್ಟ್ ಪಂದ್ಯದಿಂದ ಹೊರಕ್ಕೆ: ಇಂಗ್ಲೆಂಡ್ ಟೆಸ್ಟ್‌ಗೂ ಅನುಮಾನಹನುಮ ವಿಹಾರಿ ಅಂತಿಮ ಟೆಸ್ಟ್ ಪಂದ್ಯದಿಂದ ಹೊರಕ್ಕೆ: ಇಂಗ್ಲೆಂಡ್ ಟೆಸ್ಟ್‌ಗೂ ಅನುಮಾನ

ಆಸ್ಟ್ರೇಲಿಯಾ ವಿರುದ್ಧ ನಿರ್ಣಾಯಕ 97 ರನ್ ಗಳಿಸಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ರಿಷಬ್ ಪಂತ್ 19 ಸ್ಥಾನಗಳ ಏರಿಕೆ ಕಂಡಿದ್ದು 26ನೇ ಸ್ಥಾನದಲ್ಲಿದ್ದಾರೆ. ಹನುಮ ವಿಹಾರಿ 52, ರವಿಚಂದ್ರನ್ ಅಶ್ವಿನ್ 89 ಹಾಗೂ ಶುಬ್ಮನ್ ಗಿಲ್ 69ನೇ ಸ್ಥಾನದಲ್ಲಿದ್ದಾರೆ.

Story first published: Wednesday, January 13, 2021, 9:51 [IST]
Other articles published on Jan 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X