ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್ ರ‍್ಯಾಂಕಿಂಗ್: ಆರನೇ ಸ್ಥಾನಕ್ಕೆ ಜಿಗಿದ ಅಜಿಂಕ್ಯ ರಹಾನೆ, 7ಸ್ಥಾನಕ್ಕೇರಿದ ಅಶ್ವಿನ್

ICC Test Rankings: Ajinkya Rahane jumps to 6th after Melbourne heroics

ಮೆಲ್ಬರ್ನ್ ಟೆಸ್ಟ್‌ನ ಬಳಿಕ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಕೆಲ ಗಮನಾರ್ಹ ಬದಲಾವಣೆಗಳು ಆಗಿದೆ. ಎರಡನೇ ಟೆಸ್ಟ್ ಪಂದ್ಯದಲ್ಲಿ ನಾಯಕ ಅಜಿಂಕ್ಯ ರಹಾನೆ ನೀಡಿದ ಶ್ರೇಷ್ಠ ಪ್ರದರ್ಶನದ ಕಾರಣದಿಂದಾಗಿ ರ‍್ಯಾಂಕಿಂಗ್ ಪಟ್ಟಿಯಲ್ಲಿ ಅವರ ಸ್ಥಾನದಲ್ಲಿ ಏರಿಕೆಯಾಗಿದೆ. ಟೆಸ್ಟ್ ಬ್ಯಾಟ್ಸ್‌ಮನ್‌ಗಳಿ ಪಟ್ಟಿಯಲ್ಲಿ ರಹಾನೆ 6ನೇ ಸ್ಥಾನಕ್ಕೆ ಜಿಗಿದಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಅಜಿಂಕ್ಯ ರಹಾನೆ ನಾಯಕತ್ವದ ಜೊತೆಗೆ ನೀಡಿದ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತಂಡವನ್ನು 8 ವಿಕೆಟ್‌ಗಳ ಗೆಲುವಿನ ಜೊತೆಗೆ ಸರಣಿ 1-1 ಸಮಬಲಗೊಳಿಸಲು ಕಾರಣರಾದರು. ಮೊದಲ ಇನ್ನಿಂಗ್ಸ್‌ನಲ್ಲಿ 112 ರನ್ ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ ಅಜೇಯ 27 ರನ್ ಬಾರಿಸಿ ಮಿಂಚಿದ್ದಾರೆ.

ಟೆಸ್ಟ್‌ ರ್‍ಯಾಂಕಿಂಗ್: ನಂ.1 ಸ್ಥಾನಿ ಸ್ಟೀವ್ ಸ್ಮಿತ್ ಕೆಳಗಿಳಿಸಿದ ವಿಲಿಯಮ್ಸನ್ಟೆಸ್ಟ್‌ ರ್‍ಯಾಂಕಿಂಗ್: ನಂ.1 ಸ್ಥಾನಿ ಸ್ಟೀವ್ ಸ್ಮಿತ್ ಕೆಳಗಿಳಿಸಿದ ವಿಲಿಯಮ್ಸನ್

ಅಜಿಂಕ್ಯ ರಹಾನೆ ತಮ್ಮ ವೃತ್ತಿ ಜೀವನದ ಅತ್ಯುನ್ನತ ಶ್ರೇಯಾಂಕಕ್ಕಿಂತ ಕೇವಲ ಒಂದು ಶ್ರೇಯಾಂಕ ಮಾತ್ರವೇ ಹಿಂದಿದ್ದಾರೆ. 2019ರ ಅಕ್ಟೋಬರ್‌ನಲ್ಲಿ ಅಜಿಂಕ್ಯ ರಹಾನೆ 5ನೇ ಕ್ರಮಾಂಕಕ್ಕೇರಿದ್ದರು. ಇದೀಗ ಮತ್ತೆ ಅದರ ಸನಿಹಕ್ಕೆ ತಲುಪಿದ್ದು ಆಸಿಸ್ ವಿರುದ್ಧದ ಸರಣಿಯಲ್ಲಿ ಉತ್ತಮ ಲಯದಲ್ಲಿರುವ ಕಾರಣ ತಮ್ಮ ಶ್ರೇಯಾಂಕವನ್ನು ಉತ್ತಮ ಪಡಿಸಿಕೊಳ್ಳುವ ಅವಕಾಶವಿದೆ.

ಇನ್ನು ಎಂಸಿಜಿಯಲ್ಲಿ ನಡೆದ ಎರಡನೇ ಪಂದ್ಯದಲ್ಲಿ 5 ವಿಎಕಟ್‌ಗಳ ಗೊಂಚಲನ್ನು ಪಡೆದ ಆರ್ ಅಶ್ವಿನ್ ಬೌಲರ್‌ಗಳ ಪಟ್ಟಿಯಲ್ಲಿ ಎರಡು ಸ್ಥಾನಗಳ ಏರಿಕೆ ಕಂಡಿದ್ದು 7ನೇ ಸ್ಥಾನದಲ್ಲಿದ್ದಾರೆ. ವೇಗಿ ಜಸ್ಪ್ರೀತ್ ಬೂಮ್ರಾ 9ನೇ ಸ್ಥಾನದಲ್ಲಿ ಉಳಿದುಕೊಂಡಿದ್ದಾರೆ.

ಆಸ್ಟ್ರೇಲಿಯಾ ಟೆಸ್ಟ್ ಸರಣಿಯಿಂದ ವೇಗಿ ಉಮೇಶ್ ಯಾದವ್ ಹೊರಕ್ಕೆಆಸ್ಟ್ರೇಲಿಯಾ ಟೆಸ್ಟ್ ಸರಣಿಯಿಂದ ವೇಗಿ ಉಮೇಶ್ ಯಾದವ್ ಹೊರಕ್ಕೆ

ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಗೆಲುವಿನ ನಿರ್ಣಾಯಕ ಪಾತ್ರವಹಿಸಿದ ಮತ್ತೋರ್ವ ಆಟಗಾರ ರವೀಂದ್ರ ಜಡೇಜಾ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಮೂರನೇ ಶ್ರೇಯಾಂಕದಲ್ಲೇ ಉಳಿದುಕೊಂಡಿದ್ದಾರೆ. ಆದರೆ ಎರಡನೇ ಸ್ಥಾನದಲ್ಲಿರುವ ಜೇಸನ್ ಹೋಲ್ಡರ್ ಅವರೊಂದಿಗಿನ ಅಂತರವನ್ನು ಕಡಿಮೆಗೊಳಿಸಿದ್ದಾರೆ. ಬ್ಯಾಟಿಂಗ್‌ನಲ್ಲಿ 36ನೇ ಹಾಗೂ ಬೌಲಿಂಗ್‌ನಲ್ಲಿ ವೃತ್ತಿ ಜೀವನದ ಶ್ರೇಷ್ಠ 14ನೇ ಸ್ಥಾನಕ್ಕೇರುವಲ್ಲಿ ಜಡೇಜಾ ಯಶಸ್ವಿಯಾಗಿದ್ದಾರೆ.

Story first published: Thursday, December 31, 2020, 17:50 [IST]
Other articles published on Dec 31, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X