ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ICC Test Rankings: ವಿಶ್ವದ ನಂಬರ್ 1 ಟೆಸ್ಟ್‌ ಬ್ಯಾಟ್ಸ್‌ಮನ್ ಆಗಲು ಜೋ ರೂಟ್‌ಗೆ ಇನ್ನೊಂದೇ ಹೆಜ್ಜೆ

Joe root

ಇತ್ತೀಚೆಗಷ್ಟೇ ಟೆಸ್ಟ್ ಕ್ರಿಕೆಟ್‌ನಲ್ಲಿ 10,000 ರನ್‌ಗಳ ಮೈಲಿಗಲ್ಲನ್ನ ತಲುಪಿದ ಇಂಗ್ಲೆಂಡ್ ಕ್ರಿಕೆಟಿಗ ಜೋ ರೂಟ್ ಟೆಸ್ಟ್ ಕ್ರಿಕೆಟ್ ರ್ಯಾಂಕಿಂಗ್‌ನಲ್ಲಿ ಬಡ್ತಿ ಪಡೆದಿದ್ದು, ಆಸೀಸ್ ದಿಗ್ಗಜ ಸ್ಟೀವನ್ ಸ್ಮಿತ್‌ರನ್ನ ಹಿಂದಿಕ್ಕಿದ್ದಾರೆ.

ಐಸಿಸಿ ಟೆಸ್ಟ್ ರ್ಯಾಕಿಂಗ್‌ನಲ್ಲಿನಲ್ಲಿ ಜೋ ರೂಟ್‌, ಆಸ್ಟ್ರೇಲಿಯಾದ ಮಾರ್ನಸ್ ಲ್ಯಾಬುಸ್ಚಾಗ್ನೆ ನಂತರ ಎರಡು ಸ್ಥಾನಗಳನ್ನು ಹೆಚ್ಚಿಸಿಕೊಂಡು ಎರಡನೇ ಸ್ಥಾನದಲ್ಲಿದ್ದಾರೆ. ಲಾರ್ಡ್ಸ್‌ ಮೈದಾನದಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಅಜೇಯ ಶತಕ ದಾಖಲಿಸಿದ ಜೋ ರೂಟ್ ಆಟದಿಂದ ಇಂಗ್ಲೆಂಡ್ ಐದು ವಿಕೆಟ್‌ಗಳ ಗೆಲುವು ಸಾಧಿಸಿತು. ಜೊತೆಗೆ ವೈಯಕ್ತಿವಾಗಿಯೂ ರೂಟ್ ಮೈಲಿಗಲ್ಲನ್ನ ಸ್ಥಾಪಿಸಿದ್ದು, ವಿಶ್ವದ ಅಗ್ರ ಬ್ಯಾಟರ್‌ಗಳಿಗೆ ಸ್ಪರ್ಧೆ ನೀಡಿದ್ದಾರೆ.

ಲಾರ್ಡ್ಸ್‌ನಲ್ಲಿ ಅಜೇಯ 115 ರನ್ ಗಳಿಸಿದ ಬಲಗೈ ಬ್ಯಾಟರ್ ರೂಟ್‌ 10,000 ಟೆಸ್ಟ್ ರನ್‌ಗಳನ್ನು ದಾಖಲಿಸಿದ ಇಂಗ್ಲೆಂಡ್‌ನ ಎರಡನೇ ಆಟಗಾರ ಮತ್ತು ಒಟ್ಟಾರೆ 14 ನೇ ಆಟಗಾರ ಎಂಬ ಸಾಧನೆ ಮಾಡಿದ್ದಾರೆ.

ಟೆಸ್ಟ್‌ ರ್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನ ಅಲಂಕರಿಸಿದ ಜೋ ರೂಟ್

ಟೆಸ್ಟ್‌ ರ್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನ ಅಲಂಕರಿಸಿದ ಜೋ ರೂಟ್

31 ವರ್ಷ ವಯಸ್ಸಿನ ಇಂಗ್ಲೆಂಡ್ ಬ್ಯಾಟರ್ ರೂಟ್‌ನ ಏರಿಕೆಯೊಂದಿಗೆ, ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಇತ್ತೀಚಿನ ಶ್ರೇಯಾಂಕದಲ್ಲಿ ಮೂರನೇ ಸ್ಥಾನಕ್ಕೆ ಕುಸಿದು ಒಂದು ಸ್ಥಾನವನ್ನು ಕಳೆದುಕೊಂಡಿದ್ದಾರೆ. ಇನ್ನು ಪಾಕಿಸ್ತಾನದ ನಾಯಕ ಬಾಬರ್ ಅಜಮ್ ನಾಲ್ಕನೇ ಸ್ಥಾನಕ್ಕೆ ಜಿಗಿದರೆ, ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಲಾರ್ಡ್ಸ್‌ನಲ್ಲಿ ಕೇವಲ ಎರಡು ಮತ್ತು 15 ಸ್ಕೋರ್‌ಗಳನ್ನು ಗಳಿಸಿದ್ದರಿಂದ ಎರಡು ಸ್ಥಾನಗಳನ್ನು ಕಳೆದುಕೊಂಡು ಐದನೇ ಸ್ಥಾನಕ್ಕೆ ತಲುಪಿದ್ದಾರೆ.

ಇನ್ನು ಬೌಲಿಂಗ್ ರ್ಯಾಂಕಿಂಗ್‌ನಲ್ಲಿ ನೋಡಿದ್ರೆ, ನ್ಯೂಜಿಲೆಂಡ್‌ನ ವೇಗಿ ಕೈಲ್ ಜೇಮಿಸನ್ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಉತ್ತಮ ಬೌಲಿಂಗ್ ದಾಳಿ ನಡೆಸಿ ವಿಕೆಟ್ ಬೇಟೆಯಾಡಿದ್ದರಿಂದ ಎರಡು ಸ್ಥಾನ ಬಡ್ತಿ ಪಡೆದು ಮೂರನೇ ಸ್ಥಾನ ತಲುಪಿದ್ದಾರೆ. ಇಂಗ್ಲೆಂಡ್ ವಿರುದ್ಧ ಕಳೆದ ಟೆಸ್ಟ್‌ನಲ್ಲಿ ಜೇಮಿಸನ್ ಆರು ವಿಕೆಟ್‌ಗಳನ್ನ ಪಡೆದರು.

IND vs SA: ಸರಣಿಗೂ ಮುನ್ನವೇ ಭಾರತಕ್ಕೆ ತೀವ್ರ ಆಘಾತ; ರಾಹುಲ್ ಔಟ್, ನೂತನ ನಾಯಕನ ನೇಮಕ!

ಒಂದು ಸ್ಥಾನ ಕಳೆದುಕೊಂಡ ಜಸ್ಪ್ರೀತ್ ಬುಮ್ರಾ

ಒಂದು ಸ್ಥಾನ ಕಳೆದುಕೊಂಡ ಜಸ್ಪ್ರೀತ್ ಬುಮ್ರಾ

ನ್ಯೂಜಿಲೆಂಡ್ ವೇಗಿಯ ಬಡ್ತಿಯಿಂದಾಗಿ ಟೀಂ ಇಂಡಿಯಾ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಮತ್ತು ಪಾಕಿಸ್ತಾನದ ವೇಗಿ ಶಾಹಿನ್ ಅಫ್ರಿದಿ ಒಂದು ಸ್ಥಾನವನ್ನು ಕಳೆದುಕೊಂಡಿದ್ದಾರೆ. ಬುಮ್ರಾ ನಾಲ್ಕನೇ ಸ್ಥಾನ ಮತ್ತು ಶಾಹಿನ್ ಅಫ್ರಿದಿ ಐದನೇ ಸ್ಥಾನ ತಲುಪಿದ್ದಾರೆ.

ಆಸ್ಟ್ರೇಲಿಯಾ ನಾಯಕ ಮತ್ತು ವೇಗಿ ಪ್ಯಾಟ್‌ ಕಮಿನ್ಸ್‌ 901 ಪಾಯಿಂಟ್ಸ್‌ನೊಂದಿಗೆ ಅಗ್ರಸ್ಥಾನದಲ್ಲಿದ್ದು, ಭಾರತದ ಲೆಜೆಂಡರಿ ಸ್ಪಿನ್ನರ್ ಆರ್‌. ಅಶ್ವಿನ್ 850 ಪಾಯಿಂಟ್ಸ್‌ನೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

ತನ್ನ ಫೇವರಿಟ್ ಕ್ರಿಕೆಟಿಗನನ್ನ ಹೆಸರಿಸಿದ ಹಾರ್ದಿಕ್ ಪಾಂಡ್ಯ: ಸಚಿನ್, ಸೆಹ್ವಾಗ್, ದ್ರಾವಿಡ್‌ ಅಲ್ವೇ ಅಲ್ಲ!

Kl Rahul OUT.... ಪಂತ್ & ಪಾಂಡ್ಯಾಗೆ ಹೊಡೀತು ಲಕ್!!! | *Cricket | OneIndia Kannada
ಆಲ್‌ರೌಂಡರ್‌ ಸ್ಥಾನದಲ್ಲಿ ಬದಲಾಗದ ಅಶ್ವಿನ್ ರ್ಯಾಂಕಿಂಗ್

ಆಲ್‌ರೌಂಡರ್‌ ಸ್ಥಾನದಲ್ಲಿ ಬದಲಾಗದ ಅಶ್ವಿನ್ ರ್ಯಾಂಕಿಂಗ್

ಟೆಸ್ಟ್‌ ಆಲ್‌ರೌಂಡರ್ ಲಿಸ್ಟ್‌ನಲ್ಲೂ ಅಶ್ವಿನ್‌ ಎರಡನೇ ಸ್ಥಾನವನ್ನು ಭದ್ರ ಪಡಿಸಿಕೊಂಡಿದ್ದು, ಮೊದಲ ಸ್ಥಾನವನ್ನು ಭಾರತದ ರವೀಂದ್ರ ಜಡೇಜಾ ಅಲಂಕರಿಸಿದ್ದಾರೆ. ಇನ್ನುಳಿದಂತೆ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿ ವೆಸ್ಟ್‌ ಇಂಡೀಸ್‌ನ ಜೇಸನ್ ಹೋಲ್ಡರ್, ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ಇದ್ದಾರೆ.

ಐದು ಮತ್ತು ಆರನೇ ಸ್ಥಾನದಲ್ಲಿ ಬೆನ್‌ ಸ್ಟೋಕ್ಸ್‌, ಮಿಚೆಲ್ ಸ್ಟಾರ್‌ ಇದ್ದು, ನ್ಯೂಜಿಲೆಂಡ್ ವೇಗಿ ಕೈಲ್ ಜೇಮಿಸನ್ ಏಳನೇ ಸ್ಥಾನದಿಂದ ಒಂದು ಸ್ಥಾನ ಕುಸಿದು ಎಂಟನೇ ಸ್ಥಾನ ತಲುಪಿದ್ದಾರೆ.

Story first published: Wednesday, June 8, 2022, 19:34 [IST]
Other articles published on Jun 8, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X