ಅಂಡರ್-19 ವಿಶ್ವಕಪ್ 2022: ಆಸ್ಟ್ರೇಲಿಯಾ ಪರ ಮಿಂಚಿದ ತಮಿಳುನಾಡು ಮೂಲದ ನಿವೇದನ್ ರಾಧಾಕೃಷ್ಣನ್

ವೆಸ್ಟ್‌ ಇಂಡೀಸ್‌ನಲ್ಲಿ ನಡೆಯುತ್ತಿರುವ ಅಂಡರ್-19 ವಿಶ್ವಕಪ್‌ನ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ವಿಂಡೀಸ್ ತಂಡಕ್ಕೆ ಆಸ್ಟ್ರೇಲಿಯಾ ಅಂಡರ್-19 ತಂಡ ಸೋಲಿನ ರುಚಿ ತೋರಿಸಿದೆ. ಆತಿಥೇಯ ತಂಡವನ್ನ 160 ರನ್‌ಗಳಿಗೆ ಆಲೌಟ್ ಮಾಡಿದ ಆಸೀಸ್ ಜ್ಯೂನಿಯರ್ ಟೀಮ್ 31 ಎಸೆತಗಳು ಬಾಕಿ ಇರುವಂತೆ 6 ವಿಕೆಟ್‌ಗಳ ಜಯ ಸಾಧಿಸಿದೆ.

ಈ ಪಂದ್ಯದಲ್ಲಿ ಆಲ್‌ರೌಂಡರ್ ಪ್ರದರ್ಶನ ನೀಡಿದ್ದು ತಮಿಳುನಾಡು ಮೂಲದ ಆಸ್ಟ್ರೇಲಿಯಾ ಕ್ರಿಕೆಟಿಗ ನಿವೇದನ್ ರಾಧಾಕೃಷ್ಣನ್. 19 ವರ್ಷ ವಯಸ್ಸಿನ, ತಮಿಳುನಾಡಿನ ಚೆನ್ನೈನಲ್ಲಿ ಜನಿಸಿದ ಈತ 10 ವರ್ಷ ವಯಸ್ಸಿನಲ್ಲೇ ತಮ್ಮ ಕುಟುಂಬದೊಂದಿಗೆ ಆಸ್ಟ್ರೇಲಿಯಾಕ್ಕೆ ತೆರಳಿದರು. ಎಡಗೈ ಮತ್ತು ಬಲಗೈ ಎರಡನ್ನೂ ಬೌಲ್ ಮಾಡಬಲ್ಲ ವಿಶೇಷ ಬೌಲರ್ ಆಗಿರುವುದು ರಾಧಾಕೃಷ್ಣನ್‌ನ ವಿಶಿಷ್ಟ ಲಕ್ಷಣಗಳಲ್ಲಿ ಒಂದಾಗಿದೆ.

ದಕ್ಷಿಣ ಆಫ್ರಿಕಾ ವಿರುದ್ಧ ಸೋಲಿನ ಆಘಾತ: ಟೆಸ್ಟ್ ಕ್ರಿಕೆಟ್‌ ನಾಯಕತ್ವದಿಂದ ಕೆಳಗಿಳಿದ ವಿರಾಟ್ ಕೊಹ್ಲಿದಕ್ಷಿಣ ಆಫ್ರಿಕಾ ವಿರುದ್ಧ ಸೋಲಿನ ಆಘಾತ: ಟೆಸ್ಟ್ ಕ್ರಿಕೆಟ್‌ ನಾಯಕತ್ವದಿಂದ ಕೆಳಗಿಳಿದ ವಿರಾಟ್ ಕೊಹ್ಲಿ

ನಿವೇದನ್ ವಿಂಡೀಸ್ ವಿರುದ್ಧದ ಪಂದ್ಯದಲ್ಲಿ 10 ಓವರ್‌ಗಳ ಸ್ಪೆಲ್‌ನಲ್ಲಿ 48 ರನ್‌ ನೀಡಿ 3 ವಿಕೆಟ್ ಕಬಳಿಸಿದರು. ಬ್ಯಾಟಿಂಗ್‌ನಲ್ಲೂ ತಂಡಕ್ಕೆ ನೆರವಾದ ಈತ 58 ಎಸೆತಗಳಲ್ಲಿ 31 ರನ್‌ ಕಲೆಹಾಕಿ ತಂಡದ ಗೆಲುವಿನಲ್ಲಿ ಅಮೂಲ್ಯ ಕೊಡುಗೆ ನೀಡಿದ್ರು. ಅಂತರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ವಿರಳ ಬೌಲರ್‌ಗಳಲ್ಲಿ ಒಬ್ಬನಾದ ಈತ ತನ್ನ ಎರಡೂ ಕೈಗಳಲ್ಲೂ ಬೌಲಿಂಗ್ ಮಾಡಬಲ್ಲ ಸಾಮರ್ಥ್ಯ ಹೊಂದಿದ್ದಾನೆ.

ಐಸಿಸಿಗೆ ನೀಡಿದ ಸಂದರ್ಶನದಲ್ಲಿ ಈ ಯುವ ಆಟಗಾರ, ನಿಯಮಗಳ ಪ್ರಕಾರ ಅಂಪೈರ್‌ಗೆ ತಿಳಿಸುವ ಮೂಲಕ ಎರಡೂ ಕೈಗಳಿಂದ ಬೌಲಿಂಗ್ ಮಾಡುವ ಉದ್ದೇಶವಿದೆ ಎಂದು ತಿಳಿಸಿದ್ದಾರೆ. ಆಧುನಿಕ ದಿನದ ಆಟದಲ್ಲಿ ಬ್ಯಾಟರ್‌ಗಳು ಪಡೆಯುವ ಸವಲತ್ತುಗಳನ್ನು ಅವರು ನೆನಪಿಸಿದರು ಮತ್ತು ಬೌಲರ್‌ಗಳು ಸಹ ನ್ಯಾಯಯುತ ಪ್ರಯೋಜನವನ್ನು ಹೊಂದಬೇಕೆಂದು ಬಯಸಿದ್ದಾರೆ.

ಬೌಲಿಂಗ್‌ನಲ್ಲಿ ಅಷ್ಟೇ ಅಲ್ಲದೆ ಬ್ಯಾಟಿಂಗ್‌ನಲ್ಲಿ ರಿವರ್ಸ್ ಸ್ವೀಪ್‌ಗಳು ಮತ್ತು ಸ್ವಿಚ್ ಹಿಟ್‌ಗಳನ್ನು ಬಾರಿಸಿದ್ದಾರೆ. ಆ ಮೂಲಕ ಬ್ಯಾಟಿಂಗ್‌ನಲ್ಲಿ ಹೊಸ ಶಾಟ್‌ಗಳನ್ನ ಆಡಲು ಪ್ರಯತ್ನಿಸಿದ್ದಾರೆ.

''ನಾನು ಅಂಪೈರ್‌ಗೆ ಹೇಳದೆ ಎರಡೂ ಕೈಗಳಿಂದ ಬೌಲ್ ಮಾಡಲು ಸಾಧ್ಯವಾಗುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಏಕೆಂದರ್ ಬ್ಯಾಟರ್ ಸ್ವಿಚ್ ಹಿಟ್ಸ್, ರಿವರ್ಸ್ ಸ್ವೀಪ್ಸ್ ಬಯಸಿದ್ದಾಗ ನಾನು ಏನು ಬೌಲ್ ಮಾಡಲಿದ್ದೇನೆ ಎಂದು ಅವನಿಗೆ ತಿಳಿದಿಲ್ಲ "ಎಂದು ಅವರು ಐಸಿಸಿಗೆ ತಿಳಿಸಿದರು.

ಹೊಸ ನಾಯಕನ ಮುಂದೆ Kohli ಹೇಗಿರಬೇಕು ಎಂದ Kapil Dev | Oneindia Kannada

ವೆಸ್ಟ್ ಇಂಡೀಸ್ ವಿರುದ್ಧ ಆಸ್ಟ್ರೇಲಿಯಾದ ಪಂದ್ಯದಲ್ಲಿ ಆತಿಥೇಯರನ್ನ 10 ಓವರ್ ಬಾಕಿ ಇರುವಂತೆಯೇ 169 ರನ್‌ಗಳಿಗೆ ಆಲೌಟ್ ಮಾಡುವ ಆಸ್ಟ್ರೇಲಿಯಾ ಬಿಗಿ ಹಿಡಿತ ಸಾಧಿಸಿತು. ನಂತರದಲ್ಲಿ ಆಸ್ಟ್ರೇಲಿಯಾ ಓಪನರ್ ಟೀಗ್ ವೈಲ್ಲಿ ಮತ್ತೊಬ್ಬ ಓಪನರ್ ಕೋರಿ ಮಿಲ್ಲರ್, 3ನೇ ಕ್ರಮಾಂಕದ ಬ್ಯಾಟ್ಸ್‌ಮನ್ ಐಸಾಕ್ ಹಿಗಿನ್ಸ್‌ ವಿಕೆಟ್ ಬಹುಬೇಗನೆ ಕಳೆದುಕೊಂಡ್ರು ಸಹ ಗಟ್ಟಿಯಾಗಿ ನೆಲೆಯೂರಿ ತಂಡದ ಗೆಲುವಿಗೆ ಕಾರಣರಾದ್ರು. ಇದೇ ವೇಳೆಯಲ್ಲಿ ತಮಿಳುನಾಡು ಮೂಲದ ಆಸೀಸ್ ಆಲ್‌ರೌಂಡರ್ ನಿವೇದನ್ ರಾಧಾಕೃಷ್ಣನ್ 31 ರನ್‌ಗಳಿಸಿ ಗೆಲುವಿನ ಕೊಡುಗೆ ನೀಡಿದ್ರು.

For Quick Alerts
ALLOW NOTIFICATIONS
For Daily Alerts
Story first published: Saturday, January 15, 2022, 19:50 [IST]
Other articles published on Jan 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X