ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್: ಐಸಿಸಿ ಮುಂದೆ ಮತ್ತೊಂದು ಮಹತ್ವದ ಪ್ರಸ್ತಾಪ

ICC wants T20 World Cup expanded to 20 teams

ವಿಶ್ವ ಕ್ರಿಕೆಟ್‌ನಲ್ಲಿ ಅನೇಕ ಬದಲಾವಣೆಗಳು ನಡೆಯುತ್ತಿದೆ. ಇದೀಗ ಮತ್ತೊಂದು ಮಹತ್ವದ ಪ್ರಸ್ತಾಪ ಐಸಿಸಿ ಮುಂದಿದೆ. ವಿಶ್ವಕಪ್‌ನಲ್ಲಿ 16 ತಂಡಗಳು ಭಾಗಿಯಾಗುತ್ತಿದ್ದು ಇದನ್ನು ಹೆಚ್ಚಿಸಬೇಕೆಂಬ ಪ್ರಸ್ತಾಪ ಐಸಿಸಿ ಮುಂದಿದೆ. ಇದು 2023-31 ಅವಧಿಯಲ್ಲಿ ನಡೆಯುವ ಟಿ20 ವಿಶ್ವಕಪ್ ಟೂರ್ನಿಗೆ ಈ ಚಿಂತನೆಯನ್ನು ನಡೆಸಲಾಗುತ್ತಿದೆ.

ಕ್ರಿಕೆಟನ್ನು ಐಸಿಸಿ ಫೂಟ್ಬಾಲ್ ಮತ್ತು ಬಾಸ್ಕೆಟ್‌ಬಾಲ್ ಮಾದರಿಯಲ್ಲಿ ವಿಶ್ವಕ್ರೀಡಾ ಲೋಕದಲ್ಲಿ ಅಭಿಮಾನಿಗಳನ್ನು ಭಾರೀ ಸಂಖ್ಯೆಯಲ್ಲಿ ಸೆಳೆಯುವಂತೆ ಮಾಡಬೇಕೆಂಬ ಪ್ರಯತ್ನ ಮಾಡುತ್ತಿದೆ. ಆ ಪ್ರಯತ್ನದ ಭಾಗವಾಗಿ ವಿಶ್ವಕಪ್‌ನಂತಾ ಟೂರ್ನಿಯಲ್ಲಿ ತಂಡಗಳ ಸಂಖ್ಯೆಯನ್ನು ಹೆಚ್ಚಿಸಲು ಐಸಿಸಿ ನಿರ್ಧರಿಸಿದೆ. ಈ ಬಗ್ಗೆ ಈಗಾಗಲೆ ಒಂದು ಹಂತದ ಮಾತುಕತೆಯೂ ನಡೆದಿದೆ ಎನ್ನಲಾಗಿದೆ.

ಭಾರತ vs ಆಸ್ಟ್ರೇಲಿಯಾ: ದಾಖಲೆಯ ಸನಿಹದಲ್ಲಿದ್ದಾರೆ ರೋಹಿತ್ ಶರ್ಮಾ!ಭಾರತ vs ಆಸ್ಟ್ರೇಲಿಯಾ: ದಾಖಲೆಯ ಸನಿಹದಲ್ಲಿದ್ದಾರೆ ರೋಹಿತ್ ಶರ್ಮಾ!

ಈ ಬದಲಾವಣೆ ನಡೆದಿದ್ದೇ ಆದಲ್ಲಿ ಯುಎಸ್‌ಎ, ಕೆನಡಾ, ಜರ್ಮನಿ, ಜಪಾನ್ ಮತ್ತು ನೈಜೀರಿಯಾ ತಂಡಗಳು ಐಸಿಸಿ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಪಡೆಯಲಿವೆ. ಇದನ್ನು ಕಾರ್ಯರೂಪ ಬಂದಲ್ಲಿ ಐಸಿಸಿ ಮುಂದೆ ಇದನ್ನು ಕಾರ್ಯರೂಪಕ್ಕೆ ತರಲು ಎರಡು ಮಾದರಿಗಳು ಐಸಿಸಿ ಮುಂದಿವೆ. ಮೊದಲನೆಯದು ಕೆಳ ಕ್ರಮಾಂಕದಲ್ಲಿರುವ ತಂಡಗಳು ಅರ್ಹತಾ ಸುತ್ತಿನಲ್ಲಿ ಆಡಿದ ಬಳಿಕ ನಿರ್ಣಾಯಕ ಹಂತವನ್ನು ತಲುಪಲಿದೆ. ಇನ್ನೊಂದು ಮಾದರಿ ಎಲ್ಲಾ ತಂಡಗಳ ಜೊತೆಯಲ್ಲಿ ನಾಲ್ಕು ಗುಂಪುಗಳಾಗಿ ವಿಂಗಡಿಸಿ ನಾಕೌಟ್‌ ಹಂತಕ್ಕೆ ತಲುಪಲಿದೆ. ಈ ಮಾದರಿಯಲ್ಲಿ ಯಾವುದಾದರೂ ಒಂದನ್ನು ಐಸಿಸಿ ಆಯ್ಕೆ ಮಾಡಲಿದೆ.

ಭಾರತ vs ಆಸ್ಟ್ರೇಲಿಯ: ಆರಂಭಿಕ ಆಟಗಾರರ ಬಗ್ಗೆ ಮಹತ್ವದ ಸುಳಿವು ನೀಡಿದ ಕೊಹ್ಲಿಭಾರತ vs ಆಸ್ಟ್ರೇಲಿಯ: ಆರಂಭಿಕ ಆಟಗಾರರ ಬಗ್ಗೆ ಮಹತ್ವದ ಸುಳಿವು ನೀಡಿದ ಕೊಹ್ಲಿ

ಇತ್ತೀಚೆಗಷ್ಟೇ ನಾಲ್ಕು ದಿನಗಳ ಟೆಸ್ಟ್ ಕ್ರಿಕೆಟ್‌ಬಗ್ಗೆ ಐಸಿಸಿ ಮುಂದೆ ಪ್ರಸ್ತಾಪ ಬಂದಿದ್ದು ಈ ಬಗ್ಗೆ ವಿಶ್ವ ಕ್ರಿಕೆಟ್‌ನಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಜೊತೆಗೆ ಡೇ-ನೈಟ್‌ ಟೆಸ್ಟ್‌ ಕ್ರಿಕೆಟ್‌ ಬಗ್ಗೆಯೂ ಹೆಚ್ಚಿನ ಆಸಕ್ತಿ ಮೂಡುತ್ತಿದೆ. ಈ ಮಧ್ಯೆ ಟಿ20 ವಿಶ್ವಕಪ್‌ನಲ್ಲಿ 16 ತಂಡಗಳ ಬದಲಾಗಿ 20 ತಂಡಗಳಿಗೆ ಹೆಚ್ಚಿಸುವ ಬಗ್ಗೆ ಐಸಿಸಿ ಪ್ರಸ್ತಾಪವನ್ನಿಟ್ಟಿದ್ದು ಮುಂದೆ ಅಂತಿಮ ತೀರ್ಮಾನವನ್ನು ತೆಗದುಕೊಳ್ಳಲಿದೆ

Story first published: Tuesday, January 14, 2020, 17:22 [IST]
Other articles published on Jan 14, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X