ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್: ರಿವ್ಯೂ ಕೇಳೋದಾ, ಬೇಡ್ವಾ?; ಕೊಹ್ಲಿ ಗೊಂದಲಕ್ಕೊಳಗಾದ ಕ್ಷಣ!

By R Kaushik, London
ICC WC 2019: India vs England: To review or not: Kohlis moment of indecision

ಬರ್ಮಿಂಗ್‌ಹ್ಯಾಮ್, ಜುಲೈ 1: ಆಟದ ವೇಳೆ ಇಕ್ಕಟ್ಟಿಗೆ ಸಿಲುಕುತ್ತೇವಲ್ಲ? ಆಟದ ಗತಿಯನ್ನು ಬದಲಿಸಬಲ್ಲ ಪ್ರಮುಖ ಕ್ಷಣವಿದೆಂದೂ ನಾವದನ್ನು ಭಾವಿಸಬಹುದು, ಆದರೆ ಅದು ಪಶ್ಚಾತ್ತಾಪದ ಪಡಬೇಕಾದ ಕ್ಷಣವೂ ಹೌದು, ಅಲ್ಲವೇ? ಭಾನುವಾರ (ಜೂನ್ 30) ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಇಂಗ್ಲೆಂಡ್‌ ಇನ್ನಿಂಗ್ಸ್‌ನ 11ನೇ ಓವರ್‌ನಲ್ಲಿ ವಿರಾಟ್ ಕೊಹ್ಲಿ ಅವರು ಅಂಪೈರ್ ಅಲೀಮ್ ದಾರ್‌ ಅವರೆದುರು 'ಟಿ' ಚಿಹ್ನೆ ತೋರಿಸಿದ್ದರೆ (ರಿವ್ಯೂ ಕೇಳಿದ್ದರೆ) ಪಂದ್ಯ ಯಾವ ಗತಿಗೂ ತಿರುಗುತ್ತಿತ್ತು. ಅಂತೂ ಪಂದ್ಯ ಸೋತಾಗಿದೆ. ಆದರೆ ಈಗ ಇದೇ ಚರ್ಚೆಯ ಪ್ರಮುಖ ವಿಚಾರವಾಗಿದೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಘಟನೆಯ ತಿರುಳು ಇದು; 4ನೇ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ ಅವರು ಹಿಂದಿನ ಮೂರು ಪಂದ್ಯಗಳಲ್ಲಿ ಹ್ಯಾಮ್‌ಸ್ಟ್ರಿಂಗ್ ಗಾಯದ ಕಾರಣಕ್ಕಾಗಿ ತಂಡದಿಂದ ಹೊರಗಿದ್ದ ಇಂಗ್ಲೆಂಡ್ ಆರಂಭಿಕ ಬ್ಯಾಟ್ಸ್ಮನ್ ಜೇಸನ್ ರಾಯ್‌ ಅವರತ್ತ ಶಾರ್ಟ್ ಬಾಲ್ ಎಸೆದರು. ಚೆಂಡು ಬ್ಯಾಟ್ಸ್ಮನ್ ದಾಟಿ ವಿಕೆಟ್ ಕೀಪರ್ ಧೋನಿಯ ಕೈ ಸೇರಿತು. ಪಾಂಡ್ಯ ಔಟ್‌ಗಾಗಿ ಅಪೀಲ್ ಮಾಡಿದರು. ಆದರೆ ಅಂಪೈರ್ ಅಲೀಮ್ ಅವರು ವೈಡ್ ಸಿಗ್ನಲ್ ನೀಡಿದರು.

ವಿಕೆಟ್‌ ಹಿಂಬದಿಯಲ್ಲಿ ಮತ್ತೊಮ್ಮೆ ವಿಫಲಗೊಂಡ ಎಂ.ಎಸ್‌ ಧೋನಿ!ವಿಕೆಟ್‌ ಹಿಂಬದಿಯಲ್ಲಿ ಮತ್ತೊಮ್ಮೆ ವಿಫಲಗೊಂಡ ಎಂ.ಎಸ್‌ ಧೋನಿ!

ವಿಕೆಟ್ ಕೀಪರ್ ಧೋನಿಯ ಕೈಗೆ ಸೇರುವ ಮೊದಲು ಚೆಂಡು ರಾಯ್ ಗ್ಲೌಸ್ ತಾಗಿದೆ ಎಂದುದನ್ನು ಪಾಂಡ್ಯ ಮನವರಿಕೆ ಮಾಡಲು ಯತ್ನಿಸಿದರು. ಬೌಲರ್‌ಗಳು ಹೆಚ್ಚಿನ ಸಾರಿ ಎದುರಾಳಿ ಬ್ಯಾಟ್ಸ್ಮನ್ ತನ್ನ ಎಸೆತಕ್ಕೆ ಔಟ್ ಆಗಿದ್ದಾರೆ ಎಂದೇ ಭಾವಿಸೋದಿದೆ, ಔಟ್ ಗೆ ಅಪೀಲ್ ಮಾಡೋದಿದೆ. ಬಹುಶಃ ಧೋನಿಯೂ ಹೀಗೆಯೇ ಭಾವಿಸಿದರೋ ಏನೋ.

ವಿಶ್ವಕಪ್: ಇಂಗ್ಲೆಂಡ್ ವಿರುದ್ಧ ಭಾರತದ ಸೋಲಿಗೆ 2 ಕಾರಣ ಹೇಳಿದ ಗಂಗೂಲಿ!ವಿಶ್ವಕಪ್: ಇಂಗ್ಲೆಂಡ್ ವಿರುದ್ಧ ಭಾರತದ ಸೋಲಿಗೆ 2 ಕಾರಣ ಹೇಳಿದ ಗಂಗೂಲಿ!

ಅದು ಔಟ್ ಎಂಬುದು ಧೋನಿಗೆ ಸಂಪೂರ್ಣ ಮನವರಿಕೆಯಾದಂತಿರಿಲ್ಲ. ಚೆಂಡು ಬ್ಯಾಟ್ಸ್ಮನ್‌ನ ಗ್ಲೌಸ್‌ಗೆ ತಾಗಿದೆಯೇ ಇಲ್ಲವೋ ಎಂಬುದು ಧೋನಿಗೆ ಗೊಂದಲ ಮೂಡಿಸಿತ್ತು. ತಂಡದ ನಾಯಕ ವಿರಾಟ್ ಕೊಹ್ಲಿ ಧೋನಿಯತ್ತ ದಿಟ್ಟಿಸಿದರು. ಧೋನಿ ಡಿಸಿಶನ್ ರಿವ್ಯೂ ಸಿಸ್ಟಮ್ (ಡಿಆರ್‌ಎಸ್) ಕೇಳೋದು ಬೇಡ ಎಂದು ಸೂಚಿಸಿದರು. ಡಿಆರ್‌ಎಸ್ ಕೇಳಲು ಇದ್ದು 15 ಸೆಕೆಂಟ್‌ಗಳ ಗಡುವು ಮುಗಿಯಿತು, ಕೊಹ್ಲಿ ಡಿಆರ್‌ಎಸ್ ಕೇಳಲಿಲ್ಲ. ಆದರೆ ಮುಂದೆ ಪರಿಶೀಲಿಸಿದಾಗ ಅಲ್ಟ್ರಾ ಎಡ್ಜ್ ಚೆಂಡು, ರಾಯಲ್ ಗ್ಲೌಸನ್ನು ತಾಗಿರುವುದನ್ನು ಸೂಚಿಸುತ್ತಿತ್ತು. ಪಾಂಡ್ಯ ಯಾಕೆ ಎದುರಾಳಿ ಬ್ಯಾಟ್ಸ್ಮನ್ ಔಟ್ ಎಂದು ವಿಶ್ವಾಸದಿಂದ ಹೇಳಿಕೊಂಡಿದ್ದರು ಎನ್ನುವುದಕ್ಕೆ ಇದು ಪುರಾವೆ ಒದಗಿಸಿತ್ತು.

'ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಸೋಲಲು ಆ ಬಣ್ಣದ ಜರ್ಸಿಯೇ ಕಾರಣ''ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಸೋಲಲು ಆ ಬಣ್ಣದ ಜರ್ಸಿಯೇ ಕಾರಣ'

ಗ್ರೌಂಡ್‌ ನಲ್ಲಿ ಅಳವಡಿಸಿದ್ದ ಬೃಹತ್ ಡಿಜಿಟಲ್ ಪರದೆಯಲ್ಲಿ ರಾಯ್ ಔಟ್ ಎನ್ನುವುದು ಖಾತ್ರಿಯಾದಾಗ ಇಡೀ ಟೀಮ್ ಇಂಡಿಯಾ ಪಶ್ಚಾತಾಪ ಪಡುವಂತಾಯ್ತು. ಆದರೆ ಕಾಲ ಮಿಂಚಿ ಹೋಗಿತ್ತು. ಆಗಿನ ಕ್ಷಣವನ್ನು ಒಪ್ಪಿಕೊಳ್ಳಲೇಬೇಕಾಗಿತ್ತು. ಇಲ್ಲಿ ಹೀಗೆ ಪಶ್ಚಾತಾಪ ಅನುಭವಿಸುವಂತಾಗಿದ್ದು ರಿವ್ಯೂ ಕೇಳಬೇಕೋ ಬೇಡವೋ ಎಂಬ ಕೊಹ್ಲಿಯ ಗೊಂದಲದಿಂದ. ಅಗತ್ಯ ಸಂದರ್ಭದಲ್ಲಿ ರಿವ್ಯೂ ಬಳಸದಿದ್ದರೆ ಆ ರಿವ್ಯೂಗೆ ಬೆಲೆಯೇ ಇಲ್ಲದಂತಾಗುತ್ತದೆ. ಇಂಥದ್ದೇ ಕ್ಷಣ ಇಲ್ಲಿ ಕಂಡುಬಂತು.

ವಿಶ್ವಕಪ್ 2019: ಸೌರವ್ ಗಂಗೂಲಿ ದಾಖಲೆ ಸರಿದೂಗಿಸಿದ ರೋಹಿತ್ ಶರ್ಮಾವಿಶ್ವಕಪ್ 2019: ಸೌರವ್ ಗಂಗೂಲಿ ದಾಖಲೆ ಸರಿದೂಗಿಸಿದ ರೋಹಿತ್ ಶರ್ಮಾ

ಹಾಗೆ ಜೀವದಾನ ಪಡೆದ ರಾಯ್ 57 ಎಸೆತಗಳಿಗೆ 66 ರನ್ ಸೇರಿಸಿ ತಂಡಕ್ಕೆ ಬೆಂಬಲಿಸಿದ್ದರು. ಈ 66 ರನ್‌ನಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್‌ಗಳೂ ಸೇರಿದ್ದವು. ಅದೂ ತಾನು ಜೀವದಾನ ಪಡೆದ ಮರುಕ್ಷಣವೇ ರಾಯ್ ಹೆಚ್ಚು ಸಿಕ್ಸ್, ಫೋರ್‌ಗಳನ್ನು ಚಚ್ಚಿದ್ದರು. ರಾಯ್ ಔಟಾಗಿ 49 ರನ್‌ ವೇಳೆ 1 ವಿಕೆಟ್ ಕಳೆದುಕೊಳ್ಳಬೇಕಿದ್ದ ಇಂಗ್ಲೆಂಡ್, ರಾಯ್ ಮತ್ತೆ ಔಟಾಗೋ ಹೊತ್ತಿಗೆ ಅಂದರೆ 22.1ನಲ್ಲಿ ಮೊದಲ ವಿಕೆಟ್ ಕಳೆದುಕೊಳ್ಳುವ ಹೊತ್ತಿಗೆ 160 ರನ್ ಬಾರಿಸಿತ್ತು.

ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಚಹಲ್‌ ಹೆಗಲೇರಿದ ಅನಗತ್ಯ ದಾಖಲೆ!ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಚಹಲ್‌ ಹೆಗಲೇರಿದ ಅನಗತ್ಯ ದಾಖಲೆ!

ಪಂದ್ಯದ ಬಳಿಕ ಮಾತಾಡಿದ ಉಪನಾಯಕ ರೋಹಿತ್ ಶರ್ಮಾ, 'ಇದು ತುಂಬಾ ಟ್ರಿಕ್ಕಿ ವಿಚಾರವಾಗಿತ್ತು. ಒಬ್ಬ ಏನೋ ಹೇಳಿದರೆ ಇನ್ನೊಬ್ಬ ಏನೂ ಹೇಳಲಿಲ್ಲ. ನಾಯಕ ಒತ್ತಡದಲ್ಲಿದ್ದ. ಆ ಕ್ಷಣದಲ್ಲಿ ನಿರ್ಧಾರ ತೆಗೆದುಕೊಳ್ಳೋದು ಸುಲಭದ ಮಾತಲ್ಲ. ಯಾಕೆಂದರೆ ಮೈದಾನದೊಳಗೆ ನೀವು ಒಮ್ಮೆ ಪ್ರವೇಶಿಸಿದ ನಂತರ ನಿಮ್ಮ ತಲೆಯಲ್ಲಿ ನೂರು ವಿಚಾರಗಳು ಓಡಾಡುತ್ತಿರುತ್ತವೆ' ಎಂದರಲ್ಲದೆ ಇಂಗ್ಲೆಂಡ್ ವಿರುದ್ಧ ಲಭಿಸಿದ 31 ರನ್ ಸೋಲನ್ನೂ ಒಪ್ಪಿಕೊಂಡರು.

(ಸುಮಾರು 20 ವರ್ಷಗಳಿಂದಲೂ ಕ್ರಿಕೆಟ್ ಬರವಣಿಗಾಗಿ ಗುರುತಿಸಿಕೊಂಡಿರುವ ಆರ್ ಕೌಶಿಕ್ ಅವರು ಲಂಡನ್‌ನಲ್ಲಿದ್ದು, ಇದು 7ನೇ ಬಾರಿಗೆ ವಿಶ್ವಕಪ್ ಟೂರ್ನಿ ಕವರ್ ಮಾಡುತ್ತಿದ್ದಾರೆ, ಮೈಖೇಲ್‌ಗಾಗಿ ವಿಶೇಷ ಲೇಖನಗಳನ್ನು ಬರೆಯುತ್ತಿದ್ದಾರೆ)

Story first published: Monday, July 1, 2019, 15:50 [IST]
Other articles published on Jul 1, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X