ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಸಿಸಿ ಮಹಿಳಾ ಏಕದಿನ ರ್‍ಯಾಂಕಿಂಗ್ ಬಿಡುಗಡೆ; ಅಗ್ರ ಹತ್ತರಲ್ಲಿ ಮಿಥಾಲಿ ರಾಜ್, ಸ್ಮೃತಿ ಮಂಧಾನ

ICC Womens ODI Ranking Released; Mithali Raj In 7th Spot And Smriti Mandhana Remains At 9th

ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮಹಿಳಾ ಏಕದಿನ ರ್‍ಯಾಂಕಿಂಗ್ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿದ್ದು, ಅಗ್ರ ಹತ್ತರಲ್ಲಿ ಭಾರತದ ಇಬ್ಬರು ಸ್ಟಾರ್ ಬ್ಯಾಟರ್‌ಗಳು ಕಾಣಿಸಿಕೊಂಡಿದ್ದಾರೆ.

ಮಾಜಿ ನಾಯಕಿ ಮಿಥಾಲಿ ರಾಜ್ ತಮ್ಮ ಏಳನೇ ಸ್ಥಾನವನ್ನು ಮುಂದುವರೆಸಿದ್ದರೆ, ಭಾರತದ ಆರಂಭಿಕ ಎಡಗೈ ಬ್ಯಾಟರ್ ಸ್ಮೃತಿ ಮಂಧಾನ ಅವರು ಏಕದಿನ ರ್‍ಯಾಂಕಿಂಗ್ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿ ಉಳಿದಿದ್ದಾರೆ.

ಆಸ್ಟ್ರೇಲಿಯದ ಅಲಿಸ್ಸಾ ಹೀಲಿ ಅವರು ಐಸಿಸಿ ಏಕದಿನ ರ್‍ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದ್ದರೆ, ಇಂಗ್ಲೆಂಡ್‌ನ ನಟಾಲಿ ಸ್ಕಿವರ್ ನಂತರದ ಶ್ರೇಯಾಂಕದಲ್ಲಿ ಮುಂದುವರಿದಿದ್ದಾರೆ. ಈ ವರ್ಷದ ಆರಂಭದಲ್ಲಿ ನ್ಯೂಜಿಲೆಂಡ್‌ನಲ್ಲಿ ನಡೆದ ಮಹಿಳಾ ವಿಶ್ವಕಪ್‌ನಲ್ಲಿ ಇಬ್ಬರೂ ಬ್ಯಾಟರ್‌ಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದರು.

ICC Womens ODI Ranking Released; Mithali Raj In 7th Spot And Smriti Mandhana Remains At 9th

ಇನ್ನು ಪಾಕಿಸ್ತಾನದ ಅನುಭವಿ ಆರಂಭಿಕ ಆಟಗಾರ್ತಿ ಸಿದ್ರಾ ಅಮೀನ್ ಅವರು ಶ್ರೀಲಂಕಾ ವಿರುದ್ಧದ ಸ್ಮರಣೀಯ ಸರಣಿ ಗೆಲುವಿಗಾಗಿ ಐಸಿಸಿ ರ್‍ಯಾಂಕಿಂಗ್‌ನಲ್ಲಿ ಉತ್ತಮ ಪ್ರತಿಫಲವನ್ನು ಪಡೆದಿದ್ದು, ಅದು ಇತ್ತೀಚಿನ ಬ್ಯಾಟಿಂಗ್ ಪಟ್ಟಿಯಲ್ಲಿ ಅವರು ದೊಡ್ಡ ಜಿಗಿತವನ್ನು ಕಂಡಿದ್ದಾರೆ.

ಸಿದ್ರಾ ಅಮೀನ್ ಅವರು ಏಕದಿನ ಸರಣಿಯಲ್ಲಿ 72.66ರ ಅತ್ಯುತ್ತಮ ಸರಾಸರಿಯೊಂದಿಗೆ 218 ರನ್ ಗಳಿಸಿದರು. ಇದರಲ್ಲಿ ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ 123 ರನ್ ಗಳಿಸಿದರು. 30ರ ಹರೆಯದ ಅವರು ಇದೀಗ 19 ಸ್ಥಾನ ಮೇಲೇರಿ ವೃತ್ತಿಜೀವನದ ಅತ್ಯುತ್ತಮ 35ನೇ ಸ್ಥಾನಕ್ಕೆ ತಲುಪಿದ್ದಾರೆ.

ICC Womens ODI Ranking Released; Mithali Raj In 7th Spot And Smriti Mandhana Remains At 9th

ಶ್ರೀಲಂಕಾದ ನಾಯಕಿ ಚಾಮರಿ ಅಟಪಟ್ಟು ಕೂಡ ಗಮನಾರ್ಹ ಪ್ರಗತಿ ಸಾಧಿಸಿದ್ದು, ಆರು ಸ್ಥಾನ ಮೇಲೇರಿ 23ನೇ ಸ್ಥಾನದಲ್ಲಿದ್ದಾರೆ. 32ರ ಹರೆಯದ ಚಾಮರಿ ಅಟಪಟ್ಟು, ಪಾಕಿಸ್ತಾನ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ 101 ರನ್ ಗಳಿಸಿದ್ದರು ಮತ್ತು ಮೂರು ಪಂದ್ಯಗಳ ಸರಣಿಯಲ್ಲಿ ಒಟ್ಟು 142 ರನ್ ಗಳಿಸಿದ್ದರು.

ಇದೇ ವೇಳೆ ಬೌಲಿಂಗ್ ಶ್ರೇಯಾಂಕದಲ್ಲಿ ಇಂಗ್ಲೆಂಡ್ ಆಟಗಾರ್ತಿ ಸೋಫಿ ಎಕ್ಲೆಸ್ಟೋನ್ ಅಗ್ರಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಶಬ್ನಿಮ್ ಇಸ್ಮಾಯಿಲ್ ಮತ್ತು ಆಸ್ಟ್ರೇಲಿಯಾದ ಜೆಸ್ ಜೊನಾಸೆನ್ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳನ್ನು ಪಡೆದಿದ್ದರೆ, ಭಾರತದ ಅನುಭವಿ ವೇಗಿ ಜೂಲನ್ ಗೋಸ್ವಾಮಿ ಕೂಡ ಬೌಲಿಂಗ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

Story first published: Wednesday, June 8, 2022, 9:46 [IST]
Other articles published on Jun 8, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X