ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ICC Women's T20 Ranking: ನಂ.1 ಸ್ಥಾನಕ್ಕೇರಿದ ಮೆಗ್ ಲ್ಯಾನಿಂಗ್; ಸ್ಮೃತಿ, ಶಫಾಲಿ ಸ್ಥಾನವೆಷ್ಟು?

ICC Womens T20 Ranking: Meg Lanning Becomes No.1 Batter; What Is The Position Of Smriti and Shafali?

ಮಂಗಳವಾರ (ಜುಲೈ 26) ಬಿಡುಗಡೆಯಾದ ಇತ್ತೀಚಿನ ಐಸಿಸಿ ಮಹಿಳಾ ಟಿ20 ಆಟಗಾರ್ತಿಯರ ರ್‍ಯಾಂಕಿಂಗ್‌ನಲ್ಲಿ 30 ವರ್ಷ ವಯಸ್ಸಿನ ಸಹ ಆಟಗಾರ್ತಿ ಬೆತ್ ಮೂನಿ ಅವರನ್ನು ಅಗ್ರಸ್ಥಾನದಿಂದ ಕೆಳಗಿಳಿಸಿ ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಅವರು ವಿಶ್ವದ ಹೊಸ ನಂ.1 ಟಿ20 ಬ್ಯಾಟರ್ ಆಗಿದ್ದಾರೆ.

ಪಾಕಿಸ್ತಾನ ಮತ್ತು ಐರ್ಲೆಂಡ್ ವಿರುದ್ಧದ ತ್ರಿಕೋನ ಸರಣಿಯಲ್ಲಿ ತನ್ನ ಅದ್ಭುತ ಪ್ರದರ್ಶನದ ಕಾರಣ ಬೆತ್ ಮೂನಿಯ ಅಗ್ರಸ್ಥಾನವನ್ನು ಪಡೆಯಲು ಮೆಗ್ ಲ್ಯಾನಿಂಗ್ ಒಂದು ಸ್ಥಾನವನ್ನು ಏರಿಕೆ ಕಂಡು ಗಮನ ಸೆಳೆದರು.

ಕಾಮನ್‌ವೆಲ್ತ್ ಗೇಮ್ಸ್ 2022: ಕ್ರೀಡಾ ಗ್ರಾಮ ತಲುಪಿದ ಮಹಿಳಾ ಕ್ರಿಕೆಟ್ ತಂಡ; ಇಂಡೋ-ಪಾಕ್ ಪಂದ್ಯ ಎಂದು?ಕಾಮನ್‌ವೆಲ್ತ್ ಗೇಮ್ಸ್ 2022: ಕ್ರೀಡಾ ಗ್ರಾಮ ತಲುಪಿದ ಮಹಿಳಾ ಕ್ರಿಕೆಟ್ ತಂಡ; ಇಂಡೋ-ಪಾಕ್ ಪಂದ್ಯ ಎಂದು?

ಇನ್ನು ಭಾರತದ ಅಗ್ರ ಬ್ಯಾಟರ್‌ಗಳಾದ ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಅವರು ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿ ಉಳಿದಿದ್ದು, ರ್‍ಯಾಂಕಿಂಗ್‌ನಲ್ಲಿ ಯಾವುದೇ ಏರಿಕೆ ಅಥವಾ ಇಳಕೆ ಕಂಡುಬಂದಿಲ್ಲ.

ಆಸ್ಟ್ರೇಲಿಯಾ ತಂಡಕ್ಕಾಗಿ ಎರಡು ಇನ್ನಿಂಗ್ಸ್‌ಗಳಿಂದ 113 ರನ್‌

ಆಸ್ಟ್ರೇಲಿಯಾ ತಂಡಕ್ಕಾಗಿ ಎರಡು ಇನ್ನಿಂಗ್ಸ್‌ಗಳಿಂದ 113 ರನ್‌

ಮೆಗ್ ಲ್ಯಾನಿಂಗ್ ಬಗ್ಗೆ ಮಾತನಾಡುವುದಾದರೆ, ಐರ್ಲೆಂಡ್‌ನಲ್ಲಿನ ಕೆಲವು ಕಳಪೆ ಹವಾಮಾನವು ಸರಣಿಯ ಹೆಚ್ಚಿನ ಭಾಗವನ್ನು ತಗ್ಗಿಸಿದರೂ, ಆಸ್ಟ್ರೇಲಿಯಾದ ನಾಯಕಿ ತನ್ನ ದೇಶಕ್ಕಾಗಿ ಎರಡು ಇನ್ನಿಂಗ್ಸ್‌ಗಳಿಂದ 113 ರನ್‌ಗಳೊಂದಿಗೆ ಹೆಚ್ಚಿನ ರನ್ ಗಳಿಸಿದ ಆಟಗಾರ್ತಿಯಾಗಿ ತನ್ನ ಕ್ಲಾಸ್ ಆಟ ತೋರಿಸಿದರು.

ಬ್ರೆಡಿಯಲ್ಲಿ ಐರ್ಲೆಂಡ್ ವಿರುದ್ಧ ಮೆಗ್ ಲ್ಯಾನಿಂಗ್ ಕೇವಲ 49 ಎಸೆತಗಳಲ್ಲಿ 74 ರನ್ ಗಳಿಸುವ ಮೂಲಕ ಆಸ್ಟ್ರೇಲಿಯಾಕ್ಕೆ ಮತ್ತೊಂದು ಸುಲಭ ಜಯ ತಂದುಕೊಟ್ಟರು ಮತ್ತು 182/4 ಬೃಹತ್ ಮೊತ್ತವನ್ನು ಗಳಿಸಲು ಸಹಾಯ ಮಾಡಿದರು.

13ನೇ ಸ್ಥಾನಕ್ಕೆ ಜಿಗಿದ ತಹ್ಲಿಯಾ ಮೆಕ್‌ಗ್ರಾತ್

ಅದೇ ಪಂದ್ಯದಲ್ಲಿ ಸಹ ಆಟಗಾರ್ತಿ ಬೆತ್ ಮೂನಿ ಕೇವಲ ಒಂಬತ್ತು ರನ್ ಗಳಿಸಿದರು ಮತ್ತು ಇದು ರ್‍ಯಾಂಕಿಂಗ್‌ಗಳ ಮರು-ಷಫಲ್‌ನಲ್ಲಿ ಪ್ರಮುಖವಾಯಿತು. ಮೆಗ್ ಲ್ಯಾನಿಂಗ್ ತನ್ನ ಎಡಗೈ ಸಹ ಆಟಗಾರ್ತಿಯ ಎದುರು ಒಟ್ಟು 10 ರೇಟಿಂಗ್ ಪಾಯಿಂಟ್‌ಗಳನ್ನು ಪಡೆದು ನಂ.1 ಸ್ಥಾನಕ್ಕೆ ಜಿಗಿದರು.

ಸಹವರ್ತಿ ಆಸ್ಟ್ರೇಲಿಯನ್ ತಹ್ಲಿಯಾ ಮೆಕ್‌ಗ್ರಾತ್ ಇತ್ತೀಚಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ದೊಡ್ಡ ಮೂವರ್ ಆಗಿದ್ದು, ಐರ್ಲೆಂಡ್ ವಿರುದ್ಧ ಅತ್ಯುತ್ತಮ ಅರ್ಧಶತಕ ಬಾರಿಸಿದ ಹಿನ್ನಲೆಯಲ್ಲಿ 26 ವರ್ಷದ ಪ್ರತಿಭಾವಂತ ಬ್ಯಾಟರ್ ತಹ್ಲಿಯಾ ಮೆಕ್‌ಗ್ರಾತ್ 15 ಸ್ಥಾನಗಳ ಏರಿಕೆಯೊಂದಿಗೆ ಒಟ್ಟಾರೆ 13ನೇ ಸ್ಥಾನಕ್ಕೆ ಜಿಗಿದರು.

ಬೌಲರ್‌ಗಳ ಶ್ರೇಯಾಂಕದಲ್ಲಿ ಮೂರನೇ ಸ್ಥಾನಕ್ಕೆ ಏರಿದ ಸಾರಾ ಗ್ಲೆನ್

ಬೌಲರ್‌ಗಳ ಶ್ರೇಯಾಂಕದಲ್ಲಿ ಮೂರನೇ ಸ್ಥಾನಕ್ಕೆ ಏರಿದ ಸಾರಾ ಗ್ಲೆನ್

ದಕ್ಷಿಣ ಆಫ್ರಿಕಾದ ಮೂವರು ಆಟಗಾರ್ತಿಯರಾದ ಲಾರಾ ವೊಲ್ವಾರ್ಡ್ಟ್ (14ನೇ ಸ್ಥಾನ), ಅನ್ನಿ ಬಾಷ್ (21ನೇ ಸ್ಥಾನ) ಮತ್ತು ತಜ್ಮಿನ್ ಬ್ರಿಟ್ಸ್ (ಸಮಾನ 24ನೇ) ಕೂಡ ತವರಿನಲ್ಲಿ ಇಂಗ್ಲೆಂಡ್ ವಿರುದ್ಧದ ನಿರಾಶಾದಾಯಕ ಸರಣಿ ಸೋಲಿನ ಹೊರತಾಗಿಯೂ ಬ್ಯಾಟರ್‌ಗಳ ಪಟ್ಟಿಯಲ್ಲಿ ದೈತ್ಯ ಹೆಜ್ಜೆ ಹಾಕಿದರು.

ಈ ವಾರದ ಆರಂಭದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 3-0 ಅಂತರದಿಂದ ಸರಣಿ ಕ್ಲೀನ್ ಸ್ವೀಪ್ ಮಾಡುವ ಮೂಲಕ ಇಂಗ್ಲೆಂಡ್ ಮುಂಬರುವ ಕಾಮನ್‌ವೆಲ್ತ್ ಗೇಮ್ಸ್‌ಗೆ ಅಣಿಯಾಗಿದೆ ಮತ್ತು ಅನುಭವಿ ವೇಗಿ ಕ್ಯಾಥರೀನ್ ಬ್ರಂಟ್ ಮುಖ್ಯ ಲಾಭದಾಯಕರಾಗಿದ್ದಾರೆ.

ಕ್ಯಾಥರೀನ್ ಬ್ರಂಟ್ ಐದು ಸ್ಕೇಲ್ಪ್‌ಗಳೊಂದಿಗೆ ಸರಣಿಯಲ್ಲಿ ಜಂಟಿ ಹೆಚ್ಚಿನ ವಿಕೆಟ್-ಟೇಕರ್ ಆಗಿ ಮೂಡಿಬಂದರು ಮತ್ತು ಇಂಗ್ಲೆಂಡ್ ತಂಡದ ಆಟಗಾರ್ತಿ ಸೋಫಿ ಎಕ್ಲೆಸ್ಟೋನ್ ಮತ್ತು ಸಾರಾ ಗ್ಲೆನ್ ನಂತರ ಬೌಲರ್‌ಗಳ ಶ್ರೇಯಾಂಕದಲ್ಲಿ ನಾಲ್ಕು ಸ್ಥಾನಗಳನ್ನು ಪಡೆದು ಮೂರನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ.

Virat Kohli ಬಗ್ಗೆ ಪಾಕಿಸ್ತಾನದ ಶೋಯಬ್ ಅಖ್ತರ್ ಹೇಳಿದ ಎರಡೇ ಪದ ಅಷ್ಟೊಂದ್ ಪವರ್ ಫುಲ್ಲಾ? *Cricket |OneIndia
ಸೋಫಿ ಎಕ್ಲೆಸ್ಟೋನ್ ಟಿ20 ಕ್ರಿಕೆಟ್ ಬೌಲಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನ

ಸೋಫಿ ಎಕ್ಲೆಸ್ಟೋನ್ ಟಿ20 ಕ್ರಿಕೆಟ್ ಬೌಲಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನ

ಸೋಫಿ ಎಕ್ಲೆಸ್ಟೋನ್ ಅವರು ಟಿ20 ಕ್ರಿಕೆಟ್ ಬೌಲಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನವನ್ನು ಪಡೆಯಲು ಸರಣಿಯಲ್ಲಿ ಐದು ವಿಕೆಟ್‌ಗಳನ್ನು ಪಡೆದರು. ಇದೇ ವೇಳೆ ಸರಣಿಯ ಅಂತಿಮ ಪಂದ್ಯದಲ್ಲಿ ಬ್ಯಾಟ್‌ನೊಂದಿಗೆ 23 ವರ್ಷ ವಯಸ್ಸಿನ ಎಕ್ಲೆಸ್ಟೋನ್ ಆಲ್ ರೌಂಡರ್‌ಗಳ ಪಟ್ಟಿಯಲ್ಲಿ 16ನೇ ಸ್ಥಾನಕ್ಕೆ ನಾಲ್ಕು ಸ್ಥಾನಗಳನ್ನು ಗಳಿಸಿದರು.

ಆಸ್ಟ್ರೇಲಿಯಾದ ಸ್ಪಿನ್ನರ್ ಜೆಸ್ ಜೊನಾಸ್ಸೆನ್ ಬೌಲರ್‌ಗಳ ಪಟ್ಟಿಯಲ್ಲಿ ನಾಲ್ಕು ಸ್ಥಾನಗಳ ಏರಿಕೆ ಕಂಡು ಆರನೇ ಸ್ಥಾನಕ್ಕೆ ತಲುಪಿದರೆ, ತಂಡದ ಸಹ ಆಟಗಾರ ಆಶ್ಲೀಗ್ ಗಾರ್ಡ್ನರ್ ಆಲ್‌ರೌಂಡರ್ ಶ್ರೇಯಾಂಕದಲ್ಲಿ ಮೂರು ಸ್ಥಾನಗಳ ಜಿಗಿದು ಏಳನೇ ಸ್ಥಾನಕ್ಕೆ ತಲುಪಿದ್ದಾರೆ.

Story first published: Tuesday, July 26, 2022, 20:03 [IST]
Other articles published on Jul 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X