ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ICC Women's World Cup 2022: ಫೈನಲ್ ಪ್ರವೇಶಿಸಿದ ಆಸ್ಟ್ರೇಲಿಯಾ ವನಿತೆಯರು

Australia women

ವೆಲ್ಲಿಂಗ್ಟನ್‌ನ ಬೇಸಿನ್ ರಿಸರ್ವ್‌ನಲ್ಲಿ ನಡೆದ ಐಸಿಸಿ ಮಹಿಳಾ ವಿಶ್ವಕಪ್ 2022ರ ಟೂರ್ನಿಯ ಮೊದಲ ಸೆಮಿಫೈನ್‌ನಲ್ಲಿ, ವೆಸ್ಟ್ ಇಂಡೀಸ್ ವಿರುದ್ಧ ಗೆದ್ದು ಬೀಗುವ ಮೂಲಕ ಆಸ್ಟ್ರೇಲಿಯಾ ವನಿತೆಯರು ಫೈನಲ್ ಪ್ರವೇಶಿಸಿದ್ದಾರೆ.

ಆಸ್ಟ್ರೇಲಿಯಾ ವನಿತೆಯರು ನೀಡಿದ 306 ರನ್‌ಗಳ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ವನಿತೆಯರು ಕೇವಲ 148 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲು ಕಂಡಿದ್ದಾರೆ. ಆಸ್ಟ್ರೇಲಿಯಾ 157ರನ್‌ಗಳ ಬೃಹತ್ ಗೆಲುವಿನೊಂದಿಗೆ ಫೈನಲ್‌ ಟಿಕೆಟ್ ಪಡೆದಿದೆ.

ಮಳೆಯಿಂದಾಗಿ ಪಂದ್ಯ 45 ಓವರ್‌ಗಳಿಗೆ ಸೀಮಿತಗೊಂಡಿತ್ತು. ಟಾಸ್ ಸೋತರು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಆಸ್ಟ್ರೇಲಿಯಾ ವನಿತೆಯರು ಅದ್ಭುತ ಆರಂಭ ಪಡೆಯುವಲ್ಲಿ ಯಶಸ್ವಿಯಾದರು. ಮೊದಲ ವಿಕೆಟ್‌ಗೆ ಓಪನಿಂಗ್ ಬ್ಯಾಟರ್ ರೇಚಲ್ ಹೇನ್ಸ್‌ ಮತ್ತು ಅಲಿಸ್ಸ ಹೀಲಿ ದ್ವಿಶತಕದ ಜೊತೆಯಾಟದ ಮೂಲಕ ವಿಂಡೀಸ್ ಬೌಲರ್‌ಗಳನ್ನ ಇನ್ನಿಲ್ಲದಂತೆ ಕಾಡಿದ್ರು.

Australia

ಟೂರ್ನಿಯಲ್ಲಿ ಮತ್ತೊಂದು ಅದ್ಭುತ ಶತಕ ಸಿಡಿಸಿದ ವಿಕೆಟ್ ಕೀಪರ್ ಬ್ಯಾಟರ್ ಅಲಿಸ್ಸಾ ಹೀಲಿ 107 ಎಸೆತಗಳಲ್ಲಿ 129 ರನ್ ಕಲೆಹಾಕಿದರು. ಇವರ ಇನ್ನಿಂಗ್ಸ್‌ನಲ್ಲಿ 17 ಬೌಂಡರಿ ಮತ್ತು 1 ಅಮೋಘ ಸಿಕ್ಸರ್‌ ಒಳಗೊಂಡಿತ್ತು.

ಅಲಿಸ್ಸಾಗೆ ಉತ್ತಮ ಸಾಥ್ ನೀಡಿದ ರೇಚಲ್ 100 ಎಸೆತಗಳಲ್ಲಿ 85 ರನ್ ಸಿಡಿಸುವ ಮೂಲಕ ತಂಡದ ಸ್ಕೋರ್ ಹೆಚ್ಚಿಸುವಲ್ಲಿ ನೆರವಾದರು. ಇವರ ಇನ್ನಿಂಗ್ಸ್‌ನಲ್ಲಿ 8 ಅಮೋಘ ಬೌಂಡರಿಗಳಿದ್ದವು.

ಇವರಿಬ್ಬರ ವಿಕೆಟ್ ಪತನದ ಬಳಿಕ ಆಷ್ಲೇ ಗಾರ್ಡ್‌ನರ್ 12, ನಾಯಕಿ ಮೆಗ್ ಲ್ಯಾನಿಂಗ್ ಅಜೇಯ 26, ಬೆತ್ ಮೂನಿ ಅಜೇಯ 43 ರನ್‌ ಕಲೆಹಾಕುವ ಮೂಲಕ ತಂಡದ ಸ್ಕೋರ್ ಅನ್ನು 300ರ ಗಡಿದಾಟಿಸಿದ್ರು. ಅಂತಿಮವಾಗಿ ಆಸ್ಟ್ರೇಲಿಯಾ 3 ವಿಕೆಟ್ ನಷ್ಟಕ್ಕೆ 305ರನ್ ಕಲೆಹಾಕಿತು.

ಇದಕ್ಕುತ್ತರವಾಗಿ ಬ್ಯಾಟಿಂಗ್ ಮಾಡಿದ ವಿಂಡೀಸ್ ವನಿತೆಯರು ಆಸೀಸ್ ದಾಳಿಗೆ ಪತರುಗುಟ್ಟಿದರು. ಓಪನರ್ ದೇಂದ್ರಾ ಡಾಟಿನ್ 34, ಹೈಲೇ ಮ್ಯಾಥ್ಯೂಸ್ 34, ಸ್ಟಫೈನಿ ಟೇಲರ್ 48 ರನ್‌ ಸಿಡಿಸಿದ್ದು ಬಿಟ್ರೆ, ಬೇರೆ ಎಲ್ಲಾ ಆಟಗಾರ್ತಿಯರು ಎರಡು ಅಂಕಿ ಮುಟ್ಟಲು ಎಡವಿದ್ರು. ಪರಿಣಾಮ ವೆಸ್ಟ್ ಇಂಡೀಸ್‌ 37 ಓವರ್‌ಗಳಲ್ಲಿ 148 ರನ್‌ಗಳಿಗೆ ಆಲೌಟ್ ಆಗಿದೆ.

ಪರಿಣಾಮ ಆಸ್ಟ್ರೇಲಿಯಾ 157ರನ್‌ಗಳ ಬೃಹತ್ ಗೆಲುವಿನೊಂದಿಗೆ ಫೈನಲ್‌ ಪ್ರವೇಶಿಸಿದೆ. ಆಸ್ಟ್ರೇಲಿಯಾ ಪರ ಜೆಸ್ ಜೋನಾಸನ್ 2 ವಿಕೆಟ್ ಪಡೆದ್ರೆ, ಉಳಿದ ಬೌಲರ್ಸ್‌ ತಲಾ ಒಂದು ವಿಕೆಟ್ ಪಡೆದಿದ್ದಾರೆ.

Jos Buttler ಅವರಿಗೆ ಅದೃಷ್ಟ ಒಲಿದದ್ದು ಹೀಗೆ | Buttler gets a lucky life | Oneindia Kannada

ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಗೆದ್ದ ತಂಡದ ವಿರುದ್ಧ ಆಸ್ಟ್ರೇಲಿಯಾ ವನಿತೆಯುರ ಏಪ್ರಿಲ್ 3ರಂದು ಫೈನಲ್ ಸೆಣಸಾಟ ನಡೆಸಲಿದ್ದಾರೆ.

Story first published: Wednesday, March 30, 2022, 16:14 [IST]
Other articles published on Mar 30, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X